Wednesday, December 31, 2025
Wednesday, December 31, 2025

ವಿದೇಶಗಳಲ್ಲೂ ಭಾರತೀಯ ರುಪಾಯಿ ಬಳಸಬಹುದು!

ಯಾವ ಗೊಂದಲಗಳು ಇಲ್ಲದೆ ನೇರವಾಗಿ ಭಾರತೀಯ ರುಪಾಯಿಗಳನ್ನು ಚಲಾವಣೆ ಮಾಡಲು ಅವಕಾಶ ಮಾಡಿಕೊಡುವ ದೇಶಗಳೂ ಇವೆ. ಇಲ್ಲಿ ನೀವು ಆಟೋ ಚಾರ್ಜ್‌, ಅಂಗಡಿಗಳಲ್ಲಿ ಖರೀದಿಗಳು ಇನ್ನಿತರ ಯಾವುದೇ ಕಾರ್ಯಕ್ಕೂ ಭಾರತೀಯ ರುಪಾಯಿಗಳನ್ನೇ ನೇರವಾಗಿ ಬಳಸಬಹುದು. ಆ ದೇಶಗಳು ಯಾವು ಗೊತ್ತಾ?

ಸಾಕಷ್ಟು ಜನರಿಗೆ ವಿದೇಶಗಳಲ್ಲಿ ಭಾರತದ ಕರೆನ್ಸಿ ಚಲಾವಣೆ ಆಗುವುದಿಲ್ಲ, ಅಲ್ಲಿ ನಮ್ಮ ಭಾರತೀಯ ರುಪಾಯಿಗಳನ್ನು ವಿಮಾನ ನಿಲ್ದಾಣಗಳಲ್ಲೋ ಆಥವಾ ಬ್ಯಾಂಕ್‌ಗಳಲ್ಲೋ ಇನ್ನಿತರ ಏಜೆನ್ಸಿಗಳಲ್ಲೋ ಆಯಾ ದೇಶದ ಕರೆನ್ಸಿಯ ಜತೆಗೆ ವಿನಿಮಯ ಮಾಡಿಕೊಳ್ಳಬೇಕು. ಈ ವಿನಿಮಯಕ್ಕಾಗಿಯೂ ಹೆಚ್ಚಿನ ಹಣ ತೆರಬೇಕು ಎನ್ನುವ ಆಲೋಚನೆಗಳಿರುತ್ತವೆ. ಇದು ಸತ್ಯವೂ ಹೌದು. ಆದರೆ, ಈ ಯಾವ ಗೊಂದಲಗಳು ಇಲ್ಲದೆ ನೇರವಾಗಿ ಭಾರತೀಯ ರುಪಾಯಿಗಳನ್ನು ಚಲಾವಣೆ ಮಾಡಲು ಅವಕಾಶ ಮಾಡಿಕೊಡುವ ದೇಶಗಳೂ ಇವೆ. ಇಲ್ಲಿ ನೀವು ಆಟೋ ಚಾರ್ಜ್‌, ಅಂಗಡಿಗಳಲ್ಲಿ ಖರೀದಿಗಳು ಇನ್ನಿತರ ಯಾವುದೇ ಕಾರ್ಯಕ್ಕೂ ಭಾರತೀಯ ರುಪಾಯಿಗಳನ್ನೇ ನೇರವಾಗಿ ಬಳಸಬಹುದು. ಆ ದೇಶಗಳು ಯಾವು ಗೊತ್ತಾ?

ನೇಪಾಳದಲ್ಲಿ ರುಪಾಯಿ ಚಲೇಗ

NPR

ನೇಪಾಳ ಭಾರತದ ನೆರೆಯ ರಾಷ್ಟ್ರ. ಇಲ್ಲಿನ ಪಶುಪತಿನಾಥ ದೇವಾಲಯ, ಕುಮಾರಿ ದೇವಿ, ಉಣ್ಣೆಯ ಉಡುಪುಗಳ ಮಾರುಕಟ್ಟೆ, ಬಸದಿಗಳು ಹೀಗೆ ಹಲವು ಪೇಕ್ಷಣೀಯ ಸ್ಥಳಗಳನ್ನು ಕಾಣಲು, ಸಾಕಷ್ಟು ಸಂಖ್ಯೆಯಲ್ಲಿ ಭಾರತೀಯರು ಇಲ್ಲಿಗೆ ಪ್ರತಿವರ್ಷ ಭೇಟಿ ನೀಡುತ್ತಾರೆ. ಇಲ್ಲಿಯೂ ಭಾರತೀಯ ಕರೆನ್ಸಿಯನ್ನು ನೀವು ನೇರ ವಿನಿಮಯಕ್ಕಾಗಿ ಬಳಸಿಕೊಳ್ಳಬಹುದು. ಭಾರತದ ಬದಿಯ ಗಡಿಭಾಗಗಳಲ್ಲಿ ಇದಕ್ಕೆ ಹೆಚ್ಚಿನ ಅವಕಾಶಗಳಿರುತ್ತವೆ.

ಭಾರತ - ಭೂತಾನ್ ರುಪಾಯಿ - ರುಪಾಯಿ

BHOOTAN

ಭೂತಾನ್‌ ಭಾರತದ ನೆರೆಯ ರಾಷ್ಟ್ರ. ಇಲ್ಲಿನ ಕರೆನ್ಸಿ ಭೂತಾನ್‌ ನ್ಯಾಷನಲ್‌ ರುಪಾಯಿ ಭಾರತದ INR ಮೌಲ್ಯಕ್ಕೆ ಸಮಾನವಾಗಿದೆ. ನೀವಿಲ್ಲಿನ ಸಣ್ಣ ಹಳ್ಳಿಗಳ ಅಂಗಡಿಗಳಲ್ಲೂ ಭಾರತೀಯ ರುಪಾಯಿಗಳನ್ನು ಪಾವತಿಸಿ ನಿಮಗೆ ಅಗತ್ಯವಾದ ವಸ್ತುಗಳನ್ನು ಖರೀದಿಸಬಹುದು. ಭೂತಾನ್‌ನ ಎಲ್ಲೆಡೆ ಈ ಅವಕಾಶವಿದೆ.

ಬಾಲಿಯಲ್ಲೂ ಭಾರತದ ಕರೆನ್ಸಿ ಕೆಲವೆಡೆ ಬಳಸಿ

INDONATIEA

ಸರೋವರಗಳ ನಾಡು ಎಂದಾಗ ಈ ದೇಶ ನೆನಪಾಗೋದು ಖಾಯಂ. ಆದರೆ ಇಲ್ಲಿನ ಕರೆನ್ಸಿ ಹೆಸರೂ ಕೇಳಿದ್ದೂ ಕಡಿಮೆ ಅಲ್ವಾ? ಇರಲಿ. ನಮ್ಮದು INR, ಇವರದ್ದು IDR ಅಂದರೆ ಇಂಡೋನೇಷಿಯನ್‌ ರುಪಿಯಾ. ಇಲ್ಲಿನ ಬಾಲಿಯಲ್ಲಿ ಜಾಲಿ ಮಾಡಲು ಹೋದಾಗ ನಿಮ್ಮ ರುಪಾಯಿಯೂ ನಡೆಯುತ್ತದೆ. ಕೆಲವು ಮಾರುಕಟ್ಟೆ, ಅಂಗಡಿಗಳಲ್ಲೂ ನೀವು ನೇರವಾಗಿ ಭಾರತೀಯ ರುಪಾಯಿಗಳನ್ನು ಬಳಸಬಹುದು. ಆದರೆ, ಎಲ್ಲಕಡೆಗಳಲ್ಲೂ ಈ ಅವಕಾಶ ಇಲ್ಲವಾದುದರಿಂದ INR ಅನ್ನು IDR ವಿನಿಮಯ ಮಾಡಿಟ್ಟುಕೊಂಡಿರುವುದು ಉತ್ತಮ.

ಶ್ರೀಲಂಕಾ ಸುತ್ತೋಕೆ ನಮ್‌ ರೊಕ್ಕಾನೇ ಸಾಕು

LKR

ಸಿಂಹಳೀಯರ ನಾಡು ಶ್ರೀಲಂಕಾದ ಕರೆನ್ಸಿ LKR. ಅಂದರೆ ಶ್ರೀಲಂಕನ್ ರುಪಾಯಿ. ಇಲ್ಲಿನ ಕೊಲಂಬೊ, ಗ್ಯಾಲೆ ಮತ್ತು ಕ್ಯಾಂಡಿಯಂಥ ಪ್ರವಾಸಿ ತಾಣಗಳಲ್ಲಿ ಸಂಚರಿಸುವಾಗ ಭಾರತೀಯ ಕರೆನ್ಸಿಯನ್ನು ನೀವು ನೇರವಾಗಿ ಬಳಸಬಹುದು. ಹೊಟೇಲ್‌ಗಳು, ಸಾರಿಗೆ ಖರ್ಚು, ಸಣ್ಣಪುಟ್ಟ ಖರೀದಿಗಳಿಗಾಗಿಯೂ ಭಾರತೀಯ ಕರೆನ್ಸಿ ಮಾನ್ಯವಾಗಿದೆ. ಆದರೆ, ದೊಡ್ಡ ಮೊತ್ತದ ವಹಿವಾಟಿಗಾಗಿ ಶ್ರೀಲಂಕನ್ ರುಪಾಯಿಯೇ ಆಗಬೇಕು.

ಸಿಂಗಾಪುರದಲ್ಲಿ ಭಾರತದ ರುಪಾಯಿ

SDR

ಕ್ಲೀನ್‌ ಕಂಟ್ರಿ ಸಿಂಗಾಪುರದ ಕರೆನ್ಸಿ ಹೆಸರು ಸಿಂಗಾಪುರ ಡಾಲರ್ (SGD). ಇಲ್ಲಿಯೂ ಭಾರತೀಯ ಅಂಗಡಿ, ಹೊಟೇಲ್‌ ವ್ಯಾಪಾರಿಗಳಿದ್ದು, ಭಾರತೀಯ ಕರೆನ್ಸಿಯೊಂದಿಗೆ ನೇರವಾಗಿ ವ್ಯಾಪಾರ ಮಾಡಬಹುದು. ಆದರೆ ಅಧಿಕೃತವಾಗಿ ಸಿಂಗಾಪುರ ಡಾಲರ್‌ನೊಂದಿಗೆ ದೇಶ ಸುತ್ತುವುದು ಉತ್ತಮ. ವ್ಯವಹಾರಕ್ಕೂ SGD ಬಳಸಿ.

ಇನ್ನೂ ಅನೇಕ ಕಡೆಗಳಲ್ಲಿ ಭಾರತೀಯ ರುಪಾಯಿಗಳನ್ನು ನೇರವಾಗಿ ಬಳಸಲು ಅವಕಾಶಗಳಿವೆ. ಆದರೂ ಅಧಿಕೃತ ವಹಿವಾಟಿಗಾಗಿ ಅಲ್ಲಿನ ಸ್ಥಳೀಯ ಕರೆನ್ಸಿಯನ್ನೇ ಬಳಸುವುದು ಉತ್ತಮ. ಇದರಿಂದ ಕರೆನ್ಸಿ ಬೆಲೆಯ ಏರಿಳಿತಗಳ ಗೊಂದಲಗಳು ಇರುವುದಿಲ್ಲ. ಆ ದೇಶದ ಯಾವ ತಾಣದಲ್ಲಿ ಬೇಕಾದರೂ ಬಳಸಬಹುದು. ಇದು ಕಾನೂನು ಬದ್ಧ ಕರೆನ್ಸಿಯೂ ಆಗಿರುತ್ತದೆ.

Jadesha Emmiganur

Jadesha Emmiganur

Jadesha Emmiganur Is a Passionate Journalist from Ballari

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...