ಪ್ರವಾಸಿಗರ ಗಮನ ಸೆಳೆಯುತ್ತಿರುವ ಇರಾನ್‌ನ ದ್ರಾಕ್ಷಿ ಹಬ್ಬ!
ಹಬ್ಬದ ಸಂದರ್ಭದಲ್ಲಿ ಸಾಂಪ್ರದಾಯಿಕ ಸಂಗೀತ ಮತ್ತು ನೃತ್ಯ, ಸ್ಥಳೀಯ ಆಹಾರಗಳ ಪ್ರದರ್ಶನ ಹಾಗೂ ಹಸ್ತಕಲಾ ವಸ್ತುಗಳ ಮಾರಾಟ ನಡೆಯುತ್ತದೆ. ಇದರಿಂದ ಪ್ರವಾಸಿಗರಿಗೆ ಇರಾನ್‌ನ ಗ್ರಾಮೀಣ ಜೀವನಶೈಲಿಯನ್ನು ಹತ್ತಿರದಿಂದ ಕಾಣುವ ಮತ್ತು ಅರಿಯುವ ಅವಕಾಶ ದೊರೆಯುತ್ತಿದೆ.
ಇರಾನ್‌ನ ಕರ್ಮಾನ್‌ಷಾಹ್ ಪ್ರಾಂತ್ಯದ ಸಹ್ನೆ ಜಿಲ್ಲೆಯ ಕಂಡೋಲೆ ಗ್ರಾಮದಲ್ಲಿ ನಡೆಯುವ ವಾರ್ಷಿಕ ದ್ರಾಕ್ಷಿ ಹಬ್ಬ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಗಮನ ಸೆಳೆಯುತ್ತಿದೆ. ಸ್ಥಳೀಯ ಕೃಷಿ ಪರಂಪರೆ ಹಾಗೂ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಪರಿಚಯಿಸುವ ಉದ್ದೇಶದಿಂದ ಆಯೋಜಿಸಲಾಗುವ ಈ ಹಬ್ಬವನ್ನು ರಾಷ್ಟ್ರ ಮಟ್ಟದ ಪ್ರವಾಸೋದ್ಯಮ ಕಾರ್ಯಕ್ರಮವಾಗಿ ಗುರುತಿಸಲಾಗಿದೆ.
ಈ ಹಬ್ಬವು, ದ್ರಾಕ್ಷಿ ಬೆಳೆಯುವ ಕೃಷಿಕರ ಶ್ರಮ ಮತ್ತು ಸಾಂಪ್ರದಾಯಿಕ ಕೃಷಿ ವಿಧಾನಗಳನ್ನು ಜನತೆಗೆ ಪರಿಚಯಿಸುವ ವೇದಿಕೆಯಾಗಿದ್ದು, ದೇಶೀಯ ಹಾಗೂ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ದ್ರಾಕ್ಷಿ ಕೊಯ್ಲು ಸಂಭ್ರಮ, ಸ್ಥಳೀಯ ಸಂಸ್ಕೃತಿ ಮತ್ತು ಜನಪದ ಆಚರಣೆಗಳು ಹಬ್ಬದ ಪ್ರಮುಖ ಆಕರ್ಷಣೆಗಳಾಗಿವೆ.

ಹಬ್ಬದ ಸಂದರ್ಭದಲ್ಲಿ ಸಾಂಪ್ರದಾಯಿಕ ಸಂಗೀತ ಮತ್ತು ನೃತ್ಯ, ಸ್ಥಳೀಯ ಆಹಾರಗಳ ಪ್ರದರ್ಶನ ಹಾಗೂ ಹಸ್ತಕಲಾ ವಸ್ತುಗಳ ಮಾರಾಟ ನಡೆಯುತ್ತದೆ. ಇದರಿಂದ ಪ್ರವಾಸಿಗರಿಗೆ ಇರಾನ್‌ನ ಗ್ರಾಮೀಣ ಜೀವನಶೈಲಿಯನ್ನು ಹತ್ತಿರದಿಂದ ಕಾಣುವ ಮತ್ತು ಅರಿಯುವ ಅವಕಾಶ ದೊರೆಯುತ್ತಿದೆ.
ಪ್ರವಾಸೋದ್ಯಮ ಅಧಿಕಾರಿಗಳ ಪ್ರಕಾರ, ಈ ದ್ರಾಕ್ಷಿ ಹಬ್ಬವು ಗ್ರಾಮಾಂತರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಜತೆಗೆ ಸ್ಥಳೀಯ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಹಳ್ಳಿಯ ನಿವಾಸಿಗಳಿಗೆ ಉದ್ಯೋಗ ಮತ್ತು ಆದಾಯದ ಹೊಸ ಅವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.