Thursday, September 3, 2026
Thursday, September 3, 2026

ದಸರಾ ದೀಪಾವಳಿಗೆ ವಿಮಾನ ಟಿಕೆಟ್‌ ದರ ಏರಿಕೆ ಸಾಧ್ಯತೆ; ಕಾರಣವೇನು?

ದಸಾರ-ದೀಪಾವಳಿ ಹಬ್ಬದ ಪ್ರಾಯಾಣಕ್ಕೆ ಸಿದ್ಧರಾಗಿರುವವರಿಗೆ ವಿಮಾನ ಟಿಕೆಟ್‌ ದರ ಏರಿಕೆಯ ಸಾಧ್ಯತೆ ಎದುರಾಗಿದ್ದು,ATF ಬೆಲೆ ಹೆಚ್ಚಳ ಪ್ರಮುಖ ಕಾರಣವಾಗಿದೆ.

ದಸರಾ ಮತ್ತು ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ವಿಮಾನ ಪ್ರಾಯಣ ಮಾಡುವವರಿಗೆ ಈ ಬಾರಿ ಹೆಚ್ಚಿನ ವೆಚ್ಚಾವಾಗುವ ಸಾಧ್ಯತೆ ಇದೆ. ದೇಶೀಯ ವಿಮಾನಯಾನ ಸಂಸ್ಥೆಗಳಿಗೆ ಪ್ರಮುಖ ವೆಚ್ಚವಾಗಿರುವ ಏವಿಯೇಷನ್‌ ಟರ್ಬೈನ್‌ ಫ್ಯೂಯೆಲ್‌ (ATF) ಬೆಲೆ ಸತತ ಎರಡನೇ ತಿಂಗಳೂ ಏರಿಕೆಯಾಗಿದೆ.

ಸೆಪ್ಪೆಂಬರ್‌ 1ರಿಂದ ATF ಬೆಲೆ ಶೇ.5.46ರಷ್ಷು ಹೆಚ್ಚಾಗಿ ಪ್ರತಿ ಲೀಟರ್‌ಗೆ ₹121.28ಕ್ಕೆ ತಲುಪಿದೆ. ಇದಕ್ಕೂ ಮುನ್ನ ಆಗಸ್ಟ್‌ 1ರಂದು ಪ್ರತಿ ಲೀಟರ್‌ ಗೆ ₹5ರಷ್ಟು ಬೆಲೆ ಹೆಚ್ಚಿಸಲಾಗಿತ್ತು. ಜುಲೈನಲ್ಲಿ ಮಾತ್ರ ₹5ರಷ್ಟು ಬೆಲೆ ಇಳಿಸಲಾಗಿತ್ತು.

ಭಾರತದಲ್ಲಿ ವಿಮಾನಯಾನ ಸಂಸ್ಥೆಗಳ ಒಟ್ಟು ಕಾರ್ಯಾಚರಣಾ ವೆಚ್ಚದಲ್ಲಿ ATF ಸುಮಾರು ಶೇ.35ರಿಂದ 40ರಷ್ಟು ಪಾಲು ಹೊಂದಿದೆ. ಹೀಗಾಗಿ ಇಂಧನದ ಬೆಲೆ ಏರಿಕೆಯಾದಾಗ ವಿಮಾನ ಸಂಸ್ಥೆಗಳ ಮೇಲಿನ ಒತ್ತಡವೂ ಹೆಚ್ಚಾಗುತ್ತದೆ.

ಈ ಹೆಚ್ಚುವರಿ ವೆಚ್ಚವನ್ನು ಸರಿದೂಗಿಸಲು ಕೆಲವು ವಿಮಾನಯಾನ ಸಂಸ್ಥೆಗಳು ಟಿಕೆಟ್‌ ದರ ಹೆಚ್ಚಿಸುವ ಸಾಧ್ಯಾತೆಯಿದೆ. ಆದರೆ ದರ ಏರಿಕೆ ಎಷ್ಟಿರಲಿದೆ ಎಂಬುದು ಪ್ರಯಾಣಿಕರ ಬೇಡಿಕೆ, ಮಾರುಕಟ್ಟೆಯಲ್ಲಿನ ಸ್ಪರ್ಧೆ ಮತ್ತು ವಿಮಾನಗಳ ಲಭ್ಯತೆಯನ್ನು ಅವಲಂಬಿಸಿರುತ್ತದೆ. ಕೆಲವು ಸಂಸ್ಧೆಗಳು ಹೆಚ್ಚುವರಿ ವೆಚ್ಚವನ್ನು ತಾವೇ ಭರಿಸುವ ಸಾಧ್ಯತೆಯೂ ಇದೆ.

ಹಬ್ಬದ ಸಮಯದಲ್ಲಿ ಪ್ರಯಾಣಿಕರ ಸಂಖ್ಯೆ ಸಾಮಾನ್ಯವಾಗಿ ಹೆಚ್ಚಾಗುವುದರಿಂದ ವಿಮಾನ ದರದ ಮೇಲೂ ಪರಿಣಮಾ ಬೀರುವ ಸಾಧ್ಯತೆಯಿದೆ. ದರಗಳು ಹೆಚ್ಚಾದರೆ ಕೆಲವರು ರೈಲು ಅಥವಾ ಇತರ ಸಾರಿಗೆ ವ್ಯವಸ್ಥೆಗಳತ್ತ ಮುಖ ಮಾಡುವ ಸಾಧ್ಯತೆಯಿದೆ.

ಇದೇ ವೇಳೆ ಜಾಗತಿಕ ಕಚ್ಚಾ ತೈಲ ಬೆಲೆ ಮತ್ತು ಅಮೆರಿಕ-ಇರನ್‌ ನಡುವಿನ ಉದ್ವಿಗ್ನತೆ ಕೂಡ ಇಂಧನ ಬೆಲೆ ಏರಿಕೆಗೆ ಕಾರಣವಾಗುವ ಆತಂಕವಿದೆ. ಈ ಹಿಂದೆ ವಿಮಾನಯಾನ ಸಂಸ್ಥೆಗಳಿಗೆ ಇಂಧನ ದರದ ಏರಿಳಿತದಿಂದ ರಕ್ಷಣೆ ನೀಡಲು ಸರ್ಕಾರ ಆರಂಭಿಸಿದ್ದ ಬೆಲೆ ಸ್ಥಿರೀಕರಣ ಯೋಜನೆಯನ್ನು ಜುಲೈನಲ್ಲಿ ಸ್ಥಗಿತಗೊಳಿಸಲಾಗಿದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ