Sunday, June 15, 2025
Sunday, June 15, 2025

ನೀವ್ಯಾಕೆ ಈ ಜಾಗಗಳಲ್ಲಿ ಮದುವೆಯಾಗ್ಬಾರ್ದು?

ಮದುವೆ ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಎಂಬ ಮಾತಿದೆ. ಅದು ಊಹೆಗೆ ಬಿಟ್ಟಿದ್ದು. ಆದರೆ ಇಳೆಯಲ್ಲಿಯೇ ಸ್ವರ್ಗವನ್ನು ಸೃಷ್ಟಿಸಿ ಮದುವೆಯಾಗುವ ಅವಕಾಶವಿದೆ. ರಾಜಸ್ಥಾನದ ಈ ಐದು ಜಾಗಗಳಲ್ಲಿ ಮದುವೆಯಾದರೆ ಅದು ಲೈಫ್‌ ಟೈಮ್‌ ಮೆಮೊರಿಯಾಗಿ ಉಳಿದುಕೊಳ್ಳುತ್ತದೆ.

ಮದುವೆ ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಎಂಬ ಮಾತಿದೆ. ಅದು ನಂಬಿಕೆ ಮತ್ತು ಊಹೆಗೆ ಬಿಟ್ಟಿದ್ದು. ಆದರೆ ಮದುವೆಯನ್ನು ಸ್ವರ್ಗದಲ್ಲಿಯೇ ಆಗುವ ಅವಕಾಶವಿದೆ. ರಾಜಸ್ಥಾನದಲ್ಲಿ ಮನಮೋಹಕ ವೆಡ್ಡಿಂಗ್‌ ಡೆಸ್ಟಿನೇಷನ್‌ಗಳಿವೆ. ಅಲ್ಲಿ ನವ ಜೋಡಿಗಳು ಮದುವೆಯಾದರೆ ಅದು ಲೈಫ್‌ಟೈಮ್‌ ಮೆಮೊರಿಯಾಗಿ ಉಳಿಯುತ್ತೆ. ಭೂಲೋಕದ ಸ್ವರ್ಗಸೀಮೆಯಂತಿರುವ ಆ ವಿವಾಹ ತಾಣಗಳಲ್ಲಿ ನಿಮಗೂ ಮದುವೆಯಗುವ ಇಚ್ಛೆಯಿದ್ಯ? ಆ ಅದ್ಭುತ ತಾಣಗಳ ಕುರಿತಾದ ಮಾಹಿತಿ ಇಲ್ಲಿದೆ; ಭವ್ಯವಾದ ಅರಮನೆಗಳು ಅಥವಾ ಸರೋವರದ ಆಸುಪಾಸಿನಲ್ಲಿ ಮದುವೆಯನ್ನು ಆಚರಿಸಿಕೊಳ್ಳಬಹುದು. ಅಲ್ಲಿನ ಪ್ರಶಾಂತವಾದ ವಾತವಾರಣ ಎಂಥವರನ್ನೂ ಸೆಳೆಯುತ್ತದೆ.

ರಾಜಸ್ಥಾನವನ್ನು ಕೋಟೆಗಳ ನಾಡು ಎಂದು ಕರೆಯಲಾಗುತ್ತದೆ. ಅಲ್ಲಿ ಅತ್ಯಂತ ಬೇಡಿಕೆಯ ವಿವಾಹ ತಾಣಗಳಿವೆ. ರಾಜಮನೆತನದ ಭವ್ಯವಾದ ಅರಮನೆಗಳು, ಪಾರಂಪರಿಕ ಕಟ್ಟಡಗಳು ಮತ್ತು ಮೈಮನ ಸೆಳೆಯುವ ಪರಿಸರದ ನಡುವೆ ಮದುವೆಯಾಗಲು ಇಚ್ಛಿಸುವ ಜೋಡಿಗಳಿಗೆ ರಾಜಸ್ಥಾನ ಹೇಳಿ ಮಾಡಿಸಿದಂತಿದೆ. ಅರಮನೆ, ಸರೋವರ, ಮರುಭೂಮಿ ಹೀಗೆ ತಾವು ಬಯಸಿದ ತಾಣಗಳಲ್ಲಿ ಜೋಡಿಗಳು ವಿವಾಹವಾಗಬಹುದು. ಆಯ್ಕೆ ಅವರಿಗೆ ಬಿಟ್ಟಿದ್ದು.

ರಾಜಸ್ಥಾನದ ಅದ್ಭುತ ವಿವಾಹ ತಾಣಗಳು

ಜೈಪುರ:
ಜೈಪುರವನ್ನು ಪಿಂಕ್‌ ಸಿಟಿ ಎಂದೇ ಕರೆಯಲಾಗುತ್ತದೆ. ಅದು ಪ್ರೀ ವೆಡ್ಡಿಂಗ್‌ ಶೂಟ್‌ ಮತ್ತು ವಿವಾಹಕ್ಕೆ ಹೇಳಿ ಮಾಡಿಸಿದ ಜಾಗ. ಅಲ್ಲಿ ಅದ್ಭುತವಾದ ವಾತಾವರಣವಿದ್ದು ಎಲ್ಲರನ್ನೂ ಆಕರ್ಷಿಸುತ್ತದೆ. ರಾಜಮನೆತನದ ಸೆಟ್‌ಗಳು,ಐಷಾರಾಮಿ ಹೊಟೇಲುಗಳು, ಹಚ್ಚ ಹಸುರಿನ ತಾಣಗಳು ನವ ಜೋಡಿಗಳಲ್ಲಿ ಥ್ರಿಲ್‌ ತರುತ್ತದೆ.

Jaipura


ಉದಯಪುರ: ಉದಯಪುರವನ್ನು ಸರೋವರಗಳ ನಗರ ಎಂದು ಕರೆಯಲಾಗುತ್ತದೆ. ಸದಾ ಕಂಗೊಳಿಸುವ ಉದಯಪುರ ಮದುವೆ ಮತ್ತು ಮಧುಚಂದ್ರಕ್ಕೆ ದಿ ಬೆಸ್ಟ್‌ ತಾಣವಾಗಿದೆ. ಪಿಚೋಲಾ ಸರೋವರದ ಸುತ್ತಮುತ್ತ ಪ್ರೀ ವೆಡ್ಡಿಂಗ್‌ ಮತ್ತು ವೆಡ್ಡಿಂಗ್‌ ಫೋಟೊ ಶೂಟ್‌ಗಳಿಗಾಗಿ ಜೋಡಿಗಳು ಸೇರುತ್ತಾರೆ. ಸೂರ್ಯಾಸ್ತಮ ಮತ್ತು ಸೂರ್ಯೋದಯವನ್ನು ಕೂಡ ವೀಕ್ಷಿಸಬಹುದು. ವಿವಾಹವಾಗುವ ಜೋಡಿಗಳು ದೋಣಿಯಲ್ಲಿಯೂ ಕೂಡ ವಿಹಾರ ಮಾಡಿ ದಿವ್ಯಾನುಭವ ಪಡೆಯಬಹುದು.

Udayapura


ಜೋಧ್‌ಪುರ: ಜೋಧಪುರ ನಗರವು ಅತ್ಯಂತ ಶ್ರೀಮಂತ ನಗರವಾಗಿದೆ. ಗತಕಾಲದ ಇತಿಹಾಸ ಮತ್ತು ವಿಶೇಷವಾದ ಸಂಸ್ಕೃತಿಯೊಂದಿಗೆ ಆ ತಾಣ ಸದಾ ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತದೆ. ವೆಡ್ಡಿಂಗ್‌ ಫೋಟೊ ಶೂಟ್‌ಗೆ ಬೆಸ್ಟ್‌ ಜಾಗ. ಮೋತಿ ಮಹಲ್‌,ಪೂಲ್‌ ಮಹಲ್‌ ಮತ್ತು ಇನ್ನಿತರ ವೈಭವಯುತ ಅರಮನೆಗಳು,ವಾಸ್ತುಶಿಲ್ಪ ಬೆರಗಿನ ಅನುಭವವನ್ನು ನೀಡುತ್ತದೆ. ಎಷ್ಟೋ ಪ್ರೇಮಿಗಳಿಗೆ ಜೋಧ್‌ಪುರ ಇಷ್ಟದ ತಾಣ. ವಿವಾಹವಾಗಲು ಬಯಸುವ ಜೋಡಿಗಳಿಗೂ ಪರ್ಫೆಕ್ಟ್‌ ತಾಣ.

Jodhpura

Deekshith Nair

Deekshith Nair

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!