ಕರ್ನಾಟಕ ಪ್ರವಾಸೋದ್ಯಮ ಸೊಸೈಟಿಗೆ ಹೊಸ ನಿರ್ವಾಹಕ ಮಂಡಳಿ
ಕರ್ನಾಟಕ ಟೂರಿಸಂ ಸೊಸೈಟಿ (KTS) ತನ್ನ 6ನೇ ವಾರ್ಷಿಕ ಸಾಮಾನ್ಯ ಸಭೆ (AGM) ಯನ್ನು ಸೆಪ್ಟೆಂಬರ್ 25 ರಂದು ಯಶಸ್ವಿಯಾಗಿ ನಡೆಸಿತು. ಈ ಸಂದರ್ಭದಲ್ಲಿ ಮುಂದಿನ ಎರಡು ವರ್ಷಗಳ ಅವಧಿಗೆ ಕಾರ್ಯಕಾರಿ ಸಮಿತಿಗೆ ಚುನಾಯಿಸಲಾಯಿತು.
ಕರ್ನಾಟಕದ ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರದ ತಜ್ಞರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಪ್ರಮುಖ ಸಂಘಟನೆಯಾದ ಕರ್ನಾಟಕ ಟೂರಿಸಂ ಸೊಸೈಟಿ (KTS) ತನ್ನ 6ನೇ ವಾರ್ಷಿಕ ಸಾಮಾನ್ಯ ಸಭೆ (AGM) ಸೆಪ್ಟೆಂಬರ್ 25 ರಂದು ಯಶಸ್ವಿಯಾಗಿ ನಡೆಸಿತು. ಈ ಸಂದರ್ಭದಲ್ಲಿ ಮುಂದಿನ ಎರಡು ವರ್ಷಗಳ ಅವಧಿಗೆ ಕಾರ್ಯಕಾರಿ ಸಮಿತಿ ಮತ್ತು ಆಯಾ ಹುದ್ದೆಯ ಪದಾಧಿಕಾರಿಗಳ ಹುದ್ದೆಗೆ ಆಯ್ಕೆ ಪ್ರಕೃಯೆ ನಡೆಯಿತು.
ಹೊಸ ತಂಡವು, ಕರ್ನಾಟಕವನ್ನು ಭಾರತದ ಪ್ರಮುಖ ಪ್ರವಾಸೋದ್ಯಮ ತಾಣವಾಗಿ ಬೆಳೆಸುವ ದಿಸೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೊಂದಿಗೆ ಕೈಜೋಡಿಸಿ, ಸಂಘಟನೆಯ ದೃಷ್ಟಿಕೋನ ಮತ್ತು ಯೋಜನೆಗಳನ್ನು ಇನ್ನಷ್ಟು ಬಲಪಡಿಸುವುದಾಗಿ ತಿಳಿಸಿದೆ.
ಸಂಸ್ಥೆಯ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಕೆ. ಶ್ಯಾಮರಾಜು ಅವರು ಮಾತನಾಡಿ, “ಕರ್ನಾಟಕ ಟೂರಿಸಂ ಸೊಸೈಟಿಯ ಅಧ್ಯಕ್ಷನಾಗಿ ನಿಮ್ಮೆಲ್ಲರನ್ನು ಹೃತ್ಪೂರ್ವಕವಾಗಿ ಸ್ವಾಗತಿಸುವುದು ನನಗೆ ಅಪಾರ ಸಂತೋಷ ಮತ್ತು ಹೆಮ್ಮೆಯ ವಿಷಯ. ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರದ ಚುರುಕಾದ ಬೆಳವಣಿಗೆಗಾಗಿ ಮತ್ತು ಕರ್ನಾಟಕದ ಪ್ರವಾಸೋದ್ಯಮವನ್ನು ಮತ್ತಷ್ಟು ಉನ್ನತ ಹಂತಕ್ಕೇರಿಸಲು ನಾವು ಕೈ ಜೋಡಿಸಿ ಕೆಲಸ ಮಾಡುಬೇಕು” ಎಂದು ತಿಳಿಸಿದರು.