Saturday, March 28, 2026
Saturday, March 28, 2026

ʻಪೆರುವಿನ ಕಣಿವೆಯಲ್ಲಿʼ ನೇಮಿಚಂದ್ರರ ಪ್ರವಾಸ ಕಥನ

ಪೆರು ದಕ್ಷಿಣ ಅಮೆರಿಕ ಖಂಡದ ಸಾವಿರಾರು ವರ್ಷಗಳ ಇತಿಹಾಸವಿರುವ ಪುರಾತನ ಸಂಸ್ಕೃತಿಯ ನೆಲೆಬೀಡು. ಪುರಾತನ ಆಂಟಿಸ್ ಬೆಟ್ಟಗಳ ಕಠಿಣ ನೆಲದಲ್ಲಿ ಬಂದಿಳಿದಾಗ ಆಗುವ ರೋಮಾಂಚನವನ್ನು ಹಂಚಿಕೊಳ್ಳುತ್ತಾ ಲೇಖಕಿ ಓದುಗರನ್ನು ಪೂರ್ಣವಾಗಿ ಪೆರು ದೇಶಕ್ಕೆ ಸೆಳೆದುಬಿಡುತ್ತಾರೆ. ಪೆರುವಿನ ಉದ್ದಕ್ಕೂ ಉತ್ತರದಿಂದ ದಕ್ಷಿಣಕ್ಕೆ ಆಂಡಿಸ್ ಪರ್ವತ ಶ್ರೇಣಿ ಹರಡಿಕೊಂಡಿದೆ. ಪಶ್ಚಿಮದಿಂದ ಪೂರ್ವಕ್ಕೆ ಹಾಯುತ್ತಿದ್ದಂತೆ ಹಿಮ ತುಂಬಿದ ಪರ್ವತ ಶಿಖರಗಳು, ಅವುಗಳಲ್ಲಿ ಅವೆಷ್ಟೋ ಜ್ವಾಲಾಮುಖಿಗಳು, ಕಠಿಣವಾದ ಭೂಭಾಗ, ಮರಳುಗಾಡು, ಪೂರ್ವಕ್ಕೆ ಟ್ರಾಪಿಕಲ್ ಮಳೆಕಾಡೇ ಇದೆ.

- ಪಾರ್ವತಿ ಶಂಭು

ನೇಮಿಚಂದ್ರರ ‘ಪೆರುವಿನ ಕಣಿವೆಯಲ್ಲಿ’ ಪುಸ್ತಕದ ಹೆಸರು ಹೇಳಿದರೆ ಇದ್ಯಾವ ದೇಶ ಎಲ್ಲ ಬಿಟ್ಟು ಯಾರು ಕಂಡು ಕೇಳರಿಯದ ದೇಶಕ್ಕೆ ಇವರು ಯಾಕೆ ಹೋದರು ಎಂದು ಅನಿಸದಿರದು. ಈ ಪುಸ್ತಕಕ್ಕೆ ʻಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿʼ ಲಭಿಸಿದೆ. 2018ರಲ್ಲಿ ಈ ಪುಸ್ತಕ 10ನೆಯ ಮುದ್ರಣ ಕಂಡಿದೆ. ಈಗ ಈ ಸಂಖ್ಯೆ ಹೆಚ್ಚಾಗಿರಬಹುದು. ಈ ವಿಷಯಗಳೇ ಪುಸ್ತಕ ಓದಬೇಕೆಂಬ ತುಡಿತಕ್ಕೆ ಕಾರಣವಾಗುತ್ತವೆ. ನೇಮಿಚಂದ್ರರು ವೃತ್ತಿಯಲ್ಲಿ ಎಂಜಿನಿಯರ್. ಆದರೆ, ಪ್ರವೃತ್ತಿಯಲ್ಲಿ ಒಳ್ಳೆಯ ಸಾಹಿತಿ. ಕಥೆಗಳ ಜತೆಗೆ ಅಂಕಣ ಬರಹ, ಪ್ರವಾಸ ಕಥನಗಳು, ನೂರಾರು ಮಹತ್ವಪೂರ್ಣ ಲೇಖನಗಳನ್ನು ಬರೆದು, ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಆದ ಸ್ಥಾನ ಪಡೆದವರು. ದಕ್ಷಿಣ ಅಮೆರಿಕ ಖಂಡದ ಪೆರುವಿಗೆ ನೇಮಿಚಂದ್ರರು ಸ್ವಂತ ಆಸಕ್ತಿಯಿಂದ, ಸ್ವಂತ ಖರ್ಚಿನಲ್ಲಿ ಹೋದವರು.

ಚಾರಣಕ್ಕೆ ದಾರಿ ತೋರುವ ನಿಜವಾದ ಗುರು!

ಯಾವ ಸಂಘ-ಸಂಸ್ಥೆ ಅಥವಾ ಯಾವ ಸರಕಾರದ ನೆರವು ಇಲ್ಲದೆ, ಎರಡು ವರ್ಷಗಳ ಕಾಲ ಹಣ ಕೂಡಿಸಿ, ಕಡಿಮೆ ಖರ್ಚು ಅನುಭವ ಹೆಚ್ಚು ನೀಡುವ ಪ್ರವಾಸಕ್ಕೆ ರೂಪುರೇಷೆಗಳನ್ನು ಸಿದ್ಧಪಡಿಸಿಕೊಂಡ ವಿವರಗಳನ್ನು ಅವರು ಪುಸ್ತಕದಲ್ಲಿ ನೀಡಿದ್ದಾರೆ. ಒಂಟಿಯಾಗಿ ಹೋಗುವುದಕ್ಕಿಂತ ಜತೆಗೆ ಒಬ್ಬರಿದ್ದರೆ ಎಲ್ಲಾ ರೀತಿಯಿಂದಲೂ ಒಳ್ಳೆಯದೆಂದು, ಪೆರುವಿನ ಕುರಿತು ಲೇಖಕಿಯಷ್ಟೇ ಆಸಕ್ತಿಯ ತಮ್ಮ ಸಹೋದ್ಯೋಗಿ ಮಾಲತಿಯವರನ್ನು ಕರೆದುಕೊಂಡು ಹೋಗುತ್ತಾರೆ. ಪೆರುವಿಗೆ ಹೋಗಲು ವೀಸಾಕ್ಕಾಗಿ ಪಟ್ಟ ಪಾಡು, 'ಹಳದಿಜ್ವರದ ಇಂಜೆಕ್ಷನ್' ಹಾಕಿಸಿಕೊಳ್ಳಬೇಕೆಂಬ ವಿಷಯ ಹೊರಡಲು ಇನ್ನು ಕೆಲವೇ ದಿನಗಳಿರುವಾಗ ತಿಳಿದು, ಬೆಂಗಳೂರಿನಲ್ಲಿ ಸಿಗದ ಆ ಇಂಜೆಕ್ಷನ್‌ಗಾಗಿ ಮದ್ರಾಸ್ (ಈಗಿನ ಚೆನ್ನೈ)ಗೆ ಹೋಗಬೇಕಿತ್ತು. ಹಾಗಾಗಿ ಅಮೆರಿಕದಲ್ಲೇ ಹಾಕಿಸಿಕೊಳ್ಳೋಣ ಎಂದು ಹೊರಟು ಭಾರತದಲ್ಲಿ 75 ರುಪಾಯಿಗೆ ಸಿಗುತ್ತಿದ್ದ ಇಂಜೆಕ್ಷನ್‌ಗೆ ʻವರ್ಜಿನಿಯ ಮೆಡಿಕಲ್ ಸೆಂಟರ್ʼನಲ್ಲಿ ಡಿಸ್ಕೌಂಟ್ ನಂತರವೂ 4000 ಕೊಟ್ಟಿದ್ದನ್ನು ಅವರು ವಿವರಿಸಿದ್ದಾರೆ.

New Project (35)

ಪೆರು ದಕ್ಷಿಣ ಅಮೆರಿಕ ಖಂಡದ ಸಾವಿರಾರು ವರ್ಷಗಳ ಇತಿಹಾಸವಿರುವ ಪುರಾತನ ಸಂಸ್ಕೃತಿಯ ನೆಲೆಬೀಡು. ಪುರಾತನ ಆಂಟಿಸ್ ಬೆಟ್ಟಗಳ ಕಠಿಣ ನೆಲದಲ್ಲಿ ಬಂದಿಳಿದಾಗ ಆಗುವ ರೋಮಾಂಚನವನ್ನು ಹಂಚಿಕೊಳ್ಳುತ್ತಾ ಲೇಖಕಿ ಓದುಗರನ್ನು ಪೂರ್ಣವಾಗಿ ಪೆರು ದೇಶಕ್ಕೆ ಸೆಳೆದುಬಿಡುತ್ತಾರೆ. ಪೆರುವಿನ ಉದ್ದಕ್ಕೂ ಉತ್ತರದಿಂದ ದಕ್ಷಿಣಕ್ಕೆ ಆಂಡಿಸ್ ಪರ್ವತ ಶ್ರೇಣಿ ಹರಡಿಕೊಂಡಿದೆ. ಪಶ್ಚಿಮದಿಂದ ಪೂರ್ವಕ್ಕೆ ಹಾಯುತ್ತಿದ್ದಂತೆ ಹಿಮ ತುಂಬಿದ ಪರ್ವತ ಶಿಖರಗಳು, ಅವುಗಳಲ್ಲಿ ಅವೆಷ್ಟೋ ಜ್ವಾಲಾಮುಖಿಗಳು, ಕಠಿಣವಾದ ಭೂಭಾಗ, ಮರಳುಗಾಡು, ಪೂರ್ವಕ್ಕೆ ಟ್ರಾಪಿಕಲ್ ಮಳೆಕಾಡೇ ಇದೆ. ಈ ದೇಶದ ಜನಸಂಖ್ಯೆ ಎರಡು ಕೋಟಿ, ಸ್ಪ್ಯಾನಿಶ್ ಇಲ್ಲಿನ ಮುಖ್ಯಭಾಷೆ, ಹಳ್ಳಿ-ಕಣಿವೆಗಳಲ್ಲಿ ಜನರು 'ಕೆಚುವ' ಭಾಷೆಯನ್ನೂ ಮಾತನಾಡುತ್ತಾರೆ.

New Project (36)

ಇಲ್ಲೆಲ್ಲಾ ಜನರಿಗೆ ಒಂದು ಅಕ್ಷರವೂ ಇಂಗ್ಲಿಷ್ ಬರದು. ದಿನನಿತ್ಯದ ವ್ಯವಹಾರ, ಹೊಟೇಲ್‌, ಅಧಿಕಾರಿ ವರ್ಗಗಳಲ್ಲಿ ಹೇಗೆ ಮಾತುಕತೆ ವ್ಯವಹಾರ ಮಾಡಬೇಕು? ಲೇಖಕಿ ಮತ್ತು ಮಾಲತಿ ಅವರಿಗೆ ಸ್ಪ್ಯಾನಿಷ್ ಬರದು. ಮನಸಿದ್ದರೆ ಮಾರ್ಗವೆಂಬಂತೆ ಸಂವಹನ ಸಂಭಾಷಣೆ ಇಲ್ಲದೆ ನಡೆಸಬಹುದೆಂಬುದು ಎಂಬುದನ್ನು ಲೇಖಕಿ ತೋರಿಸಿಕೊಟ್ಟಿದ್ದಾರೆ. ಪೆರುವಿನ ನೆಲದಲ್ಲಿ ಚುನಾವಣೆ, ಮರುಭೂಮಿಯ ನಗರ ನಾಸ್ಕ, ಪೆರುವಿನ ನೆಲದ ಮಹಿಳಾ ಹೋರಾಟ, ಚೌಕಿಲಾ ಸಮಾಧಿಗಳ ನಡುವೆ, ಮರುಭೂಮಿಯ ದೈತ್ಯ ಚಿತ್ರಗಳು, ನಾಷ್ಟಾ ಗೆರೆಗಳ ಮೇಲೆ, ಜ್ವಾಲಾಮುಖಿಯ ನಡುವೆ ಇನ್ಕಾ ಸಾಮ್ರಾಜ್ಯದ ನಾಭಿ ಕೇಂದ್ರ ಕುಸ್ಕೋ, ಓಲಂತಾಯ್ ತೋಂಬೋದ ಸೂರ್ಯ ದೇವಾಲಯ, ರಕ್ತದಲ್ಲಿ ಬರೆದ ಚರಿತ್ರೆ, ಮಾಚು ಪಿಚುವಿನ ಎತ್ತರದಲ್ಲಿ, ಕಳೆದು ಹೋದ ಇನ್ಕಾ ನಗರಿ, ಅಮೆಜಾನ್ ತಟದತ್ತ, ಅಮೆಜಾನ್ ಮಹಾನದಿಯ ಮೇಲೆ, ಬ್ರೆಜಿಲ್ ನೆಲದಲ್ಲಿ, ಪೆರುವಿನ ಮರು ಪ್ರವೇಶ, ಅಮೆಜಾನ್ ಕಾಡಿನಲ್ಲಿ, ವಿಕ್ಟೋರಿಯಾ ಅಮೆಜಾನಿಕ, ಹೋಗಿ ಬರುವೆ ಪೆರು ಹೀಗೆ ಹಲವು ವಿಷಯಗಳನ್ನು ವಿವಿಧ ಭಾಗಗಳಾಗಿ ವಿಂಗಡಿಸಿಕೊಂಡು ಅಲ್ಲಿಯ ಜನಜೀವನ, ಆರ್ಥಿಕ ಸ್ಥಿತಿ, ಇತಿಹಾಸ, ಸೌಂದರ್ಯ, ಸಂಸ್ಕೃತಿ, ಜೀವನ ನಿರ್ವಹಣೆ ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ಲೇಖಕಿ ವಿವರಿಸಿದ್ದಾರೆ. ಸರಳವಾಗಿ ವಿಷಯಗಳನ್ನು ಓದುಗರಿಗೆ ಕಟ್ಟಿಕೊಡುವಲ್ಲಿ ಲೇಖಕಿ ಗೆದ್ದಿದ್ದಾರೆ. ಇದೊಂದು ಮೋಜು-ಮಸ್ತಿಯ ಪ್ರವಾಸವಲ್ಲ, ಅಧ್ಯಯನಶೀಲ ಪ್ರವಾಸವೆಂಬುದನ್ನು ಓದುಗನಿಗೆ ಮನವರಿಕೆ ಮಾಡಿಕೊಡುವಲ್ಲಿ ಪುಸ್ತಕವೂ ಯಶಸ್ವಿಯಾಗಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!