Friday, October 3, 2025
Friday, October 3, 2025

ಬಾಡಿಗೆಗೆ ಲಭ್ಯವಿದ್ದ ದೇಶದ ಬಗ್ಗೆ ಕೇಳಿದ್ದೀರಾ? ಇಲ್ಲಿದೆ ಅಚ್ಚರಿಯ ಮಾಹಿತಿ

ಯುರೋಪ್‍ನಲ್ಲಿ ನೆಲೆಗೊಂಡಿರುವ, ಸ್ವಿಟ್ಜರ್ಲೆಂಡ್ ಮತ್ತು ಆಸ್ಟ್ರಿಯಾ ನಡುವೆ ಇರುವ ಈ ಸಣ್ಣ ದೇಶವನ್ನು 2011 ರವರೆಗೆ ಒಂದು ರಾತ್ರಿ ತಂಗಲು ಬಾಡಿಗೆ ಪಡೆಯಬಹುದಾಗಿತ್ತಂತೆ. ಕೇವಲ 40,000 ಜನಸಂಖ್ಯೆಯನ್ನು ಹೊಂದಿರುವ ಈ ಸಣ್ಣ ದೇಶವನ್ನು ಒಂದು ರಾತ್ರಿ ಬಾಡಿಗೆಗೆ(Country for Rent) ಪಡೆಯಬಹುದಾಗಿತ್ತು.

ಮನೆ, ಕಾರು ಮತ್ತು ಕೆಲವು ದೈನಂದಿನ ವಸ್ತುಗಳನ್ನು ಬಾಡಿಗೆಗೆ ಪಡೆಯುವುದು ಸಾಮಾನ್ಯ. ಅಲ್ಲದೇ ವಿಶ್ವದ ಕೆಲವು ಭಾಗಗಳಲ್ಲಿ, ಬಾಯ್‍ಫ್ರೆಂಡ್‍ಗಳು ಅಥವಾ ಗರ್ಲ್‍ಫ್ರೆಂಡ್‍ಗಳನ್ನು ಸಹ ಬಾಡಿಗೆ ಪಡೆಯುವ ವ್ಯವಸ್ಥೆ ಕೂಡ ಇದೆ. ಆದರೆ ಒಂದು ಕಾಲದಲ್ಲಿ ಇಡೀ ದೇಶವೊಂದು ಬಾಡಿಗೆಗೆ (Country for Rent) ಲಭ್ಯವಿತ್ತು ಎಂಬುದು ನಿಮಗೆ ಗೊತ್ತೇ? ಅದ್ಯಾವ ದೇಶ, ಎಷ್ಟು ಬಾಡಿಗೆ ಈ ಕುರಿತು ಮಾಹಿತಿ ಇಲ್ಲಿದೆ ನೋಡಿ.

large-medieval-castle-in-vaduz-liechtenstein-637326370

ಆ ದೇಶ ಯಾವುದೆಂದರೆ ಲಿಚ್ಟೆನ್‌ಸ್ಟೈನ್ (Liechtenstein). ಯುರೋಪ್‍ನಲ್ಲಿ ನೆಲೆಗೊಂಡಿರುವ, ಸ್ವಿಟ್ಜರ್ಲೆಂಡ್ ಮತ್ತು ಆಸ್ಟ್ರಿಯಾ ನಡುವೆ ಇರುವ ಈ ಸಣ್ಣ ದೇಶವನ್ನು 2011ರವರೆಗೆ ಒಂದು ರಾತ್ರಿ ತಂಗಲು ಬಾಡಿಗೆ ಪಡೆಯಬಹುದಾಗಿತ್ತು ಮತ್ತು ಈ ವಿಚಾರವನ್ನು ನಂಬಲು ಕಷ್ಟವೆನಿಸಿದರೂ, ಇದು ನಿಜ. ಕೇವಲ 40,000 ಜನಸಂಖ್ಯೆಯನ್ನು ಹೊಂದಿರುವ ಈ ಸಣ್ಣ ದೇಶವನ್ನು ಭಾರಿ ಬೆಲೆಗೆ ಒಂದು ರಾತ್ರಿ ಬಾಡಿಗೆಗೆ ಪಡೆಯಬಹುದಾಗಿತ್ತು. ಹಾಗಾದ್ರೆ ಒಂದು ಚಿಕ್ಕ ಮನೆಗೆ ಸಾಕಷ್ಟು ಬಾಡಿಗೆ ಕೇಳುವಾಗ ಕೇವಲ ಒಂದು ರಾತ್ರಿಗೆ ಇಡೀ ದೇಶವನ್ನು ಬಾಡಿಗೆಗೆ ಪಡೆಯಲು ಎಷ್ಟು ವೆಚ್ಚವಾಗುತ್ತದೆ ಎಂದು ಕೆಲವರಿಗೆ ಕುತೂಹಲ ಉಂಟಾಗಬಹುದು. ಇದಕ್ಕೆ ಉತ್ತರ 70,000 ಡಾಲರ್ (ಅಂದಾಜು 60 ಲಕ್ಷ ರೂ.).

liechtenstein-gutenberg-castle

ಲಿಚ್ಟೆನ್‌ಸ್ಟೈನ್ ಅನ್ನು ಜನಪ್ರಿಯ ವಸತಿ ವೇದಿಕೆ ಏರ್‌ಬಿಎನ್‌ಬಿ (AirBNB)ಯಲ್ಲಿ ಪಟ್ಟಿ ಮಾಡಲಾಗಿದೆ. ಈ ಸೇವೆಯನ್ನು ಮಾರ್ಕೆಟಿಂಗ್ ಮತ್ತು ಉತ್ಪಾದನಾ ಕಂಪನಿಯ ನಡುವಿನ ಸಹಯೋಗದಿಂದ ನೀಡಲಾಯಿತು. ಇದನ್ನು ಬಾಡಿಗೆ ವ್ಯವಹಾರದ ಪ್ರಚಾರ ಅಭಿಯಾನವಾಗಿ ಪ್ರಾರಂಭಿಸಲಾಯಿತು.

ಲಿಚ್ಟೆನ್‌ಸ್ಟೈನ್ ಅನ್ನು ಬಾಡಿಗೆಗೆ ಪಡೆಯುವುದು ಸಾಮಾನ್ಯ ವ್ಯವಹಾರವಾಗಿರಲಿಲ್ಲ. ಯಾರಾದರೂ ದೇಶವನ್ನು ಬುಕ್ ಮಾಡಿದಾಗ, ಅವರ ಈವೆಂಟ್ ವಿವರಗಳನ್ನು ಬೀದಿ ಬೀದಿಗಳಲ್ಲಿ ಮತ್ತು ಪ್ರದೇಶದಾದ್ಯಂತ ಪ್ರದರ್ಶಿಸಬೇಕಾಗಿತ್ತು. ಐತಿಹಾಸಿಕ ಕೋಟೆಗಳು ಸೇರಿದಂತೆ ದೇಶದ ಕೆಲವು ಅಪ್ರತಿಮ ಹೆಗ್ಗುರುತುಗಳಿಗೆ ಅತಿಥಿಗಳಿಗೆ ಅನಿರ್ಬಂಧಿತ ಪ್ರವೇಶವನ್ನು ನೀಡಬೇಕಾಗಿತ್ತು. ಲಿಚ್ಟೆನ್‌ಸ್ಟೈನ್ ಆಳುತ್ತಿದ್ದ ರಾಜನು ವೈಯಕ್ತಿಕವಾಗಿ ದೇಶದ ಕೀಲಿಗಳನ್ನು ಬಾಡಿಗೆದಾರರಿಗೆ ಹಸ್ತಾಂತರಿಸುತ್ತಿದ್ದನಂತೆ. ದುರದೃಷ್ಟವಶಾತ್ ಈ ಸೇವೆ 2011ರಿಂದ ಇತ್ತೀಚೆಗೆ @geoallday ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ವೈರಲ್ ವಿಡಿಯೊ ಮೂಲಕ ಈ ಕಥೆಯನ್ನು ಮತ್ತೆ ಬೆಳಕಿಗೆ ತರಲಾಗಿದೆ. ಇದರಿಂದ ದೇಶದ ಇತಿಹಾಸದಲ್ಲಿ ಈ ಅಸಾಮಾನ್ಯ ಅಧ್ಯಾಯದ ಬಗ್ಗೆ ಅನೇಕ ಜನರು ಈಗ ತಿಳಿದುಕೊಂಡಿದ್ದಾರೆ.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ