Saturday, January 10, 2026
Saturday, January 10, 2026

ನೈಋತ್ಯ ರೈಲ್ವೆಯಿಂದ ಸಂಕ್ರಾತಿಗೆ ವಿಶೇಷ ರೈಲು ಸಂಚಾರ

ಹೊಸವರ್ಷದ ಮೊದಲ ತಿಂಗಳಲ್ಲೇ ಬರಲಿರುವ ಸಂಕ್ರಾಂತಿ ಮತ್ತು ಗಣರಾಜ್ಯೋತ್ಸವ ಆಚರಣೆಗೆ ಜನಸಂದಣಿ ತಪ್ಪಿಸಲು ನೈಋತ್ಯ ರೈಲ್ವೆ ಹೆಚ್ಚುವರಿಯಾಗಿ ವಿಶೇಷ ರೈಲುಗಳ ಸೇವೆಯನ್ನು ಆರಂಭಿಸಲು ತೀರ್ಮಾನಿಸಿದೆ. ಇದೀಗ ಎರಡು ಮಾರ್ಗಗಳಲ್ಲಿ ಸಂಚರಿಸಲಿರುವ ಈ ವಿಶೇಷ ರೈಲುಗಳು, ಬೆಂಗಳೂರಿನಿಂದಲೇ ಸಂಚಾರ ಆರಂಭಿಸಲಿವೆ. ಆ ಎರಡು ಮಾರ್ಗಗಳು ಯಾವುವು? ರೈಲುಗಳು ಓಡಾಟದ ಸಮಯ ಏನು? ಎಂಬುದರ ಮಾಹಿತಿ ಈ ಕೆಳಗಿನಂತಿದೆ.

ಹಬ್ಬದ ದಿನಗಳಲ್ಲಿ ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳಿಗೆ ಹೋಗುವ ಜನರ ಸಂಖ್ಯೆ ಬೆಂಗಳೂರಿನ ಪ್ರತೀ ಸಾರಿಗೆ ನಿಲ್ದಾಣಗಳಲ್ಲಿ ಅಧಿಕವಾಗಿರುತ್ತದೆ. ಸದ್ಯ ಹೊಸವರ್ಷದ ಆರಂಭದಿಂದಲೇ ರೈಲ್ವೆ ಇದರ ನಿರ್ವಹಣೆಗೆ ತಯಾರಿ ಆರಂಭಿಸಿದೆ. ಹೊಸವರ್ಷದ ಮೊದಲ ತಿಂಗಳಲ್ಲೇ ಬರಲಿರುವ ಸಂಕ್ರಾಂತಿ ಮತ್ತು ಗಣರಾಜ್ಯೋತ್ಸವ ಆಚರಣೆಗೆ ಜನಸಂದಣಿ ತಪ್ಪಿಸಲು ನೈಋತ್ಯ ರೈಲ್ವೆ ಹೆಚ್ಚುವರಿಯಾಗಿ ವಿಶೇಷ ರೈಲುಗಳ ಸೇವೆಯನ್ನು ಆರಂಭಿಸಲು ತೀರ್ಮಾನಿಸಿದೆ.

ಸದ್ಯ ಎರಡು ಮಾರ್ಗಗಳಲ್ಲಿ ಸಂಚರಿಸಲಿರುವ ಈ ವಿಶೇಷ ರೈಲುಗಳು, ಬೆಂಗಳೂರಿನಿಂದಲೇ ಪ್ರಯಾಣ ಆರಂಭಿಸಲಿವೆ. ಆ ಎರಡು ಮಾರ್ಗಗಳು ಯಾವುವು? ರೈಲುಗಳು ಓಡಾಟದ ಸಮಯ ಏನು? ಎಂಬುದರ ಮಾಹಿತಿ ಈ ಕೆಳಗಿನಂತಿದೆ.

ಯಶವಂತಪುರದಿಂದ ತಾಳಗುಪ್ಪಕ್ಕೆ

ಜ.13 ಮತ್ತು ಜ.23ರಂದು ರಾತ್ರಿ 10.45 ಗಂಟೆಗೆ ಯಶವಂತಪುರದಿಂದ ಹೊರಟು ಮರುದಿನ ಬೆಳಿಗ್ಗೆ 4.45 ಗಂಟೆಗೆ ರೈಲು ತಾಳಗುಪ್ಪ ತಲುಪಲಿದೆ. ಜ.14 ಮತ್ತು 24ರಂದು ಬೆಳಗ್ಗೆ 10 ಗಂಟೆಗೆ ತಾಳಗುಪ್ಪದಿಂದ ಹೊರಟು ಸಂಜೆ 5.15 ಗಂಟೆಗೆ ಯಶವಂತಪುರ ತಲುಪಲಿದೆ.

ರೈಲು ಸಂಚಾರಿಸುವ ಮಾರ್ಗದ ನಿಲ್ದಾಣಗಳು

ಬೆಂಗಳೂರಿನಿಂದ ಆರಂಭವಾಗಲಿರುವ ವಿಶೇಷ ರೈಲುಗಳು ಕ್ರಮವಾಗಿ ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ತರೀಕೆರೆ, ಭದ್ರಾವತಿ, ಶಿವಮೊಗ್ಗ, ಆನಂದಪುರ ಮತ್ತು ಸಾಗರ ಜಂಬಗಾರು ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿವೆ ಎಂದು ನೈರುತ್ಯ ರೈಲ್ವೆ ಮಾಹಿತಿ ನೀಡಿದೆ.

ನೈಋತ್ಯ ರೈಲ್ವೆ1

ಬೆಂಗಳೂರಿನಿಂದ ವಿಜಯಪುರಕ್ಕೆ

ಈ ಮಾರ್ಗದಲ್ಲಿ ಬೆಂಗಳೂರಿನ ಎಸ್‌ಎಂವಿಟಿ ರೈಲು ನಿಲ್ದಾಣದಿಂದ ವಿಶೇಷ ರೈಲುಗಳು ಕಾರ್ಯಾರಂಭಿಸಲಿದ್ದು ವಿಜಯಪುರ ತಲುಪಲಿವೆ.

ಜನವರಿ 13 ಮತ್ತು 23ರಂದು ರಾತ್ರಿ 7.15 ಗಂಟೆಗೆ ಎಸ್‌ಎಂವಿಟಿಯಿಂದ ಹೊರಡುವ ರೈಲು ಮರುದಿನ ಬೆಳಗ್ಗೆ 7 ಗಂಟೆಗೆ ವಿಜಯಪುರಕ್ಕೆ ತಲುಪಲಿದೆ.

ವಿಜಯಪುರದಿಂದ ಜ.18 ಮತ್ತು 26ರಂದು ಸಂಜೆ 5.30 ಗಂಟೆಗೆ ವಿಜಯಪುರದಿಂದ ಹೊರಟು ಮರುದಿನ ಬೆಳಗ್ಗೆ 6.30 ಗಂಟೆಗೆ ಬೆಂಗಳೂರಿನ ಎಸ್‌ಎಂವಿಟಿ ರೈಲು ನಿಲ್ದಾಣಕ್ಕೆ ತಲುಪಲಿದೆ.

ರೈಲು ಸಂಚರಿಸುವ ಮಾರ್ಗದ ನಿಲ್ದಾಣಗಳು

ಬಾಣಸವಾಡಿ, ತುಮಕೂರು, ಅರಸಿಕೆರೆ, ಬೀರೂರು, ದಾವಣಗೆರೆ, ಹರಿಹರ, ಎಸ್‌ಎಂಎಂ ಹಾವೇರಿ, ಬಾದಾಮಿ, ಬಾಗಲಕೋಟೆ ಹಾಗೂ ಆಲಮಟ್ಟಿ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಅವಕಾಶ ನೀಡಲಿದೆ ಎಂದು ನೈರುತ್ಯ ರೈಲ್ವೆ ಮಾಹಿತಿ ನೀಡಿದೆ.

Jadesha Emmiganur

Jadesha Emmiganur

Jadesha Emmiganur Is a Passionate Journalist from Ballari

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..