Tuesday, September 30, 2025
Tuesday, September 30, 2025

ನಾನೇಘಾಟ್‌…ಇಲ್ಲಿ ಜಲಪಾತವೂ ರಿವರ್ಸ್‌ ಹೊಡೆಯುತ್ತೆ …

ಸಾಮಾನ್ಯವಾಗಿ ಜಲಪಾತಗಳನ್ನು ಎತ್ತರದ ಪ್ರದೇಶಗಳಿಂದ ಕೆಳಭಾಗಕ್ಕೆ ಅಂದರೆ ತಗ್ಗು ಪ್ರದೇಶಗಳಿಗೆ ಅತಿ ವೇಗದಲ್ಲಿ, ಭರದಿಂದ ಧುಮ್ಮಿಕ್ಕಿ ಹರಿಯುವುದನ್ನು ಎಲ್ಲರೂ ನೋಡಿಯೇ ಇರುತ್ತೇವೆ. ಆದರೆ ಈ ರಿವರ್ಸ್‌ ವಾಟರ್‌ ಫ್ಲಾಸ್‌ ನಲ್ಲಿ ಹಾಗಿಲ್ಲ. ನಿಮ್ಮ ಯೋಚನೆಯನ್ನೇ ತಲೆಕೆಳಗಾಗಿಸುವಂತೆ ಜಲಪಾತವೇ ತಲೆಕೆಳಗಾಗಿ ಬಂದುಬಿಡುತ್ತದೆ. ನೀವು ಯಾವುದೇ ವಸ್ತುವನ್ನು ಜಲಪಾತದತ್ತ ಎಸೆದರೂ ಅದು ಒಮ್ಮೆಗೆ ಕೆಳಕ್ಕೆ ಹೋದಂತೆ ಕಂಡರೂ ಮತ್ತೆ ಹಿಮ್ಮುಖವಾಗಿ ಬಂದುಬಿಡುತ್ತದೆ.

ಮಳೆಗಾಲವೆಂದರೆ ಹಬ್ಬ, ಸಂಭ್ರಮದ ಕಾಲ. ಕಣ್ಣು ಹಾಯಿಸಿದಲ್ಲೆಲ್ಲ ನೀರು..ಬರೀ ನೀರು..ಬೇಸಿಗೆ, ಚಳಿಗಾಲಗಳಲ್ಲಿ ಮರೆಯಾಗಿಬಿಡುತ್ತಿದ್ದ ಅದೆಷ್ಟೋ ಸಣ್ಣ ತೊರೆಗಳೂ ಸಹ ಹಳ್ಳ, ಕೊಳಗಳಾಗಿಬಿಡುತ್ತವೆ. ತನ್ನ ಪಾಡಿಗೆ ಸದ್ದಿಲ್ಲದೆ ಉಳಿದುಬಿಡುತ್ತಿದ್ದ ನೀರಿನ ಹರಿವುಗಳು ಜಲಪಾತಗಳಾಗಿ ಪ್ರವಾಸಿಗರನ್ನು ಸೆಳೆದುಬಿಡುತ್ತವೆ. ಮಾನ್ಸೂನ್‌ ನ ವೇಳೆ ಆ ಬೆಳ್ನೊರೆಯ ಜಲಪಾತಗಳನ್ನು ಕಾಣುವುದೇ ಕಣ್ಣಿಗೆ ಹಬ್ಬದ ವಾತಾವರಣವನ್ನು ಸೃಷ್ಟಿಸಿಬಿಡುತ್ತದೆ.

ಜೋಗ, ಗಗನಚುಕ್ಕಿ ಭರಚುಕ್ಕಿ, ಗೋಕಾಕ್‌ ಫಾಲ್ಸ್‌, ಅಬ್ಬೆ ಫಾಲ್ಸ್‌ ಹೀಗೆ ಕರ್ನಾಟದ ಪ್ರಮುಖ ಜಲಪಾತಗಳನ್ನು ಎಲ್ಲರೂ ಭೇಟಿ ಮಾಡಿಯೇ ಇರುತ್ತಾರೆ. ಆದರೆ ಕರ್ನಾಟಕದ ಗಡಿಯಾಚೆಗೆ, ಭಾರತದ ಒಳಗಡೆಯೇ ಅಚ್ಚರಿ ಹುಟ್ಟಿಸುವಂಥ ವಿಶೇಷವಾದ ಜಲಪಾತಗಳಿವೆ. ಮಳೆಗಾಲ ಬಂತೆಂದರೆ ಸಾಕು ಈ ಜಲಪಾತಗಳು ಭೋರ್ಗರೆಯುತ್ತಲೇ ಪ್ರವಾಸಿಗರ ಹಾಟ್‌ ಸ್ಪಾಟ್‌ ಆಗಿಬಿಡುತ್ತದೆ. ಅಂಥ ಪಾಲ್ಸ್‌ ಗಳ ಪೈಕಿ ಪ್ರಮುಖವಾದುದು ರಿವರ್ಸ್‌ ವಾಟರ್‌ ಫಾಲ್ಸ್.‌

naneghat reverse waterfall 1

ಈ ಜಲಪಾತದ ಹೆಸರೇಕೆ ಹೀಗಿದೆ ಎಂದು ಯೋಚಿಸಬೇಡಿ. ಇದರ ನಿಜವಾದ ಹೆಸರು, ನಾನೇಘಾಟ್‌ ವಾಟರ್‌ ಫಾಲ್ಸ್. ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಪಶ್ಚಿಮ ಘಟ್ಟಗಳ ಶ್ರೇಣಿಯಲ್ಲಿರುವ ಒಂದು ಪ್ರಾಚೀನ ಪರ್ವತ ಮಾರ್ಗವಿದು. 'ನಾನೇ' ಎಂದರೆ 'ನಾಣ್ಯ' ಮತ್ತು 'ಘಾಟ್' ಎಂದರೆ 'ಪರ್ವತ ಮಾರ್ಗ'. ಈ ಮಾರ್ಗವನ್ನು ಹಿಂದೆ ವ್ಯಾಪಾರಿಗಳಿಂದ ಟೋಲ್ ಸಂಗ್ರಹಿಸಲು ಟೋಲ್‌ಬೂತ್ ಆಗಿ ಬಳಸಲಾಗುತ್ತಿದ್ದರಿಂದ ಇಲ್ಲಿಗೆ ನಾನೇಘಾಟ್‌ ಎಂಬ ಹೆಸರು ಬಂತೆಂದೂ ಹೇಳಲಾಗುತ್ತದೆ. ಇತ್ತೀಚೆಗೆ, ಈ ಪ್ರದೇಶವು ಚಾರಣ ಮಾತ್ರವಲ್ಲದೆ ಹಿಮ್ಮುಖ ಜಲಪಾತ ಅಂದರೆ ರಿವರ್ಸ್‌ ವಾಟರ್‌ ಫಾಲ್ಸ್‌ ನಿಂದಾಗಿಯೂ ಪ್ರವಾಸಿಗರಿಗೆ ಆಕರ್ಷಣೀಯ ತಾಣವಾಗಿದೆ.

ಜಲಪಾತ ರಿವರ್ಸ್‌ ಹೊಡೆಯೋದ್ಯಾಕೆ ?

ಸಾಮಾನ್ಯವಾಗಿ ಜಲಪಾತಗಳನ್ನು ಎತ್ತರದ ಪ್ರದೇಶಗಳಿಂದ ಕೆಳಭಾಗಕ್ಕೆ ಅಂದರೆ ತಗ್ಗು ಪ್ರದೇಶಗಳಿಗೆ ಅತಿ ವೇಗದಲ್ಲಿ, ಭರದಿಂದ ಧುಮ್ಮಿಕ್ಕಿ ಹರಿಯುವುದನ್ನು ಎಲ್ಲರೂ ನೋಡಿಯೇ ಇರುತ್ತೇವೆ. ಆದರೆ ಈ ರಿವರ್ಸ್‌ ವಾಟರ್‌ ಫ್ಲಾಸ್‌ ನಲ್ಲಿ ಹಾಗಿಲ್ಲ. ನಿಮ್ಮ ಯೋಚನೆಯನ್ನೇ ತಲೆಕೆಳಗಾಗಿಸುವಂತೆ ಜಲಪಾತವೇ ತಲೆಕೆಳಗಾಗಿ ಬಂದುಬಿಡುತ್ತದೆ. ನೀವು ಯಾವುದೇ ವಸ್ತುವನ್ನು ಜಲಪಾತದತ್ತ ಎಸೆದರೂ ಅದು ಒಮ್ಮೆಗೆ ಕೆಳಕ್ಕೆ ಹೋದಂತೆ ಕಂಡರೂ ಮತ್ತೆ ಹಿಮ್ಮುಖವಾಗಿ ಬಂದುಬಿಡುತ್ತದೆ. ಖುದ್ದು ನೀವೇ ಜಲಪಾತದ ಆಸುಪಾಸಿನಲ್ಲಿ ನಿಂತುಕೊಂಡರೂ ಸಾಕು, ಮಳೆಯಲ್ಲಿ ಮಿಂದಂತೆ ರಭಸದಿಂದ ನಿಮ್ಮ ಮೇಲೆರಗುವ ನೀರು, ಮಂಜಿನ ವಾತಾವರಣದಿಂದ ನೀವು ಸಂಪೂರ್ಣವಾಗಿ ಒದ್ದೆಯಾಗಿಬಿಡುತ್ತೀರಿ. ಈ ಜಲಪಾತ ಹೀಗೆ ಹಿಮ್ಮುಖವಾಗಿ ಹರಿಯುವುದಕ್ಕೂ ಪ್ರಾಕೃತಿಕವಾದ ಕಾರಣವಿದೆ.

ಗುರುತ್ವಾಕರ್ಷಣೆಯ ಸೆಳೆತವನ್ನು ಎದುರಿಸುವ ಬಲವಾದ ಗಾಳಿಯ ಶಕ್ತಿಗಳಿಂದಾಗಿ ಇದು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಕರಾವಳಿ ಅಥವಾ ಪರ್ವತ ಪ್ರದೇಶಗಳಲ್ಲಿ ಬೀಸುವ ಅಬ್ಬರದ ಗಾಳಿ ಪ್ರವಾಸಿಗರಿಗೆ ಇಂಥ ವಿಶೇಷ ಅನುಭವವನ್ನು ನೀಡುತ್ತದೆ. ಅದರಲ್ಲೂ ಮಳೆಗಾಲದಲ್ಲಿ ಈ ರಿವರ್ಸ್‌ ವಾಟರ್‌ ಫಾಲ್ಸ್‌ನ್ನು ಅಬ್ಬರವನ್ನು ನೋಡುವ ಖುಷಿಯೇ ಬೇರೆ.

ಜಲಪಾತವಷ್ಟೇ ಅಲ್ಲ ಚಾರಣಕ್ಕೂ ಅವಕಾಶ…

ನಾನೇಘಾಟ್ ಮುಂಬೈನಿಂದ ಸುಮಾರು 200 ಕಿಮೀ ದೂರದಲ್ಲಿದೆ. ಕೇವಲ 5 ಗಂಟೆಗಳ ಸುಂದರವಾದ ಪ್ರಯಾಣ ಮಾಡಿದರೆ ಸಾಕು ನಾನೇಘಾಟ್‌ ಪಾರ್ಕಿಂಗ್ ಪ್ರದೇಶವನ್ನು ತಲುಪಬಹುದು. ಅಲ್ಲಿ ವಾಹನಗಳನ್ನು ಪಾರ್ಕಿಂಗ್‌ ಮಾಡುವುದಕ್ಕೆ ಕಾರುಗಳಿಗೆ 50 ರು., ಬೈಕ್‌ಗಳಿಗೆ 20 ರು. ಶುಲ್ಕವನ್ನು ಕಟ್ಟಲೇಬೇಕು.

ನಂತರ, ಮನಮೋಹಕವಾದ ರಿವರ್ಸ್ ಜಲಪಾತವನ್ನು ವೀಕ್ಷಿಸಲು 15 ನಿಮಿಷಗಳ ಕಾಲ ಪುಟ್ಟದೊಂದು ಚಾರಣ ಅಥವಾ ಕಾಲ್ನಡಿಗೆ ಮಾಡಿದರೆ ಸಾಕು ರಿವರ್ಸ್‌ ವಾಟರ್‌ ಫಾಲ್ಸ್‌ ನೋಡುವ ಅವಕಾಶ ನಿಮ್ಮದಾಗುತ್ತದೆ. ಇಲ್ಲಿ ಅದ್ಧೂರಿ, ಆಡಂಬರದ ಹೋಂ ಸ್ಟೇಗಳು, ಹೊಟೇಲ್‌ಗಳು ಇಲ್ಲವಾದ್ದರಿಂದ ಸಾಮಾನ್ಯ ವರ್ಗದವರಿಗೂ ಒಪ್ಪುವಂತೆ ಕೇವಲ 300- 500 ರು. ನಿಂದ ಪ್ರಾರಂಭವಾಗುವ ಅತಿ ಕಡಿಮೆ ಸೌಕರ್ಯಗಳಿರುವ ಹೋಂ ಸ್ಟೇಗಳಲ್ಲಿ ರಾತ್ರಿಯಿಡೀ ತಂಗಬಹುದು. ಆಹಾರಕ್ಕಾಗಿ ಫೈವ್‌ ಸ್ಟಾರ್‌ ಹೊಟೇಲ್‌ ಗಳನ್ನು ಬಯಸುವವರಿಗೆ ಇಲ್ಲಿ ಅಂಥ ಯಾವುದೇ ಹೊಟೇಲ್‌ಗಳೂ ಸಿಗುವುದಿಲ್ಲ. ಹಸಿವೆ ಎಂದರೆ ಇಲ್ಲಿರುವ ಸಾಮಾನ್ಯವಾದ ಒಂದೆರಡು ಹೊಟೇಲ್‌ಗಳ್ನು ಆಶ್ರಯಿಸಬಹುದು ಅಷ್ಟೇ.

naneghat reverse waterfall 2

ಇಲ್ಲಿದೆ ರಾಜವಂಶದ ಕುರುಹು

ನಾನೇಘಾಟ್‌ ಎಂಬುದು ಚಾರಣ, ವಿಶೇಷವಾದ ಅನುಭವ ನೀಡುವ ಜಲಪಾತಕ್ಕಷ್ಟೇ ಹೆಸರು ಮಾಡಿಲ್ಲ, ಜತೆಗೆ ಪ್ರವಾಸಿಗರಿಗೆ ಇದರ ಆಸುಪಾಸಿನಲ್ಲಿ ನೋಡಲು ಇನ್ನೂ ಅನೇಕ ಪರಿಸರವಿದೆ. ಅವುಗಳಲ್ಲಿ ಪ್ರಮುಖವಾದುದು ದೊಡ್ಡದಾದ ಗುಹೆಗಳು, ಶಾತವಾಹನ ರಾಜವಂಶದ ಶಾಸನಗಳು ಮತ್ತು ಶಾತಕರ್ಣಿಯ ಪತ್ನಿ ನಾಗಾನಿಕಾ ಕೆತ್ತಿದ ಪ್ರಾಚೀನ ಶಾಸನಗಳು. ಇವುಗಳನ್ನು ನೋಡದಿದ್ದರೆ ಇಲ್ಲಿನ ಪ್ರವಾಸ ಪೂರ್ಣವಾಗುವುದಿಲ್ಲ. ಮಾನ್ಸೂನ್‌ ಅದರಲ್ಲೂ ಜುಲೈನಿಂದ ಸೆಪ್ಟೆಂಬರ್‌ ವರೆಗೂ ಇಲ್ಲಿಗೆ ಭೇಟಿ ನೀಡಲು ಸುಸಮಯವಾಗಿದ್ದು ಜೀವನದಲ್ಲಿ ಒಮ್ಮೆಯಾದರೂ ಈ ಮಾನ್ಸೂನ್ ಅನುಭವವನ್ನು ತಿಳಿಯದಿದ್ದರೆ ಹೇಗೆ ? ‌

ದಾರಿ ಯಾವುದಯ್ಯಾ ?

ವಿಮಾನದ ಮೂಲಕ

ನಾನೇಘಾಟ್‌ಗೆ ತೆರಳಲು ವಿಮಾನವನ್ನು ಅವಲಂಬಿಸುವವರು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಪುಣೆ ವಿಮಾನ ನಿಲ್ದಾಣಕ್ಕೆ ಸುಮಾರು ಒಂದೂವರೆ ಗಂಟೆ ಪ್ರಯಾಣ ಬೆಳೆಸಿದರೆ, ಅಲ್ಲಿಂದ ಟ್ಯಾಕ್ಸಿ ಮೂಲಕ ಎರಡು ಗಂಟೆಗಳ ಪ್ರಯಾಣ ಮಾಡಲೇ ಬೇಕು.

ಬಸ್‌ ಮೂಲಕ

ಕೆಂಪೇಗೌಡ ವಿಮಾನ ನಿಲ್ದಾಣದಿಂದ ದಿನಕ್ಕೆ 5 ಬಸ್‌ಗಳ ಸೌಲಭ್ಯವಿದೆ. 13 ಗಂಟೆಗಳ ಬಸ್‌ ಪ್ರಯಾಣವನ್ನು ಮಾಡಿ ಪುಣೆ ತಲುಪಿದರೆ ಅಲ್ಲಿಂದ ಭೋಸರಿ ಗಾಂವ್‌ಗೆ 1 ಗಂಟೆ ಪ್ರಯಾಣ ಹಾಗೂ ಭೋಸರಿಯಿಂದ 1 ಗಂಟೆಯ ಪ್ರಯಾಣ ರಾಜಗುರುನಗರ, ಅಲ್ಲಿಂದ ಟ್ಯಾಕ್ಸಿಯ ಮೂಲಕ ಒಂದೂವರೆ ಗಂಟೆಗಳ ಪ್ರಯಾಣ ಮಾಡಿ ನಾನೇಘಾಟ್‌ ತಲುಪಬಹುದು.

ರೈಲು ಮೂಲಕ

ಬೆಂಗಳೂರು ಸೆಂಟ್ರಲ್‌ನಿಂದ ಕಲ್ಯಾಣ್‌ ಜಂಕ್ಷನ್‌ಗೆ 20 ಗಂಟೆಗಳ ಪ್ರಯಾಣ ಮಾಡಿದರೆ ಅಲ್ಲಿಂದ ಶಹಾಪುರದ ಅಸಂಗಾವ್ನ್‌ಗೆ 35 ನಿಮಿಷಗಳ ರೈಲ್ವೆ ಸಂಚಾರ ಮಾಡಬೇಕಾಗುತ್ತದೆ. ಅಲ್ಲಿಂದ ಟ್ಯಾಕ್ಸಿಯ ನೆರವಿನೊಂದಿಗೆ 1 ಗಂಟೆ 48 ನಿಮಿಷಗಳ ಪ್ರಯಾಣ ಮಾಡಿದರೆ ನಾನೇಘಾಟ್‌ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.

ಟ್ರಾಕ್ಸಿ ಮೂಲಕ

ಬೆಂಗಳೂರಿನಿಂದಲೇ ರೆಂಟಲ್‌ ಕಾರುಗಳು ಅಥವಾ ಸ್ವಂತ ವಾಹನವನ್ನು ಬಳಸಿಕೊಂಡೂ ಸುಮಾರು 14 ಗಂಟೆಗಳ ಪ್ರಯಾಣ ಮಾಡಿದರೆ ಅಂದರೆ ಅಂದಾಜು 923ಕಿಮೀ ಪ್ರಯಾಣವನ್ನೂ ಆಯ್ಕೆ

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...