Friday, July 31, 2026
Friday, July 31, 2026

ಟ್ರಾವೆಲ್‌ ಪೇಜ್‌ನಲ್ಲಿ ಬೆಳೆಯುವುದು ಒಂದು ಕಲೆ

ಸೋಷಿಯಲ್‌ ಮೀಡಿಯಾ ಎನ್ನುವುದು ಈಗ ದಿನಿನಿತ್ಯ ಬಳಸುವ ತರಕಾರಿ, ಅಕ್ಕಿ ಇದ್ದಂತೆ. ಎಲ್ಲರ ಮನೆಯಲ್ಲೂ ಇರುತ್ತದೆ. ಎಲ್ಲರಿಗೂ ಅಗತ್ಯ ಕೂಡ ಹೌದು. ಹೀಗಿದ್ದಾಗ ಅದರಲ್ಲಿ ಉತ್ತಮ ಕಂಟೆಂಟ್‌ ಹಾಕಿ ಜನಪ್ರಿಯತೆ ಗಳಿಸುವ ಆಸೆ ಇಟ್ಟುಕೊಂಡವರು ಯಾರಿಲ್ಲ! ಅವರಿಗೆಲ್ಲಾ ಒಂದು ಸಣ್ಣ ಗೈಡ್‌ ಈ ಲೇಖನ.

ಜಗತ್ತು ಸುತ್ತುವುದು ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಆದರೆ ಇತ್ತೀಚಿನ ದಿನಗಳಲ್ಲಿ ಬರೀ ಅಲೆಯೋದಷ್ಟೇ ಅಲ್ಲ, ತಾವು ಹೋದ ಜಾಗದ ಸುಂದರ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು, ಅದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡುವುದು ಒಂದು ಟ್ರೆಂಡ್ ಆಗಿಬಿಟ್ಟಿದೆ. ಬಹಳಷ್ಟು ಜನರಿಗೆ ತಾವೂ ಒಂದು 'ಟ್ರಾವೆಲ್ ಇನ್‌ಸ್ಟಾಗ್ರಾಮ್ ಅಕೌಂಟ್' ಆರಂಭಿಸಿ, ದೊಡ್ಡ ಮಟ್ಟದಲ್ಲಿ ಫಾಲೋವರ್ಸ್ ಗಳಿಸಬೇಕು ಎಂಬ ಆಸೆ ಇರುತ್ತದೆ. ಆದರೆ, ʼಖಾತೆ ಏನೋ ಓಪನ್ ಮಾಡಬಹುದು, ಫಾಲೋವರ್ಸ್ ಹೆಚ್ಚಿಸಿಕೊಳ್ಳುವುದು ಹೇಗೆ?ʼ ಎನ್ನುವ ಯೋಚನೆ ಕಾಡುತ್ತಿರುತ್ತದೆ.

ಇದನ್ನೂ ಓದಿ: ಟೆಕ್ಸ್ಟ್‌ ಬುಕ್ಕಲ್ಲಿ ಎಷ್ಟೇ ಓದಿದ್ದರೂ ಗೈಡ್‌ ಬೇಕೇ ಬೇಕು ಸ್ವಾಮಿ!

ಒಂದು ವೇಳೆ ಸರಿಯಾದ ದಾರಿಯಲ್ಲಿ ಪ್ರಯತ್ನಿಸಿದರೆ, ನಿಮ್ಮ ಈ ಟ್ರಾವೆಲ್ ಪೇಜ್ ಒಂದು ಪವರ್‌ಫುಲ್ ಪರ್ಸನಲ್ ಬ್ರಾಂಡ್ ಆಗಿ ಬದಲಾಗಬಹುದು. ಹಾಗಾದರೆ, ನಿಮ್ಮ ಟ್ರಾವೆಲ್ ಇನ್‌ಸ್ಟಾಗ್ರಾಮ್ ಖಾತೆಯನ್ನು ಆರಂಭಿಸಿ, ಫಾಲೋವರ್ಸ್ ಅನ್ನು ವೇಗವಾಗಿ ಬೆಳೆಸಿಕೊಳ್ಳುವುದು ಹೇಗೆ? ಕಂಪ್ಲೀಟ್ ಗೈಡ್ ಇಲ್ಲಿದೆ.

Untitled design (68)

*ಟ್ರೇಡ್‌ ಮಾರ್ಕ್‌ ಇರಲಿ

ನಿಮ್ಮದೇ ಆದ ಒಂದು ವಿಶಿಷ್ಟ ಗುರುತು ಕಂಡುಕೊಳ್ಳಿ. ಇನ್‌ಸ್ಟಾಗ್ರಾಮ್‌ನಲ್ಲಿ ಬರೀ ʼಟ್ರಾವೆಲ್ʼ ಅಂತ ಪೋಸ್ಟ್ ಮಾಡಿದರೆ ಸಾಕಾಗುವುದಿಲ್ಲ. ನಿಮ್ಮ ಶೈಲಿ ಯಾವುದು ಎಂಬುದನ್ನು ನೀವು ಮೊದಲೇ ನಿರ್ಧರಿಸಬೇಕು. ನೀವು ಕಡಿಮೆ ಬಜೆಟ್‌ನಲ್ಲಿ ಸುತ್ತುವ ಬ್ಯಾಕ್‌ಪ್ಯಾಕರಾ? ಅಥವಾ ಐಷಾರಾಮಿ ರೆಸಾರ್ಟ್‌ಗಳು, ವಿಲ್ಲಾಗಳನ್ನು ಪರಿಚಯಿಸುವ ಲಕ್ಸುರಿ ಟ್ರಾವೆಲರಾ? ಇಲ್ಲವೇ ಯಾರಿಗೂ ತಿಳಿಯದ ಕಾಡುಗಳನ್ನು ಹುಡುಕುವ ಸಾಹಸಪ್ರವೃತ್ತಿಯವರಾ? ಯಾವುದಾದರೂ ಒಂದು ನಿರ್ದಿಷ್ಟ ಶೈಲಿಯನ್ನು ಆಯ್ದುಕೊಂಡು ಅದಕ್ಕೆ ತಕ್ಕಂತೆ ಕಂಟೆಂಟ್ ಹಾಕುತ್ತಾ ಹೋದರೆ, ಅದೇ ರೀತಿಯ ಆಸಕ್ತಿ ಇರುವ ಜನರು ನಿಮ್ಮನ್ನು ಹುಡುಕಿಕೊಂಡು ಬಂದು ಫಾಲೋ ಮಾಡುತ್ತಾರೆ.

*ಬಯೋ ಚೆಂದವಾಗಿರಲಿ

ನಿಮ್ಮ ಇನ್‌ಸ್ಟಾಗ್ರಾಮ್ ಬಯೋ ಎಂಬುದು ನಿಮ್ಮ 'ಡಿಜಿಟಲ್ ಹ್ಯಾಂಡ್‌ಶೇಕ್' ಇದ್ದಂತೆ. ಯಾರಾದರೂ ನಿಮ್ಮ ಪೇಜ್‌ಗೆ ಭೇಟಿ ನೀಡಿದಾಗ, ಅವರು ನಿಮ್ಮನ್ನು ಯಾಕೆ ಫಾಲೋ ಮಾಡಬೇಕು ಎಂಬ ಪ್ರಶ್ನೆಗೆ ನಿಮ್ಮ ಬಯೋದಲ್ಲಿ ಉತ್ತರವಿರಬೇಕು. ಬಯೋವನ್ನು ಸಿಂಪಲ್ ಆಗಿ, ಆಕರ್ಷಕವಾಗಿ ಇಡಿ. ಇಮೋಜಿಗಳನ್ನು ಬಳಸಿ. ಜೊತೆಗೆ ಒಂದು 'ಕಾಲ್ ಟು ಆಕ್ಷನ್' ಇರಲಿ. ಅಂದರೆ ನಿಮ್ಮ ಯೂಟ್ಯೂಬ್ ಲಿಂಕ್ ಅಥವಾ ಬ್ಲಾಗ್ ಲಿಂಕ್ ಅನ್ನು ಅಲ್ಲಿ ಹಾಕಿ. ಪ್ರೊಫೈಲ್ ಪಿಕ್ಚರ್ ಕೂಡ ನೀವೇ ತೆಗೆದ ಯಾವುದಾದರೂ ಸೂಪರ್ ಆದ ಟ್ರಾವೆಲ್ ಲೊಕೇಶನ್‌ನ ಫೊಟೋ ಆಗಿರಲಿ.

*ಕಣ್ಣಿಗೆ ಕಟ್ಟುವಂಥ ಕಥೆ

ಇನ್‌ಸ್ಟಾಗ್ರಾಮ್‌ನಲ್ಲಿ ಫೊಟೋಗಳು ಹೈ-ಕ್ವಾಲಿಟಿಯಾಗಿ ಇರಬೇಕಾದದ್ದು ಎಷ್ಟು ಮುಖ್ಯವೋ, ಅವುಗಳು ಒಂದು ಕಥೆಯನ್ನು ಹೇಳುವುದು ಅಷ್ಟೇ ಮುಖ್ಯ. ಬರೀ ಸುಂದರವಾದ ಲೊಕೇಶನ್‌ನ ಫೊಟೋ ಹಾಕಬೇಡಿ. ಅದರ ಜತೆಗೆ ಆ ಜಾಗದ ಹಿಂದಿರುವ ಕಥೆ, ಅಲ್ಲಿನ ಮಸಾಲೆಭರಿತ ಸ್ಟ್ರೀಟ್ ಫುಡ್‌ನ ರುಚಿ, ನೀವು ಮಿಸ್ ಮಾಡಿದ ಟ್ರೇನ್ ಅಥವಾ ಮಳೆಯಿಂದಾಗಿ ನಿಮ್ಮ ಪ್ಲ್ಯಾನ್ ಹೇಗೆ ಫ್ಲಾಪ್ ಆಯಿತು ಎಂಬ 'ಬಿಹೈಂಡ್ ದ ಸೀನ್ಸ್' ಕಥೆಗಳನ್ನು ಕ್ಯಾಪ್ಷನ್‌ನಲ್ಲಿ ಬರೆಯಿರಿ. ಈ ರೀತಿ ನಿಮ್ಮ ಪ್ರವಾಸದ ಕಷ್ಟ-ಸುಖಗಳನ್ನು ಹಂಚಿಕೊಂಡಾಗ ಜನರಿಗೆ ನಿಮ್ಮ ಮೇಲೆ ನಂಬಿಕೆ ಮತ್ತು ಕನೆಕ್ಷನ್ ಬೆಳೆಯುತ್ತದೆ.

*ಇನ್‌ಸ್ಟಾಗ್ರಾಮ್ ಫೀಚರ್‌ಗಳ ಬಳಕೆ

ಇವತ್ತಿನ ದಿನಗಳಲ್ಲಿ ಅತಿ ವೇಗವಾಗಿ ಹೊಸ ಜನರನ್ನು ತಲುಪಲು ರೀಲ್ಸ್ ಬೆಸ್ಟ್ ಆಪ್ಷನ್. ಚಿಕ್ಕದಾದ, ಎಂಗೇಜಿಂಗ್ ಆದ ಮತ್ತು ಟ್ರೆಂಡಿಂಗ್ ಮ್ಯೂಸಿಕ್ ಇರುವ ರೀಲ್ಸ್‌ಗಳನ್ನು ಮಾಡಿ. ಇನ್ನು ನಿಮ್ಮ ದಿನನಿತ್ಯದ ಅಪ್‌ಡೇಟ್‌ಗಳನ್ನು ಶೇರ್ ಮಾಡಲು 'ಸ್ಟೋರೀಸ್' ಬಳಸಿ. ಸ್ಟೋರೀಸ್‌ಗಳಲ್ಲಿ ಪೋಲ್ಸ್ ಅಥವಾ ಕ್ಯೂ ಅಂಡ್ ಎ ಸ್ಟಿಕ್ಕರ್‌ಗಳನ್ನು ಬಳಸುವುದರಿಂದ ನಿಮ್ಮ ಫಾಲೋವರ್ಸ್ ನಿಮ್ಮೊಂದಿಗೆ ನೇರವಾಗಿ ಮಾತನಾಡಲು ಸಾಧ್ಯವಾಗುತ್ತದೆ. ನಿಮ್ಮ ಬೆಸ್ಟ್ ಪೋಸ್ಟ್‌ಗಳನ್ನು ಹೈಲೈಟ್ಸ್‌ನಲ್ಲಿ ಜೋಡಿಸಿ, ಇದರಿಂದ ಹೊಸದಾಗಿ ಬರುವವರಿಗೆ ನಿಮ್ಮ ಪೇಜ್‌ನ ಬೆಸ್ಟ್ ಕಂಟೆಂಟ್ ಒಂದೇ ಕಡೆ ಸಿಗುತ್ತದೆ.

Untitled design (67)

*ಕಮ್ಯುನಿಟಿ ಎಂಗೇಜ್ಮೆಂಟ್‌

ಇನ್‌ಸ್ಟಾಗ್ರಾಮ್ ಅಂದರೆ ಅದೊಂದು ಸೋಷಿಯಲ್ ನೆಟ್‌ವರ್ಕ್. ನಿಮ್ಮ ಪೋಸ್ಟ್‌ಗಳಿಗೆ ಬರುವ ಕಾಮೆಂಟ್‌ಗಳಿಗೆ ಯಾವುದೋ ಹಾಸ್ಟೆಲ್ ಬಾರ್‌ನಲ್ಲಿ ಕೂತು ಫ್ರೆಂಡ್ಸ್ ಜತೆ ಹರಟೆ ಹೊಡೆಯುವಂತೆ ಮಸ್ತ್ ಆಗಿ ರಿಪ್ಲೈ ಮಾಡಿ. ನಿಮ್ಮದೇ ಶೈಲಿಯಲ್ಲಿರುವ ಇತರ ಟ್ರಾವೆಲ್ ಇನ್‌ಫ್ಲುಯೆನ್ಸರ್‌ಗಳ ಪೋಸ್ಟ್‌ಗಳನ್ನು ಲೈಕ್ ಮಾಡಿ, ಕಮೆಂಟ್ ಮಾಡಿ. ಇನ್‌ಸ್ಟಾಗ್ರಾಮ್‌ನಲ್ಲಿ 5-3-1 ಎಂಬ ಒಂದು ನಿಯಮವಿದೆ; ಅಂದರೆ ದಿನಕ್ಕೆ 5 ಪೋಸ್ಟ್‌ಗಳನ್ನು ಲೈಕ್ ಮಾಡುವುದು, 3 ಪೋಸ್ಟ್‌ಗಳಿಗೆ ಕಮೆಂಟ್ ಮಾಡುವುದು ಮತ್ತು ಕನಿಷ್ಠ 1 ಅಕೌಂಟ್ ಅನ್ನು ಫಾಲೋ ಮಾಡುವುದು. ಇದು ನಿಮ್ಮ ಅಕೌಂಟ್‌ನ ರೀಚ್ ಅನ್ನು ಆರ್ಗ್ಯಾನಿಕ್ ಆಗಿ ಹೆಚ್ಚಿಸುತ್ತದೆ.

*ಕನ್ಸಿಸ್ಟನ್ಸಿ ಇರಲಿ

ಇನ್‌ಸ್ಟಾಗ್ರಾಮ್ ಅಲ್ಗಾರಿದಮ್‌ಗೆ ಸದಾ ಆಕ್ಟಿವ್ ಆಗಿರುವ ಪೇಜ್‌ಗಳೆಂದರೆ ತುಂಬಾ ಇಷ್ಟ. ದಿನಕ್ಕೆ ಹತ್ತು ಪೋಸ್ಟ್ ಹಾಕಬೇಕಾಗಿಲ್ಲ, ಆದರೆ ವಾರಕ್ಕೆ ಇಂತಿಷ್ಟು ಪೋಸ್ಟ್ ಅಥವಾ ರೀಲ್ಸ್ ಹಾಕುತ್ತೇನೆ ಎಂಬ ನಿಯಮವಿಟ್ಟುಕೊಳ್ಳಿ. ಸುದೀರ್ಘ ಗ್ಯಾಪ್ ತಗೆದುಕೊಳ್ಳಬೇಡಿ. ಹ್ಯಾಶ್‌ಟ್ಯಾಗ್‌ಗಳು ಮತ್ತು ಜಿಯೋ ಟ್ಯಾಗ್‌ಗಳನ್ನು ಮರೆಯದೆ ಬಳಸಿ. ಇದರಿಂದ ಆ ಜಾಗದ ಬಗ್ಗೆ ಹುಡುಕುವ ಇತರ ಪ್ರವಾಸಿಗರಿಗೆ ನಿಮ್ಮ ಪೋಸ್ಟ್ ಸುಲಭವಾಗಿ ತಲುಪುತ್ತದೆ.

ನೆನಪಿಡಿ, ಇನ್‌ಸ್ಟಾಗ್ರಾಮ್‌ನಲ್ಲಿ ಟ್ರಾವೆಲ್ ಪೇಜ್ ಬೆಳೆಸುವುದು ಒಂದು ಮ್ಯಾರಥಾನ್ ಇದ್ದಂತೆ, ಇದು ಒಂದೇ ರಾತ್ರಿಯಲ್ಲಿ ಆಗುವ ಮ್ಯಾಜಿಕ್ ಅಲ್ಲ. ಕಂಟೆಂಟ್ ಕ್ರಿಯೇಟ್ ಮಾಡುವುದನ್ನು ಎಂಜಾಯ್ ಮಾಡಿ, ನಿಮ್ಮದೇ ಆದ ಶೈಲಿಯಲ್ಲಿ ಜಗತ್ತನ್ನು ನಿಮ್ಮ ಫಾಲೋವರ್ಸ್‌ಗೆ ತೋರಿಸಿ. ಆಲ್ ದಿ ಬೆಸ್ಟ್!

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!