Friday, October 3, 2025
Friday, October 3, 2025

ಡೈಮಂಡ್ ಕ್ರಾಸಿಂಗ್; ಭಾರತೀಯ ರೈಲ್ವೆಯ ಈ ಅಚ್ಚರಿಯ ಬಗ್ಗೆ ನಿಮಗೆ ಗೊತ್ತಾ?

ಭಾರತೀಯ ರೈಲ್ವೆಯ ಹೆಮ್ಮೆ ಡೈಮಂಡ್ ಕ್ರಾಸಿಂಗ್. ದೇಶದಲ್ಲಿ ಒಂದೇ ಕಡೆ ಕಾಣಸಿಗುವ ಈ ಅಚ್ಚರಿಯನ್ನು ನೋಡಲು ದೇಶದೆಲ್ಲೆಡೆಯಿಂದ ರೈಲ್ವೇ ಪ್ರಿಯರು ಆಗಮಿಸುತ್ತಾರೆ. ಡೈಮಂಡ್ ವಿನ್ಯಾಸದಲ್ಲಿ ಕಾಣಸಿಗುವ ಈ ರೈಲ್ವೇ ಹಳಿಗಳನ್ನು ಕಂಡು ಬೆರಗಾಗುತ್ತಾರೆ.

ನಮ್ಮ ಭಾರತೀಯ ರೈಲ್ವೆ ದೇಶದ ಹೆಮ್ಮೆ, ಜನರ ಜೀವನಾಡಿಯೂ ಹೌದು. ನಿತ್ಯವೂ ಲಕ್ಷಾಂತರ ಮಂದಿ ಅನೇಕ ಕಾರಣಗಳಿಗಾಗಿ ರೈಲ್ವೇ ಪ್ರಯಾಣವನ್ನು ಕೈಗೊಳ್ಳುತ್ತಾರೆ. ದೂರದೂರುಗಳ ಪ್ರಯಾಣ, ಪ್ರವಾಸಗಳಿಗೂ ರೈಲ್ವೇ ಸಂಪರ್ಕವನ್ನೇ ಅವಲಂಭಿಸುತ್ತಾರೆ. ಆದರೆ ಈ ನಡುವೆ ಎಂದಾದರೂ ನೀವು ಡೈಮಂಡ್ ಕ್ರಾಸಿಂಗ್ (Diamond Crossing) ಬಗ್ಗೆ ಕೇಳಿದ್ದೀರಾ?

diamond-crossing-blog1-low-res

ಸಾಮಾನ್ಯವಾಗಿ ರೈಲುಗಳು ಒಂದು ಹಳಿಯಿಂದ ಮತ್ತೊಂದು ಹಳಿಗೆ ಬದಲಾಯಿಸುವುದು, ಕೆಲವು ಪ್ರಮುಖ ನಿಲ್ದಾಣಗಳಲ್ಲೂ ರೈಲುಗಳು ಟ್ರ್ಯಾಕ್ ಬದಲಿಸುವುದರ ಬಗ್ಗೆ ನೀವು ಕೇಳಿರಬಹುದು. ಆದರೆ ಭಾರತದ ಈ ನಗರದ ಒಂದು ಸ್ಥಳದಲ್ಲಿ ನಾಲ್ಕು ದಿಕ್ಕುಗಳಿಂದಲೂ ರೈಲುಗಳು ಬರುತ್ತವೆ. ಈ ಕ್ರಾಸಿಂಗ್ ಡೈಮಂಡ್ ವಿನ್ಯಾಸದಲ್ಲಿ ಕಾಣಿಸುತ್ತದೆ. ಒಂದೇ ಸ್ಥಳದಲ್ಲಿ ನಿಂತಲ್ಲೇ ನಿಮಗೆ ನಾಲ್ಕು ರೈಲುಗಳು ಕ್ರಾಸ್ ಆಗೋದನ್ನು ಗಮನಿಸಬಹುದು. ಇದನ್ನೇ ಡೈಮಂಡ್‌ ಕ್ರಾಸಿಂಗ್‌ ಎಂಬುದಾಗಿ ಕರೆಯಲಾಗುತ್ತದೆ. 1867ರಲ್ಲಿ ಪ್ರಾರಂಭವಾದ ಈ ವಿಶೇಷ ಕ್ರಾಸಿಂಗ್‌ನಲ್ಲಿ ಇದುವರೆಗೂ ಒಂದೇ ಒಂದು ಅಪಘಾತ ಸಂಭವಿಸಿಲ್ಲ.

f9a351b2a2b841e82bf102966c19c473

ಭಾರತದಲ್ಲಿ ಡೈಮಂಡ್ ಕ್ರಾಸಿಂಗ್ ಕಾಣಸಿಗುವುದೆಲ್ಲಿ ?

ಇಡೀ ಭಾರತವನ್ನು ಸಂಪರ್ಕಿಸಲು ಅನೇಕ ರೈಲ್ವೇ ಮಾರ್ಗಗಳು ಇವೆಯಾದರೂ ಭಾರತದಾದ್ಯಂತ ಹುಡುಕಿದರೂ ಬರೀ ಒಂದೇ ಡೈಮಂಡ್ ಕ್ರಾಸಿಂಗ್ ಕಾಣಸಿಗಬಹುದಷ್ಟೇ. ಅದು ಮಹಾರಾಷ್ಟ್ರ ರಾಜ್ಯದ ನಾಗ್ಪುರ ಜಿಲ್ಲೆಯ ಸಂಪ್ರಿತ್ ನಗರದಲ್ಲಿ. ಇಲ್ಲಿ ರೈಲುಗಳು ಹಳಿ ತಪ್ಪದಂತೆ, ಒಂದಕ್ಕೊಂದು ಡಿಕ್ಕಿಯಾಗದಂತೆ ಟ್ರ್ಯಾಕ್ ಗಳನ್ನು ಬಹಳ ಸೂಕ್ಷವಾಗಿ ನಿರ್ಮಿಸಲಾಗಿದೆ. ಅಲ್ಲದೆ ಟ್ರೈನ್ ಮಾರ್ಗಕ್ಕೆ ತಕ್ಕಂತೆಯೇ ರೈಲು ಹಳಿಗಳನ್ನೂ ಸಹ ಅಳವಡಿಸಲಾಗಿದೆ.

ಹಾಗಂತ ಇಲ್ಲಿ ಏಕಕಾಲದಲ್ಲಿ ನಾಲ್ಕು ಭಾಗಗಳಿಂದಲೂ ರೈಲುಗಳು ಬಂದುಬಿಡುತ್ತವೆ ಅಂದುಕೊಳ್ಳಬೇಡಿ. ಇದು ಖಂಡಿತವಾಗಿಯೂ ಸಾಧ್ಯವಿಲ್ಲ.. ಒಂದೊಂದಾಗಿಯೇ ಸಿಗ್ನಲ್ ನೀಡುವ ಮೂಲಕ ರೈಲುಗಳ ಚಲನೆಗೆ ಇಲ್ಲಿ ಅನುಮತಿಸಲಾಗುತ್ತದೆ. ಭಾರತೀಯ ರೈಲ್ವೆ ಇಲಾಖೆ ವ್ಯಾಪ್ತಿಗೆ ಬರುವ ಡೈಮಂಡ್ ಕ್ರಾಸಿಂಗ್ ಸುತ್ತಲಿನ ಪ್ರದೇಶದಲ್ಲಿ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚು ಹೊತ್ತು ಜನರು ನಿಂತುಕೊಳ್ಳುವುದಾಗಲೀ, ಹಳಿಗಳಲ್ಲಿ ನಡೆಯುವುದಾಗಲೀ, ಅಥವಾ ರೈಲು ಬೋಗಿಗಳ ಸಮೀಪಕ್ಕೂ ಹೋಗುವುದಾಗಲೀ ಮಾಡುವಂತಿಲ್ಲ.

hq720

ಯಾವೆಲ್ಲಾ ಭಾಗಗಳಿಗೆ ಇಲ್ಲಿಂದ ರೈಲು ಸಂಚಾರ ?

ಡೈಮಂಡ್ ಕ್ರಾಸಿಂಗ್ ಮೂಲಕ ನಾಲ್ಕು ದಿಕ್ಕುಗಳಲ್ಲೂ ರೈಲ್ವೇ ಸಂಚಾರವಿದೆ. ಪೂರ್ವದ ಗೋಂದಿಯಾದಿಂದ ಬರುವ ಟ್ರ್ಯಾಕ್, ಹೌರಾ-ರೌರಕೆಲಾ-ರಾಯ್ಪುರ ಮಾರ್ಗ ಹೊಂದಿದೆ. ಮತ್ತೊಂದು ಟ್ರ್ಯಾಕ್ ದೆಹಲಿಯಿಂದ ಬರುವ ಮಾರ್ಗವಾಗವಿದೆ. ಪಶ್ಚಿಮದ ಮುಂಬೈನಿಂದಲೂ ಮತ್ತೊಂದು ಮಾರ್ಗವಿಲ್ಲಿದೆ.

ಒಟ್ಟಿನಲ್ಲಿ ಭಾರತೀಯ ರೈಲ್ವೇಯಲ್ಲಿನ ಈ ಅಚ್ಚರಿ 1867ರಲ್ಲಿ ಪ್ರಾರಂಭವಾಗಿ ಸಾಕಷ್ಟು ಅಭಿವೃದ್ಧಿ ಕಂಡಿದ್ದು, ಒಮ್ಮೆಯಾದರೂ ಈ ಕ್ರಾಸಿಂಗ್‌ ಮೂಲಕ ಪ್ರಯಾಣಿಸಿ ಬನ್ನಿ..

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!