ಕಿಸ್ಸಿಂಗ್ ಲ್ಯಾಂಡಿಂಗ್ ಅಂದರೇನು ?
ಒಮ್ಮೊಮ್ಮೆ ವಿಮಾನ ಭೂಸ್ಪರ್ಶ ಮಾಡಿದ್ದು ಗೊತ್ತೇ ಆಗುವುದಿಲ್ಲ. ಅಷ್ಟು smooth ಆಗಿ ಲ್ಯಾಂಡ್ ಆಗುತ್ತದೆ. ವಿಮಾನದ ಹಿಂದಿನ ಚಕ್ರಗಳು ರನ್‌ವೇ ಮೇಲೆ ಇಳಿದಿದ್ದು ಗೊತ್ತೇ ಆಗುವುದಿಲ್ಲ. ಇದನ್ನು ‘ಕಿಸ್ಸಿಂಗ್ ಲ್ಯಾಂಡಿಂಗ್’ (Kissing Landing) ಅಂತ ಕರೆಯುತ್ತಾರೆ. ಇದು ವಿಮಾನ, ರನ್‌ವೇಗೆ ಹಿತವಾಗಿ ಚುಂಬಿಸಿದಂತಿರುವುದರಿಂದ ಆ ಹೆಸರು.
ಕೆಲ ದಿನಗಳ ಹಿಂದೆ ನಾನು ಬೆಂಗಳೂರಿನಿಂದ ಸಿಂಗಾಪುರಕ್ಕೆ ಹೋಗುವಾಗ, ವಿಮಾನ ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣದಲ್ಲಿ ಇಳಿದಾಗ ಪೈಲಟ್, Ladies and Gentlemen, that was a kissing landing! ಎಂದು ಉದ್ಗರಿಸಿದ. ನನ್ನ ಪಕ್ಕದಲ್ಲಿದ್ದ ಮಹಿಳೆಯೊಬ್ಬಳು, ‘ಕಿಸ್ಸಿಂಗ್ ಲ್ಯಾಂಡಿಂಗ್’ ಎಂಬ ಪದವನ್ನು ಕೇಳಿ ಕಿಸ್ಸಕ್ಕನೆ ನಕ್ಕಳು.
ಪ್ರಾಯಶಃ ಪೈಲಟ್ ಜೋಕ್ ಮಾಡುತ್ತಿರಬಹುದು ಎಂದು ಆಕೆ ಭಾವಿಸಿರಬೇಕು. ನಿಜ, ಒಮ್ಮೊಮ್ಮೆ ವಿಮಾನ ಭೂಸ್ಪರ್ಶ ಮಾಡಿದ್ದು ಗೊತ್ತೇ ಆಗುವುದಿಲ್ಲ. ಅಷ್ಟು smooth ಆಗಿ ಲ್ಯಾಂಡ್ ಆಗುತ್ತದೆ. ವಿಮಾನದ ಹಿಂದಿನ ಚಕ್ರಗಳು ರನ್‌ವೇ ಮೇಲೆ ಇಳಿದಿದ್ದು ಗೊತ್ತೇ ಆಗುವುದಿಲ್ಲ. ಇದನ್ನು ‘ಕಿಸ್ಸಿಂಗ್ ಲ್ಯಾಂಡಿಂಗ್’ (Kissing Landing) ಅಂತ ಕರೆಯುತ್ತಾರೆ. ಇದು ವಿಮಾನ, ರನ್‌ವೇಗೆ ಹಿತವಾಗಿ ಚುಂಬಿಸಿದಂತಿರುವುದರಿಂದ ಆ ಹೆಸರು.

ವಿಮಾನ ಪ್ರಯಾಣದ ಸಮಯದಲ್ಲಿ ಇಳಿಯುವ ಕ್ಷಣ ಬಹುಮುಖ್ಯ. ಆ ಕ್ಷಣದಲ್ಲಿ ಪ್ರಯಾಣಿಕರೂ ಉದ್ವಿಗ್ನತೆಗೆ ಒಳಗಾಗಿರುತ್ತಾರೆ. ಕೆಲವೊಮ್ಮೆ, ವಿಮಾನ ರನ್‌ವೇಗೆ ಜೋರಾಗಿ ಅಪ್ಪಳಿಸುವುದುಂಟು. ಇದು ಪ್ರಯಾಣಿಕರಲ್ಲಿ ಅತೀವ ಭಯವನ್ನು ಹುಟ್ಟಿಸುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ, ವಿಮಾನದ ಎಂಜಿನ್‌ನ ಶಬ್ದವನ್ನು ಬಿಟ್ಟರೆ, ವಿಮಾನ ಇಳಿದಿದ್ದೇ ಗೊತ್ತಾಗುವುದಿಲ್ಲ. ಇದನ್ನೇ ‘ಕಿಸ್ಸಿಂಗ್ ಲ್ಯಾಂಡಿಂಗ್’ ಅಂತ ಕರೆಯುವುದು.
ಇದನ್ನೂ ಓದಿ: ವಿಮಾನದಲ್ಲಿ ಏರ್ ಕಂಡಿಷನಿಂಗ್
ಇದು ಪೈಲಟ್‌ನ ನೈಪುಣ್ಯದ ಸೂಚಕ. ವಾಸ್ತವವಾಗಿ, ವಿಮಾನವನ್ನು ಹೀಗೆ ಇಳಿಸಲು ಅನೇಕ ಸಾಂದರ್ಭಿಕ ಹಾಗೂ ತಾಂತ್ರಿಕ ಅಂಶಗಳು ಕಾರಣವಾಗುತ್ತವೆ. ಆ ಪೈಕಿ ವಿಮಾನ ಇಳಿಕೆಯ ಗತಿ ( Rate of Descent) ಮುಖ್ಯ. ವಿಮಾನ ಎಷ್ಟು ವೇಗದಲ್ಲಿ ಇಳಿಯುತ್ತಿದೆ ಎಂಬುದು ಬಹಳ ಮುಖ್ಯವಾಗುತ್ತದೆ. ಇಳಿಯುವ ವೇಗ ಹೆಚ್ಚಿದ್ದರೆ, ಅದು ರನ್‌ವೇಗೆ ಅಪ್ಪಳಿಸಬಹುದು. ಕಡಿಮೆ ವೇಗದ ಇಳಿಕೆ ಮೃದು ಸ್ಪರ್ಶಕ್ಕೆ ಕಾರಣವಾಗಬಹುದು.
ವಿಮಾನವನ್ನು ಇಳಿಸುವಾಗ ಫೇರ್ ಟೆಕ್ನಿಕ್ ( Flare Technique) ಬಳಸುತ್ತಾರೆ. ‘ಫೇರ್’ ತಂತ್ರದಲ್ಲಿ, ರನ್‌ವೇಗೆ ಹತ್ತಿರ ಬಂದ ನಂತರ ವಿಮಾನದ ಮೂತಿಯನ್ನು ಸ್ವಲ್ಪ ಮೇಲಕ್ಕೆ ಎತ್ತಲಾಗುತ್ತದೆ. ಇದರಿಂದ ವಿಮಾನದ ಹಿಂಭಾಗ ಕೆಲ ಕ್ಷಣ ರನ್‌ವೇ ಮೇಲೆ ಹಾರಿ ನಿಧಾನವಾಗಿ ಭೂಮಿಗೆ ಸ್ಪರ್ಶಿಸುತ್ತದೆ. ಈ ಸ್ಪರ್ಶವೇ ‘ಕಿಸ್ಸಿಂಗ್ ಲ್ಯಾಂಡಿಂಗ್’. ಈ ಸಮಯದಲ್ಲಿ ಪೈಲಟ್ ವಿಮಾನದ ಎತ್ತರ ಹಾಗೂ ವೇಗವನ್ನು ನಿಖರವಾಗಿ ನಿಯಂತ್ರಿಸುತ್ತಾನೆ.
ಟಚ್‌ಡೌನ್ ಸಮಯದಲ್ಲಿ ವಿಮಾನವು ಹೇಗೆ (vertically ) ಇಳಿಯುತ್ತಿದೆ ಎಂಬುದು ಈ ಸ್ಪರ್ಶದ ಗತಿಯನ್ನು ನಿರ್ಧರಿಸುತ್ತದೆ. ಕಡಿಮೆ ವರ್ಟಿಕಲ್ ಸ್ಪೀಡ್ ಇದ್ದರೆ ಕಿಸ್ಸಿಂಗ್ ಲ್ಯಾಂಡಿಂಗ್ ಸಾಧ್ಯವಾಗುತ್ತದೆ. ರನ್‌ವೇ ಆರಂಭದ 1000-1500 ಅಡಿ ಒಳಗಡೆ ವಿಮಾನ ಇಳಿಯಬೇಕು. ಹೆಚ್ಚಿನ ಸಮಯ ರನ್‌ವೇ ಮೇಲೆ ಹಾರು(ಹೋವರ್) ವುದರಿಂದ ರನ್‌ವೇ ಮುಗಿಯುವ ಅಪಾಯವಿರುತ್ತದೆ. ಕೆಲವೊಮ್ಮೆ ನಿಖರ ಕಿಸ್ ಮಾಡುವ ಉದ್ದೇಶದಿಂದ ಸುರಕ್ಷಿತ ಟಚ್‌ಡೌನ್ ಮಿಸ್ ಆಗಬಹುದು.
ಹೇಗೆಯೇ ಲ್ಯಾಂಡ್ ಮಾಡುವುದಿದ್ದರೂ, ಸುರಕ್ಷಿತ ರನ್‌ವೇ ವಲಯದಲ್ಲಿಯೇ ಮಾಡಬೇಕು. ವೈಮಾನಿಕ ಸುರಕ್ಷಾ ಮಾರ್ಗದರ್ಶಿ ಈ ವಿಷಯದಲ್ಲಿ ಒಂದು ಸ್ಪಷ್ಟ ಮಾತನ್ನು ಹೇಳಿದೆ- Smooth is nice, but safety is necessary. ಅನುಭವಿ ಪೈಲಟ್‌ಗಳು ಬಲವಾದ ಗಾಳಿ ಇರುವಾಗಲೂ ಮೃದು ಲ್ಯಾಂಡಿಂಗ್ ಅಥವಾ ಕಿಸ್ಸಿಂಗ್ ಲ್ಯಾಂಡಿಂಗ್ ಮಾಡುತ್ತಾರೆ.
ಕಡಿಮೆ ದೃಶ್ಯವ್ಯಾಪ್ತಿಯಲ್ಲಿಯೂ ವಿಮಾನವನ್ನು ನಿರ್ದಿಷ್ಟ ಸ್ಥಳದಲ್ಲಿಯೇ ಕಿಸ್ಸಿಂಗ್ ಲ್ಯಾಂಡಿಂಗ್ ಮಾಡುತ್ತಾರೆ. ಇಲ್ಲಿ ಪ್ರಯಾಣಿಕರು ತಿಳಿಯಬೇಕಾದ ಒಂದು ಸಂಗತಿಯಿದೆ. ಅದೇನೆಂದರೆ, ಸಾಮಾನ್ಯವಾಗಿ ಎಲ್ಲ ವಿಮಾನಗಳು Autoland ಅಥವಾ Assisted Landing feature ಗಳನ್ನು ಹೊಂದಿರುತ್ತವೆ. ಇವು ರನ್‌ವೇ ಮೇಲೆ ಇರುವ instrument landing system (ILS)ನ ಸಹಾಯದಿಂದ ಪೈಲಟ್‌ಗೆ ದಿಕ್ಕಿನ ಬಗ್ಗೆ ಸ್ಪಷ್ಟ ಮಾರ್ಗದರ್ಶನ ನೀಡುತ್ತವೆ.

ಆದರೂ, ಈ ವ್ಯವಸ್ಥೆಗಳನ್ನು ಸರಿಯಾಗಿ ಬಳಸುವುದು, ತುರ್ತು ಸಂದರ್ಭಗಳಲ್ಲಿ ನಿಖರ ನಿರ್ಧಾರಗಳನ್ನು ತೆಗೆದುಕೊಳ್ಳುವುದು, ಪೈಲಟ್‌ನ ನೈಪುಣ್ಯಕ್ಕೆ ಬಿಟ್ಟ ವಿಚಾರ. ಕಿಸ್ಸಿಂಗ್ ಲ್ಯಾಂಡಿಂಗ್ ಮಾಡುವಾಗ ಗಾಳಿಯ ವೇಗ, ದಿಕ್ಕು, ಮಳೆ, ಮಂಜು ಇತ್ಯಾದಿ ಲ್ಯಾಂಡಿಂಗ್‌ನ ಮೇಲೆ ಪರಿಣಾಮ ಬೀರುತ್ತವೆ. ರನ್‌ವೇ ಮೇಲೆ ನೀರು, ಹಿಮವಿದ್ದರೆ, ಮೃದು ಲ್ಯಾಂಡಿಂಗ್ ಕಷ್ಟ. ವಿಮಾನ ಕೊನೆಯ 50-100 ಅಡಿ ಎತ್ತರದಲ್ಲಿ ಹಾರುವಾಗ ಕಿಸ್ಸಿಂಗ್ ಲ್ಯಾಂಡಿಂಗ್ ಗುರಿ ಸಾಧಿಸುವುದು ಸಾಧ್ಯವಾಗುತ್ತದೆ.
ಆಟೋಮೇಷನ್ ಮೂಲಕವೂ ವಿಮಾನ ಕಿಸ್ಸಿಂಗ್ ಲ್ಯಾಂಡಿಂಗ್ ಸಾಧಿಸಬಹುದು. ಆದರೆ ಪೈಲಟ್ ಸಮಯಪ್ರe ಮತ್ತು ಚಮತ್ಕಾರವೂ ಅಷ್ಟೇ ಮುಖ್ಯ. ಕಿಸ್ಸಿಂಗ್ ಲ್ಯಾಂಡಿಂಗ್ ಎಂಬುದು ಕೇವಲ ಮೃದು ಸ್ಪರ್ಶವಷ್ಟೇ ಅಲ್ಲ, ಅದು ಪೈಲಟ್‌ಗಳ ತಂತ್ರಗಳ ಅರಿವು, ತರಬೇತಿ ಮತ್ತು ತೀರ್ಮಾನಗಳ ಸಮನ್ವಯದ ಫಲಿತಾಂಶವೂ ಹೌದು.