Monday, February 9, 2026
Monday, February 9, 2026

ಘಂಟೆ ಕೊಟ್ಟರೆ ಗಂಡಾಂತರ ಪರಿಹಾರ

ದೇಗುಲದಲ್ಲಿದ್ದ ಗಣಪತಿಯ ಸುಂದರ ಮೂರ್ತಿಯನ್ನು ಶತ್ರುಗಳು ಧ್ವಂಸ ಮಾಡಬಾರದೆಂಬ ಉದ್ದೇಶದಿಂದ ಸ್ಥಳೀಯ ದನ ಕಾಯುವವರು ಅದನ್ನು ಕೊಂಡೊಯ್ದು ಸೌತೆಕಾಯಿಯನ್ನು ಹೇರಳವಾಗಿ ಬೆಳೆಯುತ್ತಿದ್ದ ಜಾಗದಲ್ಲಿ ಪ್ರತಿಷ್ಠಾಪಿಸಿದರು ಎಂಬ ಕಥೆಗಳೂ ಇವೆ. ಇಲ್ಲಿ ಸೌತೆಕಾಯಿ ಹೆಚ್ಚು ಬೆಳೆಯುತ್ತಿದ್ದರಿಂದ ಇಲ್ಲಿನ ಗಣೇಶನಿಗೆ ಸೌತಡ್ಕ ಮಹಾ ಗಣಪತಿ ಎನ್ನುವ ಹೆಸರು ಬಂದಿದೆ ಎನ್ನಲಾಗಿದೆ.

  • ಯಶಸ್ವಿ ದೇವಾಡಿಗ

ಈ ದೇವಸ್ಥಾನದ ಸುತ್ತಲೂ ನೋಡಿದರೆ ಕಾಣುವುದು ಘಂಟೆಗಳು ಮಾತ್ರ. ಈ ಸೌತಡ್ಕದ ಶ್ರೀ ಮಹಾ ಗಣಪತಿ ದೇವಾಲಯಕ್ಕೆ ಭೇಟಿ ನೀಡಿ ಇಷ್ಟಾರ್ಥಗಳನ್ನು ಬೇಡಿಕೊಂಡರೆ ಗಣೇಶನು ಎಲ್ಲವನ್ನು ಶೀಘ್ರದಲ್ಲೇ ಈಡೇರಿಸುತ್ತಾನೆ ಎಂಬುದು ಭಕ್ತರ ನಂಬಿಕೆ.

ಘಂಟೆಯನ್ನು ಕಟ್ಟುವ ಸಂಪ್ರದಾಯ

ಹಚ್ಚ ಹಸಿರಿನ ಕಾನನ ನಡುವೆ ಈ ದೇವಾಲಯವಿದೆ. ಮುಕ್ತ ಮಂಟಪದಲ್ಲಿ ಶಾಂತ ಮೂರ್ತಿಯಾಗಿ ಮಹಾ ಗಣಪತಿ ಪ್ರತಿಷ್ಠಾಪನೆಗೊಂಡಿದೆ. ಕಣ್ಣು ಹಾಯಿಸಿದಷ್ಟು ಹಸಿರು ಛಾಯೆ ಕಣ್ಣಿಗೆ ಬೀಳುವಂತಿದ್ದು, ಘಂಟೆಗಳ ನಾದದ ಮಧ್ಯೆ ಮಹಾ ಗಣಪತಿ ಭಕ್ತರಿಗೆ ದರ್ಶನವನ್ನು ನೀಡುತ್ತಿದೆ. ಈ ದೇವಾಲಯಕ್ಕೆ ಬಂದು ಗಣಪತಿ ಪೂಜೆ ಮಾಡಿಸಿ ಹರಕೆಯನ್ನು ಕಟ್ಟಿಕೊಂಡು, ಅದು ಈಡೇರಿದ ಬಳಿಕ ಘಂಟೆಯನ್ನು ಕಟ್ಟುವ ಸಂಪ್ರದಾಯವಿದೆ.

ಇದನ್ನೂ ಓದಿ: ಓಂಕಾರೇಶ್ವರ ದೇವರ ನಗರಿ ಇದೋ ಮಡಿಕೇರಿ

ಇಲ್ಲಿ ಗಣೇಶನಿಗೆ ನಿತ್ಯವೂ ವಿಶೇಷ ಪೂಜೆ, ಮಂಗಳಾರತಿಗಳು ನಡೆಯುತ್ತವೆ. ಸಾವಿರಾರು ಭಕ್ತಾಧಿಗಳು ಆಗಮಿಸಿ ದೇವರ ದರ್ಶನ ಪಡೆದು ಹೋಗುತ್ತಾರೆ. ಭಕ್ತಿಯಿಂದ ಗಣೇಶನಲ್ಲಿ ಬೇಡಿಕೊಂಡರೆ ಎಲ್ಲಾ ಇಷ್ಟಾರ್ಥಗಳು ನೆರವೇರುತ್ತವೆ ಎನ್ನುವುದು ಭಕ್ತರ ನಂಬಿಕೆ.

ಏನಿದು ಪ್ರತೀತಿ

ಕೆಲವು ಮೂಲಗಳ ಪ್ರಕಾರ ಗಣೇಶನ ವಿಗ್ರಹವನ್ನು ಆ ಪ್ರದೇಶದಲ್ಲಿ ದನ ಮೇಯಿಸುತ್ತಿದ್ದ ಮಕ್ಕಳು ಪತ್ತೆ ಮಾಡಿದರು ಎಂದು ಹೇಳಲಾಗುತ್ತದೆ. ಇನ್ನೂ ಕೆಲವು ಮಾಹಿತಿಯ ಪ್ರಕಾರ ರಾಜಮನೆತನದಿಂದ ಪೂಜಿಸಲ್ಪಟ್ಟ 800 ವರ್ಷಗಳಷ್ಟು ಹಳೆಯದಾದ ಗಣಪತಿ ದೇವಾಲಯವು ಒಮ್ಮೆ ಶತ್ರುಗಳಿಂದ ನಾಶವಾಗುತ್ತದೆ.

Untitled design (18)

ದೇಗುಲದಲ್ಲಿದ್ದ ಗಣಪತಿಯ ಸುಂದರ ಮೂರ್ತಿಯನ್ನು ಶತ್ರುಗಳು ಧ್ವಂಸ ಮಾಡಬಾರದೆಂಬ ಉದ್ದೇಶದಿಂದ ಸ್ಥಳೀಯ ದನ ಕಾಯುವವರು ಅದನ್ನು ಕೊಂಡೊಯ್ದು ಸೌತೆಕಾಯಿಯನ್ನು ಹೇರಳವಾಗಿ ಬೆಳೆಯುತ್ತಿದ್ದ ಜಾಗದಲ್ಲಿ ಪ್ರತಿಷ್ಠಾಪಿಸಿದರು ಎಂಬ ಕಥೆಗಳೂ ಇವೆ. ಇಲ್ಲಿ ಸೌತೆಕಾಯಿ ಹೆಚ್ಚು ಬೆಳೆಯುತ್ತಿದ್ದರಿಂದ ಇಲ್ಲಿನ ಗಣೇಶನಿಗೆ ಸೌತಡ್ಕ ಮಹಾ ಗಣಪತಿ ಎನ್ನುವ ಹೆಸರು ಬಂದಿದೆ ಎನ್ನಲಾಗಿದೆ.

ವಿಶೇಷತೆ ಇದು!

ಭಕ್ತರ ಇಷ್ಟಾರ್ಥಗಳು ಸಿದ್ಧಿಸಿದ ನಂತರ ದೇವಾಲಯಕ್ಕೆ ಬಂದು ಘಂಟೆಯನ್ನು ಕಟ್ಟುತ್ತಾರೆ. ಒಂದೇ ದಿನದಲ್ಲಿ ನೂರಕ್ಕೂ ಹೆಚ್ಚು ಘಂಟೆಗಳನ್ನು ಈ ದೇವಾಲಯಕ್ಕೆ ಅರ್ಪಿಸಲಾಗುತ್ತದೆ. ಅಷ್ಟೇ ಅಲ್ಲ ದೇವಸ್ಥಾನದ ಆವರಣಕ್ಕೆ ಹೋದರೆ ಸಾಕು ಘಂಟೆಗಳ ಸದ್ದೇ ಕಿವಿಗೆ ಇಂಪು ನೀಡುತ್ತದೆ.

ಇಂದಿಗೂ ಅವಲಕ್ಕಿಯನ್ನು ಪ್ರಸಾದವಾಗಿ ಅರ್ಪಿಸುವುದು ಇಲ್ಲಿ ಒಂದು ವಿಶಿಷ್ಟ ಸೇವೆಯಾಗಿದೆ. ರಾಜ್ಯ ಹೊರರಾಜ್ಯಗಳಿಂದಲೂ ಈ ದೇವಸ್ಥಾನಕ್ಕೆ ಭಕ್ತರು ಆಗಮಿಸಿ ಹರಕೆ ಕಟ್ಟಿಕೊಂಡು ಹೋಗುತ್ತಾರೆ.

ಭಕ್ತಾದಿಗಳು ಮಹಾ ಗಣಪತಿಗೆ ʻಅಪ್ಪʼ(ತಿನಿಸು) ರೂಪದಲ್ಲಿ ಪ್ರಾರ್ಥನೆ ಸಲ್ಲಿಸಬಹುದು. ಕೆಲವು ಭಕ್ತಾದಿಗಳು ಹೇಳುವ ಪ್ರಕಾರ ಹರಕೆಯನ್ನು ನೆರವೇರಿಸುವಂತೆ ಇಲ್ಲಿನ ಮಹಾಗಣಪತಿಯಲ್ಲಿ ಪ್ರಾರ್ಥಿಸಿಕೊಂಡರೆ ನಿಮ್ಮ ಹರಕೆಯು ಕೇವಲ 2 ತಿಂಗಳುಗಳಲ್ಲಿ ಪೂರ್ಣಗೊಳ್ಳುತ್ತದೆ ಎನ್ನಲಾಗಿದೆ.

Untitled design (17)

ದಾರಿ ಹೇಗೆ?

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ 40.3 ಕಿಮೀ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕೇವಲ 17.6 ಕಿಮೀ ದೂರದಲ್ಲಿದೆ. ಬೆಂಗಳೂರಿನಿಂದ ಮಂಗಳೂರಿಗೆ ಅಥವಾ ಧರ್ಮಸ್ಥಳಕ್ಕೆ ತೆರಳುವ ಬಸ್‌ ಅಥವಾ ರೈಲಿನಲ್ಲಿ ಸೌತಡ್ಕ ದೇವಸ್ಥಾನಕ್ಕೆ ತಲುಪಬಹುದು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿದೆ. ರೈಲು ಮಾರ್ಗವಾಗಿ ಬಂದರೆ ಮಂಗಳೂರು ಅಥವಾ ಉಡುಪಿ ರೈಲು ನಿಲ್ದಾಣಗಳಿಗೆ ತಲುಪಿ, ಅಲ್ಲಿಂದ ಬಸ್ ಅಥವಾ ಟ್ಯಾಕ್ಸಿ ಮೂಲಕ ಬೆಳ್ತಂಗಡಿ ಕಡೆಗೆ ಪ್ರಯಾಣಿಸಿ, ಸೌತಡ್ಕ ತಲುಪಬಹುದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ