ಡಿ.14 ರಿಂದ ಟೂರ್ ಆಫ್ ನೀಲಗಿರೀಸ್
ಡಿಸೆಂಬರ್ 14 ರಂದು ಮಂಗಳೂರಿನ ಸಮ್ಮರ್ ಸ್ಯಾಂಡ್ಸ್ ಬೀಚ್ ರೆಸಾರ್ಟ್ನಿಂದ ಪ್ರಾರಂಭವಾಗುವ ಯಾತ್ರೆಯಲ್ಲಿ ಸೈಕ್ಲಿಸ್ಟ್ ಗಳು ವಿರಾಜಪೇಟೆ, ಸುಲ್ತಾನ್ ಬತ್ತೇರಿಯ ಮೂಲಕ 3ನೇ ದಿನ ಊಟಿ ತಲುಪಲಿದ್ದಾರೆ.ಒಂದು ದಿನದ ವಿಶ್ರಾಂತಿಯ ನಂತರ, 5, 6 ಮತ್ತು 7 ನೇ ದಿನಗಳಲ್ಲಿ ಸೈಕ್ಲಿಸ್ಟ್ ಗಳು ಊಟಿಯ ಅದ್ಭುತ ಹೊರವಲಯದಲ್ಲಿ 3 ವಿಭಿನ್ನ ಲೂಪ್‍ಗಳಲ್ಲಿ ಪೆಡಲ್ ಮಾಡಲಿದ್ದು, ಡಿಸೆಂಬರ್ 20 ರಂದು ಊಟಿಯಲ್ಲಿ ಕೊನೆಗೊಳ್ಳುತ್ತದೆ ಎಂದು ಟೂರ್ ಆಫ್ ನೀಲ್ ಗಿರೀಸ್‌ನ ಸಹ-ಸಂಸ್ಥಾಪಕ ದೀಪಕ್ ಮಜಿಪಾಟೀಲ್ ಹೇಳಿದ್ದಾರೆ.
ಭಾರತದ ಅತಿದೊಡ್ಡ ಮತ್ತು ಅತ್ಯಂತ ಜನಪ್ರಿಯ ಸೈಕಲ್ ಯಾತ್ರೆಯಾದ ಟೂರ್ ಆಫ್ ನೀಲಗಿರೀಸ್‍ನ 16ನೇ ಆವೃತ್ತಿ ಈ ಬಾರಿ ಮಂಗಳೂರಿನಿಂದ ಆರಂಭವಾಗಲಿದೆ. ಡಿಸೆಂಬರ್14 ರಿಂದ 20ರವರೆಗೆ ನಡೆಯುವ ಈ ಯಾತ್ರೆಯಲ್ಲಿ 110 ಸೈಕ್ಲಿಸ್ಟ್ ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ರಮಣೀಯ ಪರಿಸರದ ಮೂಲಕ 700ಕ್ಕೂ ಅಧಿಕ ಕಿಮೀ ದೂರ ಸಂಚರಿಸಲಿದ್ದಾರೆ. ಡಿಸೆಂಬರ್ 14 ರಂದು ಮಂಗಳೂರಿನ ಸಮ್ಮರ್ ಸ್ಯಾಂಡ್ಸ್ ಬೀಚ್ ರೆಸಾರ್ಟ್ನಿಂದ ಪ್ರಾರಂಭವಾಗುವ ಯಾತ್ರೆಯಲ್ಲಿ ಸೈಕ್ಲಿಸ್ಟ್ ಗಳು ವಿರಾಜಪೇಟೆ, ಸುಲ್ತಾನ್ ಬತ್ತೇರಿಯ ಮೂಲಕ 3ನೇ ದಿನ ಊಟಿ ತಲುಪಲಿದ್ದಾರೆ.ಒಂದು ದಿನದ ವಿಶ್ರಾಂತಿಯ ನಂತರ, 5, 6 ಮತ್ತು 7 ನೇ ದಿನಗಳಲ್ಲಿ ಸೈಕ್ಲಿಸ್ಟ್ ಗಳು ಊಟಿಯ ಅದ್ಭುತ ಹೊರವಲಯದಲ್ಲಿ 3 ವಿಭಿನ್ನ ಲೂಪ್‍ಗಳಲ್ಲಿ ಪೆಡಲ್ ಮಾಡಲಿದ್ದು, ಡಿಸೆಂಬರ್ 20 ರಂದು ಊಟಿಯಲ್ಲಿ ಕೊನೆಗೊಳ್ಳುತ್ತದೆ ಎಂದು ಟೂರ್ ಆಫ್ ನೀಲ್ ಗಿರೀಸ್‌ನ ಸಹ-ಸಂಸ್ಥಾಪಕ ದೀಪಕ್ ಮಜಿಪಾಟೀಲ್ ಹೇಳಿದ್ದಾರೆ. ಡಿಸೆಂಬರ್ 15 ರಂದು 110 ಸೈಕ್ಲಿಸ್ಟ್ ಗಳು ವಿರಾಜಪೇಟೆಯ ಮುಖ್ಯ ರಸ್ತೆಯಲ್ಲಿ ಸಾಗುತ್ತಾರೆ. ಈ ಮೂಲಕ ವಿರಾಜಪೇಟೆಯಿಂದ ಕೇರಳಕ್ಕೆ ಹೋಗಲು ಊಟಿಯತ್ತ ಸೈಕಲ್ ಯಾತ್ರೆ ಸಾಗಲಿದೆ.

ಈ ಮೊದಲು ಬೆಂಗಳೂರು ಹಾಗೂ ಮೈಸೂರಿನಿಂದ ಆರಂಭವಾಗುತ್ತಿದ್ದ ಈ ಜನಪ್ರಿಯ ಯಾತ್ರೆ ಇದೇ ಮೊದಲ ಬಾರಿಗೆ ಮಂಗಳೂರಿನಿಂದ ಚಾಲನೆಗೊಳ್ಳುತ್ತಿದೆ. ಟಿಎಫ್‍ಎನ್‍ನಲ್ಲಿ 9 ಮಹಿಳೆಯರು ಮತ್ತು 18 ವಿದೇಶಿ ಸೈಕ್ಲಿಸ್ಟ್ ಗಳು ಸೇರಿದಂತೆ 110 ಭಾಗವಹಿಸಲಿದ್ದಾರೆ. ಸಮುದ್ರಮಟ್ಟದಿಂದ 13500 ಮೀಟರ್ ಎತ್ತರಕ್ಕೆ ಪ್ರಯಾಣ ಕೈಗೊಳ್ಳುವುದು ವಿಶೇಷ.
ಮೂರು ಪ್ರಸಿದ್ಧ ವನ್ಯಜೀವಿ ಅಭಯಾರಣ್ಯಗಳು ಮತ್ತು ನೀಲಗಿರಿ ಜಿಲ್ಲೆಯ ಪ್ರಾಚೀನ ಗ್ರಾಮಾಂತರವನ್ನು ಒಳಗೊಂಡಂತೆ ನೀಲಗಿರಿ ಜೀವಗೋಳದ ಮೂಲಕ ಸೈಕ್ಲಿಂಗ್ ಮಾಡುವ ರೋಮಾಂಚನವು ಪ್ರವಾಸದ ಪ್ರಮುಖ ಅಂಶವಾಗಿದೆ. ಈ ಯಾತ್ರೆಯ ಮೂಲಕ ಭಾರತವು ಜಾಗತಿಕ ಸೈಕ್ಲಿಂಗ್ ನಕ್ಷೆಯಲ್ಲಿ ಗುರುತಿಸಲ್ಪಟ್ಟಿದ್ದು , ಭಾರತದ ಅತಿದೊಡ್ಡ ಸೈಕಲ್ ಪ್ರವಾಸವಾಗಿ ಹೊರಹೊಮ್ಮಿದೆ.