ಕೆಎಸ್‌ಟಿಡಿಸಿಯಿಂದ ಫೊಟೋಗ್ರಫಿ ಸ್ಪರ್ಧೆ "ಕ್ಯಾಪ್ಚರ್ ಕರ್ನಾಟಕ"
ಕಲೆ ಮತ್ತು ಪ್ರವಾಸೋದ್ಯಮ ಎರಡಕ್ಕೂ ಉತ್ತೇಜನ ನೀಡುವ ಉದ್ದೇಶದಿಂದ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು "ಕ್ಯಾಪ್ಚರ್ ಕರ್ನಾಟಕ" ಎಂಬ ಹೆಸರಿನ ಫೊಟೋಗ್ರಫಿ ಸ್ಪರ್ಧೆಯನ್ನು ಘೋಷಿಸಿದೆ.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಕರ್ನಾಟಕದ ಸುಂದರ ದೃಶ್ಯಗಳು, ಸಂಸ್ಕೃತಿ ಮತ್ತು ಪರಂಪರೆಯ ಅದ್ಭುತಗಳನ್ನು ಪರಿಚಯಿಸಲು "ಕ್ಯಾಪ್ಚರ್ ಕರ್ನಾಟಕ" ಎಂಬ ಹೆಸರಿನ ಫೊಟೋಗ್ರಫಿ ಸ್ಪರ್ಧೆಯನ್ನು ಘೋಷಿಸಿದೆ.
ಆಗಸ್ಟ್ 1 ರಿಂದ 31ರವರೆಗೆ ನಡೆಯಲಿರುವ ಈ ಸ್ಪರ್ಧೆ ಎಲ್ಲಾ ಛಾಯಾಗ್ರಾಹಕರಿಗೆ ಒಂದು ವಿಶಿಷ್ಟ ಅವಕಾಶವನ್ನು ನೀಡುತ್ತಿದೆ. ರಾಜ್ಯದ ದೃಶ್ಯ ವೈವಿಧ್ಯ, ಐತಿಹಾಸಿಕ ಧಾರ್ಮಿಕ ಸ್ಥಳಗಳು, ಪ್ರಕೃತಿ ಸೌಂದರ್ಯ ಮತ್ತು ಸಂಸ್ಕೃತಿಯ ಅಚ್ಚರಿಗಳನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿಯುವ ಅವಕಾಶ ಇದಾಗಿದೆ.

ಸ್ಪರ್ಧೆಯಲ್ಲಿ ಭಾಗವಹಿಸುವ ವಿಧಾನ: ಭಾಗವಹಿಸುವವರು ತಮ್ಮ ಅತ್ಯುತ್ತಮ ಛಾಯಾಚಿತ್ರಗಳನ್ನು ಸ್ಥಳದ ವಿವರ ಮತ್ತು ಚಿಕ್ಕ ವಿವರಣೆಯೊಂದಿಗೆ ಹಂಚಿಕೊಳ್ಳಬೇಕು. ಛಾಯಾಚಿತ್ರವನ್ನು ಹಂಚಿಕೊಳ್ಳುವಾಗ #CaptureKarnataka ಹ್ಯಾಷ್‌ಟ್ಯಾಗ್ ಅನ್ನು ಬಳಸಿ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡಬೇಕು.
ಉತ್ತಮ ಛಾಯಾಚಿತ್ರಗಳಿಗೆ ಆಕರ್ಷಕ ಬಹುಮಾನಗಳಿವೆ ಎಂದಿರುವ ಕೆಎಸ್ ಟಿಡಿಸಿ, ಈ ಸ್ಪರ್ಧೆಯ ಮೂಲಕ ಕಲೆ ಮತ್ತು ಪ್ರವಾಸೋದ್ಯಮ ಎರಡಕ್ಕೂ ಉತ್ತೇಜನ ನೀಡುವ ಉದ್ದೇಶ ಹೊಂದಿದೆ.
ಫೊಟೋಗ್ರಫಿ ಪ್ರಿಯರಿಗೆ ಇದು ಕರ್ನಾಟಕವನ್ನು ಹೊಸ ದೃಷ್ಟಿಕೋನದಲ್ಲಿ ನೋಡುವ ಅಮೂಲ್ಯ ಅವಕಾಶ.
ಹೆಚ್ಚಿನ ಮಾಹಿತಿಗಾಗಿ: ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಅಧಿಕೃತ ವೆಬ್‌ಸೈಟ್ ಅಥವಾ KSTDC ಪೇಜ್‌ಗೆ ಭೇಟಿ ನೀಡಿ.