Friday, October 3, 2025
Friday, October 3, 2025

ಮದ್ವೆ ಮಾಡ್ಕೊಳ್ಳಿ..ಮಕ್ಳು ಮಾಡ್ಕೊಳ್ಳಿ; ಸರ್ಕಾರದಿಂದ ಸಿಗುತ್ತೆ ಸೂಪರ್ ಆಫರ್

ದಕ್ಷಿಣ ಕೊರಿಯಾದಲ್ಲಿ ಜನನ ಪ್ರಮಾಣವೂ ಕಡಿಮೆ, ಜನಸಂಖ್ಯೆಯಂತೂ ತೀರಾ ಕಡಿಮೆ. ಇದನ್ನು ಹೆಚ್ಚಿಸುವ ಸಲುವಾಗಿ ಮದುವೆಯಾದ ಜೋಡಿಗೆ ಸರ್ಕಾರ ಲಕ್ಷಾಂತರ ರೂಪಾಯಿ ನೀಡುತ್ತದೆ. ಬರೀ ಮದುವೆಗಲ್ಲ ಡೇಟಿಂಗ್‌ನಿಂದ ಹಿಡಿದು ನಿಶ್ಚಿತಾರ್ಥ ಮತ್ತು ಹನಿಮೂನ್‌ವರೆಗೆ ಎಲ್ಲ ವೆಚ್ಚಗಳನ್ನು ಸರ್ಕಾರವೇ ಭರಿಸುತ್ತಿದೆ ಎಂದರೆ ನಂಬಲೇಬೇಕು.

ದಕ್ಷಿಣ ಕೊರಿಯಾ, ವಿಶ್ವದಲ್ಲೇ ಅತ್ಯಂತ ಕಡಿಮೆ ಜನನ ಪ್ರಮಾಣವನ್ನು ಹೊಂದಿರುವ ದೇಶ. ದಕ್ಷಿಣ ಕೋರಿಯಾ ಸರ್ಕಾರಕ್ಕೆ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದು ಅನಿವಾರ್ಯವಾಗಿದ್ದು,ಇದೇ ಕಾರಣಕ್ಕೆ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ.

south korea

ದೇಶದಲ್ಲಿ ಕುಸಿಯುತ್ತಿರುವ ಜನಸಂಖ್ಯೆಯನ್ನು ಹೆಚ್ಚಿಸುವುದಷ್ಟೇ ಅಲ್ಲದೆ ಯುವಕರನ್ನು ಮದುವೆಗೆ ಪ್ರೋತ್ಸಾಹಿಸುವ ಉದ್ದೇಶದೊಂದಿಗೆ ದಕ್ಷಿಣ ಕೊರಿಯಾದ ಸರ್ಕಾರವು ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ದಕ್ಷಿಣ ಕೊರಿಯಾದ ಬುಸಾನ್ ಜಿಲ್ಲೆಯಲ್ಲಿ ವಿಶೇಷ ಮ್ಯಾಚ್‌ಕಿಂಗ್ ಕಾರ್ಯಕ್ರಮವನ್ನು ಆಯೋಜಿಸಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮದುವೆಯಾದ ಜೋಡಿಗೆ ಸರ್ಕಾರವೇ ಸುಮಾರು $14,700 ಅಂದ್ರೆ ಸುಮಾರು 12 ಲಕ್ಷ ರೂಪಾಯಿಯನ್ನು ನೀಡುತ್ತಿದೆ. ಕಳೆದ ವರ್ಷ, 31 ಲಕ್ಷ ರೂಪಾಯಿ ಅಂದರೆ 38000 ಡಾಲ‌ರ್ ನೀಡಿತ್ತು. ಇಲ್ಲಿ ಜನನ ಪ್ರಮಾಣವು 2023ರಲ್ಲಿ 0.72 ರಷ್ಟಿತ್ತು, ಇದು 2024 ರಲ್ಲಿ 0.75 ಆಗುವ ಮೂಲಕ ಸ್ವಲ್ಪ ಹೆಚ್ಚಾಗಿದೆ.

ಹಣದ ಆಮಿಷದ ಮೂಲಕವಾದರೂ ದೇಶದಲ್ಲಿ ಜನಸಂಖ್ಯೆ ಏರಿಕೆಯಾಗಬೇಕು ಎಂಬ ಉದ್ದೇಶವನ್ನು ಹೊಂದಿರುವ ಈ ಯೋಜನೆ ಜನಸಂಖ್ಯಾ ನೀತಿಯ ಭಾಗವಾಗಿದೆ. ಜನನ ಪ್ರಮಾಣ ಕುಸಿತ ಮತ್ತು ಪ್ರಾದೇಶಿಕ ಜನಸಂಖ್ಯೆ ಕುಸಿತದಂತಹ ಗಂಭೀರ ಸಮಸ್ಯೆಗಳನ್ನು ನಿಭಾಯಿಸುವುದು ಇದರ ಉದ್ದೇಶವಾಗಿದೆ ಎಂದು ದಕ್ಷಿಣ ಕೊರಿಯಾದ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

Japan

ಜಪಾನಿನಲ್ಲೂ ಇದೇ ಪರಿಸ್ಥಿತಿ

ದಕ್ಷಿಣ ಕೊರಿಯಾ ದೇಶದಲ್ಲಿ ಮಾತ್ರ ಈ ಸಮಸ್ಯೆ ಅಂದುಕೊಳ್ಳಬೇಡಿ. ಜಪಾನ್ ಕೂಡ ಜನಸಂಖ್ಯಾ ಬಿಕ್ಕಟ್ಟನ್ನು ಅನುಭವಿಸುತ್ತಿದೆ. ಜಪಾನಿನ ಜನನ ಪ್ರಮಾಣವು ವರ್ಷಕ್ಕೆ 50 ಲಕ್ಷವಿತ್ತು. ಆದರೀಗ ಅದು ಕೇವಲ 7ಲಕ್ಷ 60 ಸಾವಿರಕ್ಕೆ ದಾಖಲೆಯ ಇಳಿಕೆ ಕಂಡಿದೆ. ಇದನ್ನು ಗಮನಿಸಿರುವ ಜಪಾನ್‌ ಸರ್ಕಾರ, 2035ಕ್ಕೂ ಮೊದಲು ದೇಶದ ಜನಸಂಖ್ಯಾ ಸಮಸ್ಯೆಯನ್ನು ನಿಭಾಯಿಸುವ ನಿರ್ಧಾರವನ್ನು ಕೈಗೊಂಡಿದೆ. ಅದಕ್ಕಾಗಿಯೇ ಜಪಾನ್ ಸರ್ಕಾರ, ಮದುವೆ ಆಗುವಂತೆ, ಮಕ್ಕಳನ್ನು ಪಡೆಯುವಂತೆ ಅಲ್ಲಿನ ಯುವಕರನ್ನು ಪ್ರೋತ್ಸಾಹಿಸುತ್ತಿದೆ.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...