ಪ್ರವಾಸೋದ್ಯಮಂ ದ್ರೋಹ ಚಿಂತನಂ.. !?
ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಸ್ಥಳೀಯ ಟೂರ್ ಆಪರೇಟರ್‌ಗಳು ಪ್ರವಾಸಿಗರಿಗೆ ಅಕ್ಶರಶಃ ಮೋಸ ಮಾಡುತ್ತಿದ್ದಾರೆ. ವಿಂಟರ್ ಟೂರಿಸಮ್ಮಿಗೆ ಮನಾಲಿಗೆ ಬನ್ನಿ. ಸ್ನೋ ಫಾಲ್ ಆಗಿದೆ. ಹಿಮದಲ್ಲಿ ಸ್ಕೀಯಿಂಗ್ ಮಾಡಿ, ಆಟವಾಡಿ ಅಂತ ಪ್ರವಾಸಿಗರನ್ನು ತಮ್ಮ ಏಜೆಂಟುಗಳ ಮೂಲಕ ಕರೆಸುತ್ತಿದ್ದಾರೆ. ಎಡಿಟೆಡ್ ಫೊಟೋ ಮತ್ತು ವಿಡಿಯೋಗಳನ್ನು ಹಾಕಿ ನಂಬಿಸುತ್ತಿದ್ದಾರೆ. ಆದರೆ ವಾಸ್ತವ ಏನೆಂದರೆ ಮನಾಲಿಯಲ್ಲ ಸ್ನೋ ಫಾಲ್ ಆಗಿಲ್ಲ.
ಪ್ರವಾಸ ಕೂಡ ಒಂದು ಉದ್ಯಮವಾಗಿರುವ ಸಂದರ್ಭದಲ್ಲಿ ಗಿಮಿಕ್ ಅನ್ನೋದು ಅನಿವಾರ್ಯ. ಆದರೆ ಗಿಮಿಕ್ ಗೂ ಮೋಸ/ವಂಚನೆಗೂ ಭಾರಿ ವ್ಯತ್ಯಾಸವಿದೆ. ಜಾಹೀರಾತು ಎಂಬುದು ಎಂದಿಗೂ ಒಂದು ಪಟ್ಟು ಇರೋದನ್ನು ಹತ್ತು ಪಟ್ಟು ಚೆಂದವಿದೆ ಎಂದು ತೋರಿಸುವ ಮಾಧ್ಯಮ. ನಮ್ಮ ಟೂತ್ ಪೇಸ್ಟ್ ನಲ್ಲಿ ಹಲ್ಲುಜ್ಜಿದರೆ ಹಲ್ಲು ಬೆಳ್ಳಿಯಂತೆ ಫಳಫಳ ಹೊಳೆಯುತ್ತದೆ ಎಂಬ ಜಾಹೀರಾತು ನೋಡಿ ಪೇಸ್ಟ್ ತಗೊಂಡು ಹಲ್ಲುಜ್ಜಿದಾಗ ಭ್ರಮನಿರಸನವಾಗುವುದು ನಿಜ. ಆದರೆ ಅದು ಮೋಸವಲ್ಲ. ಹಲ್ಲು ಕ್ಲೀನ್ ಆಗುತ್ತದೆ ಎಂಬುದನ್ನು ಉತ್ಪ್ರೇಕ್ಷೆಯಿಂದ ತೋರಿಸಿ ಆಕರ್ಷಿಸುವುದು ಜಾಹೀರಾತಿನ ಉದ್ದೇಶ.
ಇದನ್ನೂ ಓದಿ: ಭಲೇ ಭಲೇ.. ದಕ್ಷಿಣಕನ್ನಡ
ಪ್ರಧಾನಿ ಮೋದಿ ಜತೆ ಸೆಲ್ಫೀ ಕೊಡಿಸುತ್ತೇವೆ ಎಂದು ಜನರನ್ನು ಸೆಳೆದು ಹಣ ಕಿತ್ತು, ಮೋದಿ ತದ್ರೂಪಿಯೊಂದಿಗೆ ಸೆಲ್ಫೀ ಕೊಡಿಸಿದರೆ ಅದು ಮೋಸ. ಪ್ರವಾಸಿ ತಾಣಗಳ ಬಗ್ಗೆ ಉತ್ಪ್ರೇಕ್ಷೆಯ ಕಥೆಗಳು, ಸ್ಥಳಮಹಿಮೆ, ಸೌಂದರ್ಯದ ಬಗ್ಗೆ ಜಾಹೀರಾತುಗಳನ್ನು ನೋಡಿ ಪ್ರವಾಸಿಗರು ಹಲವು ಬಾರಿ ಯಾಮಾರುತ್ತಾರೆ ಅಥವಾ ಭ್ರಮನಿರಸನಗೊಳ್ಳುತ್ತಾರೆ.

ಪ್ರತಿ ಮಳೆಗಾಲದ ನಡುವಲ್ಲಿ, ಶರಾವತಿ ನದಿ ತುಂಬಿ ಹರಿಯುತ್ತಿದೆ, ಲಿಂಗನಮಕ್ಕಿ ಜಲಾಶಯ ತುಂಬಿತುಳುಕುತ್ತಿದೆ ಎಂದು ಗೊತ್ತಾಗುತ್ತಿದ್ದ ಹಾಗೇ ಪತ್ರಿಕೆಗಳ ಮುಖಪುಟದಲ್ಲಿ ಜೋಗಜಲಪಾತದ ಅದ್ಭುತ ಫೊಟೋವೊಂದನ್ನು ಹಾಕಿ ಜಲಪಾತ ಮೈದುಂಬಿದೆ ಎಂದು ಬರೆಯುತ್ತಾರೆ. ಆದರೆ ಪ್ರವಾಸಿಗರು ಜೋಗ್ ಫಾಲ್ಸ್ ಎದುರು ನಿಂತರೆ ಪತ್ರಿಕೆಯಲ್ಲಿ ತೋರಿಸಿದ ಫೊಟೋ ಥರ ಅಲ್ಲಿ ಶರಾವತಿ ಧುಮ್ಮುಕ್ಕುತ್ತಿರುವುದಿಲ್ಲ. ಹಾಗಂತ ಇದು ಪ್ರವಾಸೋದ್ಯಮದಿಂದ ಅಥವಾ ಪತ್ರಿಕೆಯಿಂದ ಆದ ಮೋಸವೇನಲ್ಲ.
ಮೋಸ ಅಂದರೇನು ಅನ್ನೋದಕ್ಕೆ ಇಲ್ಲೊಂದ ಉದಾಹರಣೆಯಿದೆ. ಹಿಮಾಚಲಪ್ರದೇಶದ ಮನಾಲಿಯಲ್ಲಿ ಸ್ಥಳೀಯ ಟೂರ್ ಆಪರೇಟರ್‌ಗಳು ಪ್ರವಾಸಿಗರಿಗೆ ಅಕ್ಶರಶಃ ಮೋಸ ಮಾಡುತ್ತಿದ್ದಾರೆ. ವಿಂಟರ್ ಟೂರಿಸಮ್ಮಿಗೆ ಮನಾಲಿಗೆ ಬನ್ನಿ. ಸ್ನೋ ಫಾಲ್ ಆಗಿದೆ. ಹಿಮದಲ್ಲಿ ಸ್ಕೀಯಿಂಗ್ ಮಾಡಿ, ಆಟವಾಡಿ ಅಂತ ಪ್ರವಾಸಿಗರನ್ನು ತಮ್ಮ ಏಜೆಂಟುಗಳ ಮೂಲಕ ಕರೆಸುತ್ತಿದ್ದಾರೆ. ಎಡಿಟೆಡ್ ಫೊಟೋ ಮತ್ತು ವಿಡಿಯೋಗಳನ್ನು ಹಾಕಿ ನಂಬಿಸುತ್ತಿದ್ದಾರೆ. ಆದರೆ ವಾಸ್ತವ ಏನೆಂದರೆ ಮನಾಲಿಯಲ್ಲ ಸ್ನೋ ಫಾಲ್ ಆಗಿಲ್ಲ. ಎಲ್ಲ ಬೆಟ್ಟ ಗುಡ್ಡಗಳೂ ಹಸಿರು ಮತ್ತು ಕಲ್ಲುಮಣ್ಣು ಕಾಣುವಂತೆ ಹಿಮರಹಿತವಾಗಿವೆ. ಈಗ ಸುಳ್ಳನ್ನು ಮುಚ್ಚಿಡಲ ಟೂರ್ ಆಪರೇಟರ್ ಗಳು, ಟ್ರಕ್ ನಲ್ಲಿ ಐಸ್ ತಂದು ನೆಲದ ಮೇಲೆ ಸುರಿದು, ಇದು ಹಿಮಪಾತದಿಂದ ಆಗಿರುವ ಸ್ನೋಬೆಡ್ ಎಂದು ನಂಬಿಸಿ ಅಲ್ಲಿ ಆಟ ಆಡಿಸುತ್ತಿದ್ದಾರೆ. ಮನೆಯಲ್ಲಿರೋ ಫ್ರಿಜ್ಜಲ್ಲಿ ಇದಕ್ಕಿಂತ ಜಾಸ್ತಿ ಮಂಜುಗಡ್ಡೆ ಇರುತ್ತದೆಂದು ಮೋಸ ಹೋದ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ವಂಚನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಹಿಮಾಚಲಪ್ರದೇಶ ಪ್ರವಾಸೋದ್ಯಮಕ್ಕೂ ಭಾರಿ ಮುಖಭಂಗವಾಗಿದೆ.