Thursday, June 11, 2026
Thursday, June 11, 2026

ಸ್ಮಾರ್ಟ್‌ಫೋನ್ ಅನ್ನು 'ಸೂಪರ್ ಝೂಮ್' ಕ್ಯಾಮೆರಾ ಮಾಡಬಹುದು

ಕೇವಲ ಫೊಟೋ ಮಾತ್ರವಲ್ಲ, ವನ್ಯಜೀವಿಗಳ ಅದ್ಭುತ ವಿಡಿಯೋಗಳನ್ನು ಚಿತ್ರೀಕರಿಸಲು ಇದು ತುಂಬಾ ಉಪಯುಕ್ತ. ನಿಮ್ಮ ಫೋನ್‌ನಲ್ಲಿರುವ 'ಇಮೇಜ್ ಸ್ಟೆಬಿಲೈಸೇಶನ್' ಫೀಚರ್ ಬಳಸುವುದರಿಂದ, ದೂರದ ದೃಶ್ಯಗಳೂ ಕೂಡ ಅಲುಗಾಡದಂತೆ ಸ್ಥಿರವಾಗಿ ರೆಕಾರ್ಡ್ ಆಗುತ್ತವೆ.

ನೀವು ಪಕ್ಷಿ ಪ್ರೇಮಿಯೇ? ಅಥವಾ ದೂರದ ಬೆಟ್ಟ-ಗುಡ್ಡಗಳನ್ನು ಹತ್ತಿರದಿಂದ ನೋಡುವ ಹವ್ಯಾಸ ನಿಮಗಿದೆಯೇ? ಸಾಮಾನ್ಯವಾಗಿ ದೂರದಲ್ಲಿರುವ ಪ್ರಾಣಿ-ಪಕ್ಷಿಗಳನ್ನು ಫೊಟೋ ತೆಗೆಯಲು ಲಕ್ಷಾಂತರ ರುಪಾಯಿ ಬೆಲೆಯ ದೊಡ್ಡ ಕ್ಯಾಮೆರಾಗಳು ಬೇಕು. ಆದರೆ, ಹಾಕ್ ಡಿಜಿ-ಸ್ಕೋಪ್ ಸ್ಮಾರ್ಟ್‌ಫೋನ್ ಅಡಾಪ್ಟರ್ ಎಂಬ ಈ ಪುಟ್ಟ ಸಾಧನ ನಿಮ್ಮ ಜೇಬಿನಲ್ಲಿರುವ ಫೋನ್‌ ಅನ್ನೇ ಅತ್ಯಾಧುನಿಕ ವೈಲ್ಡ್‌ಲೈಫ್ ಕ್ಯಾಮೆರಾವನ್ನಾಗಿ ಬದಲಾಯಿಸುತ್ತದೆ!

ಇದನ್ನೂ ಓದಿ: ಕ್ಯಾ… ಕ್ಯಾಮೆರಾ, ಕೂಲ್‌, ಆಕ್ಷನ್!

ಏನಿದು ಡಿಜಿಸ್ಕೋಪಿಂಗ್?

ಸರಳವಾಗಿ ಹೇಳಬೇಕೆಂದರೆ, ನಿಮ್ಮ ಬಳಿ ಇರುವ ಬೈನಾಕ್ಯುಲರ್ ಅಥವಾ ಸ್ಪಾಟಿಂಗ್ ಸ್ಕೋಪ್‌ನ ಐಪೀಸ್‌ಗೆ ನಿಮ್ಮ ಮೊಬೈಲ್ ಕ್ಯಾಮೆರಾವನ್ನು ಜೋಡಿಸುವುದೇ 'ಡಿಜಿಸ್ಕೋಪಿಂಗ್'. ಹಾಕ್ ಸಂಸ್ಥೆಯ ಈ ಅಡಾಪ್ಟರ್ ನಿಮ್ಮ ಫೋನ್ ಮತ್ತು ಬೈನಾಕ್ಯುಲರ್ ನಡುವೆ ಒಂದು ಸೇತುವೆಯಂತೆ ಕೆಲಸ ಮಾಡುತ್ತದೆ. ಇದರಿಂದ ನೀವು ನೂರಾರು ಅಡಿ ದೂರದಲ್ಲಿರುವ ಹಕ್ಕಿಯನ್ನು ಕೂಡ ನಿಮ್ಮ ಫೋನ್‌ನಲ್ಲೇ ಸ್ಪಷ್ಟವಾಗಿ ನೋಡಬಹುದು ಮತ್ತು ಫೋಟೋ ತೆಗೆಯಬಹುದು.

Untitled design (63)

ಎಲ್ಲ ಫೋನ್‌ಗಳಿಗೂ ಆಗುತ್ತದೆ!

ಈ ಅಡಾಪ್ಟರ್‌ನ ದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಇದರ ವಿನ್ಯಾಸ. ನಿಮ್ಮ ಬಳಿ ಐಫೋನ್ ಇರಲಿ ಅಥವಾ ಆಂಡ್ರಾಯ್ಡ್ ಇರಲಿ, ಒಂದೇ ಕ್ಯಾಮೆರಾ ಇರಲಿ ಅಥವಾ ಮೂರು-ನಾಲ್ಕು ಕ್ಯಾಮೆರಾಗಳಿರಲಿ ಇದು ಎಲ್ಲದಕ್ಕೂ ಹೊಂದಿಕೊಳ್ಳುತ್ತದೆ. ಇದರ ಅಡ್ಜಸ್ಟಬಲ್ ಕ್ಲ್ಯಾಂಪ್‌ಗಳು ಫೋನ್ ಅನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತವೆ, ಇದರಿಂದ ಫೋನ್ ಬಿದ್ದು ಹೋಗುವ ಭಯವಿಲ್ಲ.

ಹಗುರ ಮತ್ತು ಬಳಸಲು ಸುಲಭ

ಕಾಡು-ಮೇಡು ಅಲೆಯುವಾಗ ತೂಕದ ಕ್ಯಾಮೆರಾ ಹೊರುವುದು ಕಷ್ಟದ ಕೆಲಸ. ಆದರೆ ಈ ಅಡಾಪ್ಟರ್ ತುಂಬಾ ಹಗುರವಾಗಿದೆ. ಇದನ್ನು ನಿಮ್ಮ ಬೈನಾಕ್ಯುಲರ್‌ಗೆ ಅಳವಡಿಸುವುದು ಅಥವಾ ತೆಗೆಯುವುದು ಬಹಳ ಸುಲಭ. ದಾರಿಯಲ್ಲಿ ಹೋಗುವಾಗ ಹಠಾತ್ ಯಾವುದೋ ಅಪರೂಪದ ಹಕ್ಕಿ ಕಂಡರೆ, ಎರಡೇ ನಿಮಿಷದಲ್ಲಿ ಇದನ್ನು ಜೋಡಿಸಿ ಫೊಟೋ ಅಥವಾ ವಿಡಿಯೋ ರೆಕಾರ್ಡ್ ಮಾಡಲು ಪ್ರಾರಂಭಿಸಬಹುದು.

Untitled design (64)

ಶೂಟಿಂಗ್ ಮತ್ತು ಪಕ್ಷಿ ವೀಕ್ಷಣೆಗೆ ಬೆಸ್ಟ್

  • ಪಕ್ಷಿ ಪ್ರೇಮಿಗಳಿಗೆ: ಹಕ್ಕಿಗಳ ಹತ್ತಿರ ಹೋದರೆ ಅವು ಹಾರಿಹೋಗುತ್ತವೆ. ಈ ಅಡಾಪ್ಟರ್ ಬಳಸಿ ದೂರದಿಂದಲೇ ಅವುಗಳ ನೈಸರ್ಗಿಕ ನಡವಳಿಕೆಯನ್ನು ಫೋಟೋ ತೆಗೆಯಬಹುದು.
  • ಸ್ಪೋರ್ಟ್ಸ್ ಮತ್ತು ಶೂಟಿಂಗ್: ರೈಫಲ್ ಶೂಟಿಂಗ್ ಮಾಡುವವರು ತಾವು ಹೊಡೆದ ಗುಂಡು ಎಲ್ಲಿ ತಗುಲಿದೆ ಎಂದು ನೋಡಲು ಇದನ್ನು ಬಳಸುತ್ತಾರೆ. ಪದೇ ಪದೇ ಗುರಿಯ ಹತ್ತಿರ ಹೋಗಿ ನೋಡುವ ಶ್ರಮ ಇದರಿಂದ ಉಳಿಯುತ್ತದೆ.

ವಿಡಿಯೋ ರೆಕಾರ್ಡಿಂಗ್‌ಗೆ ಬೆಸ್ಟ್‌

ಕೇವಲ ಫೊಟೋ ಮಾತ್ರವಲ್ಲ, ವನ್ಯಜೀವಿಗಳ ಅದ್ಭುತ ವಿಡಿಯೋಗಳನ್ನು ಚಿತ್ರೀಕರಿಸಲು ಇದು ತುಂಬಾ ಉಪಯುಕ್ತ. ನಿಮ್ಮ ಫೋನ್‌ನಲ್ಲಿರುವ 'ಇಮೇಜ್ ಸ್ಟೆಬಿಲೈಸೇಶನ್' ಫೀಚರ್ ಬಳಸುವುದರಿಂದ, ದೂರದ ದೃಶ್ಯಗಳೂ ಕೂಡ ಅಲುಗಾಡದಂತೆ ಸ್ಥಿರವಾಗಿ ರೆಕಾರ್ಡ್ ಆಗುತ್ತವೆ. ಹಕ್ಕಿಗಳು ರೆಕ್ಕೆ ಬಡಿಯುವುದು ಅಥವಾ ಪ್ರಾಣಿಗಳ ಓಟವನ್ನು ಸ್ಲೋ-ಮೋಷನ್‌ನಲ್ಲಿ ಸೆರೆಹಿಡಿಯುವುದು ಈ ಅಡಾಪ್ಟರ್‌ನಿಂದ ಈಗ ತುಂಬಾ ಸುಲಭ.

ಪ್ರಕೃತಿ ಪ್ರಿಯರಿಗೆ ವರ

ಪರಿಸರ ವಿಜ್ಞಾನದ ವಿದ್ಯಾರ್ಥಿಗಳು ಅಥವಾ ಸಂಶೋಧಕರು ಪ್ರಕೃತಿಯಲ್ಲಿನ ಸಣ್ಣಪುಟ್ಟ ಬದಲಾವಣೆಗಳನ್ನು ಗಮನಿಸಲು ಇದನ್ನು ಬಳಸಬಹುದು. ದೂರದಿಂದಲೇ ಗೂಡುಗಳನ್ನು ವೀಕ್ಷಿಸುವುದರಿಂದ ಹಕ್ಕಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಅಲ್ಲದೆ, ಫೀಲ್ಡ್‌ನಲ್ಲಿ ಕೆಲಸ ಮಾಡುವವರಿಗೆ ಇದು ಕೇವಲ ಒಂದು ಉಪಕರಣವಲ್ಲ, ಸಮಯ ಉಳಿಸುವ ಸ್ಮಾರ್ಟ್ ಐಡಿಯಾ ಕೂಡ ಹೌದು. ಒಂದು ಕಾಲದಲ್ಲಿ ದೊಡ್ಡ ಕ್ಯಾಮೆರಾ ಇದ್ದವರಿಗೆ ಮಾತ್ರ ಸಾಧ್ಯವಾಗುತ್ತಿದ್ದ 'ದೂರದ ಫೊಟೋಗ್ರಫಿ' ಈಗ ಸಾಮಾನ್ಯ ಜನರಿಗೂ ಸಾಧ್ಯವಾಗಿದೆ. ಹಾಕ್ ಸಂಸ್ಥೆಯ ಈ ಅಡಾಪ್ಟರ್ ಆಧುನಿಕ ತಂತ್ರಜ್ಞಾನವನ್ನು ಸಾಮಾನ್ಯ ಬೆಲೆಗೆ ಜನಸಾಮಾನ್ಯರ ಕೈಗಿಟ್ಟಿದೆ. ನೀವು ಹವ್ಯಾಸಿ ಟ್ರಕ್ಕರ್ ಆಗಿರಲಿ ಅಥವಾ ವಾರಾಂತ್ಯದಲ್ಲಿ ಪಕ್ಷಿಗಳನ್ನು ವೀಕ್ಷಿಸುವವರಾಗಿರಲಿ, ನಿಮ್ಮ ಬ್ಯಾಗ್‌ನಲ್ಲಿರಲೇಬೇಕಾದ ಸಣ್ಣ ಅಚ್ಚರಿಯ ಸಾಧನವಿದು!

ಹಣವೂ ಉಳಿಯುತ್ತೆ, ಗುಣಮಟ್ಟವೂ ಸಿಗುತ್ತೆ

ವೃತ್ತಿಪರ ವೈಲ್ಡ್‌ಲೈಫ್ ಫೊಟೋಗ್ರಫಿ ಕಲಿಯಲು ಬಯಸುವವರಿಗೆ ಇದು ಆರಂಭಿಕ ಹಂತದ ಅತ್ಯುತ್ತಮ ಉಪಕರಣ. ಸಾವಿರಾರು ರುಪಾಯಿ ಬೆಲೆಯ ಲೆನ್ಸ್‌ಗಳ ಬದಲು, ನಿಮ್ಮ ಫೋನ್‌ನಲ್ಲಿರುವ ಎಚ್‌ಡಿಆರ್‌ ಮತ್ತು ಎಐ ತಂತ್ರಜ್ಞಾನವನ್ನೇ ಇದು ಬಳಸಿಕೊಳ್ಳುತ್ತದೆ. ಸ್ಕ್ರೀನ್ ಮೇಲೆ ಎಲ್ಲವೂ ಲೈವ್ ಆಗಿ ಕಾಣಿಸುವುದರಿಂದ ನೀವು ತೆಗೆದ ಫೊಟೋಗಳನ್ನು ತಕ್ಷಣವೇ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಬಹುದು. ನೀವು ಪ್ರವಾಸ ಹೋಗುವಾಗ ಅಥವಾ ಪ್ರಕೃತಿಯನ್ನು ಸವಿಯುವಾಗ ಇದು ನಿಮ್ಮ ಬೆಸ್ಟ್ ಫ್ರೆಂಡ್ ಆಗಬಲ್ಲದು. ಕಡಿಮೆ ಖರ್ಚಿನಲ್ಲಿ ಅದ್ಭುತ ಫೊಟೋಗ್ರಫಿ ಮಾಡಬೇಕೆನ್ನುವವರಿಗೆ ಹಾಕ್ ಡಿಜಿ-ಸ್ಕೋಪ್ ಅಡಾಪ್ಟರ್ ನಿಜಕ್ಕೂ ಒಂದು ಸ್ಮಾರ್ಟ್ ಆಯ್ಕೆ. ಈ ಅಡಾಪ್ಟರ್‌ನ ಗುಣಮಟ್ಟ ನೀವು ಬಳಸುವ ಬೈನಾಕ್ಯುಲರ್ ಅಥವಾ ಸ್ಕೋಪ್‌ನ ಕ್ಲಾರಿಟಿ ಮೇಲೆ ಅವಲಂಬಿತವಾಗಿರುತ್ತದೆ. ನಿಮ್ಮ ಸ್ಕೋಪ್ ಎಷ್ಟು ಚೆನ್ನಾಗಿರುತ್ತದೆಯೋ, ನಿಮ್ಮ ಫೊಟೋ ಕೂಡ ಅಷ್ಟೇ ಅದ್ಭುತವಾಗಿ ಮೂಡಿಬರುತ್ತದೆ!

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!