ಚಂಡಮಾರುತದ ಅಬ್ಬರಕ್ಕೆ ಕುಸಿದ ಲಿಬರ್ಟಿ ಪ್ರತಿಮೆ
ಸುಮಾರು 24 ಮೀಟರ್ ಎತ್ತರದ ಈ ಪ್ರತಿಮೆಯನ್ನು, ಅಮೆರಿಕಾದ ನ್ಯೂಜರ್ಸಿಯಲ್ಲಿರುವ ʼಸ್ಟ್ಯಾಚ್ಯು ಆಫ್ ಲಿಬರ್ಟಿʼ ಮಾದರಿಯಲ್ಲಿ ಬ್ರೆಜಿಲ್‌ನ ಪ್ರಸಿದ್ಧ ಹಾವನ್ (Havan) ಮೆಗಾಸ್ಟೋರ್‌ನ ಹೊರಭಾಗದಲ್ಲಿ ಸ್ಥಾಪಿಸಲಾಗಿತ್ತು. ಇತ್ತೀಚೆಗೆ ಈ ಪ್ರದೇಶದಲ್ಲಿ ಗಂಟೆಗೆ 80–90 ಕಿಲೋಮೀಟರ್ ವೇಗದಲ್ಲಿ ಚಂಡಮಾರುತದ ಗಾಳಿ ಬೀಸಿದ್ದರಿಂದ ಪ್ರತಿಮೆ ವಾಲಿ ನೆಲಕ್ಕುರುಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬ್ರೆಜಿಲ್‌ನ ದಕ್ಷಿಣ ಭಾಗದ ರಿಯೊ ಗ್ರಾಂಡೆ ಡು ಸುಲ್ ರಾಜ್ಯದ ಗ್ವೈಬಾ ನಗರದಲ್ಲಿ ಸ್ಥಾಪಿಸಲಾಗಿದ್ದ ಲಿಬರ್ಟಿ ಪ್ರತಿಮೆ ಚಂಡಮಾರುತದ ಅಬ್ಬರಕ್ಕೆ ಕುಸಿದಬಿದ್ದ ಘಟನೆ ನಡೆದಿದೆ.
ಸುಮಾರು 24 ಮೀಟರ್ ಎತ್ತರದ ಈ ಪ್ರತಿಮೆಯನ್ನು, ಅಮೆರಿಕಾದ ನ್ಯೂಜರ್ಸಿಯಲ್ಲಿರುವ ʼಸ್ಟ್ಯಾಚ್ಯು ಆಫ್ ಲಿಬರ್ಟಿʼ ಮಾದರಿಯಲ್ಲಿ ಬ್ರೆಜಿಲ್‌ನ ಪ್ರಸಿದ್ಧ ಹಾವನ್ (Havan) ಮೆಗಾಸ್ಟೋರ್‌ನ ಹೊರಭಾಗದಲ್ಲಿ ಸ್ಥಾಪಿಸಲಾಗಿತ್ತು. ಇತ್ತೀಚೆಗೆ ಈ ಪ್ರದೇಶದಲ್ಲಿ ಗಂಟೆಗೆ 80–90 ಕಿಲೋಮೀಟರ್ ವೇಗದಲ್ಲಿ ಚಂಡಮಾರುತದ ಗಾಳಿ ಬೀಸಿದ್ದರಿಂದ ಪ್ರತಿಮೆ ವಾಲಿ ನೆಲಕ್ಕುರುಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಖಾಲಿಯಿದ್ದ ವಾಹನ ನಿಲುಗಡೆ ಪ್ರದೇಶದಲ್ಲಿ ಪ್ರತಿಮೆ ಕುಸಿದು ಬಿದ್ದಿದ್ದರಿಂದ ಯಾವುದೇ ಜೀವಹಾನಿಯಾಗಿಲ್ಲ. ಘಟನೆಯ ವೇಳೆ ಪ್ರತಿಮೆ ಕುಸಿಯುವುದನ್ನು ಸೆರೆಹಿಡಿದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದ್ದು, ಸಾರ್ವಜನಿಕರ ಗಮನ ಸೆಳೆದಿದೆ.
ಘಟನೆಯ ಬಳಿಕ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಹಾಗೂ ತುರ್ತು ಸೇವಾ ತಂಡಗಳು ಪ್ರದೇಶವನ್ನು ಸೀಲ್ ಮಾಡಿ, ಸುರಕ್ಷತಾ ನಿಯಮಗಳ ಪ್ರಕಾರ ಕ್ರಮಗಳನ್ನು ತೆಗೆದುಕೊಂಡರು.