Friday, October 3, 2025
Friday, October 3, 2025

ಮೋಹಕ ಶಿಖರ 'ಕೊಡಚಾದ್ರಿ'

ಕೊಲ್ಲೂರಿನ ಸಮೀಪದಲ್ಲಿರುವ ಕೊಡಚಾದ್ರಿ ಶಿಖರದಿಂದ ಕಾಣುವ ನೋಟವು ಬಹು ಸುಂದರ. ವಾತಾವರಣ ತಿಳಿಯಾಗಿದ್ದರೆ, ಇಲ್ಲಿಂದ ಕಾಣಿಸುವ ಸೂರ್ಯಾಸ್ತದ ದೃಶ್ಯವು ಒಂದು ಅಧ್ಭುತ. ಚಾರಣ ಪ್ರಿಯರಿಗೆ ಇದು ಸೂಕ್ತ ತಾಣವಾಗಿದ್ದು, ಚೀಪ್‌ ಪಯಣಕ್ಕೂ ಅವಕಾಶವಿಲ್ಲಿದೆ. -ಮೋಹನ ಭಟ್ಟ , ಅಗಸೂರು

ಕೊಡಚಾದ್ರಿಗೆ ಪಯಣ ಎಂಬುದು ಅತ್ಯಂತ ಆಕರ್ಷಣೀಯವಾದುದು. ಕರ್ನಾಟಕದಲ್ಲಿನ ಹತ್ತಾರು ಗಿರಿಶಿಖರಗಳಲ್ಲಿ ಇದು  ಮಹತ್ವದ ಸ್ಥಾನ ಪಡೆದಿದೆ. ಆದಿ ಶಂಕರಾಚಾರ್ಯರು ಇಲ್ಲಿಗೆ ಆಗಮಿಸಿ ಧ್ಯಾನವನ್ನು ಮಾಡಿದ್ದರು, ದೇವಿ ಮೂಕಾಂಬಿಕೆ  ಪ್ರಸನ್ನಳಾಗಿ ಆಶೀರ್ವದಿಸಿದ್ದಳು ಎಂಬುದು ಐತಿಹ್ಯವಾಗಿದೆ.

Untitled-design-1-1

ಕಾಶ್ಮೀರದಲ್ಲಿದ್ದ ಸರ್ವಜ್ಞ ಪೀಠದಂತೆ ಇಲ್ಲಿಯೂ ಇತ್ತು ಎಂದು ಹೇಳಲಾಗುವುದು. ಈಗ ಶಿಖರದ ಕೆಳಭಾಗದಲ್ಲಿರುವ ಪಾರ್ವತಿದೇವಿ ದೇವಾಲಯ ಮೂಕಾಂಬಿಕಾ ದೇವಿಯ ಮೂಲಸ್ಥಾನವಾಗಿತ್ತು.ನಂತರ ಕೊಲ್ಲೂರಿಗೆ ಸ್ಥಳಾಂತರವಾಯಿತು. ಇದಕ್ಕೆ ಪೂರಕವಾಗಿ ಕೊಲ್ಲೂರಿನ ಮುಕಾಂಬಿಕಾ ದೇವಸ್ಥಾನದ ಮುಂದಿರುವ ತ್ರಿಶೂಲವಾಗಿದೆ. ಇದನ್ನು ದೇವಿ ದುಷ್ಟ ಶಕ್ತಿಯ ಸಂಹಾರಕ್ಕಾಗಿ(ಕೊಲ್ಲಲು) ಬಳಸಿದ ಆಯುಧವಾಗಿತ್ತು. ಮುಂದೆ ಇದೇ ಕೊಲ್ಲೂರಾಯಿತು. ದೈವತ್ವ  ಹೊಂದಿದ್ದ ಶಂಕರರು ಸ್ಥಾಪಿಸಿದ ದೇವಳಗಳು ಇಂದಿಗೂ ಭಕ್ತರ ಕೇಂದ್ರವಾಗಿದೆ. ಅವರು ಕುಳಿತ ಪ್ರದೇಶಗಳು ಎಲ್ಲೆಡೆ ಪೂಜಾಕೇಂದ್ರವಾಗಿವೆ.  ಇತ್ತೀಚೆಗೆ ನಡೆದ ಶಂಕರ ಪಂಚಮಿ ಮಹೋತ್ಸವದ ಸಂದರ್ಭದಲ್ಲಿ ಕೊಡಚಾದ್ರಿಯ ಶಂಕರ ಶಿಖರಕ್ಕೆ ಸಾವಿರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದ್ದಾರೆ.

ಕೊಡಚಾದ್ರಿಗೆ ವರ್ಷ ಪೂರ್ತಿ ಪ್ರವಾಸಿಗರು, ಯಾತ್ರಿಕರು, ಚಾರಣಿಗರು, ಸಾಹಸಕ್ಕೆ ಆಗಮಿಸುವವರ ಸಂಖ್ಯೆ ಏರುತ್ತಲೇ ಇದೆ.‌ ವಿಮಾನ, ರೈಲು ಸೌಕರ್ಯ ಹೊಂದಿರುವ ಶಿವಮೊಗ್ಗ, ಮಂಗಳೂರು, ಬೈಂದೂರುಗಳಿಂದ ಆಗಮಿಸುವ ಅಂತರಾಷ್ಟ್ರೀಯ ಪ್ರವಾಸಿಗರು ಇಲ್ಲಿನ ಪ್ರಕೃತಿಯನ್ನು ಶ್ಲಾಘಿಸಿದ್ದಾರೆ. ಕೊಲ್ಲೂರಿಗೆ ಆಗಮಿಸಿ ಬೆಳಗ್ಗೆ ಜೀಪಿನಲ್ಲಿ ಬಂದು ಶಂಕರ ಶಿಖರಕ್ಕೆ ಆಗಮಿಸಿ ವಾಪಸಾಗುವವರೂ ಇದ್ದಾರೆ.

Kodachadri_trek_bmc

ಜಪ ಮೂಕಾಂಬಿಕಾ ವನ್ಯಜೀವಿ ಉದ್ಯಾನವನ ಕೂಡಾ ಇಲ್ಲಿದೆ. ನಿಟ್ಟೂರು ಪ್ರವೇಶದ್ವಾರ ಬೆಳಗ್ಗೆ ಆರರಿಂದ ಸಂಜೆ ನಾಲ್ಕರವರೆಗೆ  ಮಾತ್ರ ತೆರೆಯಲಿದ್ದು, ಪ್ರವೇಶ ವೇಳೆಯನ್ನು ನಿಗದಿಪಡಿಸಲಾಗಿದೆ. ಸುಮಾರು 200 ಜೀಪ್ ಗಳು ಪ್ರವೇಶಿಸುತ್ತವೆ. ಕುದುರೆಮುಖ ವನ್ಯಜೀವಿಗಳ ಅಭಯಾರಣ್ಯ ವಿಭಾಗಕ್ಜೆ ಇದು ಸೇರಿದ್ದು, ಬೇಟೆಯಾಗಲಿ, ವನ್ಯಜೀವಿಗಳ ಚಟುವಟಿಕೆಗಳಿಗೆ ಅಡ್ಡಿಪಡಿಸುವವರ ವಿರುದ್ಧ ಕಠಿಣಕ್ರಮಗಳನ್ನು ಕೈಗೊಳ್ಳಲು ಇಲಾಖೆಯ ನಿಗ್ರಹ ಕೇಂದ್ರವೂ ಇಲ್ಲಿ ಕಾರ್ಯಪ್ರವೃತ್ತವಾಗಿದೆ. ನಿಟ್ಟೂರು ಪ್ರವೇಶದ್ವಾರದ ಮೂಲಕ ಅನುಮತಿ ಪಡೆದ, ಜಿಪಿ ಎಸ್ ಅಳವಡಿಸಿದ, ಅನುಮತಿ ಜೀಪುಗಳಿಗಷ್ಟೇ ಇಲ್ಲಿ ಪ್ರವೇಶ. ಕೊಡಚಾದ್ರಿಯ ಶಿಖರವೇರುವ ಹಾಗೂ ದೇವಸ್ಥಾನಗಳ ಸಂಕೀರ್ಣ ಇರುವ ಪ್ರದೇಶದವರೆಗೆ ಮಾತ್ರ ಇವು ಸಂಚರಿಸುತ್ತವೆ. ಮೇಲೇರುತ್ತ ಹೋದಂತೆ ಕಾಡು ಪ್ರಾಣಿಗಳ ಗೋಚರವಾಗಬಹುದು.. ಅರಣ್ಯ ಇಲಾಖೆಯು ಚಾರಣಿಗರಿಗೆ ಚಾರಣದ ಹಾದಿಯನ್ನು ನಿರ್ಮಿಸಿದ್ದರಿಂದ, ಇದೇ ಹಾದಿಯಲ್ಲಿ ಕ್ರಮಿಸಬೇಕು.

ವರ್ಷದ ಎಲ್ಲ ಋತುಗಳಲ್ಲಿಯೂ (ವಿಶೇಷವಾಗಿ ಅಕ್ಟೋಬರ್ ನಿಂದ ಎಪ್ರಿಲ್‌ ವರೆಗೆ) ರಾಜ್ಯ ಹಾಗೂ ಹೊರ ರಾಜ್ಯದ ಪ್ರವಾಸಿಗರ  ಆಗಮನವಿರುತ್ತದೆ. ದಿನಕ್ಕೆ ಸುಮಾರು ಮುನ್ನೂರು ಪ್ರವಾಸಿಗರಿಗೆ ಮಾತ್ರ ಪ್ರವೇಶಕ್ಕೆ ಅನುವುಮಾಡಲಾಗಿದೆ.  ಇದಕ್ಕೆ ಆನ್ ಲೈನ್ ನಲ್ಲಿ ಅರ್ಜಿಸಲ್ಲಿಸಿ ಪೂರ್ವಾನುಮತಿ ಪಡೆಯುವುದು ಕಡ್ಡಾಯ.  

best-places-to-visit-in-Kodachadri

ಕೊಡಚಾದ್ರಿಯ ಸುತ್ತಲೂ ನೂರಾರು ಹೋಮ್ ಸ್ಟೇಗಳಿದ್ದು, ವರ್ಷಪೂರ್ತಿ ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಯಾಂತ್ರಿಕ ಬದುಕಿನಿಂದ ಕೆಲಕಾಲ ದೂರ ಇರಲು, ಮಲೆನಾಡಿನ ಸೌಂದರ್ಯ, ಪ್ರಶಾಂತ ಹಸಿರು ವಾತಾವರಣದಲ್ಲಿ ವಿಹರಿಸಲು ಬಯಸುವವರಿಗಿದು ಸೂಕ್ತ ಆಯ್ಕೆ.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ