Thursday, October 9, 2025
Thursday, October 9, 2025

ಐಟಿಬಿ ಏಷ್ಯಾ 2025ರಲ್ಲಿ ಗೋವಾದ ದರ್ಬಾರ್

ಸಿಂಗಾಪುರದ ಮರಿನಾ ಬೇ ಸ್ಯಾಂಡ್ಸ್‌ನಲ್ಲಿ ಅಕ್ಟೋಬರ್ 15 ರಿಂದ 17 ರವರೆಗೆ ನಡೆಯಲಿರುವ ಏಷ್ಯಾದ ಪ್ರಮುಖ ಪ್ರವಾಸೋದ್ಯಮ ವಾಣಿಜ್ಯ ಮೇಳ ITB Asia 2025ರಲ್ಲಿ ಗೋವಾ ರಾಜ್ಯವು ತನ್ನ ವಿಶಿಷ್ಟ ಪ್ರವಾಸೋದ್ಯಮ ದೃಷ್ಟಿಕೋನದೊಂದಿಗೆ ಅಂತಾರಾಷ್ಟ್ರೀಯ ವೇದಿಕೆಯ ಕೇಂದ್ರಬಿಂದುವಾಗಲಿದೆ.

ಸಿಂಗಾಪುರದ ಮರಿನಾ ಬೇ ಸ್ಯಾಂಡ್ಸ್‌ನಲ್ಲಿ ಅಕ್ಟೋಬರ್ 15 ರಿಂದ 17 ರವರೆಗೆ ನಡೆಯಲಿರುವ ಏಷ್ಯಾದ ಪ್ರಮುಖ ಪ್ರವಾಸೋದ್ಯಮ ವಾಣಿಜ್ಯ ಮೇಳ ITB Asia 2025ರಲ್ಲಿ ಗೋವಾ ರಾಜ್ಯವು ತನ್ನ ವಿಶಿಷ್ಟ ಪ್ರವಾಸೋದ್ಯಮ ದೃಷ್ಟಿಕೋನದೊಂದಿಗೆ ಅಂತಾರಾಷ್ಟ್ರೀಯ ವೇದಿಕೆಯ ಕೇಂದ್ರಬಿಂದುವಾಗಲಿದೆ.

Marina Bay Sands

ಸಾಮಾನ್ಯವಾಗಿ “ಬೀಚ್ ಡೆಸ್ಟಿನೇಷನ್” ಎನ್ನುವ ಹೆಸರಿನಿಂದ ಪ್ರಸಿದ್ಧಿಯಾಗಿದ್ದ ಗೋವಾ, ಈಗ ಸಂಸ್ಕೃತಿ, ಸಮುದಾಯ ಮತ್ತು ಪರಿಸರದ ಸಂರಕ್ಷಣೆಯಂಥ ಪ್ರಮುಖ ಅಂಶಗಳ ಕೇಂದ್ರಿಕೃತ ಪ್ರವಾಸೋದ್ಯಮವಾಗಿ ಅನಾವರಣಗೊಳ್ಳಲು ಸಜ್ಜಾಗಿದೆ.

ಇದೇ ವೇಳೆ, ಗ್ರಾಮೀಣ ಪ್ರವಾಸೋದ್ಯಮ, ಸ್ಥಳೀಯ ಉತ್ಸವಗಳು ಹಾಗೂ ಸಮುದಾಯ ನೇತೃತ್ವದ ಯೋಜನೆಗಳನ್ನು ಹೈಲೈಟ್ ಮಾಡುವ ಮೂಲಕ ಪ್ರವಾಸೋದ್ಯಮವು ಸಾಮಾಜಿಕ, ಆರ್ಥಿಕ ಮತ್ತು ಪರಿಸರ ಸ್ನೇಹಿ ಯೋಜನೆಗಳನ್ನು ಹೇಗೆ ಒಟ್ಟಿಗೆ ತರಬಹುದು ಎಂಬುದನ್ನು ಗೋವಾ ಪ್ರದರ್ಶಿಸಲಿದೆ.

Goa

ಗೋವಾ ಅರಣ್ಯ ಇಲಾಖೆ ಕೂಡ ಈ ಬಾರಿ ಪ್ರತಿನಿಧಿ ಮಂಡಳಿಯ ಭಾಗವಾಗಿದ್ದು, ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮಗಳೊಂದಿಗೆ ನಿಸರ್ಗ ಕೇಂದ್ರಿತ ವಿವಿಧ ಪ್ರದರ್ಶನಗಳನ್ನು ತೋರಿಸಲಿದೆ. ಇದರಿಂದ ನೈಸರ್ಗಿಕ ಮತ್ತು ಸಾಂಸ್ಕೃತಿಕ ಪರಂಪರೆಯ ನಡುವಿನ ಸಮ್ಮಿಲನವನ್ನು ಬಿಂಬಿಸುವ ಜತೆಗೆ, ಪರಿಸರದ ಬಗೆಗಿರುವ ಗೋವಾದ ನಿಷ್ಠೆಯನ್ನು ತೋರಿಸಲಿದೆ.

ಗೋವಾ ತನ್ನ ಪ್ರವಾಸೋದ್ಯಮ ಮಾದರಿಯನ್ನು ಸಮುದಾಯ ಕೇಂದ್ರಿತವಾಗಿ ರೂಪಿಸಿದೆ. ಪ್ರವಾಸಿಗರು ಸ್ಥಳೀಯ ಜೀವನೋಪಾಯಗಳಿಗೆ ಬೆಂಬಲ ನೀಡುವಂತೆ, ಸ್ಥಳೀಯ ಸಂಸ್ಕೃತಿಯಲ್ಲಿ ಭಾಗವಹಿಸುವಂತೆ ಹಾಗೂ ಪರಿಸರ ಸಂರಕ್ಷಣಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಪ್ರೋತ್ಸಾಹಿಸಲಾಗುತ್ತಿದೆ. ಇದು ಪ್ರವಾಸೋದ್ಯಮವನ್ನು ಪುನರುಜ್ಜೀವನದ ಸಾಧನವಾಗಿ ರೂಪಿಸುವ ಪ್ರಯತ್ನವಾಗಿದೆ.

ಐಟಿಬಿ ಏಷ್ಯಾದಲ್ಲಿ ಭಾಗವಹಿಸುವುದರಿಂದ ಗೋವಾ ಅಂತಾರಾಷ್ಟ್ರೀಯ ಸಹಭಾಗಿತ್ವ ವಿಸ್ತರಿಸಲು ಮತ್ತು ಹೊಸ ಮಾರುಕಟ್ಟೆಗಳನ್ನು ಸೆಳೆಯುವ ಅವಕಾಶವನ್ನು ಪಡೆಯುತ್ತಿದೆ. ಸಾಂಸ್ಕೃತಿಕ ಪರಂಪರೆ, ಪರಿಸರ ಸಂರಕ್ಷಣೆ ಮತ್ತು ವಿವಿಧ ಸಮುದಾಯಗಳ ಪಾಲ್ಗೊಳ್ಳುವಿಕೆಯಿಂದ ಗೋವಾ, ಜಾಗತಿಕ ಮಟ್ಟದಲ್ಲಿ ಜವಾಬ್ದಾರಿಯುತ ಪ್ರವಾಸೋದ್ಯಮದ ದಾರಿದೀಪವಾಗಿ ಹೊರಹೊಮ್ಮುತ್ತಿದೆ.

Soumya

Soumya

I am Soumya Shindhe, an engineering graduate with a strong passion for literature and journalism. I have contributed interview articles to Chittara cine magazine and possess keen interest in writing, communication, and creative expression, aspiring to grow professionally.

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...