ಪಿಲಿಕುಳದಲ್ಲಿ ಮಯೂರದ ಮೊದಲ ರೆಸಾರ್ಟ್
ಈ ರೆಸಾರ್ಟ್ ನೋಡುವುದೇ ಒಂದು ವಿಹಾರವಾಗಬಹುದು, ಇದರ ವಾಸ್ತುಶೈಲಿ ನೋಡಲು ಅತ್ಯಾಕರ್ಷಕವಾಗಿದೆ. ಸುತ್ತಲಿನ ವಾತಾವರಣ ನೋಡಿದರೂ ಜಂಗಲ್ ರೆಸಾರ್ಟ್ ಅನುಭವ ಆಗುತ್ತದೆ. ಇಲ್ಲಿಂದಲೇ ಫಲ್ಗುಣಿ ನದಿಯ ಸುಂದರ ನೋಟ, ರುಚಿಕರ ಅಡುಗೆ ಎಲ್ಲಕ್ಕಿಂತ ಹೆಚ್ಚಾಗಿ ನೀವು ಒಂದೇ ಪ್ಯಾಕೇಜ್‌ನಲ್ಲಿ ಪಣಂಬೂರು, ತಣ್ಣೀರುಬಾವಿ, ಸುರತ್ಕಲ್, ಸೋಮೇಶ್ವರ, ಸುಲ್ತಾನ್ ಬತ್ತೇರಿ, ಸಸಿಹಿತ್ಲು ಕಡಲ ತೀರಗಳು. ಶಿವರಾಮ ಕಾರಂತ ಪಿಲಿಕುಳ ಜೈವಿಕ ಉದ್ಯಾನವನ, ಮಾನಸ ವಾಟರ್ ಮತ್ತು ಅಮ್ಯೂಸ್‌ಮೆಂಟ್ ಪಾರ್ಕ್, ಗುತ್ತು ಮನೆ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಮಹತೋಭಾರ ಮಂಗಳಾದೇವಿ…ಎಲ್ಲವನ್ನೂ ನೋಡಿಕೊಂಡು ಬರಬಹುದು.
ಹೊಸದೊಂದು ಪ್ರಯತ್ನಕ್ಕೆ ಮಯೂರ ತಯಾರಿ ಎಂದಾಗಲೇ ಹಲವರು ಕುತೂಹಲದಿಂದ ನೋಡುತ್ತಾರೆ. ಅಂಥವರಿಗೆ ಮಯೂರ ಈಗ ಸರ್ಪ್ರೈಸ್ ನೀಡಿದೆ ಎನ್ನಬಹುದು. ಹೌದು ಮಯೂರ ಈಗ ತನ್ನ ಮೊಟ್ಟ ಮೊದಲ ಕರಾವಳಿ ಭಾಗದ ರೆಸಾರ್ಟ್ ಅನ್ನು ಪರಿಚಯಸಿದೆ. ಪಿಲಿಕುಳದ ಸಸ್ಯೋದ್ಯಾನದ ಹತ್ತಿರದಲ್ಲೇ ಈ ರೆಸಾರ್ಟ್ ರೂಪುಗೊಂಡಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಮಯೂರ ಎಂದಾಗ ಅದರ ಅತ್ಯುತ್ತಮ ವಾಸ್ತವ್ಯದ ನೆನಪುಗಳು ಅಲ್ಲಿಗೆ ಹೋಗಿ ಉಳಿದವರಿಗೆ ಬಂದೇ ಬರುತ್ತವೆ. ಆದರೆ, ಈ ಕೊರತೆ ಇದ್ದದ್ದು ಕರಾವಳಿಯ ರೆಸಾರ್ಟ್ ಅನುಭವದಲ್ಲಿ ಮಾತ್ರ. ಈವರೆಗೆ ಕರಾವಳಿ ಭಾಗದಲ್ಲಿ ಕೆಎಸ್‌ಟಿಡಿಸಿಯ ಆಸ್ತಿಯಾಗಿ ಮಯೂರದ ಒಂದೂ ರೆಸಾರ್ಟ್ ಇರಲಿಲ್ಲ. ಕರಾವಳಿ ಕಡೆಗೆ ಪ್ರವಾಸ ಬಂದವರು ಕೇರಳ ಭಾಗದ ಐಷಾರಾಮಿ ಹೊಟೇಲ್‌ಗಳಲ್ಲಿ ಉಳಿಯಲು ಇಷ್ಟ ಪಡುತ್ತಿದ್ದರು. ಇದೆಲ್ಲವನ್ನು ಗಮನಿಸಿದ ಮಯೂರ ಈ ಕೊರಗು ನೀಗಿಸಲು ಪಿಲಿಕುಳದಂಥ ಅದ್ಭುತ ಪ್ರವಾಸಿ ತಾಣದಲ್ಲಿ ಸುಂದರ ರೆಸಾರ್ಟ್ ನಿರ್ಮಿಸಿದೆ.
ಇದನ್ನೂ ಓದಿ: ಸದಾಶಿವಗಡ ಸೀ ವ್ಯೂ ರೆಸಾರ್ಟ್
ಮಯೂರ ನೆಲೆಯಾಗಿರುವ ತಾಣಗಳ ಕುರಿತು ನೋಡೋದಾದರೆ, ಯುನೆಸ್ಕೋ ಪಾರಂಪರಿಕ ತಾಣ, ದುರ್ಗದ ಕೋಟೆ ಪ್ರದೇಶ, ಮಲೆಮಹದೇಶ್ವರನ ಸನ್ನಿಧಿ, ತುಂಗಭದ್ರಾ ತೀರದಲ್ಲಿ ಹೀಗೆ ಹೇಳುತ್ತಾ ಹೋದರೆ, ಅಲ್ಲಿಯೂ ಇದ್ದಾನೆ ಇಲ್ಲಿಯೂ ಇದ್ದಾನೆ ಎಲ್ಲೆಲ್ಲಿಯೂ ಇದ್ದಾನೆ ಅನ್ನೋ ಭಕ್ತ ಪ್ರಹ್ಲಾದದ ಡೈಲಾಗ್ ನೆನಪಿಗೆ ಬರುತ್ತದೆ. ಅಷ್ಟು ವೈವಿಧ್ಯಮಯ ಭೌಗೋಳಿಕ ಪ್ರದೇಶಗಳಲ್ಲಿ ಮಯೂರ ನೆಲೆ ನಿಂತಿದೆ.

ಪ್ರವಾಸಿಗರನ್ನು ನೋಡಿಕೊಳ್ಳುವ ಬಗೆಯಲ್ಲಂತೂ ಹೇಳುವ ಅಗತ್ಯವಿಲ್ಲ ಮಯೂರ ಸೇವಾ ಮನೋಭಾವ ಎಂದರೆ ಪ್ರವಾಸಿಗರಿಗೆ ಅಷ್ಟು ಅಚ್ಚುಮೆಚ್ಚಾಗಿದೆ. ಊಟ, ವಾಸ್ತವ್ಯ ಎಲ್ಲ ಹೊಟೇಲ್‌ಗಳಲ್ಲೂ ದೊರೆಯುತ್ತದೆ. ಆದರೆ, ಅಚ್ಚುಮೆಚ್ಚಿನ ಆತಿಥ್ಯ? ಅದು ಸಿಗುವುದು ಬೆರಳೆಣಿಕೆ ಹೊಟೇಲ್‌ಗಳಲ್ಲಿ ಮಾತ್ರ. ಅವುಗಳಲ್ಲಿ ಮಯೂರಕ್ಕೆ ಅಗ್ರಸ್ಥಾನವಿದೆ. ಸುಂದರ ಅನುಭವ, ಅಚ್ಚಳಿಯದ ನೆನಪುಗಳ ಗಂಟನ್ನು ಉಡುಗೊರೆಯಾಗಿ ನೀಡಿ ಪ್ರವಾಸಿಗನನ್ನು ತೃಪ್ತರನ್ನಾಗಿಸಲು, ಹೊಟೇಲ್ ಮಯೂರಕ್ಕಿರುವ ಅನುಭವವೇ ಕಾರಣ. ವೈವಿಧ್ಯಮಯ ಪ್ರವಾಸಿ ತಾಣ, ಪರಿಸರದಲ್ಲೂ ಮಯೂರ ಮನೆಮಾಡಿದ್ದು, ಅಸಂಖ್ಯ ಪ್ರವಾಸಿಗರನ್ನು ಉಪರಿಸಿದೆ. ಹಾಗಾಗಿ ಪಿಲಿಕುಳದಲ್ಲಿ ಹೊಸತಾಗಿ ನೆಲೆ ನಿಂತಿರುವ ಮಯೂರ ಫಲ್ಗುಣಿ ರಿವರ್ ರೆಸಾರ್ಟ್ ಕಟ್ಟಡ ಹೊಸತು ಬಾಕಿ ಅನುಭವಗಳು ಮಾತ್ರ ತಲತಲಾಂತರದ್ದು ಎನ್ನುವಷ್ಟು ಹಳತು.
ಸಿಎಂ ಸಿದ್ದರಾಮಯ್ಯರಿಂದ ಉದ್ಘಾಟನೆ
ಜನವರಿ 10ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶ-2026 ನಂತರ ಪಿಲಿಕುಳದ ಮಯೂರ ಫಲ್ಗುಣಿ ರಿವರ್ ರೆಸಾರ್ಟ್ ಅನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿಧಾನ ಸಭೆ ಸಭಾಪತಿ ಯು.ಟಿ.ಖಾದರ್, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪ್ರವಾಸೋದ್ಯಮ ಸಚಿವರಾದ ಎಚ್.ಕೆ.ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಸೇರಿ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಸಸಿ ನೆಡುವುದರೊಂದಿಗೆ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ನಂತರ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಇದ್ದವು. ಕೆಎಸ್‌ಟಿಡಿಸಿ ಅಪ್ಲಿಕೇಶನ್, ಕ್ಯಾಲೆಂಡರ್ ಮತ್ತು ಡೈರಿಯನ್ನು ಈ ವೇಳೆ ಬಿಡುಗಡೆ ಮಾಡಲಾಯಿತು.

ಅವಕಾಶಗಳು ಏನೇನಿವೆ?
ಅಡುಗೆ ರುಚಿ, ಸೇವಾ ಮನೋಭಾವ ಎಲ್ಲದರೊಟ್ಟಿಗೆ ನೀವು ಒಂದೇ ಪ್ಯಾಕೇಜ್‌ನಲ್ಲಿ ಪಣಂಬೂರು, ತಣ್ಣೀರುಬಾವಿ, ಸುರತ್ಕಲ್, ಸೋಮೇಶ್ವರ, ಸುಲ್ತಾನ್ ಬತ್ತೇರಿ, ಸಸಿಹಿತ್ಲು ಕಡಲ ತೀರಗಳು. ಶಿವರಾಮ ಕಾರಂತ ಪಿಲಿಕುಳ ಜೈವಿಕ ಉದ್ಯಾನವನ, ಮಾನಸ ವಾಟರ್ ಮತ್ತು ಅಮ್ಯೂಸ್‌ಮೆಂಟ್ ಪಾರ್ಕ್, ಗುತ್ತು ಮನೆ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಮಹತೋಭಾರ ಮಂಗಳಾದೇವಿ, ಸೂರ್ಯನಾರಾಯಣ, ಮರೋಳಿ, ಕಟೀಲು ದುರ್ಗಾಪಾಮೇಶ್ವರಿ, ಕುಡುಪ ಅನಂತಪದ್ಮನಾಭ ದೇವಸ್ಥಾನ, ಕಾರಿಂಜೇಶ್ವರ, ಕದ್ರಿ ಮಂಜುನಾಥ, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಗಳು. ಅಲೋಶಿಯಸ್, ಮಿಲಾಗ್ರಿಸ್, ಶಿಶು ಯೇಸು ದೇಗುಲ ಕಾರ್ಮೆಲ್ ಬೆಟ್ಟ, ರೊಸಾರಿಯೋ ಕ್ಯಾಥೆಡ್ರಲ್ ಚರ್ಚ್‌ಗಳು. ಉಳ್ಳಾಲದ ಸಯ್ಯದ್ ಮುಹಮ್ಮದ್ ಶರೀಫುಲ್ ಮದನಿ ದರ್ಗಾ ನೋಡಲೂ ಅವಕಾಶ ಸಿಗುತ್ತದೆ. ಪಿಲಿಕುಳದ ಮಯೂರ ಫಲ್ಗುಣಿ ರಿವರ್ ರೆಸಾರ್ಟ್‌ನಲ್ಲಿ ಈ ಅವಕಾಶವಿದೆ.
ಆಯ್ಕೆಗಳು ಏನೇನಿವೆ?
ಈ ರೆಸಾರ್ಟ್ ನೋಡುವುದೇ ಒಂದು ವಿಹಾರವಾಗಬಹುದು, ಇದರ ವಾಸ್ತುಶೈಲಿ ನೋಡಲು ಅತ್ಯಾಕರ್ಷಕವಾಗಿದೆ. ಸುತ್ತಲಿನ ವಾತಾವರಣ ನೋಡಿದರೂ ಜಂಗಲ್ ರೆಸಾರ್ಟ್ ಅನುಭವ ಆಗುತ್ತದೆ. ಇಲ್ಲಿಂದಲೇ ಫಲ್ಗುಣಿ ನದಿಯ ಸುಂದರ ನೋಟ ನಿಮಗೆ ಅಹ್ಲಾದಕರ ಅನುಭವ ನೀಡುತ್ತದೆ. ಅದರ ಜತೆಗೆ ಉಳಿದುಕೊಳ್ಳಲು ಆಯ್ಕೆಗಳಾಗಿ ಸೂಟ್ ರೂಮ್, ಡಿಲಕ್ಸ್ ಎಸಿ, ಅಂಕಣ ಮನೆಯ ಸೌಲಭ್ಯಗಳಿದ್ದು, ಆಯುರ್ವೇದ ಸ್ಪಾ ಸೌಲಭ್ಯವನ್ನೂ ಪಡೆದುಕೊಳ್ಳಬಹುದು ಈ ಅವಕಾಶ ಹೊಂದಿರುವ ಮೊದಲ ಕೆಎಸ್‌ಟಿಡಿಸಿ ಪ್ರಾಪರ್ಟಿ ಇದಾಗಿದೆ. ಅಂದಮೇಲೆ ಈ ರೆಸಾರ್ಟ್ ಮೇಲೆ ಕೆಎಸ್‌ಟಿಡಿಸಿ ಎಷ್ಟು ಗಮನ ನೀಡುತ್ತಿದೆ ಎಂದು ನೀವೇ ಯೋಚಿಸಿ.
ಬೀಡೂಟ ಬಾಡೂಟ ಎರಡಕ್ಕೂ ಇಲ್ಲಿದೆ ರೆಸ್ಟೋರೆಂಟ್
ದಕ್ಷಿಣ ಕನ್ನಡ ಅಂದಾಗ ಮೀನೂಟ, ಗಂಜಿ ಊಟ ಎಂದೇ ನಮ್ಮ ತಲೆಗೆ ಹೊಳೆಯುತ್ತದೆ. ಆದರೆ ಈ ರೆಸಾರ್ಟ್‌ನಲ್ಲಿ ವೆಜ್, ನಾನ್ ವೆಜ್‌ನ ವೇವಿಧ್ಯಮಯ ಭಕ್ಷ್ಯಗಳನ್ನು ತಯಾರಿಸಿ ಬಡಿಸಲು ಒಂದು ರೆಸ್ಟೋರೆಂಟ್ ಇದೆ. ನೀವಿ ಜಸ್ಟ್ ನಿಮ್ಮ ಆಯ್ಕೆಯನ್ನು ಮೆನುನಲ್ಲಿ ತೋರಿಸಿದರೆ ಆಯ್ತು. ಆಗಿಂದಾಗಲೇ ತಯಾರಿಸಿ ಸವಿಯಲು ನಿಮಗೆ ನೀಡುತ್ತಾರೆ. ಇಲ್ಲಿ ಶುಚಿ-ರುಚಿ ಎರಡಕ್ಕೂ ಕಾಂಪ್ರಮೈಸ್ ಇಲ್ಲ.
ಕಾರ್ ಪಾರ್ಕಿಂಗ್‌ಗೂ ಸ್ಥಳವಿದೆ
ಸ್ವಂತ ವಾಹನದ ಮೇಲೆ ಎಲ್ಲರಿಗೂ ಕಾಳಜಿ ಇರುತ್ತದೆ. ದೂರದ ಊರುಗಳಲ್ಲಿ ಉಳಿಯುವಾಗ ಅದನ್ನು ಕಾಯುವುದೇ ಒಂದು ಕೆಲಸವಾಗಿಬಿಡುತ್ತದೆ. ಆದರೆ ಈ ರೆಸಾರ್ಟ್‌ನಲ್ಲಿ ಮಾಲೀಕರಂತೆಯೇ ಅದನ್ನು ಕಾಳಜಿ ಮಾಡಬಲ್ಲ ಸಿಬ್ಬಂದಿ ಇದ್ದಾರೆ. ಕಾರ್ ಪಾರ್ಕಿಂಗ್‌ಗೆ ಉತ್ತಮ ಸ್ಥಳಾವಕಾಶವಿದೆ. ನೀವಲ್ಲಿ ಕಾರ್ ಆದರೂ ಪಾರ್ಕ್ ಮಾಡಿ ಅಥವಾ ಯಾವುದೇ ಸ್ವಂತ ಸವಾರಿ ವಾಹನಗಳನ್ನು ಪಾರ್ಕ್ ಮಾಡಿ ಚಿಂತೆ ಇಲ್ಲದೆ ರೆಸಾರ್ಟ್‌ನಲ್ಲಿ ಆರಾಮದಾಯಕ ವಾಸ್ತವ್ಯ ಅನುಭವಿಸಬಹುದು.

ಮದ್ಯ ಪ್ರಿಯರಿಗೆ ಬಾರ್ ಸೌಲಭ್ಯ
ಟೂರ್ ಅಥವಾ ಊರಿಂದ ದೂರ ಹೋದಾಗ ಹಲವರಿಗೆ ಆ ಸಂಚಾರದ ಮಧ್ಯೆ ಮದ್ಯ ಬೇಕೆನಿಸುವುದು ಸಹಜ. ಅವರವರ ನೆಚ್ಚಿನ ಬ್ರ್ಯಾಂಡ್ ಬೇಕೆನ್ನುವವರು ಹಲವರಿದ್ದರೆ ನಮಗೇನೋ ಹೊಸತು ಬೇಕು ಎನ್ನವವರು ಹಲವರು ಇರುತ್ತಾರೆ. ಈ ರೆಸಾರ್ಟ್ ಇವರಿಬ್ಬರಿಗೂ ಆಸೆ ಪೂರೈಸುವ ಆಯ್ಕೆ. ಇಲ್ಲಿ ಒಂದು ಪುಟ್ಟ ಬಾರ್ ಇದೆ ಹಿತ-ಮಿತವಾಗಿ ಕುಡಿಯಬಹುದು. ಸಂಜೆಯ ಹೊತ್ತಿಗಾದರೆ ಬೆಟ್ಟದ ಮೇಲಿಂದ ದೂರದೂರದಲ್ಲಿ ಬೆಳಗುತ್ತಿರುವ ದೀಪಗಳ ಬೆಳಕು, ತಿಕ್ ಫಾರೆಸ್ಟ್, ರೆಸಾರ್ಟ್ ಬೆಳಕಿನ ರಂಗಿನಲ್ಲಿ ಮದ್ಯದ ಮತ್ತೇ ಗಮ್ಮತ್ತು ಅನಿಸುತ್ತದೆ. ಇನ್ನು ಈ ರೆಸಾರ್ಟ್‌ನಲ್ಲಿ ಉಳಿಯುವವರಿಗೆ ವೈಫೈ ಸೌಲಭ್ಯ, ಟಿವಿ, ಎಸಿ, ಮೀಟಿಂಗ್ ಹಾಲ್ ಸೌಲಭ್ಯಗಳಿವೆ ಬೇಕೆನಿಸಿದರೆ ಬಳಸಿಕೊಳ್ಳಬಹುದು.
ಬೆಟ್ಟದ ಮೇಲೊಂದು ಮನೆಯ ಮಾಡಿ
ಈ ರೆಸಾರ್ಟ್ ಎತ್ತರದ ಪ್ರದೇಶದಲ್ಲಿ ನೆಲೆಯಾಗಿದ್ದು, ಸುತ್ತಲೂ ಹಸಿರು ಪರಿಸರವೇ ಕಣ್ಣಿಗೆ ತಂಪೆರೆಯುತ್ತದೆ. ಈ ರಮಣೀಯ ನೋಟದಲ್ಲಿ ತೆಂಗು-ಕಂಗು ತೋಟಗಳು ಜತೆಗೆ ಫಲ್ಗುಣಿ ನದಿಯ ಹರಿವು ಸದಾ ಇದ್ದೇ ಇರುತ್ತದೆ. ಬೆಟ್ಟದ ಮೇಲೆ ಉಳಿಯುವುದು ಅದರಲ್ಲೂ ಹಸಿರಿನ ನಾಡು ದಕ್ಷಿಣ ಕನ್ನಡದ ಬೆಟ್ಟದ ಮೇಲೆ ಉಳಿಯುವ ಅಡ್ವಾಂಟೇಜ್‌ಗಳ ಪದಗಳಲ್ಲಿ ಹೇಳುವುದು ಕಷ್ಟ, ಅದನ್ನು ಅನುಭವಿಸಿಯೇ ಅರಿತುಕೊಳ್ಳಬೇಕು.
ದಾರಿ ಹೇಗೆ?
ವಿಮಾನ ಮಾರ್ಗವಾಗಿ ಬರುವುದಾದರೆ ಮಂಗಳೂರು ವಿಮಾನ ನಿಲ್ದಾಣ ಹತ್ತಿರದಲ್ಲಿದೆ. ಬೆಂಗಳೂರಿನಿಂದ ನೇರವಾಗಿ ಮಂಗಳೂರಿಗೆ ಬಸ್ ಮತ್ತು ರೈಲು ಸಂಪರ್ಕವಿದೆ. ಮಂಗಳೂರು ವಿಮಾನ ನಿಲ್ದಾಣದಿಂದ ಕೇವಲ 8.6 ಕಿಮೀ ದೂರದಲ್ಲಿ, ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ 13 ಕಿಮೀ, ಬಸ್ ನಿಲ್ದಾಣದಿಂದ 11 ಕಿಮೀ ದೂರದಲ್ಲಿ ಈ ರೆಸಾರ್ಟ್ ಇದೆ, ಸ್ಥಳೀಯ ಮಿನಿಬಸ್‌ಗಳ ಮೂಲಕ ಅಲ್ಲಿಗೆ ತಲುಪಬಹುದು.
ಹೆಚ್ಚಿನ ಮಾಹಿತಿಗಾಗಿ
ಸಂಪರ್ಕವಾಣಿ : 8050954835, ಶ್ರೀ ಕಿರಣ್‌ಕುಮಾರ್
pilikula@karnatakaholidays.net
ಡಾ. ಶಿವರಾಮ ಕಾರಂತ ನಿಸರ್ಗಧಾಮ, ಮೂಡುಶೆಡ್ಡೆ ವಾಮಂಜೂರು, ಮಂಗಳೂರ
-575028