Monday, December 8, 2025
Monday, December 8, 2025

ʼಹಾರ್ಟಿಕಲ್ಚರ್ ಟೂರಿಸಂʼ ಉತ್ತೇಜಿಸಲು ತಿಪ್ಪಗೊಂಡನಹಳ್ಳಿಯಲ್ಲಿ ಫಾರ್ಮ್ ಸ್ಥಾಪನೆ

ಈ ಫಾರ್ಮ್‌ನಲ್ಲಿ 200ಕ್ಕೂ ಹೆಚ್ಚು ರೀತಿಯ ಮರಗಳನ್ನು, ಔಷಧೀಯ ಸಸ್ಯಗಳನ್ನು ಮತ್ತು ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ಭೇಟಿ ನೀಡುವ ಆಸಕ್ತರು ತೋಟಗಾರಿಕೆಯ ಕಾರ್ಯವೈಖರಿಯನ್ನು ನೇರವಾಗಿ ಕಂಡು, ಆಳವಾಗಿ ಅರಿಯಬಹುದು ಎಂದು ಅಧಿಕಾರಿಗಳು ತಿಳಿಸಿದರು.

ಕರ್ನಾಟಕ ತೋಟಗಾರಿಕೆ ಇಲಾಖೆ ಮತ್ತು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ ನೆಲಮಂಗಲ ಹತ್ತಿರ 35 ಎಕರೆ ಭೂಮಿಯಲ್ಲಿ ʼತಿಪ್ಪೆಗೊಂಡನಹಳ್ಳಿ ಫಾರ್ಮ್‌ʼ ಅನ್ನು ಸಾರ್ವಜನಿಕರ ಭೇಟಿಗಾಗಿ ಸ್ಥಾಪಿಸಿವೆ. ಇದರ ಮೂಲಕ ಹಾರ್ಟಿಕಲ್ಚರ್-ಟೂರಿಸಂ ಉತ್ತೇಜಿಸುವುದು ನಮ್ಮ ಮುಖ್ಯ ಉದ್ದೇಶವೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಫಾರ್ಮ್‌ನಲ್ಲಿ 200ಕ್ಕೂ ಹೆಚ್ಚು ರೀತಿಯ ಮರಗಳನ್ನು, ಔಷಧೀಯ ಸಸ್ಯಗಳನ್ನು ಮತ್ತು ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ಭೇಟಿ ನೀಡುವ ಆಸಕ್ತರು ತೋಟಗಾರಿಕೆಯ ಕಾರ್ಯವೈಖರಿಯನ್ನು ನೇರವಾಗಿ ಕಂಡು, ಆಳವಾಗಿ ಅರಿಯಬಹುದು ಎಂದೂ ಅವರು ತಿಳಿಸಿದರು.

ಫಾರ್ಮ್‌ನ ವಿನ್ಯಾಸವನ್ನು ವೀಕ್ಷಿಸುವುದರ ಜತೆಗೆ ಪ್ರವಾಸಿಗರು ಇಲ್ಲಿ ನೇಚರ್‌ ವಾಕ್‌, ಸೈಕ್ಲಿಂಗ್‌, ಪಾಟ್‌ ಮೇಕಿಂಗ್‌, ವರ್ಮಿಕಾಂಪೋಸ್ಟಿಂಗ್‌ ಮಾಡುವ ವಿಧಾನವನ್ನು ಕಂಡರಿಯಬಹುದಷ್ಟೇ ಅಲ್ಲದೆ, ನರ್ಸರಿ ಚಟುವಟಿಕೆಗಳಲ್ಲಿಯೂ ಕೂಡ ಭಾಗವಹಿಸಬಹುದು. ಈ ಎಲ್ಲವೂ ಪ್ರವಾಸಿಗರಿಗೆ ಅತ್ಯುತ್ತಮ ಅನುಭವ ನೀಡುವುದರೊಂದಿಗೆ ತೋಟಗಾರಿಕೆ, ಜೈವಿಕ ಕೃಷಿಯ ಬಗ್ಗೆ ಅಪಾರ ಜ್ಞಾನವನ್ನು ನೀಡುತ್ತದೆ.

Soumya

Soumya

I am Soumya Shindhe, an engineering graduate with a strong passion for literature and journalism. I have contributed interview articles to Chittara cine magazine and possess keen interest in writing, communication, and creative expression, aspiring to grow professionally.

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..