ಡಿಸೆಂಬರ್ 27ರಂದು ಉಡುಪಿಗೆ ಸಿಎಂ ಯೋಗಿ ಆದಿತ್ಯನಾಥ್
ಪುತ್ತಿಗೆ ಮಠದಲ್ಲಿ ಕೃಷ್ಣದೇವರಿಗೆ ಸ್ವರ್ಣಮಯ ಪಾರ್ಥಸಾರಥಿ ರಥ ಸಮರ್ಪಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಪುತ್ತಿಗೆ ಮಠದ ವತಿಯಿಂದ ಆಮಂತ್ರಿಸಲಾಗಿದೆ. ಲಕ್ನೋದ ಸಿಎಂ ಯೋಗಿ ನಿವಾಸಕ್ಕೆ ತೆರಳಿ ಆಮಂತ್ರಣ ಪತ್ರಿಕೆ ನೀಡಲಾಗಿದೆ.
ಇತ್ತೀಚೆಗಷ್ಟೇ ಉಡುಪಿಯಲ್ಲಿ ʻವಿಶ್ವ ಗೀತಾ ಪರ್ಯಾಯʼ ಬಹಳ ಅದ್ಧೂರಿಯಾಗಿ ನೆರವೇರಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದ ಯಶಸ್ಸಿನ ನಂತರ ಸದ್ಯ ಪುತ್ತಿಗೆ ಮಠದಲ್ಲಿ ಕೃಷ್ಣದೇವರಿಗೆ ಸ್ವರ್ಣಮಯ ಪಾರ್ಥಸಾರಥಿ ರಥ ಸಮರ್ಪಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಪುತ್ತಿಗೆ ಮಠದ ವತಿಯಿಂದ ಆಮಂತ್ರಿಸಲಾಗಿದೆ. ಲಕ್ನೋದ ಸಿಎಂ ಯೋಗಿ ನಿವಾಸಕ್ಕೆ ತೆರಳಿ ಆಮಂತ್ರಣ ಪತ್ರಿಕೆ ನೀಡಿರುವ ಹಿನ್ನೆಲೆಯಲ್ಲಿ ಇದೇ ಡಿಸೆಂಬರ್ 27ರಂದು ಯೋಗಿ ಆದಿತ್ಯನಾಥ್ ಅವರು ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.