ಊಟಿಯ ಘಾಟಿಯೆಡೆಗೆ ಕೆಎಸ್‌ಟಿಡಿಸಿ ನಡಿಗೆ
ಕೊಡೈಕೆನಾಲ್‌ನ ಆಕರ್ಷಣೆಯಾದ ಕೊಡೈ ಸರೋವರವು ಹಚ್ಚ ಹಸಿರಿನ ನಡುವೆ ಪ್ರಶಾಂತ ದೋಣಿ ವಿಹಾರವನ್ನು ನೀಡುತ್ತದೆ. ಕೋಕರ್ಸ್ ವಾಕ್ ಬೆರಗುಗೊಳಿಸುವ ಕಣಿವೆಯ ನೋಟಗಳನ್ನು ಒದಗಿಸುತ್ತದೆ, ಆದರೆ ಪಿಲ್ಲರ್ ರಾಕ್ಸ್‌ನ ಎತ್ತರದ ರಚನೆಗಳು ಆಕರ್ಷಕವಾಗಿವೆ. ಬ್ರ್ಯಾಂಟ್ ಪಾರ್ಕ್‌ನ ವರ್ಣರಂಜಿತ ಹೂವುಗಳು ಮತ್ತು ಕೊಡೈಕೆನಾಲ್ ಸೌರ ವೀಕ್ಷಣಾಲಯವು ಸಸ್ಯಶಾಸ್ತ್ರ ಮತ್ತು ವಿಜ್ಞಾನ ಉತ್ಸಾಹಿಗಳನ್ನು ಆಕರ್ಷಿಸುತ್ತದೆ.
ಇದೀಗ ಸಂಭ್ರಮದ ಮುಸಲಧಾರೆ ಶುರುವಾಗಿದೆ. ಸಸ್ಯ ಶ್ಯಾಮಲೆ ಎಲ್ಲೆಡೆ ತನ್ನ ಸೆರಗನ್ನು ಚಾಚಿ ಕಂಗೊಳಿಸುತ್ತಿದ್ದಾಳೆ. ನದಿಗಳು ತುಂಬಿ ಹರಿಯುತ್ತಿವೆ. ಜಲಪಾತಗಳು ಭೋರ್ಗರೆಯುತ್ತಿವೆ. ಕೋಕಿಲ ಗಾನ ಮೊಳಗುತ್ತಿದೆ. ಹಕ್ಕಿಗಳು ಇಂಪಾಗಿ ಚಿಂವ್ ಗುಟ್ಟುತ್ತಿವೆ. ನವಿಲುಗಳು ಥಕ ಥೈ ಕುಣಿಯುತ್ತಿವೆ. ವನ್ಯ ಜೀವಿಗಳೆಲ್ಲವೂ ಮೈ ಕೈ ಅರಳಿಸಿಕೊಂಡು ನಿಂತಿವೆ. ಇದು ಶ್ರಾವಣ ಮಾಸ. ನಾವು ʼಶ್ರಾವಣ ಮಾಸ ಬಂದಾಗ ಆನಂದ ತಂದಾಗʼ ಎಂದು ದನಿಬಿಚ್ಚಿ ಹಾಡಬಹುದು. ಇತ್ತ ಪ್ರವಾಸಿಗರು ಹೊಸ ಹುರುಪಿನೊಂದಿಗೆ ಮಾನ್ಸೂನ್ ಮಳೆಯಲ್ಲಿ ತೊಯ್ದು ಸಂಭ್ರಮಿಸಲು ಸಜ್ಜಾಗಿದ್ದಾರೆ. ದೇಶದಲ್ಲಿರುವ ಅದ್ಭುತ ತಾಣಗಳಿಗೆ ದಂಡು ದಂಡಾಗಿ ಹೋಗುತ್ತಿದ್ದಾರೆ. ಪ್ರವಾಸಿ ಪ್ರಿಯರು ಅಕ್ಷರಶಃ ರೆಕ್ಕೆ ತೆರೆದ ಹಕ್ಕಿಗಳಾಗಿದ್ದಾರೆ. ಪ್ರವಾಸದ ಮೂಲಕವೇ ಎಲ್ಲ ಜಂಜಾಟಗಳನ್ನು ಮರೆಯುತ್ತಿದ್ದಾರೆ. ಜಗತ್ತಿನ ಎಲ್ಲ ಸಡಗರವನ್ನು ತಮ್ಮೊಳಗೆ ತುಂಬಿಕೊಳ್ಳುತ್ತಿದ್ದಾರೆ. ಇಡೀ ಪ್ರಕೃತಿ ನಗುವಿನ ಹೊಳೆ ಹರಿಸಿದೆ. ಮನಸ್ಸಿಗೆ ತಿಲ್ಲಾನ ಬರೆದಿದೆ.
ಇಷ್ಟೆಲ್ಲ ಸಂತಸದ ನಡುವೆ ನಾವು ಮನೆಯೊಳಗೆ ಬೆಚ್ಚಗೆ ಅವಿತು ಕೂರುವುದು ಸರಿಯಲ್ಲ. ಕಂಬಳಿ ಸರಿಸಿ ಹೊಸ್ತಿಲು ದಾಟಿ ಹೊರಬರಲೇಬೇಕು. ಯಾಂತ್ರಿಕ ಬದುಕಿನಿಂದ ನುಣುಚಿಕೊಂಡು ಯಾತ್ರಿಕ ಬದುಕಿಗೆ ತೆರೆದುಕೊಳ್ಳಬೇಕು. ಯಾತ್ರಿಕ ಬದುಕು ಮಾತ್ರ ನಮ್ಮ ಬದುಕನ್ನು ಸಂಭ್ರಮದ ಖಜಾನೆ ಆಗಿಸಬಲ್ಲದು. ಸುತ್ತುವವರಿಗಷ್ಟೇ ಈಗ ಕಿಮ್ಮತ್ತು. ಸುತ್ತುವ ಅಭಿರುಚಿ ಇಲ್ಲದವನು ರಸಿಕನೇ ಅಲ್ಲ. ಅವನು ಶುದ್ಧ ಅರಸಿಕ. ಅದೆಲ್ಲ ಇರಲಿ; ಸುತ್ತುವ ಖಯಾಲಿ ಇರುವವರಿಗಾಗಿಯೇ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಈಗ ಹೊಸ ಸಾಹಸಕ್ಕೆ ಮುಂದಾಗಿದೆ. ಕರ್ನಾಟಕದ ಪ್ರವಾಸಿಗರನ್ನು ಇಡೀ ರಾಜ್ಯ ಸುತ್ತಿಸುವ ಯೋಜನೆ ಹಾಕಿಕೊಂಡಿದೆ. ಬಜೆಟ್ ಸ್ನೇಹಿ ಪ್ಯಾಕೇಜ್ ಗಳೊಂದಿಗೆ ವಿಸ್ಮಯವಾದ ತಾಣಗಳಿಗೆ ಕರೆದೊಯ್ಯುತ್ತಿದೆ. ಹತ್ತಾರು ಪ್ಯಾಕೇಜ್ ಗಳನ್ನು ಘೋಷಿಸುವ ಮೂಲಕ ಕೇರಳ ಪ್ರವಾಸೋದ್ಯಮಕ್ಕೂ ಸೆಡ್ಡು ಹೊಡೆಯುತ್ತಿದೆ. ಈ ಮೂಲಕ ಬೇರೆಲ್ಲ ರಾಜ್ಯಗಳಿಗಿಂತಲೂ ನೈಸರ್ಗಿಕವಾಗಿ ಶ್ರೀಮಂತವಾಗಿರುವ ಕರ್ನಾಟಕವು ಪ್ರವಾಸೋದ್ಯಮದಲ್ಲಿ ಹೊಸ ಭಾಷ್ಯ ಬರೆಯುವುದರಲ್ಲಿ ಅನುಮಾನವಿಲ್ಲ.
ನವ ಚೈತನ್ಯದೊಂದಿಗೆ ಹಲವು ಯೋಜನೆಗಳನ್ನು ಹಮ್ಮಿಕೊಂಡಿರುವ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(ಕೆಎಸ್ ಟಿಡಿಸಿ) ಪ್ರವಾಸಿಗರಿಗಾಗಿಯೇ ವಿಶೇಷ ಪ್ಯಾಕೇಜ್ ಗಳನ್ನು ಘೋಷಿಸಿದೆ. ನಿಸರ್ಗ ಸೌಂದರ್ಯ ಸವಿಯಲು, ಗತ ಕಾಲದ ಐತಿಹಾಸಿಕ ತಾಣಗಳಿಗೆ ಭೇಟಿ ನೀಡಲು, ಜಲಪಾತಕ್ಕೆ ಮೈಯೊಡ್ಡಲು ಕೆ ಎಸ್ ಟಿಡಿಸಿ ಉತ್ತಮ ಅವಕಾಶ ಕಲ್ಪಿಸಿಕೊಟ್ಟಿದೆ. ಅದರಲ್ಲಿ ಬಹಳ ಪ್ರಮುಖವಾಗಿ ಮೈಸೂರು-ಊಟಿ-ಕೊಡೈಕೆನಾಲ್‌ಗೆ ಐದು ದಿನಗಳ ಕಾಲ ಪ್ರವಾಸವನ್ನು, ಪ್ರವಾಸಿಗರನ್ನು ಕೈ ಹಿಡಿದು ಕರೆದುಕೊಂಡು ಹೋಗುತ್ತಿದೆ. ಇದು 5 ದಿನಗಳ ವಿಶೇಷ ಪ್ಯಾಕೇಜ್ ಆಗಿದ್ದು, ಬಹಳ ಅಚ್ಚುಕಟ್ಟಾಗಿ ಪ್ರತಿಯೊಂದನ್ನೂ ರೂಪಿಸಿದ್ದಾರೆ. 5 ದಿನಗಳ ಪ್ರವಾಸದಲ್ಲೂ ಕಣ್ಮನ ಸೆಳೆಯುವ ಜಾಗಗಳು, ಪ್ರಸಿದ್ಧ ಹೊಟೇಲ್ ಗಳಲ್ಲಿ ಬೆಳಗಿನ ಉಪಾಹಾರ, ಊಟ ಸೇವನೆ ಮತ್ತು ವಾಸ್ತವ್ಯಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಕೆಎಸ್ ಟಿಡಿಸಿ ಇದೀಗ ಪ್ರವಾಸಿಗರ ಆಪ್ತ ಸಂಗಾತಿ.

ಹಾಗೇ, ಐದು ದಿನಗಳ ಕಾಲ ಊರು ಸುತ್ತೋಕೆ ಆಗಲ್ಲ, ಆಫೀಸು, ಮಕ್ಕಳ ಸ್ಕೂಲು ಹಾಗೇ ಹೀಗೇ ರಾಗ ಎಳೆಯುವವರಿಗೆ ಕೆಎಸ್‌ಟಿಡಿಸಿ ಮತ್ತೊಂದು ಮೈಸೂರು-ಊಟಿಯ 2 ದಿನಗಳ ಪ್ರವಾಸವನ್ನೂ ಏರ್ಪಡಿಸುತ್ತಿದೆ.
ದಕ್ಷಿಣಭಾರತದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರಮುಖ ಹೆಸರು ತಮಿಳುನಾಡಿನ ಊಟಿ ಮತ್ತು ಕೊಡೈಕೆನಾಲ್ ಗಿರಿಧಾಮಗಳು. ಬೆಟ್ಟಗುಡ್ಡಗಳ ಸಾಲಿನ ಜತೆಗೆ ಹಿಮಚ್ಛಾದಿತ ವಾತಾವರಣವೇ ಇಲ್ಲಿನ ಆಕರ್ಷಣೆ. ಬೇಸಿಗೆಯಲ್ಲಿ ತಣ್ಣಗೆ, ಚಳಿಗಾಲದಲ್ಲಿ ಅತೀ ತಣ್ಣಗೆ, ಮಳೆಗಾಲದಲ್ಲಿ ಮಳೆ ಹಾಗೂ ಚಳಿಯೊಂದಿಗೆ ಆಯಾ ಋತುಮಾನಕ್ಕೆ ತಕ್ಕಂತೆ ವಿಭಿನ್ನ ಪರಿಸರ ಹಾಗೂ ವಾತಾವರಣದಿಂದ ಲಕ್ಷಾಂತರ ಪ್ರವಾಸಿಗರನ್ನೂ ಈ ಎರಡೂ ತಾಣಗಳು ಸೆಳೆಯುತ್ತವೆ. ದಕ್ಷಿಣ ಭಾರತ ಮಾತ್ರವಲ್ಲದೇ ಉತ್ತರ ಭಾರತದಿಂದ ಹೆಚ್ಚಿನ ಪ್ರವಾಸಿಗರು ಎರಡೂ ತಾಣಗಳಿಗೂ ಬರುವುದುಂಟು.
ಊಟಿಯು ವರ್ಷಪೂರ್ತಿ ತಂಪಾದ ತಾಪಮಾನವನ್ನು (15–20°C) ಅನುಭವಿಸುತ್ತದೆ, ಬೇಸಿಗೆ (ಮಾರ್ಚ್–ಮೇ) ದೃಶ್ಯವೀಕ್ಷಣೆಗೆ ಸೂಕ್ತವಾಗಿರುತ್ತದೆ ಮತ್ತು ಚಳಿಗಾಲ (ಅಕ್ಟೋಬರ್–ಫೆಬ್ರವರಿ) ಹಿತಕರವಾಗಿರುತ್ತದೆ. ಕೊಡೈಕೆನಾಲ್‌ನ ಸೌಮ್ಯ ಹವಾಮಾನ (20–30°C) ಇದನ್ನು ಬೇಸಿಗೆಯನ್ನು ಸ್ವರ್ಗದಲ್ಲಿರುವ ರೀತಿ ಮಾಡುತ್ತದೆ (ಏಪ್ರಿಲ್–ಜೂನ್).
ಊಟಿ ಅಥವಾ ಕೊಡೈಕೆನಾಲ್‌ಗೆ ಹೋಗಲು ನೀವು ಯಾವ ಸೀಸನ್‌ನಲ್ಲಿ ಹೊರಟಿದ್ದೀರಾ ಎನ್ನುವುದೂ ತುಂಬ ಅವಶ್ಯಕ ಕಣ್ರೀ! ಊಟಿಗೆ ಹೋಗುವವರೆಲ್ಲ ಮಳೆಗಾಲವನ್ನು ಅನುಭವಿಸಲು, ಪ್ರಕೃತಿಯ ಸವಿಯನ್ನು ಸವಿಯಲು. ಚಳಿಯಲ್ಲಿ ಮೈ ಚಳಿಬಿಟ್ಟು ಊರು ಸುತ್ತಲು, ಹೊಟೇಲ್‌ನಿಂದ ಕಣ್ಣಾಡಿಸಿದಷ್ಟು ಹಚ್ಚ ಹಸಿರು ಕಾಣುವ ನೋಟಗಳನ್ನು ಸವಿಯಲು ಹೋಗುತ್ತಾರೆ.
ಊಟಿಯ ಚಹಾ ತೋಟಗಳು, ಮಂಜಿನಿಂದ ಕೂಡಿದ ನೀಲಗಿರಿ ಬೆಟ್ಟಗಳು ಮತ್ತು ವಿಹಂಗಮ ದೊಡ್ಡಬೆಟ್ಟ ಶಿಖರವು ಅದರ ಆಕರ್ಷಣೆಯನ್ನು ವ್ಯಾಖ್ಯಾನಿಸುತ್ತದೆ, ಹಸಿರಿಗಾಗಿ ಊಟಿ ಹಾಗೂ ಕೊಡೈಕೆನಾಲ್‌ಗೆ ಒಂದು ಮಟ್ಟಿಗೆ ದೇಶದಲ್ಲೇ ಖ್ಯಾತಿ ಬಂದಿದೆ. ಅದರ ಜತೆಗೆ ದೇಶದ ಹಲವಾರು ಸಿನಿಮಾಗಳಿಗೆ ಈ ತಾಣಗಳು ಹಾಟ್ ಫೇವರಿಟ್! ಅಲ್ವಾ? ದಟ್ಟವಾದ ಕಾಡುಗಳು, ಕಲ್ಲಿನ ಬಂಡೆಗಳು ಮತ್ತು ಬೆರಿಜಮ್‌ನಂಥ ಪ್ರಶಾಂತ ಸರೋವರಗಳನ್ನು ಹೊಂದಿರುವ ಕೊಡೈಕೆನಾಲ್, ಕಾಡು, ಹೆಚ್ಚು ಏಕಾಂತ ಸೌಂದರ್ಯವನ್ನು ನೀಡುತ್ತದೆ.

ಊಟಿಯ ಆಕರ್ಷಣೆಗಳಲ್ಲಿ ಸರಕಾರಿ ಸಸ್ಯೋದ್ಯಾನ ಮತ್ತು ದೋಣಿ ವಿಹಾರಕ್ಕೆ ಸೂಕ್ತವಾದ ಊಟಿ ಸರೋವರ ಸೇರಿವೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ನೀಲಗಿರಿ ಪರ್ವತ ರೈಲುಮಾರ್ಗವು ಚಹಾ ತೋಟಗಳ ಮೂಲಕ ರಮಣೀಯ ಸವಾರಿ ಹಾಗೂ ನೆನಪನ್ನು ನೀಡುತ್ತದೆ. ಶಿಖರಗಳು ವಿಹಂಗಮ ನೋಟಗಳನ್ನು ಒದಗಿಸುತ್ತದೆ, ಆದರೆ ಮುದುಮಲೈ ರಾಷ್ಟ್ರೀಯ ಉದ್ಯಾನವನವು ಹುಲಿಗಳು ಮತ್ತು ಆನೆಗಳ ವನ್ಯಜೀವಿ ಸಫಾರಿಗಳೊಂದಿಗೆ ರೋಮಾಂಚನಗೊಳಿಸುತ್ತದೆ.
ಊಟಿ ಟೀ ಫ್ಯಾಕ್ಟರಿ ಮತ್ತು ವಸ್ತುಸಂಗ್ರಹಾಲಯವು ಚಹಾ ಉತ್ಪಾದನೆಯ ಬಗ್ಗೆ ಸಂದರ್ಶಕರಿಗೆ ಶಿಕ್ಷಣ ನೀಡುತ್ತದೆ, ಇದು ಊಟಿ ಮತ್ತು ಕೊಡೈಕೆನಾಲ್‌ನಲ್ಲಿ ಒಂದು ಪ್ರಮುಖ ಅಂಶವಾಗಿದೆ. ಹತ್ತಿರದ ಕೂನೂರಿನ ಸಿಮ್ಸ್ ಪಾರ್ಕ್ ಮತ್ತು ಪೈಕಾರ ಜಲಪಾತಗಳು ವೈವಿಧ್ಯವನ್ನು ಸೇರಿಸುತ್ತವೆ. ಊಟಿಯ ವಸಾಹತುಶಾಹಿ ವಾಸ್ತುಶಿಲ್ಪ, ಎಲ್ಕ್ ಹಿಲ್ ಮುರುಗನ್ ದೇವಸ್ಥಾನದಂತೆ, ಅದರ ಮೋಡಿಯನ್ನು ಹೆಚ್ಚಿಸುತ್ತದೆ.
ಕೊಡೈಕೆನಾಲ್‌ನಲ್ಲಿ ಪ್ರವಾಸಿ ಆಕರ್ಷಣೆಗಳು
ಕೊಡೈಕೆನಾಲ್‌ನ ಆಕರ್ಷಣೆಯಾದ ಕೊಡೈ ಸರೋವರವು ಹಚ್ಚ ಹಸಿರಿನ ನಡುವೆ ಪ್ರಶಾಂತ ದೋಣಿ ವಿಹಾರವನ್ನು ನೀಡುತ್ತದೆ. ಕೋಕರ್ಸ್ ವಾಕ್ ಬೆರಗುಗೊಳಿಸುವ ಕಣಿವೆಯ ನೋಟಗಳನ್ನು ಒದಗಿಸುತ್ತದೆ, ಆದರೆ ಪಿಲ್ಲರ್ ರಾಕ್ಸ್‌ನ ಎತ್ತರದ ರಚನೆಗಳು ಆಕರ್ಷಕವಾಗಿವೆ. ಬ್ರ್ಯಾಂಟ್ ಪಾರ್ಕ್‌ನ ವರ್ಣರಂಜಿತ ಹೂವುಗಳು ಮತ್ತು ಕೊಡೈಕೆನಾಲ್ ಸೌರ ವೀಕ್ಷಣಾಲಯವು ಸಸ್ಯಶಾಸ್ತ್ರ ಮತ್ತು ವಿಜ್ಞಾನ ಉತ್ಸಾಹಿಗಳನ್ನು ಆಕರ್ಷಿಸುತ್ತದೆ.
ಅಲ್ಲಿಯೂ ಇದೆ ಮಯೂರ
ʼನಾನಿರುವುದೇ ನಿಮಗಾಗಿʼ ಎಂಬ ರಾಜಕುಮಾರ್ ಅವರ ಮಯೂರ ಸಿನಿಮಾದ ಹಾಡಿನ ರೀತಿ, ಕೆಎಸ್‌ಟಿಡಿಸಿಯ ಎಲ್ಲ ಪ್ರವಾಸದಲ್ಲಿ ಆಶ್ರಯ ನೀಡುವುದು ಮಯೂರ ಹೊಟೇಲ್ಸ್. ಹಾಗೆ ಮಯೂರ ಹೊಟೇಲ್ ಊಟಿಯಲ್ಲಿಯೂ ಇದೆ. ಹೊಟೇಲ್ ಮಯೂರ ರಾಯಲ್, ಹೆರಿಟೇಜ್, ಹೊಟೇಲ್ ಮಯೂರ ಸುದರ್ಶನ್ ಎಂಬ ಹೊಟೇಲ್‌ಗಳು ಊಟಿಯಲ್ಲಿ ಪ್ರವಾಸಿಗಳಿಗೆ ಮನಮೆಚ್ಚುವ ಪ್ರವಾಸಿತಾಣವೂ ಹೌದು. ನಗರ ಜೀವನದಿಂದ ತ್ವರಿತ ವಿರಾಮ ಬಯಸುವ ತಾಣಗಳಿಗೆ ಜನಪ್ರಿಯವಾಗಿದೆ. ನೀಲಗಿರಿ ಬೆಟ್ಟಗಳಲ್ಲಿ ನೆಲೆಗೊಂಡಿರುವ ಊಟಿಯು ಸುಂದರವಾದ ಸರೋವರಗಳು, ಜಲಪಾತಗಳು, ವಿಶಾಲವಾದ ಸಸ್ಯೋದ್ಯಾನ, ನಿತ್ಯಹರಿದ್ವರ್ಣ ಕಾಡು ಮತ್ತು ಕಣಿವೆಗಳಿಗೆ ಹೆಸರುವಾಸಿಯಾಗಿದೆ.
ಕುಟುಂಬ ಮತ್ತು ಸ್ನೇಹಿತರೊಂದಿಗೆ ಮೋಜಿನ ರಜಾದಿನವನ್ನು ಕಳೆಯಲು ಸೂಕ್ತವಾದ ಸ್ಥಳವಾದ ಹೊಟೇಲ್ ಮಯೂರ ರಾಯಲ್ ಹೆರಿಟೇಜ್, ಊಟಿಯು ಫರ್ನ್ ಬೆಟ್ಟದ ಹಸಿರು ಪರಿಸರದಲ್ಲಿದೆ, ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣದಿಂದ ಪ್ರವೇಶವನ್ನು ಹೊಂದಿದೆ. ಈ ಹೊಟೇಲ್‌ನಲ್ಲಿ ಮಲ್ಟಿ ಕಿಸಿನ್ ಕಿಚನ್, ಕರ್ನಾಟಕ ತೋಟಗಾರಿಕಾ ಉದ್ಯಾನಕ್ಕೆ ಉಚಿತ ಪ್ರವೇಶ, ಸ್ಥಳೀಯ ದೃಶ್ಯವೀಕ್ಷಣೆ ಮತ್ತು ಪ್ರವಾಸಕ್ಕೆ ವ್ಯವಸ್ಥೆಗಳನ್ನೂ ಮಾಡುತ್ತಾರೆ. ಹಾಗೇ ಈ ಹೊಟೇಲ್‌ನಲ್ಲಿ 2600 ರು.ಗಳಿಗೆ ಕೊಠಡಿಗಳು ಶುರುವಾಗುತ್ತದೆ.

ಪ್ಯಾಕೇಜ್‌ಗಳು
ಐದು ದಿನದ ಊಟಿ ಪ್ಯಾಕೇಜ್
ಬೆಂಗಳೂರು-ಮೈಸೂರು-ಊಟಿ-ಕೊಡೈಕೆನಲ್-ಬೆಂಗಳೂರು.
ಎರಡು ದಿನದ ಪ್ಯಾಕೇಜ್
ಮೈಸೂರು ಊಟಿ ಮೈಸೂರು
ಟ್ರಿಪ್ ಹೀಗಿರಲಿದೆ
6.30 am: ಬೆಂಗಳೂರಿನ ಯಶವಂತಪುರ ಬಸ್ ನಿಲ್ದಾಣದಲ್ಲಿರುವ ಕೆಎಸ್‌ಟಿಡಿಸಿಯ ಬುಕಿಂಗ್ ಕೌಂಟರ್‌ನಿಂದ ಪ್ರವಾಸ ಶುರುವಾಗುತ್ತದೆ.
8.30am-9.00am: ದಾರಿಯಲ್ಲಿ ಬ್ರೇಕ್‌ಫಾಸ್ಟ್
10am-11.30: ಶ್ರೀರಂಗಪಟ್ಟಣದ ದರಿಯಾ ಔಲತ್, ಕೋಟೆ, ಶ್ರೀರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ.
12om-12.20pm: ಸೇಂಟ್ ಫಿಲೋಮಿನಾ ಚರ್ಚ್‌ಗೆ ಭೇಟಿ
01.0 pm-2.00 pm: ಚಾಮುಂಡಿ ಬೆಟ್ಟ ಹಾಗೂ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ
2.15 pm- 3.00 pm: ಮೈಸೂರಿನ ಹೊಟೇಲ್ ಮಯೂರ ಹೊಯ್ಸಳದಲ್ಲಿ ಊಟ
ದಿನ 2
5.30am: ಮೈಸೂರಿನಿಂದ ಹೊರಡಲು ಸಿದ್ಧರಾಗುವುದು
6.00am-6.45am: ನಂಜನಗೂಡಿನ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ, ದೇವರ ದರ್ಶನ.
8.00am: ಗುಂಡ್ಲುಪೇಟೆಯಲ್ಲಿ ತಿಂಡಿ
12.00pm: ಮದುಮಲೈ ಕಾಡುಗಳು ಹಾಗೂ ಬಂಡಿಪುರ ದಾರಿಯಿಂದ ಊಟಿಗೆ ಭೇಟಿ
01.30pm: ಊಟಿ ಸರೋವರ ಭೇಟಿ
1.50pm-2.30pm: ಊಟಿಯ ಹೊಟೇಲ್‌ನಲ್ಲಿ ಊಟ
3.15 pm-4.00pm: ದೊಡ್ಡಬೆಟ್ಟ ಪೀಕ್‌ಗೆ ಭೇಟಿ
4.30 pm-06.30 pm: ಬೊಟಾನಿಕಲ್ ಗಾರ್ಡನ್ ಭೇಟಿ
07.00pm : ಹೊಟೇಲ್‌ನಲ್ಲಿ ರಾತ್ರಿ ವಾಸ್ತವ್ಯ
ದಿನ 3
8.00am: ತಿಂಡಿಯ ನಂತರ ಹೊಟೇಲ್ ಪ್ರೀತಿ ಪ್ಯಾಲೇಸ್‌ನಿಂದ ಹೊರಡುವುದು
9.00am-10.00am: ಕೂನೂರ್‌ನಲ್ಲಿ ಸಿಮ್ಸ್ ಪಾರ್ಕ್ ಭೇಟಿ
2.00opm: ದಾರಿಮಧ್ಯದಲ್ಲಿ ಊಟ
5.30pm : ಸಿಲ್ವರ್ ಕ್ಯಾಸ್ಕೇಡ್ ಜಲಪಾತಕ್ಕೆ ಭೇಟಿ
6.30pm: ಕೊಡೈಕೆನಾಲ್‌ನಲ್ಲಿ ರಾತ್ರಿ ವಾಸ್ತವ್ಯ
ದಿನ 4
8.30-5.00 pm: ಪಿಲ್ಲರ್ ರಾಕ್ಸ್, ಗೀನ್ ವ್ಯಾಲಿ, ಕೋಕರ್ಸ್ ವಾಕ್, ಊಟ, ಕೊಡೈ ಸರೋವರದಲ್ಲಿ ಬೋಟಿಂಗ್, ಕುದುರೆ ಸವಾರಿ, ಬ್ರಯಾಂಟ್ ಪಾರ್ಕ್‌ನಲ್ಲಿ ಸೈಕ್ಲಿಂಗ್.
8.30 pm: ದಿಂಡಿಗಲ್‌ನಲ್ಲಿ ಊಟ ಬೆಂಗಳೂರು ಕಡೆಗೆ ಪ್ರಯಾಣ
ದಿನ 5
6.00pm: ಯಶವಂತಪುರದ ಕೆಎಸ್‌ಟಿಡಿಸಿ ಹೆಡ್ ಆಫೀಸ್‌ನಲ್ಲಿ ಪ್ರವಾಸ ಮುಗಿಯುತ್ತದೆ.
ಎರಡು ದಿನದ ಪ್ರವಾಸ
ದಿನ 1
06.45am: ಮೈಸೂರಿನ ಕೆಎಸ್‌ಟಿಡಿಸಿ ಕಚೇರಿಯ ಹೊಟೇಲ್ ಮಯುರ ಯಾತ್ರಿನಿವಾಸ್ ಕಟ್ಟಡದ ಹತ್ತಿರ
7.30am-8.00am: ನಂಜನಗೂಡಿನ ಶ್ರೀ ನಂಜುಂಡೇಶ್ವರ ದೇವಸ್ಥಾನಕ್ಕೆ ಭೇಟಿ
8.45am: ಹೊಟೇಲ್ ಗುಂಡಲಪೆಟ್‌ನಲ್ಲಿ ಉಪಾಹಾರ
09.15am-11.15am- ಬಂಡಿಪುರ ಕಾಡು ಮತ್ತು ಮದುಮಲೈ ಕಾಡಿನ ಮಧ್ಯದಲ್ಲಿ ಪ್ರಯಾಣ
11.15am-11.45am: ನಡುವಟ್ಟಂನಲ್ಲಿ ಟೀ ಬ್ರೇಕ್
1.30pm-2.30pm: ಹೊಟೇಲ್ ಊಟಿನಲ್ಲಿ ಮಧ್ಯಾಹ್ನದ ಊಟ
03pm-4.30pm: ಊಟಿ ಸರೋವರದಲ್ಲಿ ಬೋಟಿಂಗ್
05pm-06.30pm: ಬಟಾನಿಕಲ್ ಗಾರ್ಡನ್ ಭೇಟಿ
7.00pm: ಹೊಟೇಲ್ ಊಟಿನಲ್ಲಿ ರಾತ್ರಿ ವಸತಿ
ದಿನ 2
ಉಪಾಹಾರದ ನಂತರ ಹೋಟೆಲ್‌ನಿಂದ ನಿರ್ಗಮನ
08.40am – 09.45am: ಊಟಿಯ ದೊಡ್ಡಬೆಟ್ಟ ಶಿಖರಕ್ಕೆ ಭೇಟಿ
10.45am – 11.30am: ಕರ್ನಾಟಕ ತೋಟಗಾರಿಕಾ ಉದ್ಯಾನಕ್ಕೆ ಭೇಟಿ
12.30pm – 01.30pm: ಊಟಿ ಹೊಟೇಲ್‌ನಲ್ಲಿ ಊಟ
02.00pm – 03.00pm: 9ನೇ ಮೈಲಿ ಫಿಲ್ಮ್ ಶೂಟಿಂಗ್ ಪಾಯಿಂಟ್
03:30pm – 03:45pm: ಟೀ ಗಾರ್ಡನ್
05.30 pm– 06.30 pm: ಗುಂಡ್ಲುಪೇಟೆಯಲ್ಲಿ ಟೀ ವಿರಾಮ
08.00pm: ಮೈಸೂರಿನಲ್ಲಿ ಪ್ರವಾಸ ಕೊನೆಗೊಳ್ಳುತ್ತದೆ