Monday, September 29, 2025
Monday, September 29, 2025

ಪ್ರವಾಸಿ ತಾಣಗಳಿಗೆ ಪ್ರವಾಸಿಗರೇ ಶಾಪವಾ?!

ಒಂದು ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಪ್ರವಾಸೋದ್ಯಮವು ಬಹುಮುಖ್ಯ ಮೂಲ ಎಂಬುದರಲ್ಲಿ ಎರಡು ಮಾತಿಲ್ಲ. ಮಾಲಿನ್ಯರಹಿತ ಉದ್ಯಮ ಅಂದ್ರೆ ಅದು ಪ್ರವಾಸೋದ್ಯಮ ಎಂಬುದು ನಿಜವೇ. ಇದು ಉದ್ಯೋಗಗಳನ್ನು ಸೃಷ್ಟಿಸುತ್ತದೆ, ಮೂಲಸೌಕರ್ಯಗಳನ್ನು ಸುಧಾರಿಸುತ್ತದೆ ಮತ್ತು ಸ್ಥಳೀಯ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುತ್ತದೆ. ಆದರೆ, ಒಂದು ಪ್ರವಾಸಿ ತಾಣವು ತನ್ನ ಸಾಮರ್ಥ್ಯವನ್ನು ಮೀರಿ ಜನರನ್ನು ಆಕರ್ಷಿಸಿದಾಗ, ಅದು 'ಅತಿಯಾದ ಪ್ರವಾಸೋದ್ಯಮ' (ಓವರ್‌ಟೂರಿಸಂ - Overtourism) ಎಂಬ ಗಂಭೀರ ಸಮಸ್ಯೆಗೆ ಕಾರಣವಾಗುತ್ತದೆ.

'ಜಗತ್ತಿನಲ್ಲಿ ಮನುಷ್ಯರು ನೋಡದ, ಯಾರಿಗೂ ಕಾಣದ ಅವೆಷ್ಟೋ ಅಸಂಖ್ಯ ಸುಂದರ, ಅದ್ಭುತ ತಾಣಗಳಿವೆ. ಒಂದು ವೇಳೆ ಮನುಷ್ಯನೇನಾದರೂ ಆ ತಾಣಗಳನ್ನು ಶೋಧಿಸಿ, ಅನಂತರ ಜನ ಆ ತಾಣಗಳನ್ನು ನೋಡಲು ಶುರುವಿಟ್ಟರೆ ಅವು ಸುಂದರ ಮತ್ತು ಅದ್ಭುತಗಳಾಗಿ ಇರಲು ಸಾಧ್ಯವಿಲ್ಲ!'

ಈ ಮಾತನ್ನು ಹೇಳಿದವನು ಯಾರೋ ಗೊತ್ತಿಲ್ಲ. ಆದರೆ ಈ ಮಾತಿನಲ್ಲಿ ಕಟು ಸತ್ಯವಿದೆ. ಅಂದರೆ ಯಾವುದೇ ಪ್ರವಾಸಿ ತಾಣವನ್ನಾದರೂ ಹಾಳು ಮಾಡುವವರು ಪ್ರವಾಸಿಗರೇ. ಯಾವುದೇ ಒಂದು ತಾಣ ಪ್ರವಾಸಿಗರ ಕಣ್ಣಿಗೆ ಬಿದ್ದರೆ, ಅದು ಮೊದಲಿನಂತೆ ಇರಲು ಸಾಧ್ಯವೇ ಇಲ್ಲ. ಅದಕ್ಕೆ Tourism is the march of stupidity. You're expected to be stupid ಇಂದು ಹೇಳಿರುವುದು. ನ್ಯಾಷನಲ್ ಜಿಯಾಗ್ರಫಿಕ್ ಫೋಟೋಗ್ರಾಫರನೊಬ್ಬ ಹೇಳಿದ ಕಠೋರ ಸತ್ಯದ ಮಾತನ್ನು ಎಲ್ಲ ಪ್ರವಾಸಿ ತಾಣಗಳಲ್ಲೂ ದೊಡ್ಡದಾಗಿ ಬರೆದು ನೇತುಹಾಕಬೇಕಿದೆ. ಅದೇನೆಂದರೆ - I want to go to a place so remote that tourists haven't discovered it yet. If they have found it, then it is ruined. ಪ್ರವಾಸಿ ತಾಣವೊಂದು ತನ್ನ ಸಹಜ ಸ್ಥಿತಿಯಲ್ಲಿ ಸುಂದರವಾಗಿರಬೇಕೆಂದರೆ ಅದು ಪ್ರವಾಸಿಗರಿಂದ ಮುಕ್ತವಾಗಿರಬೇಕು. ಪ್ರವಾಸಿಗ ಕಾಲಿಟ್ಟರೆ ಅದು ವಿನಾಶಕ್ಕೆ ದಾರಿ.

overtourism 2

ಒಂದು ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಪ್ರವಾಸೋದ್ಯಮವು ಬಹುಮುಖ್ಯ ಮೂಲ ಎಂಬುದರಲ್ಲಿ ಎರಡು ಮಾತಿಲ್ಲ. ಮಾಲಿನ್ಯರಹಿತ ಉದ್ಯಮ ಅಂದ್ರೆ ಅದು ಪ್ರವಾಸೋದ್ಯಮ ಎಂಬುದು ನಿಜವೇ. ಇದು ಉದ್ಯೋಗಗಳನ್ನು ಸೃಷ್ಟಿಸುತ್ತದೆ, ಮೂಲಸೌಕರ್ಯಗಳನ್ನು ಸುಧಾರಿಸುತ್ತದೆ ಮತ್ತು ಸ್ಥಳೀಯ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುತ್ತದೆ. ಆದರೆ, ಒಂದು ಪ್ರವಾಸಿ ತಾಣವು ತನ್ನ ಸಾಮರ್ಥ್ಯವನ್ನು ಮೀರಿ ಜನರನ್ನು ಆಕರ್ಷಿಸಿದಾಗ, ಅದು 'ಅತಿಯಾದ ಪ್ರವಾಸೋದ್ಯಮ' (ಓವರ್‌ಟೂರಿಸಂ - Overtourism) ಎಂಬ ಗಂಭೀರ ಸಮಸ್ಯೆಗೆ ಕಾರಣವಾಗುತ್ತದೆ. ಈ ಅತಿಯಾದ ಜನದಟ್ಟಣೆಯು ತಾಣದ ನೈಸರ್ಗಿಕ ಪರಿಸರ, ಸ್ಥಳೀಯ ಸಂಸ್ಕೃತಿ ಮತ್ತು ಜನಜೀವನದ ಮೇಲೆ ಅನಿರೀಕ್ಷಿತ ಹಾಗೂ ನಕಾರಾತ್ಮಕ ಪರಿಣಾಮಗಳನ್ನು ಬೀರದೇ ಹೋಗುವುದಿಲ್ಲ. ಪ್ರವಾಸೋದ್ಯಮದ ಬೆಳವಣಿಗೆಯೇ ಒಂದು ಹಂತದಲ್ಲಿ ಪ್ರವಾಸೋದ್ಯಮಕ್ಕೆ ಮಾರಕವಾಗುತ್ತದೆ.

ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಒಂದು ತಾಣ, ಪ್ರವಾಸೋದ್ಯಮ ದೃಷ್ಟಿಯಿಂದ ಸ್ವಲ್ಪ ಜನಪ್ರಿಯವಾದರೂ ಸಾಕು, ಅಲ್ಲಿಗೆ ಪ್ರವಾಸಿಗರು ಅಕ್ಷರಶಃ ದಾಳಿಯಿಡುತ್ತಾರೆ. ಎರಡು ಸಾವಿರ ಪ್ರವಾಸಿಗರನ್ನು ಸಹಿಸಿಕೊಳ್ಳುವ ತಾಣಕ್ಕೆ ಏಕಾಏಕಿ ಹತ್ತು ಸಾವಿರ ಮಂದಿ ಬರುತ್ತಾರೆ. ಅವರನ್ನು ನಿಯಂತ್ರಿಸುವ ಯಾವ ವ್ಯವಸ್ಥೆಯೂ ಅಲ್ಲಿರುವುದಿಲ್ಲ. ತಾವು ಅಲ್ಲಿಗೆ ಹೋದರೆ ಉಳಿದುಕೊಳ್ಳಲು, ಊಟ-ಉಪಾಹಾರಕ್ಕೆ ವ್ಯವಸ್ಥೆಯಿದೆಯಾ ಎಂಬುದನ್ನೂ ನೋಡದೇ ಜನ ಅಲ್ಲಿಗೆ ಧಾವಿಸುತ್ತಾರೆ. ಒಂದು ತಿಂಗಳ ಅವಧಿಯಲ್ಲಿ ಇಡೀ ಪ್ರವಾಸಿ ತಾಣ ಪ್ರವಾಸಿಗಳಿಂದಲೇ ಧ್ವಂಸವಾಗಿರುತ್ತದೆ. ಕೆಲ ವರ್ಷಗಳ ಹಿಂದೆ ಹಾಗೆ ಆಯಿತು. ಕರ್ನಾಟಕದ ಪಶ್ಚಿಮ ಘಟ್ಟಗಳ ಶೋಲಾ ಅರಣ್ಯ ಪ್ರದೇಶಗಳಲ್ಲಿ, ಮುಖ್ಯವಾಗಿ ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿ ಮತ್ತು ಕೊಡಗು ಜಿಲ್ಲೆಯ ಮಾಂದಲಪಟ್ಟಿ ಬೆಟ್ಟಗಳಲ್ಲಿ ಕುರಿಂಜಿ ಹೂವು (ನೀಲಕುರಿಂಜಿ) ಅರಳಿದೆಯಂತೆ ಎಂಬ ಸುದ್ದಿಯನ್ನು ಫೋಟೋ ಸಮೇತ ಅದ್ಯಾವನೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ. ಅದು ಹಠಾತ್ ವೈರಲ್ ಆಯಿತು. ಲಕ್ಷಾಂತರ ಜನ ಅದನ್ನು ಶೇರ್ ಮಾಡಿದರು. ವಾಟ್ಸಪ್ ಕೃಪೆಯಿಂದ ಎಲ್ಲರ ಮೊಬೈಲ್ ಗಳಲ್ಲೂ ಕುರಿಂಜಿ ಹೂವುಗಳು ಉದ್ಯಾನವೇ ಅರಳಿತ್ತು!

over tourism

ಅಂದ ಹಾಗೆ ಕುರಿಂಜಿ ಒಂದು ಅಪರೂಪದ ಹೂವಾಗಿದ್ದು, ಇದು ಹನ್ನೆರಡು ವರ್ಷಗಳಿಗೊಮ್ಮೆ ಅರಳುತ್ತದೆ. ಇದು ಪಶ್ಚಿಮ ಘಟ್ಟಗಳ ಎತ್ತರದ ಪ್ರದೇಶಗಳಲ್ಲಿ, ಮುಖ್ಯವಾಗಿ ಕರ್ನಾಟಕ, ಕೇರಳ ಮತ್ತು ತಮಿಳುನಾಡುಗಳಲ್ಲಿ ಕಂಡುಬರುತ್ತದೆ. ನೀಲಕುರಿಂಜಿ ಎಂದೂ ಕರೆಯುವ ಈ ಹೂಗಳು, ಅರಳಿದಾಗ ಬೆಟ್ಟಗಳ ಇಳಿಜಾರುಗಳನ್ನು ನೀಲಿ ಬಣ್ಣದ ಹೊದಿಕೆಯಿಂದ ಆವರಿಸುತ್ತವೆ. ಇಡೀ ಬೆಟ್ಟ ನೀಲಿ ಸೆರಗಿನಿಂದ ಹೊದಿಸಿದರೆ ಹೇಗೋ ಹಾಗೆ ಕಂಗೊಳಿಸುತ್ತದೆ. ಅದೊಂದು ಅಪರೂಪದ ದೃಶ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಹೂವುಗಳು ಅರಳಲು ಇಷ್ಟು ಸಮಯ ತೆಗೆದುಕೊಳ್ಳಲು ಕಾರಣ, ಅವುಗಳ ಬೀಜಗಳು ಪರಭಕ್ಷಕಗಳಿಂದ ನಾಶವಾಗುವುದನ್ನು ತಪ್ಪಿಸಲು ಮತ್ತು ತಮ್ಮ ಪ್ರಜಾತಿಗಳನ್ನು ಉಳಿಸಿಕೊಳ್ಳಲು ಸಸ್ಯವು ಒಂದು ವಿಶೇಷ ಕಾರ್ಯವಿಧಾನವನ್ನು ಹೊಂದಿದೆಯಂತೆ.

ಈ ಅಪರೂಪದ ದೃಶ್ಯಗಳನ್ನು ಸಾಕ್ಷತ್ ಕಣ್ಣಿನಲ್ಲಿ ತುಂಬಿಕೊಳ್ಳಲು ಜನ ಒಂದೇ ಸಮನೆ ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿ ಕಡೆಗೆ ಧಾವಿಸಲಾರಂಭಿಸಿದರು. ಅದರಲ್ಲೂ ಶನಿವಾರ ಮತ್ತು ಭಾನುವಾರ ಆ ಕಿರಿದಾದ ರಸ್ತೆಯಲ್ಲಿ ಹದಿನೈದು ಸಾವಿರಕ್ಕೂ ಅಧಿಕ ವಾಹನಗಳಲ್ಲಿ ಜನ ಬಂದಿದ್ದರಿಂದ ಎಲ್ಲಿಲ್ಲದ ಸಂಚಾರ ದಟ್ಟಣೆಯಾಗಿ ಪರಿಸ್ಥಿತಿ ಕೈಮೀರಿ ಹೋಗುವ ಹಂತ ತಲುಪಿತು. ಅನೇಕರು ಕುರಿಂಜಿ ಹೂವುಗಳ ಬೆಟ್ಟದಲ್ಲಿ ಕುಣಿದು, ಕುಪ್ಪಳಿಸಿ ಆ ಹೂವಿನ ಗಿಡಗಳನ್ನು ಧ್ವಂಸ ಮಾಡಿಬಿಟ್ಟರು. ಅಲ್ಲಿಗೆ ಹೋಗುವ ದಾರಿ ಪ್ರವಾಸಿಗರ ಕಾಲ್ತುಳಿತದಿಂದ ಜರ್ಜರಿತವಾಯಿತು. ಈ ಹೂವು ಅರಳಿದ ಸುದ್ದಿ ವಿದೇಶಗಳಲ್ಲೂ ವೈರಲ್ ಆಗಿ ಅಲ್ಲಿಂದಲೂ ಪ್ರವಾಸಿಗರು ಬರಲಾರಂಭಿಸಿದರು. ಪ್ರವಾಸಿಗರೇ ಕುರಿಂಜಿ ಹೂವುಗಳಿಗೆ ಮುಳಿವಾಗಿಬಿಟ್ಟರು. ಅಷ್ಟೇ ಅಲ್ಲ, ಸುತ್ತಲಿನ ಪ್ರದೇಶಗಳಿಗೆ ಪ್ರವಾಸಿಗರ ಪ್ರವಾಹದಿಂದ ತೀವ್ರ ಹಾನಿಯುಂಟಾಯಿತು.

ಸಾಮಾಜಿಕ ಮಾಧ್ಯಮ (Social Media) ಅತ್ಯಂತ ಪ್ರಬಲ ಮತ್ತು ವ್ಯಾಪಕವಾಗಿರುವ ಈ ಕಾಲದಲ್ಲಿ, ಇನ್‌ಸ್ಟಾಗ್ರಾಮ್, ಫೇಸ್‌ಬುಕ್, ಟಿಕ್‌ಟಾಕ್‌ಗಳಲ್ಲಿ ಒಂದು ಸ್ಥಳದ ಫೋಟೋ ಮತ್ತು ವಿಡಿಯೋ ಕ್ಷಣಾರ್ಧದಲ್ಲಿ ಅರ್ಧ ಜಗತ್ತನ್ನು ತಲುಪಿರುತ್ತವೆ. ಇದು ಆ ಸ್ಥಳಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಹಠಾತ್ ಹೆಚ್ಚಳಕ್ಕೆ…

Vishweshwar Bhat

Vishweshwar Bhat

Editor in Chief

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?