Monday, August 18, 2025
Monday, August 18, 2025

ದೂರ ಮಾಪನ ಉಪಕರಣ

ಇದು ಒಂದು ರೇಡಿಯೋ ಸಂಚಲನ ವ್ಯವಸ್ಥೆಯಾಗಿದ್ದು, ವಿಮಾನವು ನೆಲದ ಮೇಲಿನ ಒಂದು ನಿಶ್ಚಿತ ಕೇಂದ್ರದಿಂದ (ಸಾಮಾನ್ಯವಾಗಿ VOR ಅಥವಾ ILS ಸ್ಟೇಷನ್) ಎಷ್ಟು ದೂರದಲ್ಲಿದೆ ಎಂಬುದನ್ನು ಪೈಲಟ್‌ಗಳಿಗೆ ತಿಳಿಸುತ್ತದೆ. ದೂರ ಮಾಪನ ಉಪಕರಣ ( DME) ಹೇಗೆ ಕೆಲಸ ಮಾಡುತ್ತದೆ? ಈ ವ್ಯವಸ್ಥೆಯು ಒಂದು ಸರಳವಾದ ಪ್ರಶ್ನೆ-ಉತ್ತರ ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ.

ಪೈಲಟ್‌ಗಳು ದಟ್ಟ ಕತ್ತಲೆಯಗಲಿ ಅಥವಾ ಪ್ರತಿಕೂಲ ಹವಾಮಾನದಲ್ಲಾಗಲಿ, ತಾವು ರನ್‌ವೇ ಅಥವಾ ನ್ಯಾವಿಗೇಷನ್ ಕೇಂದ್ರದಿಂದ ನಿಖರವಾಗಿ ಎಷ್ಟು ದೂರದಲ್ಲಿದ್ದೇವೆ ಎಂದು ತಿಳಿಯುತ್ತಾರೆ, ಹೇಗೆ? ಈ ಪ್ರಶ್ನೆಗೆ ಉತ್ತರವೇ DME ಅರ್ಥಾತ್ Distance Measuring Equipment (ದೂರ ಮಾಪನ ಉಪಕರಣ). ಇದನ್ನು ಸರಳವಾಗಿ ‘ದೂರ ಅಳತೆ ಸಾಧನ’ ಎಂದು ಹೇಳಬಹುದು.

ಇದು ಒಂದು ರೇಡಿಯೋ ಸಂಚಲನ ವ್ಯವಸ್ಥೆಯಾಗಿದ್ದು, ವಿಮಾನವು ನೆಲದ ಮೇಲಿನ ಒಂದು ನಿಶ್ಚಿತ ಕೇಂದ್ರದಿಂದ (ಸಾಮಾನ್ಯವಾಗಿ VOR ಅಥವಾ ILS ಸ್ಟೇಷನ್) ಎಷ್ಟು ದೂರದಲ್ಲಿದೆ ಎಂಬುದನ್ನು ಪೈಲಟ್‌ಗಳಿಗೆ ತಿಳಿಸುತ್ತದೆ. ದೂರ ಮಾಪನ ಉಪಕರಣ ( DME) ಹೇಗೆ ಕೆಲಸ ಮಾಡುತ್ತದೆ? ಈ ವ್ಯವಸ್ಥೆಯು ಒಂದು ಸರಳವಾದ ಪ್ರಶ್ನೆ-ಉತ್ತರ ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ: ಮೃದು ಲ್ಯಾಂಡಿಂಗ್‌ ಎಂಬ ಭ್ರಮೆ

ವಿಮಾನದಲ್ಲಿರುವ ಉಪಕರಣವು (Interrogator) ನೆಲದ ಮೇಲಿರುವ DME ಸ್ಟೇಷನ್‌ಗೆ ಒಂದು ಜೋಡಿ ರೇಡಿಯೋ Interrogation Signal ಕಳುಹಿಸುತ್ತದೆ. ನೆಲದ ಮೇಲಿನ ಸ್ಟೇಷನ್ (Transponder) ಆ ಸಂಕೇತವನ್ನು ಸ್ವೀಕರಿಸಿ, ಒಂದು ನಿಶ್ಚಿತ ಸಮಯದ ನಂತರ ಅದಕ್ಕೆ ಪ್ರತಿಕ್ರಿಯೆ ಸಂಕೇತವನ್ನು (Response Signal) ವಾಪಸ್ ಕಳುಹಿಸುತ್ತದೆ.

ವಿಮಾನದ ಉಪಕರಣವು, ತಾನು ಸಂಕೇತವನ್ನು ಕಳುಹಿಸಿದ ಸಮಯ ಮತ್ತು ಪ್ರತಿಕ್ರಿಯೆ ಸಂಕೇತವನ್ನು ಸ್ವೀಕರಿಸಿದ ಸಮಯದ ನಡುವಿನ ವ್ಯತ್ಯಾಸವನ್ನು (Time Delay) ಲೆಕ್ಕಾಚಾರ ಮಾಡುತ್ತದೆ. ಬೆಳಕಿನ ವೇಗದಲ್ಲಿ ಚಲಿಸುವ ರೇಡಿಯೋ ತರಂಗಗಳು ತೆಗೆದುಕೊಂಡ ಈ ಸಮಯವನ್ನು ಆಧರಿಸಿ, ಉಪಕರಣವು ದೂರವನ್ನು ಲೆಕ್ಕಾಚಾರ ಮಾಡಿ ಅದನ್ನು Slant Range Distance ರೂಪದಲ್ಲಿ ನಾಟಿಕಲ್ ಮೈಲಿಗಳಲ್ಲಿ (Nautical Miles) ಪ್ರದರ್ಶಿಸುತ್ತದೆ.

A Distance Measuring Equipment 1

Slant Range ಎಂದರೆ ವಿಮಾನದಿಂದ ನೆಲದ ಮೇಲಿನ ಸ್ಟೇಷನ್‌ಗೆ ಇರುವ ನೇರವಾದ ವೈಮಾನಿಕ ದೂರ. ಇದು ವಿಮಾನದಿಂದ ಸ್ಟೇಷನ್‌ಗೆ ನೆಲದ ಮೇಲಿರುವ ಸಮತಲ ದೂರವಲ್ಲ (Ground Distance). ಪೈಲಟ್‌ಗಳಿಗೆ ದಿಕ್ಕು (VOR/ILS ನಿಂದ) ಮತ್ತು ದೂರ (DME ನಿಂದ) ಎರಡೂ ಒಂದೇ ಸಮಯದಲ್ಲಿ ಸಿಗುವಂತೆ ಮಾಡಲು, DME ಅನ್ನು ಸಾಮಾನ್ಯವಾಗಿ VOR (Omnidirectional Radio Range) ಅಥವಾ ILS (Instrument Landing System ) ವ್ಯವಸ್ಥೆಗಳೊಂದಿಗೆ ಒಂದೇ ಸ್ಥಳದಲ್ಲಿ ಸ್ಥಾಪಿಸಲಾಗಿರುತ್ತದೆ.

ವಿಮಾನವು ಚಲಿಸುತ್ತಿದ್ದಂತೆ, DME ನಿರಂತರವಾಗಿ ದೂರದ ಮಾಹಿತಿಯನ್ನು ಅಪ್‌ಡೇಟ್ ಮಾಡುತ್ತಾ, ಪೈಲಟ್ ಗೆ ಕ್ಷಣಕ್ಷಣದ ಮಾಹಿತಿ ನೀಡುತ್ತದೆ. ಇನ್‌ಸ್ಟ್ರುಮೆಂಟ್ ಫ್ಲೈಟ್ ರೂಲ್ಸ್ (IFR) ಅಡಿಯಲ್ಲಿ ಹಾರಾಟ ಮಾಡುವಾಗ, ಅನೇಕ ಮಾರ್ಗಗಳು, ಹೋಲ್ಡಿಂಗ್ ಪ್ಯಾಟರ್ನ್‌ಗಳು ಮತ್ತು ಅಪ್ರೋಚ್‌ಗಳಿಗೆ (approaches) DME ಕಡ್ಡಾಯವಾಗಿದೆ. ‌

ವಿಮಾನದ ಎತ್ತರ ಮತ್ತು ಸ್ಟೇಷನ್‌ನ ಶಕ್ತಿಯನ್ನು ಅವಲಂಬಿಸಿ, DMEಯ ವ್ಯಾಪ್ತಿಯು ಸಾಮಾನ್ಯವಾಗಿ 199 ನಾಟಿಕಲ್ ಮೈಲಿಗಳವರೆಗೆ (ಸುಮಾರು 370 ಕಿಲೋಮೀಟರ್) ಇರುತ್ತದೆ. DME ಯು Slant Range ಅನ್ನು ಅಳೆಯುವುದರಿಂದ, ವಿಮಾನವು ನೇರವಾಗಿ ಸ್ಟೇಷನ್‌ನ ಮೇಲಿದ್ದಾಗ ದೋಷ ಉಂಟಾಗುತ್ತದೆ.

ಆಗ DME ‘೦’ ತೋರಿಸುವ ಬದಲು, ವಿಮಾನದ ಎತ್ತರವನ್ನು (ನಾಟಿಕಲ್ ಮೈಲಿಗಳಲ್ಲಿ) ತೋರಿಸುತ್ತದೆ. ಉದಾಹರಣೆಗೆ, ಒಂದು ವಿಮಾನವು ನೆಲದಿಂದ 6076 ಅಡಿ (ಸರಿಯಾಗಿ 1 ನಾಟಿಕಲ್ ಮೈಲಿ) ಎತ್ತರದಲ್ಲಿ ಸ್ಟೇಷನ್‌ನ ನೇರ ಮೇಲೆ ಹಾರುತ್ತಿದ್ದರೆ, DME ದೂರವನ್ನು 1.0 NM ಎಂದು ತೋರಿಸುತ್ತದೆ, ಶೂನ್ಯವನ್ನಲ್ಲ. ಈ ದೋಷವು ವಿಮಾನವು ಹೆಚ್ಚು ಎತ್ತರದಲ್ಲಿ ಮತ್ತು ಸ್ಟೇಷನ್ ಗೆ ಹತ್ತಿರ ದಲ್ಲಿರುವಾಗ ಗಣನೀಯವಾಗಿರುತ್ತದೆ. ಇದನ್ನು ಪೈಥಾಗರಿಯನ್ ಪ್ರಮೇಯದಿಂದ ಅರ್ಥ ಮಾಡಿಕೊಳ್ಳಬಹುದು. ಪೈಲಟ್‌ಗಳು DME ಫ್ರೀಕ್ವೆನ್ಸಿಯನ್ನು ಪ್ರತ್ಯೇಕವಾಗಿ ಟ್ಯೂನ್ ಮಾಡುವ ಅಗತ್ಯವಿಲ್ಲ.

ಅವರು ತಮ್ಮ ನ್ಯಾವಿಗೇಷನ್ ರೇಡಿಯೋದಲ್ಲಿ VOR ಅಥವಾ ILS ಫ್ರೀಕ್ವೆನ್ಸಿಯನ್ನು ಆಯ್ಕೆ ಮಾಡಿದಾಗ, ಅದಕ್ಕೆ ಸಂಬಂಧಿಸಿದ DME ಚಾನೆಲ್ ಸ್ವಯಂಚಾಲಿತವಾಗಿ ಆಯ್ಕೆಯಾಗುತ್ತದೆ. ಇದು ಪೈಲಟ್‌ನ ಕೆಲಸವನ್ನು ಸುಲಭಗೊಳಿಸುತ್ತದೆ. DME ವ್ಯವಸ್ಥೆಯು ಅತ್ಯಂತ ನಿಖರವಾಗಿದೆ. ಇದರ ನಿಖರತೆಯು ಸಾಮಾನ್ಯವಾಗಿ L 0.5 ನಾಟಿಕಲ್ ಮೈಲಿಗಳು ಅಥವಾ ಇರುವ ದೂರದ ಶೇ.3. ಇವೆರಡರಲ್ಲಿ ಯಾವುದು ಹೆಚ್ಚೋ ಅಷ್ಟಿರುತ್ತದೆ.

ಕೆಲವು ನ್ಯಾವಿಗೇಷನ್ ರೇಡಿಯೋಗಳಲ್ಲಿ, ಪ್ರತಿ 30-40 ಸೆಕೆಂಡಿಗೆ ಒಮ್ಮೆ DME ಸ್ಟೇಷನ್‌ನ ಗುರುತಿನ ಮೋರ್ಸ್ ಕೋಡ್ ಅನ್ನು ಕೇಳಬಹುದು. ಇದು ಪೈಲಟ್‌ಗೆ ತಾನು ಸರಿಯಾದ ಸ್ಟೇಷನ್‌ಗೆ ಟ್ಯೂನ್ ಆಗಿರುವುದನ್ನು ಖಚಿತಪಡಿಸಲು ಸಹಾಯ ಮಾಡುತ್ತದೆ.

Vishweshwar Bhat

Vishweshwar Bhat

Editor in Chief

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?