Monday, August 18, 2025
Monday, August 18, 2025

ರನ್‌ ವೇ ಎಕ್ಸ್‌ ಕರ್ಷನ್‌ ಎಂದರೇನು ?

ವಿಮಾನವು ರನ್‌ವೇಯ ಮಧ್ಯರೇಖೆ‌ಯಿಂದ ವಿಚಲಿತವಾಗಿ, ರನ್‌ವೇಯ ಪಕ್ಕದ ಪ್ರದೇಶಕ್ಕೆ (ರನ್‌ವೇ ಸೈಡ್ ಸೇಫ್ಟಿ ಏರಿಯಾ- RSA ) ಚಲಿಸುತ್ತದೆ. ಇದು ಸಾಮಾನ್ಯವಾಗಿ ಕ್ರಾಸ್‌ವಿಂಡ್ (ಅಡ್ಡಗಾಳಿ), ಎಂಜಿನ್ ವೈಫಲ್ಯ, ಬ್ರೇಕಿಂಗ್ ಸಮಸ್ಯೆಗಳು ಅಥವಾ ಪೈಲಟ್‌ನ ನಿಯಂತ್ರಣ ದೋಷಗಳಿಂದ ಸಂಭವಿಸಬಹುದು. ಈ ಎರಡೂ ವಿಧದ ಎಕ್ಸ್ ಕರ್ಷನ್‌ಗಳು ವಿಮಾನಯಾನ ಸುರಕ್ಷತೆಗೆ ಗಂಭೀರ ಅಪಾಯವನ್ನುಂಟು ಮಾಡುತ್ತವೆ. ಹಾಗಾದರೆ ರನ್‌ವೇ ಎಕ್ಸ್‌ಕರ್ಷನ್‌ಗೆ ಕಾರಣಗಳೇನು? ರನ್‌ವೇ ಎಕ್ಸ್‌ಕರ್ಷನ್‌ಗಳು ಒಂದೇ ಒಂದು ಕಾರಣದಿಂದ ಸಂಭವಿಸುವುದಿಲ್ಲ.

ವಿಮಾನಯಾನವು ಆಧುನಿಕ ಸಾರಿಗೆಯ ಅತ್ಯಂತ ಸುರಕ್ಷಿತ ವಿಧಾನಗಳಲ್ಲಿ ಒಂದು ಎನ್ನುವುದರಲ್ಲಿ ಸಂದೇಹವಿಲ್ಲ. ಆದರೆ, ಈ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ನಿರಂತರ ಪ್ರಯತ್ನಗಳು ಮತ್ತು ಸುಧಾರಣೆಗಳು ಅಗತ್ಯ. ವಿಮಾನಯಾನ ಸುರಕ್ಷತೆಯಲ್ಲಿ ಎದುರಾಗುವ ಪ್ರಮುಖ ಸವಾಲುಗಳಲ್ಲಿ ‘ರನ್‌ವೇ ಎಕ್ಸ್‌ಕರ್ಷನ್’ (Runway Excursion) ಕೂಡ ಒಂದು. ಇದು ವಿಮಾನವು ಟೇಕಾಫ್ ಅಥವಾ ಲ್ಯಾಂಡಿಂಗ್ ಸಮಯದಲ್ಲಿ ‌ರನ್‌ವೇಯಿಂದ ಹೊರಗೆ ಚಲಿಸುವ ಘಟನೆ.

ಇಂಥ ಘಟನೆಗಳು ವಿಮಾನಕ್ಕೆ ಹಾನಿ, ಪ್ರಯಾಣಿಕರಿಗೆ ಗಾಯಗಳು ಮತ್ತು ವಿಮಾನ ನಿಲ್ದಾಣದ ಕಾರ್ಯಾಚರಣೆಗಳಲ್ಲಿ ಅಡಚಣೆಗಳನ್ನು ಉಂಟುಮಾಡಬಹುದು. ರನ್‌ವೇ ಎಕ್ಸ್ ಕರ್ಷನ್‌ಗಳನ್ನು ಮುಖ್ಯವಾಗಿ ಎರಡು ವಿಧಗಳಾಗಿ ವಿಂಗಡಿಸಬಹುದು.

runway excursion 2

ಮೊದಲನೆಯದು, ಓವರ್‌ರನ್ (Overrun). ಇದು ವಿಮಾನವು ಲ್ಯಾಂಡಿಂಗ್ ಸಮಯದಲ್ಲಿ ರನ್‌ವೇ ಯ ನಿಗದಿತ ಅಂತ್ಯವನ್ನು ಮೀರಿ ಚಲಿಸುವ ಘಟನೆಯಾಗಿದೆ. ವಿಮಾನವು ರನ್‌ವೇಯ ಕೊನೆಯಲ್ಲಿ ನಿಲ್ಲಲು ಸಾಧ್ಯವಾಗದೆ, ರನ್‌ವೇಯಿಂದ ಹೊರಗೆ, ಸಾಮಾನ್ಯವಾಗಿ ರನ್‌ವೇ ಎಂಡ್ ಸೇಫ್ಟಿ ಏರಿಯಾ (RESA) ಅಥವಾ ಅದರಾಚೆಗೆ ಚಲಿಸುತ್ತದೆ.

ಇದನ್ನೂ ಓದಿ: ವಿಮಾನ ಹುಯ್ದಾಡಲಾರಂಭಿಸಿದರೆ...

ಇದು ಸಾಮಾನ್ಯವಾಗಿ ವಿಮಾನದ ವೇಗ, ಬ್ರೇಕಿಂಗ್ ಸಾಮರ್ಥ್ಯ, ರನ್‌ವೇಯ ಸ್ಥಿತಿ (ಒದ್ದೆ, ಮಂಜು ಗಡ್ಡೆ ಇತ್ಯಾದಿ) ಮತ್ತು ಪೈಲಟ್‌ನ ನಿರ್ಧಾರಗಳ ಮೇಲೆ ಅವಲಂಬಿತವಾಗಿರುತ್ತದೆ. ಎರಡನೆಯದು, ವೀರ್-ಆಫ್ (Veer-of). ಇದು ವಿಮಾನವು ಟೇಕಾಫ್ ಅಥವಾ ಲ್ಯಾಂಡಿಂಗ್ ಸಮಯದಲ್ಲಿ ರನ್‌ ವೇಯ ಬದಿಗೆ ಚಲಿಸುವ ಘಟನೆಯಾಗಿದೆ.

ವಿಮಾನವು ರನ್‌ವೇಯ ಮಧ್ಯರೇಖೆ‌ಯಿಂದ ವಿಚಲಿತವಾಗಿ, ರನ್‌ವೇಯ ಪಕ್ಕದ ಪ್ರದೇಶಕ್ಕೆ (ರನ್‌ವೇ ಸೈಡ್ ಸೇಫ್ಟಿ ಏರಿಯಾ- RSA) ಚಲಿಸುತ್ತದೆ. ಇದು ಸಾಮಾನ್ಯವಾಗಿ ಕ್ರಾಸ್‌ವಿಂಡ್ (ಅಡ್ಡಗಾಳಿ), ಎಂಜಿನ್ ವೈಫಲ್ಯ, ಬ್ರೇಕಿಂಗ್ ಸಮಸ್ಯೆಗಳು ಅಥವಾ ಪೈಲಟ್‌ನ ನಿಯಂತ್ರಣ ದೋಷಗಳಿಂದ ಸಂಭವಿಸಬಹುದು. ಈ ಎರಡೂ ವಿಧದ ಎಕ್ಸ್ ಕರ್ಷನ್‌ಗಳು ವಿಮಾನಯಾನ ಸುರಕ್ಷತೆಗೆ ಗಂಭೀರ ಅಪಾಯವನ್ನುಂಟು ಮಾಡುತ್ತವೆ. ಹಾಗಾದರೆ ರನ್‌ವೇ ಎಕ್ಸ್‌ಕರ್ಷನ್‌ಗೆ ಕಾರಣಗಳೇನು? ರನ್‌ವೇ ಎಕ್ಸ್‌ಕರ್ಷನ್‌ಗಳು ಒಂದೇ ಒಂದು ಕಾರಣದಿಂದ ಸಂಭವಿಸುವುದಿಲ್ಲ; ಬದಲಿಗೆ, ಇದು ಅನೇಕ ಅಂಶಗಳ ಸಂಯೋಜಿತ ಪರಿಣಾಮ ವಾಗಿದೆ. ಈ ಕಾರಣಗಳನ್ನು ಸ್ಥೂಲವಾಗಿ, ಮಾನವ ಅಂಶಗಳು, ಪರಿಸರ ಅಂಶಗಳು ಮತ್ತು ಯಾಂತ್ರಿಕ ಅಂಶಗಳು ಎಂದು 3 ಮುಖ್ಯ ವರ್ಗಗಳಾಗಿ ವಿಂಗಡಿಸ‌ ಬಹುದು.

ಮೊದಲನೆಯದಾಗಿ, ಮಾನವ ಅಂಶಗಳು (Human Factors). ಪೈಲಟ್ ದೋಷ (Pilot Error) ರನ್‌ ವೇ ಎಕ್ಸ್‌ಕರ್ಷನ್‌ಗಳಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಪೈಲಟ್‌ಗಳು ಲ್ಯಾಂಡಿಂಗ್ ಅಥವಾ ಟೇಕಾಫ್ ಸಮಯದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಉದಾಹರಣೆಗೆ, ವಿಮಾನ ವು ರನ್‌ವೇ ಮೇಲೆ ಲ್ಯಾಂಡ್ ಆಗುವಾಗ ಅತಿ ಎತ್ತರದಲ್ಲಿ, ಅತಿ ವೇಗದಲ್ಲಿ, ಅಥವಾ ರನ್‌ವೇಯ ಮಧ್ಯರೇಖೆಯಿಂದ ವಿಚಲಿತವಾಗಿರುವುದು.

ಇಂಥ ಅಸ್ಥಿರ ವಿಧಾನಗಳು ಪೈಲಟ್‌ಗೆ ವಿಮಾನವನ್ನು ನಿಯಂತ್ರಿಸಲು ಕಷ್ಟವಾಗಬಹುದು ಮತ್ತು ರನ್‌ವೇಯಿಂದ ಹೊರಗೆ ಹೋಗಲು ಕಾರಣವಾಗಬಹುದು. ವಿಮಾನವು ರನ್‌ವೇಯ ಆರಂಭಿಕ ಭಾಗದಲ್ಲಿ ಇಳಿಯುವ ಬದಲು, ಮಧ್ಯ ಅಥವಾ ಕೊನೆಯ ಭಾಗದಲ್ಲಿ ಇಳಿಯುವ ಮೂಲಕ ತಡವಾಗಿ ಲೇಟ್ ಟಚ್‌ಡೌನ್ (Late Touchdown) ಆಗಬಹುದು.

runway excursion 1

ಇದರಿಂದ ವಿಮಾನಕ್ಕೆ ನಿಲ್ಲಲು ಸಾಕಷ್ಟು ರನ್‌ವೇ ಲಭ್ಯವಾಗುವುದಿಲ್ಲ. ಅಸಮರ್ಪಕ ಬ್ರೇಕಿಂಗ್ ತಂತ್ರಗಳು (Improper Braking Techniques) ಕೂಡ ಒಮ್ಮೊಮ್ಮೆ ಇದಕ್ಕೆ ಕಾರಣವಾಗಬಹುದು. ಲ್ಯಾಂಡಿಂಗ್ ನಂತರ ಬ್ರೇಕಿಂಗ್ ಅನ್ನು ಸರಿಯಾಗಿ ಅನ್ವಯಿಸದಿರುವುದು ಅಥವಾ ರಿವರ್ಸ್ ಥ್ರಸ್ಟ್ ಅನ್ನು ಪರಿಣಾಮಕಾರಿಯಾಗಿ ಬಳಸದಿರುವುದು ಸಹ ರನ್‌ವೇ ಎಕ್ಸ್‌ಕರ್ಷನ್ ಗೆ ಕಾರಣವಾಗ ಬಹುದು.

ಒಮ್ಮೊಮ್ಮೆ ಪೈಲಟ್‌ಗಳು ಅನಿವಾರ್ಯ ಸಂದರ್ಭಗಳಲ್ಲಿ ತಪ್ಪು ರನ್‌ವೇ ಆಯ್ಕೆ (Incorrect Runway Selection) ಮಾಡುವುದುಂಟು. ಪೈಲಟ್‌ಗಳು ತಪ್ಪಾದ ರನ್‌ವೇಯಲ್ಲಿ ಇಳಿಯಲು ಪ್ರಯತ್ನಿಸುವುದು, ಅದು ವಿಮಾನಕ್ಕೆ ಸೂಕ್ತವಲ್ಲದಿರಬಹುದು. ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಳಂಬ ( Delayed Decision Making)ವೂ ಸಮಸ್ಯೆಯನ್ನುಂಟು ಮಾಡಬಹುದು. ಟೇಕಾಫ್ ಅನ್ನು ರದ್ದುಗೊಳಿಸುವ (rejected takeof) ನಿರ್ಧಾರವನ್ನು ತಡವಾಗಿ ತೆಗೆದುಕೊಳ್ಳುವುದು ಅಪಾಯ ಕಾರಿ. ಏರ್ ಟ್ರಾಫಿಕ್ ಕಂಟ್ರೋಲ್ (ATC) ದೋಷಗಳು ಹಾಗೂ ಸೂಚನೆಗಳು ಸಹ ರನ್‌ವೇ ಎಕ್ಸ್‌ ಕರ್ಷನ್‌ಗೆ ಕಾರಣವಾಗಬಹುದು. ಆದರೆ ಇದು ಅಪರೂಪ.

Vishweshwar Bhat

Vishweshwar Bhat

Editor in Chief

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?