Thursday, November 20, 2025
Thursday, November 20, 2025

ಬಹ್ರೇನ್‌ನಲ್ಲಿ ಗೋವಾ ಪ್ರವಾಸೋದ್ಯಮದಿಂದ ರೋಡ್ ಶೋ

ಬಹ್ರೇನ್‌ನಲ್ಲಿ ನಡೆಯುವ ಈ ರೋಡ್‌ ಶೋನಲ್ಲಿ “Feels like Goa” ಎಂಬ ಅಭಿಯಾನವನ್ನು ಗೋವಾ ಪ್ರವಾಸೋದ್ಯಮ ಇಲಾಖೆ ನಡೆಸಲು ಸಿದ್ಧತೆಗಳನ್ನು ಕೈಗೊಂಡಿದೆ. ಗೋವಾ ರಾಜ್ಯದ ಹೊಸ ಪ್ರವಾಸೋದ್ಯಮ ಪರಿಕಲ್ಪನೆಗಳನ್ನು ಗಲ್ಫ್‌ ಮಾರುಕಟ್ಟೆಗೆ ಪರಿಚಯಿಸುವುದು ಈ ಅಭಿಯಾನದ ಮುಖ್ಯ ಗುರಿಯಾಗಿದೆ.

ಗೋವಾ ಪ್ರವಾಸೋದ್ಯಮ ಇಲಾಖೆಯು ಗಲ್ಫ್ ಪ್ರದೇಶದಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ನವೆಂಬರ್ 23ರಂದು ಬಹ್ರೇನ್‌ನಲ್ಲಿ ವಿಶೇಷ ರೋಡ್‌ ಶೋ ಆಯೋಜಿಸಲು ಮುಂದಾಗಿದೆ. ಗಲ್ಫ್ ಪ್ರವಾಸೋದ್ಯಮ ಮಾರುಕಟ್ಟೆಯು ಭಾರತಕ್ಕೆ ಮಹತ್ವದ್ದಾಗಿ ಪರಿಗಣಿಸಲ್ಪಡುತ್ತಿದ್ದು, ಈ ರೋಡ್‌ಶೋ ಗೋವಾದ ಪ್ರವಾಸೋದ್ಯಮಕ್ಕೆ ಹೊಸ ಅವಕಾಶಗಳನ್ನು ತೆರೆಯುವ ವಿಶ್ವಾಸವನ್ನು ಇಲಾಖೆ ವ್ಯಕ್ತಪಡಿಸಿದೆ.

ಬಹ್ರೇನ್‌ನಲ್ಲಿ ನಡೆಯುವ ಈ ರೋಡ್‌ ಶೋನಲ್ಲಿ “Feels like Goa” ಎಂಬ ಅಭಿಯಾನವನ್ನು ಗೋವಾ ಪ್ರವಾಸೋದ್ಯಮ ಇಲಾಖೆ ನಡೆಸಲು ಸಿದ್ಧತೆಗಳನ್ನು ಕೈಗೊಂಡಿದೆ. ಗೋವಾ ರಾಜ್ಯದ ಹೊಸ ಪ್ರವಾಸೋದ್ಯಮ ಪರಿಕಲ್ಪನೆಗಳನ್ನು ಗಲ್ಫ್ ಮಾರುಕಟ್ಟೆಗೆ ಪರಿಚಯಿಸುವುದು ಈ ಅಭಿಯಾನದ ಮುಖ್ಯ ಗುರಿಯಾಗಿದೆ.

Bahrain tourism

ಈ ಕಾರ್ಯಕ್ರಮದಲ್ಲಿ Nocto Tourism (ಸುರಕ್ಷಿತ ನೈಟ್‌ಲೈಫ್ ಕೇಂದ್ರಿತ ಪ್ರವಾಸ), Jet-Setting (ಚಿತ್ರರಂಗ ಮತ್ತು ಸಿನೆಮಾ-ಪ್ರೇರಿತ ಪ್ರವಾಸ) ಮತ್ತು CalmCation (ಆರೋಗ್ಯ–ನೆಮ್ಮದಿಯ ಅನುಭವಗಳನ್ನು ನೀಡುವ ಪ್ರವಾಸ) ಎಂಬ ಮೂರು ಹೊಸ ಪ್ರವಾಸೋದ್ಯಮ ಪ್ರವೃತ್ತಿಗಳನ್ನು ಗೋವಾ ಪ್ರಚಾರಿಸಲು ಯೋಜನೆಗಳನ್ನು ರೂಪಿಸಿದೆ.

ಗೋವಾ ಪ್ರವಾಸೋದ್ಯಮ ನಿರ್ದೇಶಕ ಕೆದರ್ ನಾಯಕ್ ಮಾತನಾಡಿ, “ಗಲ್ಫ್ ಪ್ರದೇಶದ ಪ್ರವಾಸಿಗರು ಗುಣಮಟ್ಟ ಮತ್ತು ವೈವಿಧ್ಯತೆಯನ್ನು ಅಪೇಕ್ಷಿಸುತ್ತಾರೆ; ಅವರ ಅಪೇಕ್ಷೆಗಳನ್ನು ಗೋವಾ ರಾಜ್ಯವು ಪೂರೈಸಲು ಸಮರ್ಥವಾಗಿದೆ. ಬಹ್ರೇನ್ ರೋಡ್‌ಶೋ ನಮಗೆ ಆ ಮಾರುಕಟ್ಟೆಯೊಂದಿಗೆ ನೇರ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ” ಎಂದು ತಿಳಿಸಿದರು.

Soumya

Soumya

I am Soumya Shindhe, an engineering graduate with a strong passion for literature and journalism. I have contributed interview articles to Chittara cine magazine and possess keen interest in writing, communication, and creative expression, aspiring to grow professionally.

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...