Monday, December 8, 2025
Monday, December 8, 2025

ಭಾರತೀಯ ಪ್ರವಾಸಿಗರಿಗಾಗಿ ದಕ್ಷಿಣ ಆಫ್ರಿಕಾದಿಂದ ವಿನೂತನ ಹೆಜ್ಜೆ

ಇಲ್ಲಿಯವರೆಗೂ ತುಂಬಾ ಕ್ಲಿಷ್ಟಕರವಾಗಿದ್ದ ವೀಸಾ ವ್ಯವಸ್ಥೆಯನ್ನು ಸುಗುಮಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮಗಳನ್ನು ಕೈಗೊಳ್ಳುತ್ತಿದೆ. ಹಾಗೆಯೇ Trusted Tour Operator Scheme (TTOS) ಮತ್ತು Electronic Travel Authorisation (ETA) ಎಂಬ ಎರಡು ಹೊಸ ಯೋಜನೆಗಳನ್ನೂ ಜಾರಿಗೊಳಿಸುತ್ತಿದೆ. ಈ ಮೂಲಕ ಭಾರತೀಯ ಪ್ರವಾಸಿಗರು ಟೂರ್‌ ಆಪರೇಟರ್‌ಗಳ ಬಳಿಯೇ ನೋಂದಣಿ ಮಾಡಿಸಿ, ಗ್ರುಪ್‌ ವೀಸಾ ಅಥವಾ ಟ್ರಾವೆಲ್‌ ವೀಸಾ ಪಡೆಯಬಹುದಾಗಿದೆ.

ಭಾರತೀಯ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ದಕ್ಷಿಣ ಆಫ್ರಿಕಾ ಸರಕಾರವು ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ವಿನೂತನ ನೀತಿಗಳನ್ನು ತರಲು ಮುಂದಾಗಿದೆ. ವೀಸಾ ಪ್ರಕ್ರಿಯೆಯನ್ನು ವೇಗಗೊಳಿಸುವುದು, ನೇರ ವಿಮಾನ ಸೇವೆಗಳನ್ನು ಪ್ರಾರಂಭಿಸುವುದು ಮತ್ತು ಭಾರತದ ವಿವಿಧ ನಗರಗಳಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವಂಥ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಕ್ರಮಗಳನ್ನು ಕೈಗೊಳ್ಳಲು ನಮ್ಮ ಸರಕಾರ ಮುಂದಾಗಿರುವುದಾಗಿ ದಕ್ಷಿಣ ಆಫ್ರಿಕಾ ಪ್ರವಾಸೋದ್ಯಮ ಸಚಿವೆ ಪ್ಯಾಟ್ರಿಶಿಯಾ ಡಿ ಲಿಲ್ಲಿ ತಿಳಿಸಿದ್ದಾರೆ.

South Africa Pushes for Faster Visas, Direct Flights to Boost Indian Tourist Arrivals


ಇಲ್ಲಿಯವರೆಗೂ ತುಂಬಾ ಕ್ಲಿಷ್ಟಕರವಾಗಿದ್ದ ವೀಸಾ ವ್ಯವಸ್ಥೆಯನ್ನು ಸುಗುಮಗೊಳಿಸುವ ನಿಟ್ಟಿನಲ್ಲಿ ಸರಕಾರ ಕ್ರಮಗಳನ್ನು ಕೈಗೊಳ್ಳುತ್ತಿದೆ. ಹಾಗೆಯೇ Trusted Tour Operator Scheme (TTOS) ಮತ್ತು Electronic Travel Authorisation (ETA) ಎಂಬ ಎರಡು ಹೊಸ ಯೋಜನೆಗಳನ್ನೂ ಜಾರಿಗೊಳಿಸುತ್ತಿದೆ. ಈ ಮೂಲಕ ಭಾರತೀಯ ಪ್ರವಾಸಿಗರು ಟೂರ್‌ ಆಪರೇಟರ್‌ಗಳ ಬಳಿಯೇ ನೋಂದಣಿ ಮಾಡಿಸಿ, ಗ್ರೂಪ್‌ ವೀಸಾ ಅಥವಾ ಟ್ರಾವೆಲ್‌ ವೀಸಾ ಪಡೆಯಬಹುದಾಗಿದೆ. ಇದರ ಪರಿಣಾಮವಾಗಿ ವೀಸಾ ಪ್ರಕ್ರಿಯೆ ಸುಲಭವಾಗಿ ಮತ್ತು ಅವರ ಸಮಯವೂ ಉಳಿತಾಯವಾಗುವುದು.

ನೇರ ವಿಮಾನ ಸೇವೆಯಿಲ್ಲದ ಕಾರಣ ಹಲವಾರು ಭಾರತೀಯ ಪ್ರವಾಸಿಗರು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದರು. ಹೀಗಾಗಿ, ದಕ್ಷಿಣ ಆಫ್ರಿಕಾ ಸರಕಾರ ಹಾಗೂ ಆ ದೇಶದ ವಿಮಾನಯಾನ ಸಂಸ್ಥೆಗಳು ಕೈಜೋಡಿಸಿ ಹಲವು ಮಹತ್ತರ ಕಾರ್ಯಸೂಚಿಗಳನ್ನು ರೂಪಿಸುತ್ತಿದ್ದು, ದಕ್ಷಿಣ ಆಫ್ರಿಕಾ ದೇಶಕ್ಕೆ ಭಾರತದಿಂದ ನೇರ ವಿಮಾನ ಸೇವೆ ಬಹುಬೇಗ ಆರಂಭಗೊಳ್ಳಲಿದೆ.

Soumya

Soumya

I am Soumya Shindhe, an engineering graduate with a strong passion for literature and journalism. I have contributed interview articles to Chittara cine magazine and possess keen interest in writing, communication, and creative expression, aspiring to grow professionally.

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...