ಕಾಲ್ತುಳಿತಕ್ಕೆ ಪರಿಹಾರ ಐಪಿಎಲ್‌ಗೆ ನಿರ್ಬಂಧವಲ್ಲ, ವ್ಯವಸ್ಥೆಗೆ ಶಿಸ್ತು ಬೇಕು
2026ರಲ್ಲಿ ಐಪಿಎಲ್ ಪಂದ್ಯಗಳು ಬೆಂಗಳೂರಿಗೆ ಬೇಡ ಎನ್ನುವುದು ಸಮಸ್ಯೆಗೆ ಪರಿಹಾರವಲ್ಲ. ಐಪಿಎಲ್ ಬೆಂಗಳೂರಿನಲ್ಲಿ ನಡೆದಾಗ ಟ್ಯಾಕ್ಸಿ, ಹೊಟೇಲ್, ರೆಸ್ಟೋರೆಂಟ್, ವ್ಯಾಪಾರ, ಉದ್ಯೋಗ — ಎಲ್ಲ ವಲಯಗಳಿಗೆ ಚೈತನ್ಯ ಸಿಗುತ್ತದೆ. ಸಾವಿರಾರು ಕುಟುಂಬಗಳ ಜೀವನಾಧಾರವಾಗಿರುವ ಈ ವ್ಯಾಪಾರ ಚಟುವಟಿಕೆಗಳನ್ನು ನಿಲ್ಲಿಸುವುದು ನಗರದ ಆರ್ಥಿಕತೆಗೆ ದೊಡ್ಡ ಹೊಡೆತ.
- ಕೆ. ರಾಧಾಕೃಷ್ಣ ಹೊಳ್ಳ
ಕ್ರೀಡಾ ಪ್ರವಾಸೋದ್ಯಮ ತಾಣವಾಗಿ ಗುರುತಿಸಿಕೊಂಡಿರುವ ಬೆಂಗಳೂರು ಕೆಲವು ತಿಂಗಳ ಹಿಂದಷ್ಟೇ ದುರಂತವೊಂದಕ್ಕೆ ಸಾಕ್ಷಿಯಾಗಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಐಪಿಎಲ್ ವಿಜಯೋತ್ಸವದ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿದ ಪರಿಣಾಮ 11 ಜನರು ಸಾವನ್ನಪ್ಪಿ, ಹಲವರಿಗೆ ಗಾಯಗಳಾಗಿವೆ. ಈ ದುರ್ಘಟನೆ ಮನಕಲುಕುವಂಥದ್ದು. ಆದರೆ ಈ ಘಟನೆಯ ಹೊಣೆಯನ್ನು ಐಪಿಎಲ್ ಮೇಲೆಯೇ ಹಾಕುವುದು ತಪ್ಪು. ಇಲ್ಲಿ ವಿಫಲವಾಗಿರುವುದು ಕ್ರೀಡೆಯಲ್ಲ — ಪೂರ್ವಯೋಜನೆಯ ಕೊರತೆ ಹಾಗೂ ಜನಸಂದಣಿ ನಿರ್ವಹಣೆಯ ವೈಫಲ್ಯ.
2026ರಲ್ಲಿ ಐಪಿಎಲ್ ಪಂದ್ಯಗಳು ಬೆಂಗಳೂರಿಗೆ ಬೇಡ ಎನ್ನುವುದು ಸಮಸ್ಯೆಗೆ ಪರಿಹಾರವಲ್ಲ. ಐಪಿಎಲ್ ಬೆಂಗಳೂರಿನಲ್ಲಿ ನಡೆದಾಗ ಟ್ಯಾಕ್ಸಿ, ಹೊಟೇಲ್, ರೆಸ್ಟೋರೆಂಟ್, ವ್ಯಾಪಾರ, ಉದ್ಯೋಗ — ಎಲ್ಲ ವಲಯಗಳಿಗೆ ಚೈತನ್ಯ ಸಿಗುತ್ತದೆ. ಸಾವಿರಾರು ಕುಟುಂಬಗಳ ಜೀವನಾಧಾರವಾಗಿರುವ ಈ ವ್ಯಾಪಾರ ಚಟುವಟಿಕೆಗಳನ್ನು ನಿಲ್ಲಿಸುವುದು ನಗರದ ಆರ್ಥಿಕತೆಗೆ ದೊಡ್ಡ ಹೊಡೆತ.

ಶಿಕ್ಷೆಗೆ ಒಳಗಾಗಬೇಕಿರುವುದು ಆಯೋಜನೆಯ ವೈಫಲ್ಯ, ಕ್ರೀಡೆ ಅಲ್ಲ. ಮುಂದೆ ಇಂಥ ಘಟನೆಗಳು ಮರುಕಳಿಸದಂತೆ ಭದ್ರತಾ ಪೂರ್ವಯೋಜನೆ, ಪ್ರವೇಶ ನಿಯಂತ್ರಣ, ತುರ್ತು ಸೇವೆಗಳ ಸಿದ್ಧತೆ ಹಾಗೂ ಜನಸಂಚಲನ ನಿಯಂತ್ರಣ ಕಡ್ಡಾಯವಾಗಿ ಜಾರಿಗೆ ಬರಬೇಕು.
ಸ್ಪೋರ್ಟ್ಸ್ ಕೇವಲ ಮನೋರಂಜನೆ ಅಲ್ಲ — ಅದು ನಗರದ ಶಕ್ತಿ, ಯುವಜನತೆಗೆ ಸ್ಪೂರ್ತಿ ಮತ್ತು ವ್ಯಾಪಾರಕ್ಕೆ ಅವಕಾಶ. ಆದ್ದರಿಂದ SPORTS ಅನ್ನು SPORTS ಆಗಿಯೇ ಇರಿಸೋಣ — ನಿರ್ಬಂಧದ ಬಲಿ ಮಾಡೋದು ಬೇಡ.
ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಅಂತಾರಾಷ್ಟ್ರೀಯ ಚಿತ್ರೋತ್ಸವಗಳು ಸೇರಿದಂತೆ ಬಹುದೊಡ್ಡ ಕಾರ್ಯಕ್ರಮಗಳು ಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಗೋವಾ, ರಾಜಸ್ಥಾನ ಹಾಗೂ ಗುಜರಾತಿನಂಥ ರಾಜ್ಯಗಳು ದೊಡ್ಡ ಕಾರ್ಯಕ್ರಮಗಳಿಗೆ ಮೆಚ್ಚುಗೆ ಪಡೆಯುತ್ತಿರುವಾಗ, ಉನ್ನತ ಶಿಕ್ಷಣ ಪಡೆದ ರಾಜ್ಯವಾದ ಕರ್ನಾಟಕ ಹಿನ್ನಡೆಗೊಳ್ಳುತ್ತಿರುವುದು ಬೇಸರದ ಸಂಗತಿ. ಇಂಥ ಜಾಗತಿಕ ಕಾರ್ಯಕ್ರಮಗಳಿಗೆ ನಮ್ಮ ರಾಜ್ಯದಲ್ಲಿ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಆಗ ಮಾತ್ರವೇ ದೇಶೀಯ ಮಟ್ಟದಲ್ಲಿ ಕರ್ನಾಟಕ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಪ್ರಾಮುಖ್ಯತೆ ಗಳಿಸುವುದಕ್ಕೆ ಸಾಧ್ಯವಾಗುತ್ತದೆ.