Tuesday, May 12, 2026
Tuesday, May 12, 2026

ಪ್ರವಾಸಕ್ಕೆ ಹೋಗುವವರಿಗೆ ಇನ್ಶೂರೆನ್ಸ್‌ ಇದ್ದರೆ ಒಳ್ಳೆಯದು!

ಕೆಲವು ವಿಮಾ ಯೋಜನೆಗಳಲ್ಲಿ ದಂತ ಚಿಕಿತ್ಸೆ, ಆಕಸ್ಮಿಕ ಸಾವು, ದೈಹಿಕ ಗಾಯ, ತುರ್ತು ಸ್ಥಳಾಂತರ, ಆಸ್ಪತ್ರೆ ಸೇವೆ, ವೈದ್ಯಕೀಯ ಸಲಹೆ ಹಾಗೂ 24 ಗಂಟೆಗಳ ಸಹಾಯವಾಣಿ ಸೌಲಭ್ಯವೂ ಲಭ್ಯವಿರುತ್ತದೆ. ಇದರಿಂದ ಪ್ರವಾಸಿಗರು ಅಪರಿಚಿತ ಸ್ಥಳದಲ್ಲಿಯೂ ಆತ್ಮವಿಶ್ವಾಸದಿಂದ ಪ್ರಯಾಣವನ್ನು ಮುಂದುವರಿಸಬಹುದಾಗಿದೆ.

  • ಕೆ.ಎಂ. ಪವಿತ್ರಾ

ಪ್ರವಾಸ ಎಂದರೆ ಹೊಸ ಸ್ಥಳ, ಹೊಸ ಅನುಭವ, ಹೊಸ ಅನ್ವೇಷಣೆ, ಹೊಸ ಸಂತೋಷ. ಸಾಮಾನ್ಯವಾಗಿ ಪ್ರವಾಸ ಕೈಗೊಳ್ಳೋಕೆ ಎಲ್ಲರೂ ಇಷ್ಟ ಪಡುತ್ತಾರೆ.. ಪ್ರವಾಸವನ್ನು ಕೈಗೊಂಡ ಸಂದರ್ಭದಲ್ಲಿ ಎಲ್ಲ ದಿನವೂ ನಮ್ಮದೇ ಆಗಿರುವುದಿಲ್ಲ. ಬದಲಾಗಿ ಅನಿರೀಕ್ಷಿತ ಘಟನೆಗಳು ಯಾವಾಗಲೂ ಬಾಗಿಲು ತಟ್ಟಬಹುದು. ವಿಮಾನ ವಿಳಂಬ, ಆರೋಗ್ಯ ಸಮಸ್ಯೆ, ಲಗೇಜ್ ಕಳ್ಳತನ ಇಂಥ ಸಂದರ್ಭಗಳಲ್ಲಿ ನಮ್ಮ ಕೈ ಹಿಡಿಯುವುದೇ ಪ್ರವಾಸ ವಿಮೆ.

ಇದನ್ನೂ ಓದಿ: ಥೈಲ್ಯಾಂಡ್ ಹೋಗುವವರಿಗೆ ವಿಮೆ ಕಡ್ಡಾಯ

ವಿಮೆ ಯಾಕೆ ಮುಖ್ಯ?

ಕೆಲವೊಮ್ಮೆ ಅನಿರೀಕ್ಷಿತವಾಗಿರುತ್ತವೆ ಸನ್ನಿವೇಶಗಳು ಎದುರಾಗುತ್ತವೆ. ಅಂಥ ಸಂದರ್ಭದಲ್ಲಿ ಪ್ರಯಾಣ ವಿಮೆ ಇರುವುದರಿಂದ ಆರ್ಥಿಕವಾಗಿ ಸಹಾಯವಾಗುತ್ತದೆ. ಪ್ರಯಾಣದ ಸಮಯದಲ್ಲಿ ಯಾವಾಗ, ಎಲ್ಲಿ, ಹೇಗೆ ತುರ್ತು ಪರಿಸ್ಥಿತಿ ಎದುರಾಗುತ್ತದೆ ಎಂಬುದನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಅನಾರೋಗ್ಯ, ಅಪಘಾತ, ತುರ್ತು ಚಿಕಿತ್ಸೆಯ ಅವಶ್ಯಕತೆ, ಶಸ್ತ್ರಚಿಕಿತ್ಸೆ ಅಥವಾ ಆಸ್ಪತ್ರೆಯಲ್ಲಿ ದಾಖಲಾಗುವ ಪರಿಸ್ಥಿತಿ ಉಂಟಾದರೆ ಅದರ ವೆಚ್ಚ ತುಂಬಾ ಹೆಚ್ಚಾಗಿರಬಹುದು. ವಿಶೇಷವಾಗಿ ವಿದೇಶಿ ದೇಶಗಳಲ್ಲಿ ವೈದ್ಯಕೀಯ ಸೇವೆಗಳು ಅತ್ಯಂತ ದುಬಾರಿಯಾಗಿದ್ದು, ಸಾಮಾನ್ಯ ಚಿಕಿತ್ಸೆಗೂ ಸಾವಿರಾರು ರೂಪಾಯಿ ಅಥವಾ ಡಾಲರ್‌ ವೆಚ್ಚವಾಗುವ ಸಾಧ್ಯತೆ ಇರುತ್ತದೆ. ಇಂಥ ಸಂದರ್ಭಗಳಲ್ಲಿ ಟ್ರಾವೆಲ್ ಇನ್ಶೂರೆನ್ಸ್‌ ಆ ವೆಚ್ಚವನ್ನು ಭರಿಸಿ ಪ್ರವಾಸಿಗರಿಗೆ ಆರ್ಥಿಕ ಭಾರವನ್ನು ಕಡಿಮೆ ಮಾಡುತ್ತದೆ.

New Project (35)

ಇದರ ಜತೆಗೆ ಪ್ರಯಾಣದ ವೇಳೆ ಲಗೇಜ್‌ ಕಳೆದುಹೋಗುವುದು, ಪಾಸ್‌ಪೋರ್ಟ್ ನಷ್ಟವಾಗುವುದು, ಪ್ರಮುಖ ದಾಖಲೆಗಳು ತಪ್ಪಿಹೋಗುವುದು, ವಿಮಾನ ವಿಳಂಬವಾಗುವುದು, ಸಂಪರ್ಕ ವಿಮಾನ ತಪ್ಪುವುದು, ಹವಾಮಾನ ಅಥವಾ ಅನಿವಾರ್ಯ ಕಾರಣಗಳಿಂದ ಪ್ರಯಾಣ ರದ್ದಾಗುವುದು ಮುಂತಾದ ಸಮಸ್ಯೆಗಳು ಸಹ ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ ವಿಮೆ ಹಣಕಾಸಿನ ನೆರವಿನ ಜತೆಗೆ ತುರ್ತು ಸಹಾಯವನ್ನೂ ಒದಗಿಸುತ್ತದೆ. ಕೆಲವೊಮ್ಮೆ ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಉಂಟಾದರೆ ತಕ್ಷಣ ವಾಪಸ್ಸು ಬರಬೇಕಾಗಬಹುದು ಅಂತಹ ಸಂದರ್ಭದಲ್ಲಿಯೂ ವಿಮೆ ಸಹಾಯಕವಾಗುತ್ತದೆ.

ಕೆಲವು ವಿಮಾ ಯೋಜನೆಗಳಲ್ಲಿ ದಂತ ಚಿಕಿತ್ಸೆ, ಆಕಸ್ಮಿಕ ಸಾವು, ದೈಹಿಕ ಗಾಯ, ತುರ್ತು ಸ್ಥಳಾಂತರ, ಆಸ್ಪತ್ರೆ ಸೇವೆ, ವೈದ್ಯಕೀಯ ಸಲಹೆ ಹಾಗೂ 24 ಗಂಟೆಗಳ ಸಹಾಯವಾಣಿ ಸೌಲಭ್ಯವೂ ಲಭ್ಯವಿರುತ್ತದೆ. ಇದರಿಂದ ಪ್ರವಾಸಿಗರು ಅಪರಿಚಿತ ಸ್ಥಳದಲ್ಲಿಯೂ ಆತ್ಮವಿಶ್ವಾಸದಿಂದ ಪ್ರಯಾಣವನ್ನು ಮುಂದುವರಿಸಬಹುದಾಗಿದೆ.

ಆಯ್ಕೆ ಹೇಗಿರಬೇಕು?

ಪ್ರವಾಸ ವಿಮೆ ಆಯ್ಕೆ ಮಾಡುವಾಗ ನಮ್ಮ ಪ್ರಯಾಣದ ಸ್ವರೂಪಕ್ಕೆ ತಕ್ಕಂತೆ ಸರಿಯಾದ ಯೋಜನೆಯನ್ನು ಆರಿಸಬೇಕು. ವಿಮೆಯ ಕವರೆಜ್‌ ಏನು ಎಂಬುದನ್ನು ಪರಿಶೀಲಿಸಬೇಕು. ವೈದ್ಯಕೀಯ ತುರ್ತು ಪರಿಸ್ಥಿತಿ, ಅಪಘಾತ, ಆಸ್ಪತ್ರೆ ವೆಚ್ಚ, ಲಗೇಜ್‌ ನಷ್ಟ, ಪಾಸ್‌ಪೋರ್ಟ್‌ ಕಳೆತ, ವಿಮಾನ ವಿಳಂಬ, ಪ್ರಯಾಣ ರದ್ದು ಮುಂತಾದವು ಒಳಗೊಂಡಿವೆಯೇ ಎಂದು ನೋಡಬೇಕು. ವಿಶೇಷವಾಗಿ ವಿದೇಶ ಪ್ರವಾಸಕ್ಕೆ ತೆರಳುವವರು ವೈದ್ಯಕೀಯ ಕವರ್‌ ಹೆಚ್ಚಿನದಾಗಿರುವ ಯೋಜನೆಯನ್ನು ಆಯ್ಕೆ ಮಾಡುವುದು ಉತ್ತಮ.

ಕ್ಲೇಮ್‌ ಪ್ರಕ್ರಿಯೆ ಸುಲಭವೇ ಎಂಬುದನ್ನು ಗಮನಿಸಬೇಕು. ತುರ್ತು ಸಂದರ್ಭದಲ್ಲಿ ಹೆಚ್ಚು ದಾಖಲೆಗಳು, ವಿಳಂಬ ಅಥವಾ ಗೊಂದಲ ಉಂಟಾಗದಂತೆ ಸರಳ ಮತ್ತು ವೇಗವಾದ ಸೇವೆ ನೀಡುವ ವಿಮಾ ಕಂಪೆನಿಯನ್ನು ಆರಿಸಬೇಕು. 24 ಗಂಟೆಗಳ ಸಹಾಯವಾಣಿ ಸೌಲಭ್ಯ ಇರುವುದೂ ಬಹಳ ಉಪಯುಕ್ತ.

ಪ್ರೀಮಿಯಂ ಮೊತ್ತ ಮಾತ್ರ ನೋಡಿ ವಿಮೆ ಆಯ್ಕೆ ಮಾಡಬಾರದು. ಕಡಿಮೆ ಹಣಕ್ಕೆ ಕಡಿಮೆ ರಕ್ಷಣೆ ಸಿಗಬಹುದು. ಆದ್ದರಿಂದ ಬೆಲೆಯಿಗಿಂತ ಭದ್ರತೆಗೆ ಹೆಚ್ಚು ಮಹತ್ವ ನೀಡಬೇಕು. ವಿಮಾ ಕಂಪನಿಯ ವಿಶ್ವಾಸಾರ್ಹತೆ, ಗ್ರಾಹಕರ ಅಭಿಪ್ರಾಯ ಮತ್ತು ಸೇವೆಯ ಗುಣಮಟ್ಟವನ್ನೂ ಪರಿಶೀಲಿಸಿ ಆಯ್ಕೆ ಮಾಡುವುದು ಉತ್ತಮ.

New Project (34)

ಪ್ರಯಾಣ ವಿಮೆಯ ವಿಧಗಳು

ಪ್ರಯಾಣ ವಿಮೆಯಲ್ಲಿ ಹಲವು ವಿಧಗಳಲ್ಲಿದ್ದು, ನಮ್ಮ ಪ್ರಯಾಣದ ಸ್ವರೂಪ ಮತ್ತು ಅಗತ್ಯಕ್ಕೆ ತಕ್ಕಂತೆ ಆಯ್ಕೆ ಮಾಡಬಹುದು.

  • ದೇಶೀಯ ಪ್ರವಾಸ ವಿಮೆ ಭಾರತದೊಳಗಿನ ಪ್ರಯಾಣಗಳಿಗೆ ಉಪಯುಕ್ತವಾಗಿದೆ.
  • ವಿದೇಶ ಪ್ರವಾಸಕ್ಕೆ ತೆರಳುವವರು ಅಂತಾರಾಷ್ಟ್ರೀಯ ಪ್ರವಾಸ ವಿಮೆ ಅಗತ್ಯ. ವೈದ್ಯಕೀಯ ತುರ್ತು ಪರಿಸ್ಥಿತಿ, ಪಾಸ್‌ಪೋರ್ಟ್‌ ನಷ್ಟ, ವಿಮಾನ ವಿಳಂಬ, ಲಗೇಜ್‌ ಕಳುವು ಮುಂತಾದ ಸಮಸ್ಯೆಗಳಿಗೆ ರಕ್ಷಣೆ ನೀಡುತ್ತದೆ.
  • ವಿದ್ಯಾರ್ಥಿ ಪ್ರವಾಸ ವಿಮೆಯು ವಿದೇಶದಲ್ಲಿ ವಿದ್ಯಾಭ್ಯಾಸಕ್ಕಾಗಿ ಹೋಗುವ ವಿದ್ಯಾರ್ಥಿಗಳಿಗೆ ವಿಶೇಷವಾಗಿ ರೂಪಿಸಿದ ವಿಮೆಯಾಗಿದೆ.
  • ಹಿರಿಯ ನಾಗರಿಕರಿಗಾಗಿ ವಿಶೇಷವಾಗಿ ರೂಪಿಸಲಾದ ಹಿರಿಯ ನಾಗರಿಕರ ಪ್ರವಾಸ ವಿಮೆ ಆರೋಗ್ಯ ಸಂಬಂಧಿತ ಅಪಾಯಗಳಿಗೆ ಹೆಚ್ಚಿನ ಭದ್ರತೆಯನ್ನು ಒದಗಿಸುತ್ತದೆ.
  • ಕುಟುಂಬ ಸಮೇತ ಪ್ರಯಾಣಿಸುವವರಿಗೆ ಕುಟುಂಬ ಪ್ರವಾಸ ವಿಮೆ ಅತ್ಯಂತ ಅನುಕೂಲಕರ.

ಒಂದು ಪಾಲಿಸಿಯಲ್ಲೇ ಕುಟುಂಬದ ಎಲ್ಲಾ ಸದಸ್ಯರಿಗೆ ರಕ್ಷಣೆ ದೊರೆಯುತ್ತದೆ. ಒಂದೇ ಬಾರಿ ಪ್ರಯಾಣ ಮಾಡುವವರಿಗೆ ಸಿಂಗಲ್‌ ಟ್ರಿಪ್‌ ವಿಮೆ ಸೂಕ್ತವಾಗಿದ್ದರೆ, ವರ್ಷದಲ್ಲಿ ಅನೇಕ ಬಾರಿ ಪ್ರಯಾಣಿಸುವವರಿಗೆ ಮಲ್ಟಿ-ಟ್ರಿಪ್‌ ವಿಮೆ ಹೆಚ್ಚು ಲಾಭದಾಯಕವಾಗುತ್ತದೆ. ಅದೇ ರೀತಿ, ತಂಡವಾಗಿ ಅಥವಾ ಗುಂಪಿನಲ್ಲಿ ಪ್ರಯಾಣಿಸುವವರಿಗೆ ಗುಂಪು ಪ್ರವಾಸ ವಿಮೆ ಉತ್ತಮ ಆಯ್ಕೆಯಾಗುತ್ತದೆ.

ಒಟ್ಟಾರೆಯಾಗಿ ಯೋಜಿತ ಪ್ರವಾಸ ಸುಂದರ, ವಿಮೆ ಹೊಂದಿದ ಪ್ರವಾಸ ಸುರಕ್ಷಿತ ಎಂಬ ಮಾತು ಅಕ್ಷರ ಸಹ ಅರ್ಥಪೂರ್ಣವಾಗಿದೆ. ಆದ್ದರಿಂದ ಮುಂದಿನ ಬಾರಿ ಬ್ಯಾಗ್‌ ಪ್ಯಾಕ್‌ ಮಾಡುವಾಗ ಬಟ್ಟೆ, ಟಿಕೆಟ್‌, ಪಾಸ್‌ಪೋರ್ಟ್‌ ಜತೆಗೆ ಪ್ರವಾಸ ವಿಮೆಯನ್ನೂ ಮರೆಯದೆ ಸೇರಿಸಿಕೊಳ್ಳಿ. ಏಕೆಂದರೆ ಸುರಕ್ಷಿತ ಪ್ರಯಾಣವೇ ನೆನಪಿನಲ್ಲಿ ಉಳಿಯುವ ಸುಂದರ ಪ್ರಯಾಣವಾಗುತ್ತದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!