ಏರ್ ಟ್ಯಾಕ್ಸಿ ಹಾರಾಟದ ಕನಸಿಗೆ ಮುನ್ನುಡಿ!
SYLLA SYL-X1 ಎಂದು ಹೆಸರಿಸಲಾದ ಈ ಡೆಮೊನ್‌ಸ್ಟ್ರೇಟರ್ ವಿಮಾನವು ಅರ್ಧಗಾತ್ರದ eVTOL ಮಾದರಿಯಾಗಿದ್ದು, ಸುಮಾರು 7.5 ಮೀಟರ್ ಈಜ್‌ಸ್ಪ್ಯಾನ್ ಹೊಂದಿದೆ. ಭಾರತದಲ್ಲಿ ಖಾಸಗಿ ವಲಯದಿಂದ ಅಭಿವೃದ್ಧಿಪಡಿಸಲಾದ ಅತಿದೊಡ್ಡ eVTOL ಡೆಮೊನ್‌ಸ್ಟ್ರೇಟರ್ ಇದಾಗಿದ್ದು, ವಿಮಾನದ ರಚನಾ ಬಲ, ಎಲೆಕ್ಟ್ರಿಕ್ ಪ್ರೊಪಲ್ಷನ್ ವ್ಯವಸ್ಥೆ, ಸುರಕ್ಷತಾ ತಂತ್ರಜ್ಞಾನಗಳು ಹಾಗೂ ವಿವಿಧ ಘಟಕಗಳ ಸಮಗ್ರ ಕಾರ್ಯಕ್ಷಮತೆಯನ್ನು ಪರೀಕ್ಷಿಸಲು ಇದನ್ನು ಬಳಸಲಾಗುತ್ತಿದೆ.
ಮುಂದಿನ ತಲೆಮಾರಿನ ನಗರ ವಾಯು ಸಂಚಾರ ವ್ಯವಸ್ಥೆಯತ್ತ ಭಾರತ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಬೆಂಗಳೂರು ಮೂಲದ ಏರೋಸ್ಪೇಸ್ ಸ್ಟಾರ್ಟ್-ಅಪ್ ಸರ್ಲಾ ಏವಿಯೇಷನ್ ತನ್ನ ಎಲೆಕ್ಟ್ರಿಕ್ ಫ್ಲೈಯಿಂಗ್ ಟ್ಯಾಕ್ಸಿ (eVTOL) ಡೆಮೊನ್‌ಸ್ಟ್ರೇಟರ್ ವಿಮಾನದ ನೆಲಮಟ್ಟದ ಪರೀಕ್ಷೆಯನ್ನು ಆರಂಭಿಸಿದೆ.
SYLLA SYL-X1 ಎಂದು ಹೆಸರಿಸಲಾದ ಈ ಡೆಮೊನ್‌ಸ್ಟ್ರೇಟರ್ ವಿಮಾನವು ಅರ್ಧಗಾತ್ರದ eVTOL ಮಾದರಿಯಾಗಿದ್ದು, ಸುಮಾರು 7.5 ಮೀಟರ್ ಈಜ್‌ಸ್ಪ್ಯಾನ್ ಹೊಂದಿದೆ. ಭಾರತದಲ್ಲಿ ಖಾಸಗಿ ವಲಯದಿಂದ ಅಭಿವೃದ್ಧಿಪಡಿಸಲಾದ ಅತಿದೊಡ್ಡ eVTOL ಡೆಮೊನ್‌ಸ್ಟ್ರೇಟರ್ ಇದಾಗಿದ್ದು, ವಿಮಾನದ ರಚನಾ ಬಲ, ಎಲೆಕ್ಟ್ರಿಕ್ ಪ್ರೊಪಲ್ಷನ್ ವ್ಯವಸ್ಥೆ, ಸುರಕ್ಷತಾ ತಂತ್ರಜ್ಞಾನಗಳು ಹಾಗೂ ವಿವಿಧ ಘಟಕಗಳ ಸಮಗ್ರ ಕಾರ್ಯಕ್ಷಮತೆಯನ್ನು ಪರೀಕ್ಷಿಸಲು ಇದನ್ನು ಬಳಸಲಾಗುತ್ತಿದೆ.

ಈ ನೆಲ ಪರೀಕ್ಷೆಗಳು ವಿನ್ಯಾಸ ಮತ್ತು ಲ್ಯಾಬ್ ಮಟ್ಟದ ಅಧ್ಯಯನ ಹಂತವನ್ನು ಮೀರಿ ನೈಜ ವಿಮಾನ ಮಾನದಂಡದ ಪರೀಕ್ಷೆಗೆ ಯೋಜನೆಯನ್ನು ಕೊಂಡೊಯ್ಯುತ್ತವೆ. ಇದರ ಯಶಸ್ಸು ಮುಂದಿನ ಹಂತದಲ್ಲಿ ಪೂರ್ಣಗಾತ್ರದ eVTOL ವಿಮಾನದ ಅಭಿವೃದ್ಧಿಗೆ ದಾರಿಯಾಗಲಿದೆ ಎಂದು ಸಂಸ್ಥೆ ತಿಳಿಸಿದೆ.
ಸರ್ಲಾ ಏವಿಯೇಷನ್ ಮುಂದಿನ ಹಂತದಲ್ಲಿ ಸುಮಾರು 15 ಮೀಟರ್ ಈಜ್‌ಸ್ಪ್ಯಾನ್ ಹೊಂದಿರುವ ವಾಣಿಜ್ಯ eVTOL ವಿಮಾನವನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದೆ. ಕಂಪನಿ 2028ರೊಳಗೆ ನಗರದಿಂದ ನಗರಕ್ಕೆ ಸಂಚರಿಸುವ ಎಲೆಕ್ಟ್ರಿಕ್ ಏರ್ ಟ್ಯಾಕ್ಸಿ ಸೇವೆಗಳನ್ನು ಆರಂಭಿಸುವ ಗುರಿ ಹೊಂದಿದೆ.