Saturday, December 13, 2025
Saturday, December 13, 2025

ಆಕಾಶದಲ್ಲಿ ಅದೃಶ್ಯ ತಂತಿ

ಈಗ ವಿಮಾನದ ವೇಗ ಎಷ್ಟಿದೆ? ಗಾಳಿ ಯಾವ ಕಡೆಯಿಂದ ಬೀಸುತ್ತಿದೆ? ಈಗ ಎಡಕ್ಕೆ ತಿರುಗಿದ್ರೆ ಸುರಕ್ಷಿತ ಅಲ್ವಾ?’ ಅಂತ ಯೋಚಿಸಿ, ನಂತರ ಆ ಕಂಪ್ಯೂಟರೇ ರೆಕ್ಕೆಯ ಮೇಲಿರುವ ಮೋಟಾರ್‌ ಗಳಿಗೆ ಆದೇಶ (ಕರೆಂಟ್) ಪಾಸ್ ಮಾಡುತ್ತದೆ. ಆಗ ರೆಕ್ಕೆ ತಿರುಗುತ್ತದೆ. ಅಂದರೆ, ಇಲ್ಲಿ ಪೈಲಟ್ ಕೇವಲ ಆರ್ಡರ್ ಮಾಡೋನು. ಕೆಲಸ ಮಾಡೋದು ಕಂಪ್ಯೂಟರ್ ಮತ್ತು ವೈರ್ ಗಳು! ಇದನ್ನೇ ಇಂಗ್ಲಿಷ್‌ನಲ್ಲಿ ‘ಫ್ಲೈ ಬೈ ವೈರ್’ ಅಂತಾರೆ.

ರಾತ್ರಿ.. ಕಗ್ಗತ್ತಲು.. ಭೂಮಿಯಿಂದ ಸುಮಾರು ಮೂವತ್ತೈದು ಸಾವಿರ ಅಡಿ ಎತ್ತರದಲ್ಲಿ ವಿಮಾನ ಹಾರುತ್ತಿದೆ. ಹೊರಗಡೆ ಮೈನಸ್ ಡಿಗ್ರಿ ಚಳಿ. ಒಳಗಡೆ ನೂರಾರು ಜೀವಗಳು ಗೊರಕೆ ಹೊಡೆಯುತ್ತಾ ಮಲಗಿವೆ. ಕಾಕ್‌ಪಿಟ್‌ನಲ್ಲಿ ಕುಳಿತಿರುವ ಪೈಲಟ್‌ಗೆ ಮಾತ್ರ ನಿದ್ದೆ ಇಲ್ಲ. ಆತ ಎದುರಿಗಿರುವ ಕಂಟ್ರೋಲ್ ಸ್ಟಿಕ್ ಅನ್ನು ಎಡಕ್ಕೆ ತಿರುಗಿಸುತ್ತಾನೆ.

ಆ ದೈತ್ಯ ಲೋಹದ ಹಕ್ಕಿ, ಲಕ್ಷಾಂತರ ಕೆಜಿ ತೂಕದ ವಿಮಾನ, ನಿಧಾನವಾಗಿ ಎಡಕ್ಕೆ ಬಾಗುತ್ತದೆ. ಆದರೆ ಕೇಳಿ... ನಿಜವಾಗಿಯೂ ಆ ಪೈಲಟ್ ತಿರುಗಿಸಿದ್ದು ವಿಮಾನವನ್ನಾ? ಅಥವಾ ಆತ ಕೇವಲ ಒಂದು ಸಂದೇಶ ಕಳಿಸಿದನಾ? ಆತನ ಕೈಗೂ, ವಿಮಾನದ ರೆಕ್ಕೆಗೂ ನಡುವೆ ಯಾವುದೇ ಸಂಪರ್ಕವೇ ಇಲ್ಲ ಅಂದ್ರೆ ನಂಬ್ತೀರಾ? ಇದೇ ‘ಫ್ಲೈ ಬೈ ವೈರ್’ (Fly-by-Wire)!

ಹಿಂದೆಲ್ಲ ಏನಿತ್ತು ಗೊತ್ತಾ? ನಮ್ಮ ಅಜ್ಜಂದಿರ ಕಾಲದ ವಿಮಾನಗಳು. ಪೈಲಟ್ ಎದುರಿಗಿದ್ದ ಸ್ಟಿಕ್ ಅನ್ನು ಎಳೆದರೆ, ಅದಕ್ಕೆ ಜೋಡಿಸ ಲಾದ ದಪ್ಪನೆಯ ಕಬ್ಬಿಣದ ಕೇಬಲ್ಲುಗಳು, ಗರಗಡಿಗಳು (Pulleys), ಸರಳುಗಳು ಕರ್ ಕರ್ರ್ ಅಂತ ಶಬ್ದ ಮಾಡುತ್ತಾ ರೆಕ್ಕೆಯನ್ನು ಜಗ್ಗುತ್ತಿದ್ದವು. ಅದು ಒಂಥರಾ ಲಾರಿ ಓಡಿಸಿದ ಹಾಗೆ. ವಿಮಾನದ ರೆಕ್ಕೆ ತಿರುಗಬೇಕಂದ್ರೆ ಪೈಲಟ್ ತನ್ನ ತೋಳಿನ ಬಲವನ್ನೆಲ್ಲ ಪ್ರದರ್ಶಿಸಬೇಕಿತ್ತು. ಅದು ‘ಮ್ಯಾನ್ಯುವಲ್’ ಯುಗ. ಅಲ್ಲಿ ಪೈಲಟ್ ಏನು ಮಾಡಿದರೂ ವಿಮಾನ ಅದಕ್ಕೆ ಬಗ್ಗಿ ಸಲಾಮು ಹೊಡೆಯುತ್ತಿತ್ತು. ಆದರೆ ಕಾಲ ಬದಲಾಯಿತು. ವಿಮಾನಗಳು ದೊಡ್ಡದಾದವು. ವೇಗ ಹೆಚ್ಚಾಯಿತು. ಮನುಷ್ಯನ ತೋಳ್ಬಲ ಸಾಲದಾಯಿತು. ಆಗ ಹುಟ್ಟಿಕೊಂಡಿದ್ದೇ ಈ ‘ಫ್ಲೈ ಬೈ ವೈರ್’ ಎಂಬ ಅದ್ಭುತ ಟೆಕ್ನಾಲಜಿ. ಹಾಗಾದರೆ ಏನಿದು ಮಾಯಾ ಜಾಲ? ಸರಳವಾಗಿ ಹೇಳುವುದಾದರೆ, ಈಗಿನ ಮಾಡರ್ನ್ ವಿಮಾನಗಳಲ್ಲಿ (ಉದಾಹರಣೆಗೆ, ಏರ್‌ಬಸ್ A320 ಅಥವಾ ಬೋಯಿಂಗ್ 777), ಪೈಲಟ್ ಕೈಯಲ್ಲಿರುವ ಸ್ಟಿಕ್‌ಗೂ, ಹೊರಗಡೆ ಇರುವ ರೆಕ್ಕೆಗೂ ನೇರವಾದ ಸಂಪರ್ಕವೇ ಇರಲ್ಲ!

ಇದನ್ನೂ ಓದಿ: ವಿಮಾನ ಸಿಬ್ಬಂದಿಯೂ, ಗಿಫ್ಟ್‌ ಸ್ವೀಕಾರವೂ

ಮಧ್ಯದಲ್ಲಿ ಕತ್ತರಿ ಹಾಕೋಕೆ ಅಂತಾನೇ ಒಂದು ಕಂಪ್ಯೂಟರ್’ ಕೂತಿರುತ್ತದೆ. ಪೈಲಟ್ ಸ್ಟಿಕ್ ಅನ್ನು ಎಡಕ್ಕೆ ತಿರುಗಿಸಿದಾಗ, ಆ ಸ್ಟಿಕ್ ನೇರವಾಗಿ ರೆಕ್ಕೆಯನ್ನು ಎಳೆಯಲ್ಲ. ಬದಲಿಗೆ, ಅದು ಕಂಪ್ಯೂಟರ್‌ಗೆ ಒಂದು ಎಲೆಕ್ಟ್ರಾನಿಕ್ ಸಿಗ್ನಲ್ ಕಳಿಸುತ್ತದೆ. ನೋಡು ಗುರು, ನಮ್ಮ ಬಾಸ್ ವಿಮಾನವನ್ನು ಎಡಕ್ಕೆ ತಿರುಗಿಸಬೇಕು ಅಂತಿದಾರೆ’ ಅಂತ. ಆಗ ಆ ಕಂಪ್ಯೂಟರ್ ಎಂಬ ಮಹಾ ಮೇಧಾವಿ ಎಚ್ಚರಗೊಳ್ಳು ತ್ತದೆ. ಅದು ಕ್ಷಣಾರ್ಧದಲ್ಲಿ ನೂರಾರು ಲೆಕ್ಕಾಚಾರ ಹಾಕುತ್ತದೆ.

ಈಗ ವಿಮಾನದ ವೇಗ ಎಷ್ಟಿದೆ? ಗಾಳಿ ಯಾವ ಕಡೆಯಿಂದ ಬೀಸುತ್ತಿದೆ? ಈಗ ಎಡಕ್ಕೆ ತಿರುಗಿದ್ರೆ ಸುರಕ್ಷಿತ ಅಲ್ವಾ?’ ಅಂತ ಯೋಚಿಸಿ, ನಂತರ ಆ ಕಂಪ್ಯೂಟರೇ ರೆಕ್ಕೆಯ ಮೇಲಿರುವ ಮೋಟಾರ್‌ ಗಳಿಗೆ ಆದೇಶ (ಕರೆಂಟ್) ಪಾಸ್ ಮಾಡುತ್ತದೆ. ಆಗ ರೆಕ್ಕೆ ತಿರುಗುತ್ತದೆ. ಅಂದರೆ, ಇಲ್ಲಿ ಪೈಲಟ್ ಕೇವಲ ಆರ್ಡರ್ ಮಾಡೋನು. ಕೆಲಸ ಮಾಡೋದು ಕಂಪ್ಯೂಟರ್ ಮತ್ತು ವೈರ್ ಗಳು!

ಇದನ್ನೇ ಇಂಗ್ಲಿಷ್‌ನಲ್ಲಿ ‘ಫ್ಲೈ ಬೈ ವೈರ್’ ಅಂತಾರೆ. ಪೈಲಟ್‌ಗಿಂತ ಕಂಪ್ಯೂಟರೇ ಹೆಚ್ಚಾ? ಇಲ್ಲಿ ಒಂದು ರೋಚಕ ಕತೆಯಿದೆ. ಈ ಟೆಕ್ನಾಲಜಿ ಬಂದ ಮೇಲೆ ಮನುಷ್ಯ ದೊಡ್ಡವನೋ? ಯಂತ್ರ ದೊಡ್ಡದೋ?’ ಅನ್ನೋ ಚರ್ಚೆ ಶುರುವಾಯಿತು.

ಏಕೆಂದರೆ, ಈ ಫ್ಲೈ ಬೈ ವೈರ್ ಸಿಸ್ಟಮ್‌ಗೆ ಒಂದು ಸ್ವಂತ ಬುದ್ಧಿಯಿದೆ. ಇದನ್ನು ‘ಫ್ಲೈಟ್ ಎನ್ವಲಪ್ ಪ್ರೊಟೆಕ್ಷನ್’ ಅಂತಾರೆ. ಅಂದ್ರೆ ಏನು ಗೊತ್ತಾ? ವಿಮಾನಕ್ಕೆ ಒಂದು ಲಕ್ಷ್ಮಣ ರೇಖೆ ಇರುತ್ತದೆ. ಒಬ್ಬ ಪೈಲಟ್ ಕುಡಿದೋ, ಅಥವಾ ತಲೆ ಕೆಟ್ಟೋ, ಅಥವಾ ಭಯ ಬಿದ್ದೋ ವಿಮಾನದ ಮೂಗನ್ನು ಮೇಲಕ್ಕೆತ್ತಿ ಪೂರ್ತಿ 90 ಡಿಗ್ರಿ ತಿರುಗಿಸಲು ಹೋದ ಅಂತ ಇಟ್ಕೊಳ್ಳೋಣ.

ಹಳೆಯ ವಿಮಾನವಾಗಿದ್ದರೆ ಹಾಗೆ ನಿಂತು, ಮರುಕ್ಷಣವೇ ಕಲ್ಲಂತೆ ಕೆಳಗೆ ಬಿದ್ದು ಎಲ್ಲರೂ ಸತ್ತು ಹೋಗುತ್ತಿದ್ದರು. ಆದರೆ ಈ ಫ್ಲೈ ಬೈ ವೈರ್ ಇದೆಯಲ್ಲ? ಇದು ಪೈಲಟ್ ಮಾತನ್ನೇ ಕೇಳಲ್ಲ! ಪೈಲಟ್ ಸ್ಟಿಕ್ ಅನ್ನು ಎಷ್ಟೇ ಬಲವಾಗಿ ಹಿಂದಕ್ಕೆ ಎಳೆದರೂ, ಕಂಪ್ಯೂಟರ್ ಹೇಳುತ್ತದೆ - ‘ಲೋ ಮಗನೇ, ಸುಮ್ನಿರು. ಹೀಗೆ ಮಾಡಿದ್ರೆ ವಿಮಾನ ಬಿದ್ದು ಹೋಗುತ್ತೆ. ನೀನು ಎಷ್ಟೇ ಎಳೆದರೂ ನಾನು ವಿಮಾನ ವನ್ನು ಡೇಂಜರಸ್ ಲೆವೆಲ್‌ಗೆ ಹೋಗೋಕೆ ಬಿಡಲ್ಲ!’ ನೋಡಿ ತಮಾಷೆ, ವಿಮಾನದ ಕಾಕ್‌ಪಿಟ್‌ನಲ್ಲಿ ಕೂತ ಪೈಲಟ್‌ಗೆ ಅಲ್ಲಿ ಅವಮಾನ! ಆದರೆ ಆ ಅವಮಾನವೇ ನೂರಾರು ಜೀವಗಳನ್ನು ಉಳಿಸುತ್ತದೆ. ಮನುಷ್ಯ ತಪ್ಪು ಮಾಡಬಹುದು, ಗಾಬರಿಯಲ್ಲಿ ಏನೋ ಮಾಡೋಕೆ ಹೋಗಿ ಇನ್ನೇನೋ ಮಾಡಬ ಹುದು. ಆದರೆ ಕಂಪ್ಯೂಟರ್ ಹಾಗಲ್ಲ. ಅದಕ್ಕೆ ಭಾವನೆ ಇಲ್ಲ, ಬರೀ ಲೆಕ್ಕಾಚಾರ.

Vishweshwar Bhat

Vishweshwar Bhat

Editor in Chief

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?