Friday, October 3, 2025
Friday, October 3, 2025

ಈ ದೇಶದಲ್ಲಿದೆ ಬುದ್ಧನ ಅತಿ ದೊಡ್ಡ ಪ್ರತಿಮೆ !

ಇಂದು ಬುದ್ಧ ಪೂರ್ಣಿಮೆಯ ದಿನ. ಲೋಕಕ್ಕೆ ಶಾಂತಿಯ ಸಂದೇಶವನ್ನು ಸಾರಿದ ಗೌತಮ ಬುದ್ಧನ ಅತಿ ದೊಡ್ಡ ಪ್ರತಿಮೆ ಥೈಲ್ಯಾಂಡ್‌ ನಲ್ಲಿದ್ದು, ಮಲಗಿದ ಭಂಗಿಯಲ್ಲಿ ಬುದ್ಧನ ದರ್ಶನವಾಗಲಿದೆ.

ಇಂದು, ಮೇ 12, ಬುದ್ಧ ಪೂರ್ಣಿಮೆ. ಈ ದಿನವನ್ನು ಬುದ್ಧ ಜಯಂತಿ ಎಂದೂ ಕರೆಯಲಾಗುತ್ತದೆ. ಬೌದ್ಧಧರ್ಮವನ್ನು ಸ್ಥಾಪಿಸಿದ ರಾಜಕುಮಾರ ಸಿದ್ಧಾರ್ಥ ಗೌತಮನ ಜನನವನ್ನು ಸೂಚಿಸುವ ದಿನವಿಂದು.ರಾಜವಂಶದ ಕುಡಿಯಾದರೂ ತನ್ನೆಲ್ಲ ವೈಭೋಗವನ್ನು ತೊರೆದು, ಜ್ಞಾನೋದಯವನ್ನು ಪಡೆದು ಗೌತಮ ಬುದ್ಧನಾಗುತ್ತಾನೆ. ಲೋಕಕ್ಕೆ ಶಾಂತಿಯ ಸಂದೇಶ ಸಾರುತ್ತಾನೆ. ಬುದ್ಧನ ಜನನ, ಮರಣ ಹಾಗೂ ಜ್ಞಾನೋದಯವನ್ನು ಸ್ಮರಿಸುವ ಉದ್ದೇಶದಿಂದ ಪ್ರತಿ ವರ್ಷ ಬುದ್ಧ ಪೂರ್ಣಿಮೆಯನ್ನು ಆಚರಿಸಲಾಗುತ್ತದೆ.

ದೇಶ ಮತ್ತು ಪ್ರಪಂಚದಲ್ಲಿ ಬುದ್ಧನಿಗೆ ಸಂಬಂಧಿಸಿದ ಅನೇಕ ಪ್ರವಾಸಿ ಸ್ಥಳಗಳಿವೆ. ಒಂದಕ್ಕಿಂತ ಒಂದು ವಿಭಿನ್ನವಾದ ಚಿಂತನೆಯನ್ನು ಸಾರುವ ಬೌದ್ಧ ದೇಗುಲಗಳು, ಲಕ್ಷಾಂತರ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತವೆ. ಆದರೆ ವಿದೇಶದಲ್ಲಿರುವ ಈ ದೇಗುಲದಲ್ಲಿ ಭಗವಾನ್ ಬುದ್ಧನ ಪ್ರತಿಮೆಯೊಂದಿದೆ. ಈ ಪ್ರತಿಮೆಯ ವಿಶೇಷವೆಂದರೆ ಬುದ್ಧ ಮಲಗಿರುವ ಭಂಗಿಯಲ್ಲಿ ಕಾಣಸಿಗುತ್ತಾನೆ.

istockphoto-178187901-612x612

ಥೈಲ್ಯಾಂಡ್‌ನಲ್ಲಿದೆ ಅತಿದೊಡ್ಡ ಬುದ್ಧ ಪ್ರತಿಮೆ

ಬುದ್ಧನ ಅತಿದೊಡ್ಡ ಪ್ರತಿಮೆ ಥೈಲ್ಯಾಂಡ್‌ನ ವಾಟ್ ಫೋ (Wat Pho) ದೇವಾಲಯದಲ್ಲಿದೆ. ಇದನ್ನು ಮಲಗಿರುವ ಬುದ್ಧನ ದೇವಾಲಯ ಎಂದೂ ಕರೆಯುತ್ತಾರೆ. ಈ ದೇವಾಲಯವು ಬ್ಯಾಂಕಾಕ್‌ನ ಫ್ರಾ ನಖೋನ್ ಜಿಲ್ಲೆಯ ಗ್ರ್ಯಾಂಡ್ ಪ್ಯಾಲೇಸ್‌ನ ದಕ್ಷಿಣಕ್ಕೆ ರಟ್ಟನಕೋಸಿನ್ ದ್ವೀಪದಲ್ಲಿದೆ. ದೇವಾಲಯದ ಅಧಿಕೃತ ಹೆಸರು "ವಾಟ್ ಫ್ರಾ ಚೆತುಫೋನ್ ವಿಮೋನ್ ಮಂಗ್ಖಲಾರಾಮ್ ರಾಜವರಮಹಾವಿಹಾನ್"( Wat Phra Chetuphon Wimon Mangkhalaram Rajwaramahawihan). ಪ್ರತಿ ವರ್ಷ ದೇಶ ವಿದೇಶಗಳಿಂದ ಅಸಂಖ್ಯಾತ ಪ್ರವಾಸಿಗರು ಈ ದೇವಾಲಯವನ್ನು ನೋಡಲು ಬರುತ್ತಾರೆ.

navbharat-times-121051336

ಇಲ್ಲಿದೆ ಸಾವಿರಕ್ಕೂ ಹೆಚ್ಚು ಬುದ್ಧನ ಪ್ರತಿಮೆಗಳು

ವಾಟ್ ಫೋ ಬ್ಯಾಂಕಾಕ್‌ನಲ್ಲಿರುವ ಅತ್ಯಂತ ದೊಡ್ಡ ಮತ್ತು ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ಇದು 80,000 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದ್ದು, ಸಾವಿರಕ್ಕೂ ಹೆಚ್ಚು ಬುದ್ಧನ ಪ್ರತಿಮೆಗಳು ಇಲ್ಲಿವೆ. ಅವುಗಳಲ್ಲಿ ಪ್ರಮುಖವಾದ ಮಲಗಿರುವ ಬುದ್ಧನ ಪ್ರತಿಮೆ ಇಲ್ಲಿದ್ದು, ಇದು 46 ಮೀಟರ್ (151 ಅಡಿ) ಎತ್ತರವಿದೆ.

ದೇವಾಲಯಕ್ಕೆ ಪ್ರವೇಶ ಉಚಿತವಿಲ್ಲ

ನೀವು ವಾಟ್ ಫೋ ಬ್ಯಾಂಕಾಕ್ ದೇವಾಲಯಕ್ಕೆ ಭೇಟಿ ನೀಡಿ ಬುದ್ಧನ ಅತಿದೊಡ್ಡ ಪ್ರತಿಮೆಯನ್ನು ನೋಡಲು ಬಯಸಿದರೆ, ಪ್ರವೇಶ ಶುಲ್ಕವನ್ನು ಪಾವತಿಸಬೇಕಾಗುತ್ತದೆ. 250 ರೂಪಾಯಿಗಳವರೆಗೆ ಪ್ರವೇಶ ಶುಲ್ಕವನ್ನು ಇಲ್ಲಿ ನಿಗದಿ ಮಾಡಲಾಗಿದೆ.

Temple-of-the-Reclining-Buddha-–-Wat-Pho

ದೇವಸ್ಥಾನದ ಸಮಯ, ವಸ್ತ್ರ ಸಂಹಿತೆಯ ಬಗ್ಗೆ ತಿಳಿದುಕೊಳ್ಳಿ

ವಾಟ್ ಫೋ ದೇವಾಲಯವು ಪ್ರತಿದಿನ ಬೆಳಗ್ಗೆ 8 ರಿಂದ ಸಂಜೆ 6:30 ರವರೆಗೆ ತೆರೆದಿರುತ್ತದೆ. ಈ ಸಮಯದಲ್ಲಿ ದೇವಾಲಯವನ್ನು ಪ್ರವೇಶಿಸಲು ವಿಶೇಷ ಡ್ರೆಸ್ ಕೋಡ್ ಅನ್ನು ಸಹ ಅನುಸರಿಸಬೇಕಾಗುತ್ತದೆ. ಪುರುಷರು ಉದ್ದನೆಯ ಪ್ಯಾಂಟ್ ಮತ್ತು ಸಣ್ಣ ಅಥವಾ ಉದ್ದ ತೋಳಿನ ಶರ್ಟ್ ಧರಿಸಬೇಕು. ಮಹಿಳೆಯರು ಕನಿಷ್ಠ ಮೊಣಕಾಲಿನವರೆಗೆ ಇರುವ ಸ್ಕರ್ಟ್ ಅಥವಾ ಪ್ಯಾಂಟ್ ಅಥವಾ ಉಡುಪನ್ನು ಧರಿಸಲೇಬೇಕು. ವಸ್ತ್ರ ಸಂಹಿತೆಯನ್ನು ಅನುಸರಿಸಿ ಬಟ್ಟೆ ಧರಿಸಿದರೆ ಮಾತ್ರ ದೇವಾಲಯದೊಳಗೆ ಪ್ರವೇಶಕ್ಕೆ ಅವಕಾಶವಿರುತ್ತದೆ.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Previous

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

ವಿಹಂಗಮ ಸಂಗಮ

Read Next

ವಿಹಂಗಮ ಸಂಗಮ