ಲ್ಯಾಂಡಿಂಗ್ ಎಂಬ ಪರಿಣತಿ
ವಿಮಾನವು ಸುರಕ್ಷಿತವಾಗಿ ರನ್‌ವೇ ಮೇಲೆ ಇಳಿಯುತ್ತದಲ್ಲ, ಆಗ ಏನಾಗುತ್ತದೆ ಎಂಬುದನ್ನು ಗಮನಿಸಿದ್ದೀರಾ? ಇದು ಕೇವಲ ಚಕ್ರಗಳು ರನ್‌ವೇಗೆ ಸ್ಪರ್ಶಿಸುವ ಕ್ರಿಯೆಯಷ್ಟೇ ಅಲ್ಲ, ಇದು ತಂತ್ರಜ್ಞಾನ, ನಿಖರತೆ ಮತ್ತು ಸಮಯಪ್ರಜ್ಞೆಯ ಪರಿಪೂರ್ಣ ಸಂಯೋಜನೆಯಾಗಿದೆ. ಪೈಲಟ್‌ಗಳು ವಿಮಾನವನ್ನು ನಿಧಾನವಾಗಿ ಮತ್ತು ಸುಗಮವಾಗಿ ಇಳಿಸಲು ತಂತ್ರಜ್ಞಾನಗಳನ್ನು ಬಳಸುತ್ತಾರೆ.
ವಿಮಾನವು ಸುರಕ್ಷಿತವಾಗಿ ರನ್‌ವೇ ಮೇಲೆ ಇಳಿಯುತ್ತದಲ್ಲ, ಆಗ ಏನಾಗುತ್ತದೆ ಎಂಬುದನ್ನು ಗಮನಿಸಿದ್ದೀರಾ? ಇದು ಕೇವಲ ಚಕ್ರಗಳು ರನ್‌ವೇಗೆ ಸ್ಪರ್ಶಿಸುವ ಕ್ರಿಯೆಯಷ್ಟೇ ಅಲ್ಲ, ಇದು ತಂತ್ರಜ್ಞಾನ, ನಿಖರತೆ ಮತ್ತು ಸಮಯಪ್ರಜ್ಞೆಯ ಪರಿಪೂರ್ಣ ಸಂಯೋಜನೆಯಾಗಿದೆ. ಪೈಲಟ್‌ಗಳು ವಿಮಾನವನ್ನು ನಿಧಾನವಾಗಿ ಮತ್ತು ಸುಗಮವಾಗಿ ಇಳಿಸಲು ತಂತ್ರಜ್ಞಾನಗಳನ್ನು ಬಳಸುತ್ತಾರೆ.
ಇದು ನಿಜಕ್ಕೂ ಒಂದು ಸಂಪೂರ್ಣ, ಸುರಕ್ಷತಾ ಕ್ರಿಯೆ. ಲ್ಯಾಂಡಿಂಗ್‌ನಲ್ಲಿ ಬಳಸುವ ಮುಖ್ಯ ತಂತ್ರಜ್ಞಾನಗಳನ್ನು ಅರ್ಥ ಮಾಡಿಕೊಳ್ಳಬೇಕು. ಮೊದಲನೆಯದಾಗಿ, ಫುಟ್ ಪಾತ್ ಆಂಗಲ್(Flight Path Angle- FPA ). ಹೀಗೆಂದರೆ, ವಿಮಾನ ಇಳಿಯಲು ಪ್ರಾರಂಭಿಸಿದಾಗಿನ ಅದರ ಇಳಿಜಾರಿನ ಕೋನ(angle of descent).
ಪೈಲಟ್‌ಗಳು ಈ ಕೋನವನ್ನು ನಿಖರವಾಗಿ ನಿರ್ಧರಿಸುತ್ತಾರೆ. ಇದರಿಂದ ವಿಮಾನವು ರನ್‌ವೇ ಕಡೆಗೆ ಸ್ಥಿರವಾಗಿ ಮತ್ತು ನಿಯಂತ್ರಿತವಾಗಿ ಕೆಳಗೆ ಇಳಿಯುತ್ತದೆ. ಇದು ವಿಮಾನವನ್ನು ಹಠಾತ್ತಾಗಿ ಕೆಳಗೆ ಬೀಳಿಸುವುದನ್ನು ತಪ್ಪಿಸಿ, ಒಂದು ಸುಗಮವಾದ ಗ್ಲೈಡ್ (smooth glide) ಮಾಡಲು ಸಹಾಯ ಮಾಡುತ್ತದೆ. ಆಧುನಿಕ ವಿಮಾನಗಳಲ್ಲಿ ಕಂಪ್ಯೂಟರ್ ಮತ್ತು ಸ್ವಯಂಚಾಲಿತ ವ್ಯವಸ್ಥೆಗಳು ಈ ಫುಟ್ ಪಾತ್ ಆಂಗಲ್ ಅನ್ನು ನಿಖರವಾಗಿ ನಿರ್ವಹಿಸುತ್ತವೆ.
ಇದನ್ನೂ ಓದಿ: ವಿಮಾನದ ರೆಕ್ಕೆಗಳು ಬಾಗಿದರೆ...
ಎರಡನೆಯದು, ಬ್ರೇಕಿಂಗ್ ಸಿಸ್ಟಮ್‌ಗಳು (Braking Systems). ವಿಮಾನ ಇಳಿದ ನಂತರ ಅದನ್ನು ನಿಲ್ಲಿಸಲು ಬ್ರೇಕಿಂಗ್ ಸಿಸ್ಟಮ್‌ಗಳು ಪ್ರಮುಖ ಪಾತ್ರವಹಿಸುತ್ತವೆ. ಇವು ಕೇವಲ ಪೆಡಲ್ ಗಳಲ್ಲ, ಆದರೆ ಹಲವಾರು ಶಕ್ತಿಶಾಲಿ ತಂತ್ರಜ್ಞಾನಗಳ ಸಂಯೋಜನೆ. ವಿಮಾನದ ಚಕ್ರಗಳಿಗೆ ಒತ್ತಡವನ್ನು ಅನ್ವಯಿಸಿ ಬ್ರೇಕಿಂಗ್ ಶಕ್ತಿಯನ್ನು ಒದಗಿಸುತ್ತವೆ.
ಕಾರುಗಳಲ್ಲಿರುವಂತೆ, ಹೈಡ್ರಾಲಿಕ್ ವ್ಯವಸ್ಥೆ ಬಳಸಿಕೊಂಡು ಬ್ರೇಕ್ ಪ್ಯಾಡ್ ಗಳನ್ನು ಚಕ್ರಗಳ ಮೇಲೆ ಒತ್ತಲಾಗುತ್ತದೆ. ವಿಮಾನದ ಕಂಪ್ಯೂಟರ್ ವ್ಯವಸ್ಥೆಯು ರನ್‌ವೇ ಮೇಲೆ ಲ್ಯಾಂಡ್ ಆದ ತಕ್ಷಣ ಸ್ವಯಂಚಾಲಿತವಾಗಿ ಬ್ರೇಕ್‌ಗಳನ್ನು ಅನ್ವಯಿಸುತ್ತದೆ. ಪೈಲಟ್ ಇವುಗಳ ತೀವ್ರತೆಯನ್ನು (ಉದಾಹರಣೆಗೆ, ಕಡಿಮೆ, ಮಧ್ಯಮ, ಅಥವಾ ಹೆಚ್ಚು) ಮೊದಲೇ ಆಯ್ಕೆ ಮಾಡಬಹುದು.

ಇಲ್ಲಿ ಸ್ಪಾಯ್ಲರ್‌ಗಳ (Spoilers) ಪಾತ್ರವೂ ನಿರ್ಣಾಯಕ. ಇವು ವಿಮಾನದ ರೆಕ್ಕೆಗಳ ಮೇಲೆ ಇರುವ ಫಲಕಗಳು. ಲ್ಯಾಂಡಿಂಗ್ ಸಮಯದಲ್ಲಿ ಇವು ಮೇಲಕ್ಕೆ ಎತ್ತಿ ನಿಲ್ಲುವುದರಿಂದ, ವಿಮಾನದ ಮೇಲೆ ಗಾಳಿಯ ಪ್ರತಿರೋಧ (air resistance) ಹೆಚ್ಚಾಗುತ್ತದೆ. ಇದರಿಂದ ವಿಮಾನವು ರನ್‌ವೇ ಮೇಲೆ ವೇಗ ಕಮ್ಮಿ ಮಾಡಿಕೊಂಡು ನಿಧಾನವಾಗಲು ಸಹಾಯಕ.
ಹಾಗೆಯೇ ರಿವರ್ಸ್ ಥ್ರಸ್ಟ್ (Reverse Thrust). ಇದು ಜೆಟ್ ಎಂಜಿನ್ ಗಳಿಂದ ವಿಮಾನದ ಬ್ರೇಕಿಂಗ್ ಗೆ ನೆರವು ನೀಡುವ ಪ್ರಮುಖ ತಂತ್ರಜ್ಞಾನ. ವಿಮಾನವು ರನ್‌ವೇಗೆ ಇಳಿದ ನಂತರ, ಪೈಲಟ್‌ಗಳು ಎಂಜಿನ್‌ನಿಂದ ಹೊರಬರುವ ಗಾಳಿಯ ದಿಕ್ಕನ್ನು ಹಿಂದಕ್ಕೆ ಬದಲಾಯಿಸುತ್ತಾರೆ. ಇದರಿಂದ ಎಂಜಿನ್‌ನ ಶಕ್ತಿಯು ವಿಮಾನವನ್ನು ಮುಂದಕ್ಕೆ ಹೋಗದಂತೆ ತಡೆಯುತ್ತದೆ ಮತ್ತು ಅದನ್ನು ನಿಧಾನಗೊಳಿಸುತ್ತದೆ. ಹೀಗಾಗಿ ಸಾಮಾನ್ಯವಾಗಿ ಜೋರಾದ ಶಬ್ದ ಬರುತ್ತದೆ.
ವಿಶೇಷವಾಗಿ ಒದ್ದೆಯಾದ ರನ್‌ವೇಗಳಲ್ಲಿ ಇದು ಅತ್ಯಂತ ಪರಿಣಾಮಕಾರಿ. ಬೋಯಿಂಗ್ 777ನಂಥ ದೊಡ್ಡ ವಿಮಾನಗಳು ಗಂಟೆಗೆ 280 ಕಿ.ಮೀ (150 ನಾಟ್ಸ್) ವೇಗದಿಂದ 60 ಸೆಕೆಂಡುಗಳಿಗಿಂತ ಕಡಿಮೆ ಸಮಯದಲ್ಲಿ ಸಂಪೂರ್ಣವಾಗಿ ನಿಲ್ಲಬಲ್ಲವು. ಇದು ರೇಸ್ ಟ್ರ್ಯಾಕ್‌ನಲ್ಲಿನ ಸ್ಪೋರ್ಟ್ಸ್ ಕಾರುಗಳಿಗಿಂತಲೂ ವೇಗವಾಗಿದೆ. ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ, ಪೈಲಟ್‌ಗಳು ಮೊದಲು ಬ್ರೇಕ್‌ಗಳನ್ನು ಬಳಸುವುದಿಲ್ಲ. ಬದಲಾಗಿ, ಗಾಳಿಯ ಪ್ರತಿರೋಧ ಮತ್ತು ಸ್ಪಾಯ್ಲರ್‌ಗಳನ್ನು ಮಾತ್ರ ಬಳಸಿಕೊಂಡು ವಿಮಾನ ನಿಧಾನವಾಗಲು ಬಿಡುತ್ತಾರೆ.
ವಿಮಾನವು ರನ್‌ವೇಯನ್ನು ಸ್ಪರ್ಶಿಸಿದಾಗ ಅದು ಯಾವುದೇ ಅಲುಗಾಟವಿಲ್ಲದೇ, ಅತ್ಯಂತ ಸುಗಮವಾಗಿ ಇದ್ದರೆ ಅದನ್ನು ಬಟರ್ ಲ್ಯಾಂಡಿಂಗ್’ ಎಂದು ಕರೆಯಲಾಗುತ್ತದೆ. ಇದು ಪೈಲಟ್‌ನ ನಿಖರತೆ ಮತ್ತು ಪರಿಣತಿಯ ಸಂಕೇತವಾಗಿದೆ. ಬಹಳ ಮೃದುವಾಗಿ ವಿಮಾನವನ್ನು ಲ್ಯಾಂಡ್ ಮಾಡುವುದು, ಅಂದರೆ ಚಕ್ರಗಳು ರನ್‌ವೇಗೆ ತಾಗುವ ಕ್ಷಣದಲ್ಲಿ ಯಾವುದೇ ಜರ್ಕ್ ಅಥವಾ ಶಾಕ್ ಆಗದಂತೆ ಲ್ಯಾಂಡ್ ಮಾಡುವುದು ಒಂದು ಪರಿಣತಿ. ಹೀಗೆ ಮಾಡಿದಾಗ ಪ್ರಯಾಣಿಕರಿಗೆ ಲ್ಯಾಂಡಿಂಗ್ ಬಹುತೇಕ ‘ಗಾಳಿಯಲ್ಲಿ ಹಾರುವ’ ಅನುಭವವಾಗುತ್ತದೆ. ಮೃದುವಾದ ಲ್ಯಾಂಡಿಂಗ್ ಪೈಲಟ್‌ಗಳಿಗೆ ಒಂದು ಸಾಧನೆ ಎಂಬ ಭಾವವನ್ನು ಮೂಡಿಸುತ್ತದೆ.