Friday, October 3, 2025
Friday, October 3, 2025

ಟಿಬಿಲಿಸಿಯ ಸ್ಥಾಪನೆಗೂ ಮಟ್ಕ್ವಾರಿ ನದಿಗೂ ಭಾರಿ ನಂಟು

ಟಿಬಿಲಿಸಿ ನಗರ ಮತ್ತು ಮಟ್ಕ್ವಾರಿ ನದಿಯೊಂದಿಗಿನ ಸಂಬಂಧವು ಕೇವಲ ಭೌಗೋಳಿಕ ಅಥವಾ ಆರ್ಥಿಕ ಸಂಬಂಧವಲ್ಲ. ಇದು ಒಂದು ಸಂಸ್ಕೃತಿಯ, ಇತಿಹಾಸದ, ಜೈವಿಕತೆಯ ಮತ್ತು ಭಾವನಾತ್ಮಕತೆಯ ಸಂಯೋಜನೆಯಾಗಿದೆ. ಈ ನದಿ ಇಲ್ಲದೇ ಟಿಬಿಲಿಸಿಯನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ.

ಜಾರ್ಜಿಯಾ ರಾಜಧಾನಿ ಟಿಬಿಲಿಸಿಯ ಮೂಲಕ ಹರಿಯುವ ಮಟ್ಕ್ವಾರಿ ನದಿಯು (ಸ್ಥಳೀಯವಾಗಿ ‘ಕುರಾ’ ಎಂದು ಕರೆಯುತ್ತಾರೆ) ನಗರ ಮತ್ತು ನದಿ ಸಂಬಂಧಕ್ಜೆ ಬರೆದ ಭಾಷ್ಯದಂತಿದೆ. ಈ ನದಿ ಟರ್ಕಿಯ ಪೂರ್ವ ಭಾಗದಲ್ಲಿ ಉಗಮವಾಗಿ, ಜಾರ್ಜಿಯಾದ ಟಿಬಿಲಿಸಿಯ ಮೂಲಕ ಹರಿದು, ಅಜರ್ಬೈಜಾನ್ ಮೂಲಕ ಕ್ಯಾಸ್ಪಿಯನ್ ಸಮುದ್ರದಲ್ಲಿ ಸೇರುತ್ತದೆ.

tibilis

ಟಿಬಿಲಿಸಿಯ ಸ್ಥಾಪನೆಯ ಹಿಂದಿನ ಕಥೆ ಮಟ್ಕ್ವಾರಿ ನದಿಯೊಂದಿಗೆ ನೇರವಾಗಿ ಸಂಬಂಧಿಸಿದೆ. 5ನೇ ಶತಮಾನದಲ್ಲಿ ಇಬೇರಿಯಾದ ರಾಜ ವಾಖ್ತಾಂಗ್ ಗರ್ಗಸಾಲಿ ಬೇಟೆಗೆ ಹೋಗಿದ್ದಾಗ, ಅವನ ಬೇಟೆ ಹದ್ದು ಈ ಪ್ರದೇಶದಲ್ಲಿ ಬಿಸಿನೀರಿಗೆ ಬಿದ್ದು ಸಾಯುತ್ತದೆ. ಈ ಬಿಸಿನೀರುಗಳ ಆವಿಷ್ಕಾರದಿಂದ ಪ್ರಭಾವಿತನಾದ ರಾಜನು, ಈ ಸ್ಥಳದಲ್ಲಿ ಹೊಸ ರಾಜಧಾನಿಯನ್ನು ಸ್ಥಾಪಿಸಲು ನಿರ್ಧರಿಸುತ್ತಾನೆ, ಇದು ಟಿಬಿಲಿಸಿಯ ಸ್ಥಾಪನೆಯ ಕಥೆ.

ಮಟ್ಕ್ವಾರಿ ನದಿ ಟಿಬಿಲಿಸಿಯ ಭೌಗೋಳಿಕ ವಿನ್ಯಾಸವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಈ ನದಿ ನಗರವನ್ನು ವಿಭಜಿಸುವಂತೆ ಹರಿದು, ಅದರ ದಡಗಳಲ್ಲಿ ಹಲವಾರು ಪ್ರಮುಖ ಸ್ಮಾರಕಗಳು ಮತ್ತು ಸ್ಥಳಗಳನ್ನು ಹೊಂದಿದೆ. ಉದಾಹರಣೆಗೆ, ಮೆಟೆಖಿ ಚರ್ಚ್ ನದಿಯ ಎಡ ದಡದಲ್ಲಿ, ಮೆಟೆಖಿ ಬೆಟ್ಟದ ಮೇಲೆ ಸ್ಥಿತವಾಗಿದೆ. ಇದು 13ನೇ ಶತಮಾನದಲ್ಲಿ ನಿರ್ಮಿತವಾದ ಜಾರ್ಜಿಯನ್ ಆರ್ಥೋಡಾಕ್ಸ್ ಚರ್ಚ್ ಆಗಿದ್ದು, ನಗರದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. ಮಟ್ಕ್ವಾರಿ ನದಿಯ ಜಲವೈವಿಧ್ಯವು ಟಿಬಿಲಿಸಿಯ ಪರಿಸರ ವ್ಯವಸ್ಥೆಗೆ ಬಹುಮುಖ್ಯವಾಗಿದೆ. ನದಿಯ ದಡಗಳಲ್ಲಿ ಹಲವಾರು ಪಕ್ಷಿಗಳು, ಸಸ್ಯಗಳು ಹಾಗೂ ಜಲಚರ ಜೀವರುಗಳ ವಾಸಸ್ಥಾನವಿದೆ. ಇದರೊಂದಿಗೆ, ನದಿಯ ತೀರಗಳಲ್ಲಿ ನಡೆಯುವ ಸಾಂಸ್ಕೃತಿಕ ಉತ್ಸವಗಳು, ನದಿಯ ಬಗ್ಗೆ ಇರುವ ಕವಿತೆಗಳು ಮತ್ತು ಜನಪದ ಕತೆಗಳು ಈ ಸ್ಥಳದ ಜೀವಂತ ಸಂಸ್ಕೃತಿಗೆ ಸಾಕ್ಷಿಯಾಗಿವೆ.

tibilis (1)

ಟಿಬಿಲಿಸಿ ನಗರ ಮತ್ತು ಮಟ್ಕ್ವಾರಿ ನದಿಯೊಂದಿಗಿನ ಸಂಬಂಧವು ಕೇವಲ ಭೌಗೋಳಿಕ ಅಥವಾ ಆರ್ಥಿಕ ಸಂಬಂಧವಲ್ಲ. ಇದು ಒಂದು ಸಂಸ್ಕೃತಿಯ, ಇತಿಹಾಸದ, ಜೈವಿಕತೆಯ ಮತ್ತು ಭಾವನಾತ್ಮಕತೆಯ ಸಂಯೋಜನೆಯಾಗಿದೆ. ಈ ನದಿ ಇಲ್ಲದೇ ಟಿಬಿಲಿಸಿಯನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...