Monday, December 8, 2025
Monday, December 8, 2025

30ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳ ಸ್ಥಾಪನೆಗೆ ಮುಂದಾದ ವಿಯೆಟ್ನಾಂ

ಈ ಯೋಜನೆಗೆ ಮಾಂಗ್‌ ದೇನ್ ಮತ್ತು ವಾನ್‌ ಫೊಂಗ್‌ ಎಂಬ ಎರಡು ಹೊಸ ವಿಮಾನ ನಿಲ್ದಾಣಗಳನ್ನು ಸೇರಿಸಿರುವುದು ಪ್ರಮುಖ ಹೆಜ್ಜೆಯಾಗಿದೆ. ಅತಿ ಎತ್ತರದ ಪ್ರದೇಶ ಮತ್ತು ಕಡಲತೀರ ಪ್ರದೇಶಗಳನ್ನು ಸಂಪರ್ಕಿಸುವ ಈ ವಿಮಾನ ನಿಲ್ದಾಣಗಳು ಸ್ಥಳೀಯ ಪ್ರವಾಸೋದ್ಯಮವನ್ನು ಉತ್ತೇಜಿಸುವುದರೊಂದಿಗೆ, ದೂರದ ಪ್ರದೇಶಗಳಿಗೂ ಉತ್ತಮ ಸಂಪರ್ಕ ಒದಗಿಸಲಿವೆ.

ವಿಯೆಟ್ನಾಂ ತನ್ನ ವಿಮಾನಯಾನ ಸಂಪರ್ಕವನ್ನು ವಿಸ್ತರಿಸಲು ಮಹತ್ವಾಕಾಂಕ್ಷಿ ಯೋಜನೆಯನ್ನು ರೂಪಿಸಿದೆ. ದೇಶದ ನಾಗರಿಕ ವಿಮಾನಯಾನ ಪ್ರಾಧಿಕಾರ (CAAV) ಪ್ರಕಟಿಸಿರುವ ಹೊಸ ಮಾಸ್ಟರ್ ಪ್ಲಾನ್‌ನ ಪ್ರಕಾರ, 2030ರೊಳಗೆ 30ಕ್ಕೂ ಹೆಚ್ಚು ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸುವ ಗುರಿ ಹೊಂದಿದೆ. ಈ ಮೂಲಕ ದೇಶಕ್ಕೆ ಬರುವ ಪ್ರಯಾಣಿಕರ ಸಂಖ್ಯೆಯನ್ನು ವರ್ಷಕ್ಕೆ 300 ಮಿಲಿಯನ್‌ ಮಟ್ಟಕ್ಕೆ ಏರಿಸುವ ಉದ್ದೇಶ ಸರಕಾರ ಹೊಂದಿದೆ.

Vietnam aviation

ಈ ಯೋಜನೆಗೆ ಮಾಂಗ್‌ ದೇನ್ ಮತ್ತು ವಾನ್‌ ಫೊಂಗ್‌ ಎಂಬ ಎರಡು ಹೊಸ ವಿಮಾನ ನಿಲ್ದಾಣಗಳನ್ನು ಸೇರಿಸಿರುವುದು ಪ್ರಮುಖ ಹೆಜ್ಜೆಯಾಗಿದೆ. ಅತಿ ಎತ್ತರದ ಪ್ರದೇಶ ಮತ್ತು ಕಡಲತೀರ ಪ್ರದೇಶಗಳನ್ನು ಸಂಪರ್ಕಿಸುವ ಈ ವಿಮಾನ ನಿಲ್ದಾಣಗಳು ಸ್ಥಳೀಯ ಪ್ರವಾಸೋದ್ಯಮವನ್ನು ಉತ್ತೇಜಿಸುವುದರೊಂದಿಗೆ, ದೂರದ ಪ್ರದೇಶಗಳಿಗೂ ಉತ್ತಮ ಸಂಪರ್ಕ ಒದಗಿಸಲಿವೆ.

ಹೊಸ ವಿಮಾನ ನಿಲ್ದಾಣಗಳ ಸ್ಥಾಪನೆ ದೇಶದ ಒಳನಾಡು ಮತ್ತು ಅಂತಾರಾಷ್ಟ್ರೀಯ ಸಂಚಾರಕ್ಕೆ ಬಹಳ ಉಪಯುಕ್ತವಾಗಿದ್ದು, ಪ್ರವಾಸಿಗರು, ಉದ್ಯಮಿಗಳು ಮತ್ತು ಬಿಸಿನೆಸ್‌ ಟ್ರಾವೆಲರ್ಸ್‌ಗಳಗೆ ಅನುಕೂಲ ಕಲ್ಪಿಸಿಕೊಡುತ್ತದೆ. ಪ್ರವಾಸೋದ್ಯಮವು ವೇಗವಾಗಿ ಬೆಳೆಯುತ್ತಿರುವ ಈ ಸಂದರ್ಭದಲ್ಲಿ, ಹೋಟೆಲ್, ಟ್ರಾವೆಲ್ ಮತ್ತು ಆತಿಥೇಯ ಕ್ಷೇತ್ರಕ್ಕೆ ಈ ಯೋಜನೆ ಹೆಚ್ಚಿನ ಆರ್ಥಿಕ ಲಾಭ ತರಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Soumya

Soumya

I am Soumya Shindhe, an engineering graduate with a strong passion for literature and journalism. I have contributed interview articles to Chittara cine magazine and possess keen interest in writing, communication, and creative expression, aspiring to grow professionally.

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...