Friday, October 3, 2025
Friday, October 3, 2025

ಈ ಏಕಶಿಲಾ ದೇವಾಲಯಗಳು ಹಿಮಾಚಲ ಪ್ರದೇಶದ ಮೆಕ್ಲಿಯೋಡ್‌ಗಂಜ್‌ನ ಪ್ರಮುಖ ಆಕರ್ಷಣೆ

8 ನೇ ಶತಮಾನದಲ್ಲಿ ನಿರ್ಮಾಣಗೊಂಡ ಈ ದೇವಾಲಯಗಳು ಪ್ರಸಿದ್ಧ ಮೆಕ್ಲಿಯೋಡ್‌ಗಂಜ್‌(Mcleodganj)ನ ಸಮೀಪದಲ್ಲಿರುವ ವಿಶೇಷ ತಾಣ. ಏಕಶಿಲೆಯಿಂದ ಕೆತ್ತನೆ ಮಾಡಲಾಗಿರುವ ಮಸ್ರೂರ್ ರಾಕ್ ಕಟ್ ಟೆಂಪಲ್‌ ದೇಶ ವಿದೇಶದ ಪ್ರವಾಸಿಗರನ್ನು ಮೋಡಿ ಮಾಡಿದೆ.

ಭಾರತದ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಧರ್ಮಶಾಲಾದ ಉಪನಗರ ಮೆಕ್ಲಿಯೋಡ್‌ಗಂಜ್‌. ಇಲ್ಲಿನ ಗುಡ್ಡ ಗಾಡುಗಳ ನಡುವೆ, ಕಣಿವೆಯ ಬೀಡಿನ ಮಧ್ಯದಲ್ಲಿ ನೆಲೆಗೊಂಡಿರುವ ಪ್ರಾಚೀನ ವಾಸ್ತುಶಿಲ್ಪದ ಅತ್ಯದ್ಭುತ ತಾಣ ಮಸ್ರೂರ್ ದೇವಾಲಯಗಳು ಅಥವಾ ಮಸ್ರೂರ್ ರಾಕ್ ಕಟ್ ದೇವಾಲಯ ಸಂಕೀರ್ಣ. 8 ನೇ ಶತಮಾನದಲ್ಲಿ ಮಸ್ರೂರ್‌ನ ಏಕಶಿಲೆಯಿಂದ ಕೆತ್ತಿದ ಈ ದೇವಾಲಯಗಳು, ಈ ಪ್ರದೇಶದ ಶ್ರೀಮಂತ ಇತಿಹಾಸ ಮತ್ತು ಕಲಾತ್ಮಕ ಪ್ರತಿಭೆಗೆ ಸಾಕ್ಷಿಯಾಗಿದೆ.

Masroor_Rock_cut_temple

ಮಸ್ರೂರ್ ದೇವಾಲಯಗಳ ಬಗೆಗಿವೆ ಐತಿಹ್ಯ

ಪಾಂಡವರು ಈ ಪ್ರದೇಶದಲ್ಲಿ ಪ್ರಯಾಣಿಸುವಾಗ, ಪರ್ವತಗಳನ್ನು ಕಂಡು, ಸುತ್ತಲಿನ ಪ್ರಕೃತಿಯ ಸೌಂದರ್ಯಯವನ್ನು ಕಂಡು ಬೆರೆಗಾದರಂತೆ. ಈ ಕಾರಣದಿಂದಲೇ ಪರ್ವತಗಳಲ್ಲಿ ಮಸ್ರೂರ್ ದೇವಾಲಯಗಳನ್ನು ನಿರ್ಮಿಸಿದ್ದಾರೆಂದು ನಂಬಲಾಗಿದೆ. ಅಲ್ಲದೇ ಇನ್ನೂ ಅನೇಕರ ಪ್ರಕಾರ, ಕಟೋಚ್ ರಾಜವಂಶವು ಈ ದೇವಾಲಯಗಳನ್ನು ನಿರ್ಮಿಸಿರಬೇಕು ಎಂದು ಹೇಳಲಾಗುತ್ತದೆ.

ಈ ದೇವಾಲಯಗಳ ವಿಶೇಷತೆಯೆಂದರೆ, ಇಲ್ಲಿನ ಅದ್ಭುತವಾದ ವಾಸ್ತುಶಿಲ್ಪ. ಸೂರ್ಯ, ಶಿವ, ಇಂದ್ರ, ಕಾರ್ತಿಕೇಯ ಸೇರಿದಂತೆ ಹಲವು ದೇವರ ವಿಗ್ರಹಗಳು, ಹಾಗೂ ಗರ್ಭಗುಡಿಯೂ ಇಲ್ಲಿದ್ದು, ಈ ದೇವಾಲಯಗಳು ಮತ್ತೊಮ್ಮೆ ಪುರಾತನ ಕಾಲಕ್ಕೆ ಪ್ರವಾಸಿಗರನ್ನು ಕರೆದೊಯ್ಯುತ್ತವೆ. ಭಾರತದ ಶ್ರೀಮಂತ ಸಾಂಸ್ಕೃತಿಕ ಮತ್ತು ಕಲಾತ್ಮಕ ಪರಂಪರೆಗೆ ಸಾಕ್ಷಿಯಾಗಿರುವ ಈ ದೇವಾಲಯಗಳು ಇತಿಹಾಸದ ಮೂಲಕ ಮಾತ್ರವಲ್ಲದೆ, ಕುಶಲಕರ್ಮಿಗಳ ಕರಕುಶಲತೆ ಮತ್ತು ಜಾಣ್ಮೆಯನ್ನು ಪ್ರತಿಬಿಂಬಿಸುವ ವಿಶೇಷವಾದ ಕೆತ್ತನೆಗಳಿಗೂ ಇಲ್ಲಿವೆ.

maxresdefault

ಆದರೆ ಐತಿಹಾಸಿಕ ಮಹತ್ವವನ್ನು ಹೊಂದಿದ್ದರೂ, ವಾಸ್ತುಶಿಲ್ಪದ ವೈಭವವುಳ್ಳದಾದರೂ, ಮಸ್ರೂರ್ ರಾಕ್ ಕಟ್ ದೇವಾಲಯ ಹೆಸರು ಪ್ರವಾಸಿ ನಕ್ಷೆಯಲ್ಲಿ ಅಷ್ಟಾಗಿ ಗುರುತಿಸಿಕೊಂಡಿಲ್ಲ ಎಂಬ ಮಾತುಗಳು ಕೇಳಿಬರುತ್ತಲೇ ಇವೆ.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ