Friday, November 14, 2025
Friday, November 14, 2025

ಕಾಕ್‌ಪಿಟ್‌ನಲ್ಲಿ ಯಾರು ಹೋಗಬಹುದು ?

ಇದು ವಿಮಾನದ ನರಮಂಡಲವಿದ್ದಂತೆ. ಇಲ್ಲಿ ತರಬೇತಿ ಪಡೆದ ವಿಮಾನ ಸಿಬ್ಬಂದಿ ಮಾತ್ರ ಇರಲು ಅನುಮತಿ ಇದೆ. ನಿಯಮದ ಪ್ರಕಾರ, ಕಾಕ್‌ಪಿಟ್ ನೊಳಗೆ ಅನಧಿಕೃತ ವ್ಯಕ್ತಿಗಳ ಪ್ರವೇಶ ಕ್ಕೆ ಅವಕಾಶವಿಲ್ಲ, ಏಕೆಂದರೆ ಇದು ವಿಮಾನದ ಸುರಕ್ಷತೆಗೆ ಮತ್ತು ಒಟ್ಟಾರೆಯಾಗಿ ವಾಯು ಯಾನ ಭದ್ರತೆಗೆ ಗಂಭೀರ ಅಪಾಯವನ್ನುಂಟು ಮಾಡುತ್ತದೆ.

ವಿಮಾನದ ಕಾಕ್‌ಪಿಟ್‌ನಲ್ಲಿ ಪೈಲಟ್ ತನ್ನ ಸ್ನೇಹಿತರನ್ನು ಅಥವಾ ಕುಟುಂಬದ ಸದಸ್ಯರನ್ನು ಕುಳ್ಳಿರಿಸಿಕೊಳ್ಳಬಹುದಾ? ಸಾಮಾನ್ಯವಾಗಿ, ವಾಣಿಜ್ಯ ವಿಮಾನಗಳಲ್ಲಿ ಇದು ಕಟ್ಟು ನಿಟ್ಟಾಗಿ ನಿಷಿದ್ಧ. ಆದರೆ, ಕೆಲವು ಅಪರೂಪದ ವಿನಾಯಿತಿಗಳು ಮತ್ತು ನಿರ್ದಿಷ್ಟ ಸನ್ನಿವೇಶಗಳಲ್ಲಿ ಇದಕ್ಕೆ ಅವಕಾಶವಿರುತ್ತದೆ. ಈ ನಿಯಮವನ್ನು ಉಲ್ಲಂಘಿಸಿದ ಘಟನೆಗಳೂ ಇವೆ.

ಸೆಪ್ಟೆಂಬರ್ 11, 2001ರ ಭಯೋತ್ಪಾದಕ ದಾಳಿಯ ನಂತರ, ವಿಮಾನ ಯಾನದ ಭದ್ರತಾ ನಿಯಮಗಳು ನಾಟಕೀಯವಾಗಿ ಬದಲಾಗಿವೆ. ಈ ಘಟನೆಯು ಕಾಕ್‌ಪಿಟ್‌ನ ಭದ್ರತೆ ಮತ್ತು ಅನಧಿಕೃತ ಪ್ರವೇಶವನ್ನು ತಡೆಯುವ ಅಗತ್ಯವನ್ನು ಜಾಗತಿಕವಾಗಿ ಒತ್ತಿ ಹೇಳಿತು. ಕಾಕ್‌ ಪಿಟ್ ಅಥವಾ ಫ್ಲೈಟ್ ಡೆಕ್ (Flight Deck) ವಿಮಾನದ ಕಾರ್ಯಾಚರಣೆಯ ನಿಯಂತ್ರಣ ಕೇಂದ್ರ.

ಇದನ್ನೂ ಓದಿ:

ಇದು ವಿಮಾನದ ನರಮಂಡಲವಿದ್ದಂತೆ. ಇಲ್ಲಿ ತರಬೇತಿ ಪಡೆದ ವಿಮಾನ ಸಿಬ್ಬಂದಿ ಮಾತ್ರ ಇರಲು ಅನುಮತಿ ಇದೆ. ನಿಯಮದ ಪ್ರಕಾರ, ಕಾಕ್‌ಪಿಟ್ ನೊಳಗೆ ಅನಧಿಕೃತ ವ್ಯಕ್ತಿಗಳ ಪ್ರವೇಶಕ್ಕೆ ಅವಕಾಶವಿಲ್ಲ, ಏಕೆಂದರೆ ಇದು ವಿಮಾನದ ಸುರಕ್ಷತೆಗೆ ಮತ್ತು ಒಟ್ಟಾರೆಯಾಗಿ ವಾಯುಯಾನ ಭದ್ರತೆಗೆ ಗಂಭೀರ ಅಪಾಯವನ್ನುಂಟುಮಾಡುತ್ತದೆ.

cockpit 1

ಪ್ರಪಂಚದಾದ್ಯಂತದ ವಾಯುಯಾನ ನಿಯಂತ್ರಣ ಸಂಸ್ಥೆಗಳು (ಉದಾಹರಣೆಗೆ, ಅಮೆರಿಕದ FAA, ಯುರೋಪಿನ EASA, ಮತ್ತು ಭಾರತದ DGCA) ಕಾಕ್‌ಪಿಟ್ ಪ್ರವೇಶಕ್ಕಾಗಿ ಕಠಿಣ ನಿಯಮಗಳನ್ನು ರೂಪಿಸಿವೆ. 2001ರ ಭಯೋತ್ಪಾದಕ ದಾಳಿಗಳ ನಂತರ, ಕಾಕ್‌ ಪಿಟ್‌ನ ಬಾಗಿಲುಗಳನ್ನು ದುರ್ಬಲಗೊಳಿಸಲಾಯಿತು ಮತ್ತು ಅವುಗಳನ್ನು ಗುಂಡು ನಿರೋಧಕ (ಬುಲೆಟ್ ಪ್ರೂಫ್) ಮತ್ತು ಬಲವ‌ರ್ಧಿತವಾಗಿ ವಿನ್ಯಾಸಗೊಳಿಸಲಾಯಿತು.

ಹಾರಾಟದ ಸಮಯದಲ್ಲಿ ಬಾಗಿಲು ಯಾವಾಗಲೂ ಲಾಕ್ ಆಗಿರುತ್ತದೆ ಮತ್ತು ನಿರ್ದಿಷ್ಟ ಭದ್ರತಾ ಪ್ರೋಟೋಕಾಲ್‌ಗಳ ಮೂಲಕ ಮಾತ್ರ ಸಿಬ್ಬಂದಿ ಪ್ರವೇಶಿಸಬಹುದು. ಅನಧಿಕೃತ ವ್ಯಕ್ತಿಯು, ಆತ ಸ್ನೇಹಿತನಾಗಿದ್ದರೂ, ನಿಯಂತ್ರಣಗಳನ್ನು ದುರುಪಯೋಗಪಡಿಸಿಕೊಳ್ಳುವ ಅಥವಾ ಕಾರ್ಯನಿರ್ವಹಿಸುತ್ತಿರುವ ಪೈಲಟ್‌ಗೆ ಅಡ್ಡಿಪಡಿಸುವ ಯಾವುದೇ ಸಾಧ್ಯತೆಯನ್ನು ತಪ್ಪಿಸುವುದು ನಿಯಮಗಳ ಹಿಂದಿನ ಮುಖ್ಯ ಉದ್ದೇಶ.

ಕಾಕ್‌ಪಿಟ್ ಅನ್ನು ಕೇವಲ ಕರ್ತವ್ಯದಲ್ಲಿರುವ ಸಿಬ್ಬಂದಿಗಾಗಿ ಮೀಸಲಿಡಲಾಗಿದೆ. ಪೈಲಟ್‌ ಗಳ ಸಂಪೂರ್ಣ ಗಮನವು ವಿಮಾನ ನಿಯಂತ್ರಣಗಳು ಮತ್ತು ಸಂವಹನದ ಮೇಲೆ ಇರಬೇಕು. ಸ್ನೇಹಿತರ ಉಪಸ್ಥಿತಿಯು ಪೈಲಟ್‌ಗಳಿಗೆ ಗಮನ ಭಂಗವನ್ನು ಉಂಟುಮಾಡಬಹುದು, ವಿಶೇಷವಾಗಿ ಟೇಕಾಫ್ ಮತ್ತು ಲ್ಯಾಂಡಿಂಗ್‌ನಂಥ ನಿರ್ಣಾಯಕ ಹಾರಾಟದ ಹಂತಗಳಲ್ಲಿ. ‌

ಕಾಕ್‌ಪಿಟ್‌ಗಳು ಸಾಮಾನ್ಯವಾಗಿ ಎರಡು ಪೈಲಟ್ ಆಸನಗಳು ಮತ್ತು ಒಂದು ಅಥವಾ ಎರಡು ಹೆಚ್ಚುವರಿ ಆಸನಗಳನ್ನು ಮಾತ್ರ ಹೊಂದಿರುತ್ತವೆ. ಈ ಜಂಪ್‌ಸೀಟ್‌ಗಳನ್ನು ವಿಮಾನಯಾನ ಸಂಸ್ಥೆಯು ಗೊತ್ತುಪಡಿಸಿದ ವ್ಯಕ್ತಿಗಳಿಗೆ ಮಾತ್ರ ಕಾಯ್ದಿರಿಸಲಾಗುತ್ತದೆ.

cockpit

ವಾಣಿಜ್ಯ ಹಾರಾಟದ ಸಮಯದಲ್ಲಿ ಯಾರು ಕಾಕ್‌ಪಿಟ್ ಪ್ರವೇಶಿಸಬಹುದು ಎಂಬುದಕ್ಕೆ ಸ್ಪಷ್ಟ ಮಾರ್ಗಸೂಚಿಗಳಿವೆ. ಕರ್ತವ್ಯದಲ್ಲಿರುವ ವಿಮಾನ ಸಿಬ್ಬಂದಿ ಅಂದರೆ ಕ್ಯಾಪ್ಟನ್, ಸಹ-ಪೈಲಟ್ ಮತ್ತು ಕೆಲವೊಮ್ಮೆ, ತುರ್ತುಪರಿಸ್ಥಿತಿಯಾದರೆ, ಕ್ಯಾಬಿನ್ ಸಿಬ್ಬಂದಿ ಕಾಕ್‌ಪಿಟ್ ಪ್ರವೇಶಿಸಬಹುದು. ಪೈಲಟ್‌ಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುವ ತರಬೇತಿ ಅಧಿಕಾರಿಗಳು ಹಾಗೂ ನಿರ್ದಿಷ್ಟ ಮಾರ್ಗದಲ್ಲಿ ತರಬೇತಿ ಪಡೆಯುವ ಹೊಸ ಪೈಲಟ್‌ಗಳು ಅಲ್ಲಿಗೆ ಹೋಗಬಹುದು.

ಕರ್ತವ್ಯದಲ್ಲಿಲ್ಲದ, ಆದರೆ ಅದೇ ವಿಮಾನಯಾನ ಸಂಸ್ಥೆಯ ಅಥವಾ ಇತರ ಏರ್‌ಲೈನ್‌ನ ಅಧಿಕೃತ ಪೈಲಟ್‌ಗಳು ಹೋಗಬಹುದು. ವಾಯುಯಾನ ನಿಯಂತ್ರಕರು, ತನಿಖಾಧಿಕಾರಿ ಗಳು ಅಂದರೆ ಭದ್ರತಾ ತಪಾಸಣೆ ಅಥವಾ ತನಿಖೆ ನಡೆಸುವ ಸರಕಾರಿ ಅಧಿಕಾರಿಗಳು ಸಹ ಪ್ರವೇಶಪಡೆಯಬಹುದು. ಪೈಲಟ್‌ನ ಸ್ನೇಹಿತರು ಅಥವಾ ಕುಟುಂಬದವರು ಈ ಯಾವುದೇ ಅರ್ಹತೆಗಳನ್ನು ಹೊಂದಿಲ್ಲದಿದ್ದರೆ, ಅವರಿಗೆ ಕಾಕ್‌ಪಿಟ್ ಪ್ರವೇಶಿಸಲು ಅವಕಾಶವಿಲ್ಲ.

ನಿಯಮಗಳು ಯಾವುದೇ ವೈಯಕ್ತಿಕ ಸಂಬಂಧವನ್ನು ಪರಿಗಣಿಸುವುದಿಲ್ಲ. ಕಾಕ್‌ಪಿಟ್‌ನಲ್ಲಿ ಅನಽಕೃತ ವ್ಯಕ್ತಿಗಳಿಗೆ ಅವಕಾಶ ನೀಡುವ ನಿಯಮಗಳನ್ನು ಪೈಲಟ್‌ಗಳು ಉಲ್ಲಂಘಿಸಿದ ಕೆಲವು ಘಟನೆಗಳು ವರದಿಯಾಗಿವೆ. ಇದು ಗಂಭೀರ ಭದ್ರತಾ ಪ್ರಶ್ನೆಗಳನ್ನು ಹುಟ್ಟು ಹಾಕಿದ್ದುಂಟು.

Vishweshwar Bhat

Vishweshwar Bhat

Editor in Chief

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?