Friday, October 3, 2025
Friday, October 3, 2025

ಭಾರತದ ಅತ್ಯುತ್ತಮ ಸ್ಕೂಬಾ ಡೈವಿಂಗ್ ತಾಣಗಳು

ಸಮುದ್ರದೊಳಗೆ ಹೋಗಿ ಸಮುದ್ರ ಜೀವಿಗಳ ಜೀವನವನ್ನು ಕಣ್ಣಾರೆ ಕಾಣಬಹುದು. ವಿಶೇಷವಾದ ಜಲಚರ ಜೀವಿಗಳನ್ನು ಕಾಣುತ್ತಾ, ಸಮುದ್ರ ಜೀವಿಯಂತೆ ಒಂದಿಷ್ಟು ಸಮಯ ಕಳೆಯಬಹುದು. ಸ್ಕೂಬಾ ಡೈವಿಂಗ್ ಮೂಲಕ ಲಭ್ಯವಾಗುವ ಈ ಅನುಭವ ಪಡೆಯಲು ದೇಶದ ಅನೇಕ ಕಡೆಗಳಲ್ಲಿ ಅವಕಾಶಗಳಿವೆ.

ಸ್ಕೂಬಾ ಡೈವಿಂಗ್‌ ಅಂದಕ್ಷಣ ನೆನಪಾಗುವುದು ಸಮುದ್ರದ ಆಳಕ್ಕೆ ತೆರಳಿ ಜಲಚರಗಳನ್ನು ನೋಡುವ ಸಂಭ್ರಮದ ಕ್ಷಣಗಳು. ನಮ್ಮ ಕರ್ನಾಟಕದಲ್ಲಿ ಮುರುಡೇಶ್ವರದಿಂದ 22ಕಿಮೀ ದೂರದಲ್ಲಿ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್‌ ಗೆ ಅವಕಾಶವಿದೆ. ರಾಜ್ಯದ ಗಡಿ ದಾಟಿ ದೇಶೀಯ ಮಟ್ಟದ ಹೆಸರು ಮಾಡಿರುವ ಸ್ಕೂಬಾ ಡೈವಿಂಗ್‌ ತಾಣಗಳು ಯಾವುದು ಎಂದು ನಿಮಗೆ ಗೊತ್ತಾ?

ಅಂಡಮಾನ್‌, ಕೇರಳ, ಮಹಾರಾಷ್ಟ್ರ, ಗೋವಾದಲ್ಲಿರುವ ಭಾರತದ 5 ಅತ್ಯುತ್ತಮ ಸ್ಕೂಬಾ ಡೈವಿಂಗ್ ತಾಣಗಳ ಮಾಹಿತಿ ಇಲ್ಲಿವೆ.

ಭಾರತದ ಟಾಪ್ 5 ಸ್ಕೂಬಾ ಡೈವಿಂಗ್ ತಾಣಗಳು:

ಹ್ಯಾವ್ಲಾಕ್ (Havelock ) (ಸ್ವರಾಜ್ ದ್ವೀಪ), ಅಂಡಮಾನ್‌

ಅಂಡಮಾನ್‌ ನ ಹ್ಯಾವ್ಲಾಕ್ ಪ್ರದೇಶ ಭಾರತದ ಡೈವಿಂಗ್ ತಾಣಗಳಲ್ಲಿ ಅತೀ ಪ್ರಮುಖವಾದುದು. ಸ್ಕೂಬಾ ಡೈವಿಂಗ್‌ ಪರಿಣಿತರಿಗೆ ಮಾತ್ರವಲ್ಲದೆ ಆರಂಭಿಕರಿಗೂ ಇದು ಸೂಕ್ತವಾದ ಸ್ಥಳ. ಇಲ್ಲಿನ ನೀರು 40 ಮೀಟರ್‌ ವರೆಗೆ ಗೋಚರತೆಯುಳ್ಳದ್ದಾಗಿದ್ದು, ಹವಳದ ಉದ್ಯಾನಗಳು ಮತ್ತು ಆಳವಾದ ಸಮುದ್ರದ ಗೋಡೆಗಳನ್ನು ಕಾಣಬಹುದಾಗಿದೆ.

sccc_result-1661942111531

ತರ್ಕರ್ಲಿ, ಮಹಾರಾಷ್ಟ್ರ

ಮಹಾರಾಷ್ಟ್ರದ ಸಿಂಧುದುರ್ಗದಲ್ಲಿರುವ ತರ್ಕರ್ಲಿ ಸ್ಕೂಬಾ ಡೈವಿಂಗ್‌ ಪ್ರಿಯರ ನೆಚ್ಚಿನ ತಾಣ. ಮೊದಲ ಬಾರಿಗೆ ಡೈವ್‌ ಮಾಡಬಯಸುವವರಿಗಿದು ಉತ್ತಮ ಆಯ್ಕೆ. ಇಲ್ಲಿನ ಸ್ಪಷ್ಟವಾದ ನೀಲಿ ಬಣ್ಣದ ನೀರು ಎಂಥವರಲ್ಲೂ ಸಮುದ್ರದಾಳಕ್ಕೆ ತೆರಳುವ ಆಸೆ ಹುಟ್ಟಿಸುತ್ತದೆ. ಚಿಪಿ ವಿಮಾನ ನಿಲ್ದಾಣದಿಂದ ನೇರ ವಿಮಾನಗಳ ಮೂಲಕ ನೀವು ತರ್ಕರ್ಲಿಯನ್ನು ತಲುಪಬಹುದು. ಅಬ್ಬರ ಅಲೆಗಳನ್ನು ಇಷ್ಟಪಡದವರು, ಇಲ್ಲಿನ ಬರ್ನ್ಟ್ ಐಲ್ಯಾಂಡ್ ಮತ್ತು ಟೆಂಪಲ್ ರಾಕ್ ಡೈವ್ ತಾಣಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ನೀಲ್ ದ್ವೀಪ, ಅಂಡಮಾನ್‌ಗಳು

ಅಂಡಮಾನ್‌ ನ ನೀಲ್‌ ದ್ವೀಪವನ್ನು ಸಾಮಾನ್ಯವಾಗಿ ಶಹೀದ್‌ ದ್ವೀಪವೆಂದೂ ಕರೆಯಲಾಗುತ್ತದೆ. ಶಾಂತಿಯುತ ಡೈವಿಂಗ್ ಮಾಡಬಯಸುವವರು ನೀಲ್ ದ್ವೀಪಕ್ಕೆ ಭೇಟಿ ನೀಡುವುದು ಉತ್ತಮ. ಇಲ್ಲಿ ನೀರು ಶಾಂತವಾಗಿದ್ದು, ಜನಸಂದಣಿಯೂ ಕಡಿಮೆ ಇರುತ್ತದೆ. ಅಲ್ಲದೆ ಸಮುದ್ರ ಜೀವಿಗಳು ಅಷ್ಟೇ ಅದ್ಭುತವಾಗಿವೆ.

ಗ್ರಾಂಡೆ ದ್ವೀಪ, ಗೋವಾ

ಗೋವಾ ಕಡಲತೀರಗಳು ಪಾರ್ಟಿಗಳಿಗೆ ಎಷ್ಟು ಹೆಸರುವಾಸಿಯಾಗಿದೆಯೋ, ಸ್ಕೂಬಾ ಡೈವಿಂಗ್ ಗೂ ಒಳ್ಳೆಯ ಪರಿಸರವನ್ನು ಕಲ್ಪಿಸುತ್ತದೆಯೆಂಬುದು ಅನೇಕರಿಗೆ ಗೊತ್ತಿರದ ವಿಚಾರ. ಅದರಲ್ಲೂ ಗೋವಾದ ಗ್ರಾಂಡೆ ದ್ವೀಪದ ಸುತ್ತಲಿನ ಬೆಚ್ಚಗಿನ ನೀರಿನಲ್ಲಿ 6-10 ಮೀಟರ್ ಆಳದವರೆಗೂ ಗೋಚರತೆ ಸಾಧ್ಯವಾಗಿದ್ದು, ಹಳೆಯ ಪೋರ್ಚುಗೀಸ್ ಅವಶೇಷಗಳು ಮತ್ತು ಮೀನುಗಳ ಆಕರ್ಷಣೀಯ ಗುಂಪುಗಳನ್ನು ಇಲ್ಲಿ ಕಾಣಬಹುದು.

Scuba_diving_5

ಕೋವಳಂ, ಕೇರಳ

ಕೇರಳದ ತಿರುವನಂತಪುರದ ಕೋವಳಂ ಸಮುದ್ರ ಸ್ಕೂಬಾ ಡೈವಿಂಗ್‌ಗೆ ಅತ್ಯುತ್ತಮವಾದ ಸ್ಥಳವಾಗಿದೆ. ನೀವು ಇಲ್ಲಿ ದೈತ್ಯ ಮೀನುಗಳು, ಈಲ್‌ಗಳು, ಸ್ಟಿಂಗ್ರೇಗಳು ಮತ್ತು ಸಮುದ್ರ ಆಮೆಗಳನ್ನು ಸಹ ನೋಡಬಹುದು. ಜಲಾಮತರ್ಗಾಮಿ ಸ್ಕೂಟರ್ ಸಫಾರಿ ಸೌಲಭ್ಯವನ್ನು ಕಲ್ಪಿಸುವ ಭಾರತದ ಏಕೈಕ ತಾಣ ಕೋವಳಂ.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..