Sunday, October 5, 2025
Sunday, October 5, 2025

ಪಾಸ್ತಾ ಪ್ರಿಯರು ಇಟಲಿಯಲ್ಲಿ ಭೇಟಿ ನೀಡಲೇಬೇಕಾದ ಸ್ಥಳವಿದು !

ಇಟಲಿಗೆ ಪ್ರವಾಸ ಹೋಗಬೇಕು ಅಂದುಕೊಂಡಿದ್ದೀರಾ? ಇಟಲಿಯ ಜನಪ್ರಿಯ ಪ್ರವಾಸಿ ತಾಣಗಳನ್ನು ಸುತ್ತುವ ನಡುವೆ ಅಲ್ಲಿನ ಪ್ರಮುಖ ಬೀದಿಗಳಲ್ಲಿ ಮಾರಾಟವಾಗುವ ತಾಜಾ ಪಾಸ್ತಾವನ್ನು ಟೇಸ್ಟ್‌ ಮಾಡಲು ಮರೆಯಬೇಡಿ..

ಈಗಂತೂ ಪಾಸ್ತಾವನ್ನು ಸವಿಯುವುದೆಂದರೆ ಮಕ್ಕಳಿಂದ ಹಿಡಿದು ಎಲ್ಲರಿಗೂ ಅಚ್ಚುಮೆಚ್ಚು. ಬಾಯಲ್ಲಿ ನೀರೂರಿಸುವ ವಿಭಿನ್ನ ರುಚಿಯ ಪಾಸ್ತಾಗಳನ್ನು ಟೇಸ್ಟ್‌ ಮಾಡಬೇಕು ಅಂದುಕೊಳ್ಳದವರಿಲ್ಲ. ಶತಮಾನಗಳ ಹಿಂದೆಯೇ ಪ್ರಾಚೀನ ಗ್ರೀಸ್ ಮತ್ತು ಇಟಲಿ ಸೇರಿದಂತೆ ಮೆಡಿಟರೇನಿಯನ್ ಪ್ರದೇಶದಲ್ಲಿ ಪಾಸ್ತಾ ಅಸ್ತಿತ್ವದಲ್ಲಿದ್ದು, 1974 ನಂತರವಷ್ಟೇ ಭಾರತಕ್ಕೆ ಪರಿಚಿತವಾಯ್ತು. ಆದರೆ ವಿಶ್ವದೆಲ್ಲೆಡೆ ಇಂದಿಗೂ ಪಾಸ್ತಾ ಎಂದರೆ ಇಟಲಿ ಎಂಬಂತೆ ಗುರುತಿಸುತ್ತಾರೆ.

IMG_9759-FILEminimizer-1024x659-1

ಹೌದು, ಇಂದಿಗೂ ಇಟಲಿಯ ಬೀದಿಗಳಲ್ಲಿ ಸುತ್ತಾಡಿಕೊಂಡು ಬಂದರೆ ಅಲ್ಲಿನ ಗಾಳಿಯಲ್ಲೂ ಪಾಸ್ತಾದ ಸುವಾಸನೆ ಹರಡಿಕೊಂಡಿರುತ್ತದೆ. ಇಲ್ಲಿನ ಶ್ರೀಮಂತ, ವಿಂಟೇಜ್ ಸಂಸ್ಕೃತಿಯ ರುಚಿ ಪ್ರತಿಯೊಂದು ಮೂಲೆಯಲ್ಲೂ ಇದ್ದು, ಪಾಸ್ತಾ ಪ್ರಿಯರಿಗೆ, ಇಟಲಿ ಸ್ವರ್ಗವೇ ಸರಿ.

R7DMYYNRMRGS7LVLYFXLGBRTJQ

ದಕ್ಷಿಣ ಇಟಲಿಯ ಪುಗ್ಲಿಯಾ(Puglia) ಪ್ರದೇಶದ ಬಾರಿ (Bari) ಪಟ್ಟಣಕ್ಕೆ ನೀವು ಭೇಟಿ ಕೊಟ್ಟರೆ ಅಲ್ಲಿ ಐಕಾನಿಕ್ ಸ್ಟ್ರಾಡಾ ಆರ್ಕೊ ಬಾಸ್ಸೊ(Strada Arco Basso) ಅಥವಾ ಸ್ಟ್ರಾಡಾ ಡೆಲ್ಲೆ ಒರೆಚಿಯೆಟ್ (Strada delle Orecchiette) ನಲ್ಲಿ ಬಾಯಲ್ಲಿ ನೀರೂರಿಸುವ ಪಾಸ್ತಾವನ್ನು ಉಣಬಡಿಸುತ್ತಾರೆ. ಇತ್ತೀಚೆಗೆ ಒಬ್ಬ ಪ್ರಯಾಣ ವ್ಲಾಗರ್ ಇನ್ಸ್ಟಾಗ್ರಾಮ್ ನಲ್ಲಿ ಈ ಬಗೆಗಿನ ಅನುಭವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಲ್ಲಿನ ಬೀದಿಗಳಲ್ಲಿ ತಾಜಾ ಪಾಸ್ತಾವನ್ನು ಖುದ್ದು ತಯಾರಿಸಿ, ಮಾರಾಟ ಮಾಡುವ ಮಹಿಳೆಯರನ್ನು ಪರಿಚಯಿಸಿದ್ದಾರೆ.

ಬಾರಿ(Bari)ಯ ಬಗ್ಗೆ ನೀವು ತಿಳಿಯಲೇಬೇಕು

ಪುಗ್ಲಿಯಾ ರಾಜಧಾನಿಯಾದ ಬಾರಿ, ಇತಿಹಾಸದಲ್ಲಿ ಶ್ರೀಮಂತವಾಗಿದ್ದು, ಅದ್ಭುತ ವಸ್ತುಸಂಗ್ರಹಾಲಯಗಳು, ಎತ್ತರದ ಚರ್ಚುಗಳು, ಪ್ರಶಾಂತ ದೇವಾಲಯಗಳಿಂದ ಕೂಡಿದೆ. ಬಾರಿ ವೆಚಿಯಾ, ಅಕಾ ಓಲ್ಡ್ ಬಾರಿಯೊಳಗೆ ಹೆಜ್ಜೆ ಹಾಕಿದರೆ ಮಧ್ಯಕಾಲೀನ ಬೀದಿಗಳು ನಿಮ್ಮನ್ನು ಭೂತಕಾಲದತ್ತ ಕರೆದೊಯ್ಯುತ್ತದೆ. ಮುರಾತ್ ಕ್ವಾರ್ಟರ್‌ಗೆ ಹೋಗುವ ಕಲ್ಲುಮಣ್ಣಿನ ಕಾಲುದಾರಿಗಳ ನಡುವೆಯೂ ನೀವು ಶಾಪಿಂಗ್‌ ಮಾಡಬಹುದೆಂದರೆ ಅಚ್ಚರಿಯ ವಿಚಾರವೇ ಸರಿ!

download

ಮೋಡಿ ಮಾಡುವ ಪಾಸ್ತಾ ಸ್ಟ್ರೀಟ್‌ಗಳು

ಸ್ಟ್ರಾಡಾ ಡೆಲ್ಲೆ ಒರೆಚಿಯೆಟ್‌ಗೆ ಭೇಟಿ ನೀಡಲು ಕಮಾನು ಸುರಂಗವನ್ನು ದಾಟಬೇಕು. ಇದು ನಿಮಗೆ ಹೊಸ ಜಗತ್ತನ್ನು ಪರಿಚಯಿಸುತ್ತದೆ. ಇಲ್ಲಿ, ಎಲ್ಲಾ ವಯಸ್ಸಿನ ಮಹಿಳೆಯರು ತಮ್ಮ ಮನೆಗಳ ಹೊರಗೆ ಕುಳಿತು, ವರ್ಕ್‌ಟೇಬಲ್‌ಗಳ ಮೇಲೆ ಪಾಸ್ತಾ ತಯಾರಿಸುವುದನ್ನು ನೀವು ಕಾಣಬಹುದು. ಪಾಸ್ತಾ ತಯಾರಿಸುವ ಕಲೆಯಲ್ಲಿ ಅವರು ಎಷ್ಟು ನಿಪುಣರೆಂಬುದು ನಿಮಗೆ ಅರಿವಾಗಬಹುದು.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ