Friday, October 3, 2025
Friday, October 3, 2025

ಮಾಲ್ಡೀವ್ಸ್‌ ಪ್ರವಾಸೋದ್ಯಮಕ್ಕೆ ನೂತನ ರಾಯಭಾರಿ

ವಿವಾಹದ ನಂತರ ಚಿತ್ರರಂಗದಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದ ಬಾಲಿವುಡ್ ನಟಿ ಕತ್ರಿನಾ ಕೈಫ್‌ ಮತ್ತೆ ಸುದ್ದಿಯಲ್ಲಿದ್ದಾರೆ. ಮಾಲ್ಡೀವ್ಸ್‌ನ ಜಾಗತಿಕ ಪ್ರವಾಸೋದ್ಯಮ ರಾಯಭಾರಿಯಾಗುವ ಮೂಲಕ, ಪ್ರವಾಸಿಗರನ್ನು ಆಕರ್ಷಿಸಲು ನೆರವಾಗಲಿದ್ದಾರೆ.

ಬಾಲಿವುಡ್‌ನಲ್ಲಿ ಬಹು ಬೇಡಿಕೆಯ ನಟಿ ಕತ್ರಿನಾ ಕೈಫ್‌ ಸದ್ಯ ಮಾಲ್ಡೀವ್ಸ್‌ನ ಜಾಗತಿಕ ಪ್ರವಾಸೋದ್ಯಮ ರಾಯಭಾರಿಯಾಗಿದ್ದಾರೆ. ಆ ದೇಶದ ಮಾರ್ಕೆಟಿಂಗ್ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಈ ವಿಚಾರವನ್ನು ಸೋಶಿಯಲ್‌ ಮೀಡಿಯಾದಲ್ಲಿ ಅಧಿಕೃತವಾಗಿ ಪ್ರಕಟಿಸಿದೆ. ಕತ್ರಿನಾ ಕೈಫ್ ಅವರನ್ನು ತಮ್ಮ ಜಾಗತಿಕ ಬ್ರಾಂಡ್ ರಾಯಭಾರಿಯಾಗಿ ನೇಮಿಸಲು ತುಂಬಾ ಸಂತೋಷವಾಗಿದೆ ಎಂದು ಹೇಳಿದರು.

ಮಾಲ್ಡೀವ್ಸ್‌ ಪ್ರಕಟಣೆಯಲ್ಲಿ ಏನಿದೆ?

"ಜಾಗತಿಕವಾಗಿ ಗಮನ ಸೆಳೆದ ಐಕಾನ್ ಕತ್ರಿನಾ ಕೈಫ್‌ ಅವರ ಖ್ಯಾತಿ ಎಲ್ಲೆಡೆ ವ್ಯಾಪಿಸಿದೆ. ಬ್ಲಾಕ್‌ ಬ್ಲಸ್ಟರ್‌ ಚಲನಚಿತ್ರಗಳ ಜತೆಗೆ ಅನೇಕ ಪ್ರತಿಷ್ಠಿತ ಪ್ರಶಸ್ತಿ ಮುಡುಗೇರಿಸಿಕೊಂಡಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಅವರ ಕೊಡುಗೆಗಳು ಅನನ್ಯವಾದುದು" ಎಂದು ಮಾಲ್ಡೀವ್ಸ್‌ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರವಾಸಿಗರನ್ನು ಆಕರ್ಷಿಸಲು ಸಹಾಯಕ

ʼʼಅವರ ಜನಪ್ರಿಯತೆ, ಜಾಗತಿಕ ಮನರಂಜನಾ ಉದ್ಯಮದಲ್ಲಿನ ಅವರ ಪ್ರಭಾವದೊಂದಿಗೆ ಸೇರಿ ಪ್ರಪಂಚದಾದ್ಯಂತ, ವಿಶೇಷವಾಗಿ ಭಾರತದಿಂದ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ನಮಗೆ ಸಹಾಯ ಮಾಡುತ್ತದೆʼʼ ಎಂದು ಮಾಲ್ಡೀವ್ಸ್‌ ಮಾರ್ಕೆಟಿಂಗ್‌ ಮತ್ತು ಪಬ್ಲಿಕ್‌ ರಿಲೇಸನ್ಸ್‌ ಕಾರ್ಪೋರೇಷನ್‌ನ ವ್ಯವಸ್ಥಾಪಕ ನಿರ್ದೇಶಕ ಥೋಯಿಬ್‌ ಮೊಹಮ್ಮದ್‌ ತಿಳಿಸಿದ್ದಾರೆ.

katrina

ಕತ್ರಿನಾ ಕೈಫ್‌ ಹೇಳಿದ್ದೇನು?

ಮಾಲ್ಡೀವ್ಸ್‌ನ 'ಸನ್ನಿ ಸೈಡ್ ಆಫ್ ಲೈಫ್'ನ ಬ್ರ್ಯಾಂಡ್‌ ಅಂಬಾಸಿಡರ್ ಆಗಿ ಕಾರ್ಯ ನಿರ್ವಹಿಸಲು ಸಂತಸವಾಗುತ್ತಿದೆ ಎಂದು ಲ್ತಿನಾ ಕೈಫ್‌ ತಿಳಿಸಿದ್ದಾರೆ. "ಮಾಲ್ಡೀವ್ಸ್ ಐಷಾರಾಮಿ ಮತ್ತು ನೈಸರ್ಗಿಕ ಸೌಂದರ್ಯವನ್ನು ಪ್ರತಿನಿಧಿಸುತ್ತದೆ - ಇದು ಸೊಬಗು, ಶಾಂತಿಯಿಂದ ಕೂಡಿರುವ ಅಪರೂಪದ ಸ್ಥಳ" ಎಂದು ಹೇಳಿದ್ದಾರೆ. ʼʼಈ ಸಹಯೋಗವು ಪ್ರವಾಸಿಗರಿಗೆ "ಅತ್ಯುತ್ತಮ ಪ್ರಯಾಣದ ಅನುಭವಗಳನ್ನು ನೀಡುತ್ತದೆʼʼ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಸಂಬಂಧ ಸುಧಾರಿಸುತ್ತಾ?

ಕಳೆದ ವರ್ಷ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದನ್ನು ಮಾಲ್ಡೀವ್ಸ್‌ ಟೀಕಿಸಿದ ಬಳಿಕ ಎರಡೂ ದೇಶಗಳ ನಡುವಿನ ಸಂಬಂಧ ಹದಗೆಟ್ಟಿದೆ. ಜತೆಗೆ ಅಲ್ಲಿಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲಿ ಗನಣೀಯ ಕುಸಿತ ಕಂಡಿದೆ. ಇದರ ಮಧ್ಯೆಯೇ ಮಾಲ್ಡೀವ್ಸ್‌ ಈ ನಿರ್ಧಾರ ತೆಗೆದುಕೊಂಡಿದ್ದು, ಭಾರತ ಹಾಗೂ ಮಾಲ್ಡೀವ್ಸ್‌ ನಡುವಿನ ಸಂಬಂಧವನ್ನು ಬೆಸೆಯಲು ಕಾರಣವಾಗಲಿದೆ ಎನ್ನುತ್ತವೆ ಮೂಲಗಳು.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...