Saturday, January 17, 2026
Saturday, January 17, 2026

ಪುರುಷತ್ವ ಪರೀಕ್ಷೆಯ ಆಟ

ಬಂಜೀ ಜಂಪಿಂಗ್‌ನ ಇತಿಹಾಸವು ವನವಾಟು ದ್ವೀಪಗಳ 'ಪೆಂಟೆಕೋಸ್ಟ್ ದ್ವೀಪ'ಕ್ಕೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ಇಲ್ಲಿನ ಜನರು ʻಲ್ಯಾಂಡ್ ಡೈವಿಂಗ್ʼ ಎಂಬ ಸಂಪ್ರದಾಯವನ್ನು ಅನುಸರಿಸುತ್ತಿದ್ದರು. ಈ ಸಂಪ್ರದಾಯದಲ್ಲಿ, ಪುರುಷರು ಎತ್ತರದ ಮರವನ್ನು ಹತ್ತಿ ಬಳ್ಳಿಯ ಸಹಾಯದಿಂದ ಕೆಳಗೆ ಜಿಗಿಯುತ್ತಿದ್ದರು. ವಾಸ್ತವವಾಗಿ, ಇದು ಅವರ ಪುರುಷತ್ವದ ಪರೀಕ್ಷೆಯಾಗಿತ್ತು.

- ನಿತ್ಯಾನಂದ್ ಕೆ


ಸಾಹಸಗಳನ್ನು ಇಷ್ಟ ಪಡುವವರಿಗೆ ಜೀವನದಲ್ಲಿ ಒಮ್ಮೆಯಾದರೂ ಎತ್ತರದ ಶಿಖರದಿಂದ ಬಂಜೀ ಜಂಪಿಂಗ್ ಮಾಡಬೇಕೆಂಬುದು ಕನಸಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಬಂಜೀ ಜಂಪಿಂಗ್‌ನ ಕ್ರೇಜ್ ಹೆಚ್ಚಾಗಿ ಕಂಡುಬರುತ್ತಿದೆ. ಅದು ಎಷ್ಟೇ ಭಯಾನಕವಾಗಿದ್ದರೂ, ನಿಮಗೆ ಜೀವನದ ಹೊಸ ಅನುಭವವನ್ನು ತುಂಬುತ್ತದೆ. ಭಾರತದ ಅತಿ ಎತ್ತರದ ಬಂಜೀ ಜಂಪಿಂಗ್ ಪಾಯಿಂಟ್ ಅನ್ನು ನೀವು ಹೃಷಿಕೇಶದಲ್ಲಿ ಕಾಣಬಹುದು. ಆದರೆ ಬಂಜೀ ಜಂಪಿಂಗ್‌ನ ಇತಿಹಾಸವೇನು ಎಂದು ನಿಮಗೆ ತಿಳಿದಿದೆಯೇ? ಈ ರೋಮಾಂಚಕ ಕ್ರೀಡೆಯ ಇತಿಹಾಸ, ಅದರ ಬೆಳವಣಿಗೆ ಮತ್ತು ಭಾರತದಲ್ಲಿ ಅದರ ಉಪಸ್ಥಿತಿಯ ಆಸಕ್ತಿದಾಯಕ ಸಂಗತಿಗಳ ಬಗ್ಗೆ ತಿಳಿಯೋಣ.

ಬಂಜೀ ಜಂಪಿಂಗ್ ಹುಟ್ಟಿದ್ದೆಲ್ಲಿ?

ಬಂಜಿ (3)

ಬಂಜೀ ಜಂಪಿಂಗ್‌ನ ಇತಿಹಾಸವು ವನವಾಟು ದ್ವೀಪಗಳ 'ಪೆಂಟೆಕೋಸ್ಟ್ ದ್ವೀಪ'ಕ್ಕೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ಇಲ್ಲಿನ ಜನರು ʻಲ್ಯಾಂಡ್ ಡೈವಿಂಗ್ʼ ಎಂಬ ಸಂಪ್ರದಾಯವನ್ನು ಅನುಸರಿಸುತ್ತಿದ್ದರು. ಈ ಸಂಪ್ರದಾಯದಲ್ಲಿ, ಪುರುಷರು ಎತ್ತರದ ಮರವನ್ನು ಹತ್ತಿ ಬಳ್ಳಿಯ ಸಹಾಯದಿಂದ ಕೆಳಗೆ ಜಿಗಿಯುತ್ತಿದ್ದರು. ವಾಸ್ತವವಾಗಿ, ಇದು ಅವರ ಪುರುಷತ್ವದ ಪರೀಕ್ಷೆಯಾಗಿತ್ತು. ಅವರ ಧೈರ್ಯವನ್ನೂ ಸಹ ಇಲ್ಲಿ ಗಮನಿಸಲಾಗುತ್ತಿದ್ದು. ಈ ಸಂಪ್ರದಾಯವು ಧಾರ್ಮಿಕ ಮತ್ತು ಸಾಂಸ್ಕೃತಿಕ ಒಂದು ಭಾಗವಾಗಿತ್ತು.

ವಾಸ್ತವವಾಗಿ, ಬಂಜೀ ಜಂಪಿಂಗ್ ಸಾಹಸ ಕ್ರೀಡೆಯಾಗಿ 1979ರಲ್ಲಿ ಪ್ರಾರಂಭವಾಯಿತು. ಇಂಗ್ಲೆಂಡ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ 'ಡೇಂಜರಸ್ ಸ್ಪೋರ್ಟ್ಸ್ ಕ್ಲಬ್' ನ ಕೆಲವು ಸದಸ್ಯರು ಅಮೆರಿಕದ ಕ್ಲಿಫ್ಟನ್ ತೂಗು ಸೇತುವೆಯಿಂದ ಹಗ್ಗದ ಸಹಾಯದಿಂದ ಮೊದಲ ಬಾರಿಗೆ ಹಾರಿದರು. ಬಳಿಕ ಈ ಪ್ರವೃತ್ತಿ ಮುಂದುವರಿಯಿತು. ಅಮೆರಿಕದ ನಂತರ, ಇದೇ ಸದಸ್ಯರು ನ್ಯೂಜಿಲೆಂಡ್, ಫ್ರಾನ್ಸ್ ಮತ್ತು ಇತರ ಹಲವು ದೇಶಗಳಲ್ಲಿ ಈ ಸಾಹಸ ಕ್ರೀಡೆಯನ್ನು ಪ್ರದರ್ಶಿಸಿದರು ಎಂದು ಎಂದು ಅನೇಕ ಪುಸ್ತಕಗಳಲ್ಲಿ ಉಲ್ಲೇಖಿಸಲಾಗಿದೆ.

ಬಂಜಿ

ಆದರೆ 1988 ರಲ್ಲಿ, ನ್ಯೂಜಿಲೆಂಡ್‌ನ ಎಜೆ ಹ್ಯಾಕೆಟ್ ಈ ಸಾಹಸ ಕ್ರೀಡೆಯನ್ನು ವ್ಯವಹಾರವನ್ನಾಗಿ ಪರಿವರ್ತಿಸಿದರು. ಅವರು ನ್ಯೂಜಿಲೆಂಡ್‌ನ ಕ್ವೀನ್ಸ್‌ಟೌನ್‌ನಲ್ಲಿರುವ 'ಕವಾರೌ ಸೇತುವೆ'ಯಲ್ಲಿ ವಿಶ್ವದ ಮೊದಲ ವಾಣಿಜ್ಯ ಬಂಜೀ ಜಂಪಿಂಗ್ ತಾಣವನ್ನು ಪ್ರಾರಂಭಿಸಿದರು. ಇದರ ನಂತರ, ಬಂಜೀ ಜಂಪಿಂಗ್ ಪ್ರಪಂಚದಾದ್ಯಂತ ಪ್ರಸಿದ್ಧವಾಯಿತು.

ಬಂಜೀ ಜಂಪಿಂಗ್ ಮತ್ತು ಭಾರತ

ಭಾರತದ ಬಗ್ಗೆ ಹೇಳುವುದಾದರೆ, ಬಂಜೀ ಜಂಪಿಂಗ್ 2006ರಲ್ಲಿ ಹೃಷಿಕೇಶದಲ್ಲಿ ಪ್ರಾರಂಭವಾಯಿತು. ಇದನ್ನು ಭಾರತದ ಮೊದಲ ಮತ್ತು ಸುರಕ್ಷಿತ ಬಂಜೀ ಜಂಪಿಂಗ್ ತಾಣವೆಂದು ಪರಿಗಣಿಸಲಾಗಿದೆ. ಆ ಸಮಯದಲ್ಲಿ, ಇದನ್ನು ನ್ಯೂಜಿಲೆಂಡ್ ತಜ್ಞರು ನಿರ್ವಹಿಸುತ್ತಿದ್ದರು. ಇದರಲ್ಲಿ ಸುರಕ್ಷತಾ ಮಾನದಂಡಗಳ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದರು. ಆದರೆ ಇದೀಗ ಭಾರತದ ಹಲವಾರು ಭಾಗಗಳಲ್ಲಿ ಬಂಜೀ ಜಂಪಿಂಗ್ ಪ್ರವಾಸೋದ್ಯಮದ ಭಾಗವಾಗಿ ಬೆಳೆದಿದೆ.

ಬಂಜಿ (2)

ಬಂಜೀ ಜಂಪಿಂಗ್‌ಗಾಗಿ ಇಲ್ಲಿ ಬನ್ನಿ

ಹೃಷಿಕೇಶ, ಉತ್ತರಾಖಂಡ
ಲೋನಾವಾಲ, ಮಹಾರಾಷ್ಟ್ರ
ಪಣಜಿ, ಗೋವಾ
ಬೆಂಗಳೂರು, ಕರ್ನಾಟಕ

ಬಂಜೀ ಜಂಪಿಂಗ್ ಮಾಡುವ ಮೊದಲು ಈ ವಿಷಯ ನೆನಪಿನಲ್ಲಿಟ್ಟುಕೊಳ್ಳಬೇಕು.

  • ನೀವು ಬಂಜೀ ಜಂಪಿಂಗ್‌ಗೆ ಸಿದ್ಧರಾಗುತ್ತಿದ್ದರೆ ನೀವು ಧರಿಸುವ ಬಟ್ಟೆಯನ್ನು ಮೊದಲೇ ಆಯ್ಕೆ ಮಾಡಿ. ಆರಾಮದಾಯಕ ಬಟ್ಟೆಗಳನ್ನು ಧರಿಸಿ. ಸ್ಕರ್ಟ್, ಹೈ ಹೀಲ್ಸ್ ಧರಿಸುವುದನ್ನು ತಪ್ಪಿಸಿ.
  • ಜಂಪ್ ಟ್ರೇನರ್ ಹೇಳುವ ಸಲಹೆ ಪಾಲಿಸಿ. ಜಂಪ್ ಟ್ರೇನರ್ ಇದರ ಕುರಿತು ಸರಿಯಾಗಿ ತಿಳಿದಿರುವುದರಿಂದ ಅವರ ನೀಡುವ ಸಲಹೆ ಪಾಲಿಸುವುದು ಸೂಕ್ತವಾಗಿದೆ.
  • ಬಂಜೀ ಜಂಪಿಂಗ್ ಮೊದಲು ಆಹಾರ ಕ್ರಮದ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಾಗಿದೆ. ಜಿಗಿಯುವ ಮೊದಲು ಹೆಚ್ಚು ತಿನ್ನಬೇಡಿ. ಖಾಲಿ ಹೊಟ್ಟೆಯಲ್ಲಿ ಜಿಗಿಯುವುದು ಉತ್ತಮವಾಗಿದೆ.
  • ಜಿಗಿಯುವ ಮೊದಲು ಅತಿಯಾಗಿ ಹೆದರುವುದು ಬೇಡ. ಯಾವಾಗಲೂ ನೇರವಾಗಿ ನೋಡಿ. ಕೆಳಗೆ ನೋಡಿದರೆ ಮೇಲಿನಿಂದ ಅದು ಭಯಾನಕವಾಗಿ ಕಾಣುತ್ತದೆ. ಒಂದೋ ನಿಮ್ಮ ಕಣ್ಣುಗಳನ್ನು ಮುಚ್ಚಿ ಕೂಡ ನೀವು ಜಂಪ್ ಮಾಡಬಹುದು.
  • ಬಂಜೀ ಜಂಪಿಂಗ್‌ಗೆ ಅನುಮತಿ ಪತ್ರ ಸಹಿ ಮಾಡುವ ಮೊದಲು ನಿರ್ದೇಶನಗಳನ್ನು ಸರಿಯಾಗಿ ಓದಿ. ಪಟ್ಟಿಯಲ್ಲಿ ಉಲ್ಲೇಖಿಸಿರುವ ಹೃದಯದ ಸಮಸ್ಯೆ, ಬೆನ್ನುನೋವು ಮುಂತಾದ ಯಾವುದೇ ದೀರ್ಘಕಾಲದ ಅಸ್ವಸ್ಥತೆಗಳಿದ್ದರೆ ಪ್ರಯತ್ನಿಸಬೇಡಿ.
Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..