ಬಾರ್ ಬಾರ್ ದೇಖೋ.. ಇಲ್ಲಿ ಕಿಕ್ ಏರಲು ಮದ್ಯವೇ ಬೇಕಿಲ್ಲ!
ಸ್ವಾದಿಷ್ಟಕರವಾದ ಆಹಾರ, ಕಿಕ್ ನೀಡುವ ಕ್ಲಾಸಿಕ್ ಹಾಗೂ ಯುನಿಕ್ ಕಾಕ್‌ಟೇಲ್, ಫ್ರೆಶ್ ಫೀಲ್ ನೀಡುವ ಮಾಕ್‌ಟೇಲ್ ಇವೆಲ್ಲದರ ಖುಷಿಯನ್ನು ಇಮ್ಮಡಿಗೊಳಿಸಲು ಲೈವ್ ಮ್ಯೂಸಿಕ್. ಸಿಹಿ ನೆನಪುಗಳನ್ನು ಮೆಲುಕು ಹಾಕುವುದಕ್ಕೆ, ಕಹಿ ನೆನಪುಗಳನ್ನು ಮರೆಯುವುದಕ್ಕೆ ಸಂಗೀತಕ್ಕಿಂತ ಉತ್ತಮ ಆಯ್ಕೆ ಬೇರೊಂದಿಲ್ಲ. ಈ ನಿಟ್ಟಿನಲ್ಲಿ ʻ9889 ಬಾರ್ ಆಂಡ್ ಕಿಚನ್ʼನಲ್ಲಿ ವಿಶೇಷವಾದ ಮ್ಯೂಸಿಕ್ ಬ್ಯಾಂಡ್ ನ ಪರ್ಫಾಮೆನ್ಸ್‌ಗಳು ನಡೆಯುತ್ತಲೇ ಇರುತ್ತವೆ.
ಆಹಾರ ಮತ್ತು ಆತಿಥ್ಯ ಕ್ಷೇತ್ರದಲ್ಲಿ ನಿತ್ಯವೂ ಒಂದಿಲ್ಲೊಂದು ಬದಲಾವಣೆಗಳು, ಹೊಸತನದ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಬೆಂಗಳೂರಿನಂಥ ಮಹಾನಗರಿಯಲ್ಲಂತೂ ಅಂಥ ಹೊಟೇಲ್ ಪಬ್, ರೆಸ್ಟೋರೆಂಟ್ ಗಳ ಸಂಖ್ಯೆಗೆ ಮಿತಿಯೇ ಇಲ್ಲ. ಈ ಸಾಲಿಗೆ ನೂತನ ಸೇರ್ಪಡೆ ಯಲಹಂಕದ ʻ9889 ಬಾರ್ ಆಂಡ್ ಕಿಚನ್ʼ.
ಮೊದಲ ನೋಟದಲ್ಲೇ ಎಲ್ಲರನ್ನೂ ಸೆಳೆಯುವಂಥ ಸುಂದರ ವಾತಾವರಣ, ಕಣ್ಣು ಹಾಯಿಸಿದಲ್ಲೆಲ್ಲಾ ಹಸಿರು.. ಬರೀ ಹಸಿರು, ಅತ್ಯಾಕರ್ಷಕವಾದ ಇಂಟೀರಿಯರ್..ಆಹಾರವಂತೂ ಅತ್ಯದ್ಭುತ..ಯಾವುದನ್ನು ಹೊಗಳುವುದು, ಯಾವುದನ್ನು ಬಿಡುವುದು ಎಂಬುದೇ ಗ್ರಾಹಕರಿಗೆ ಗೊಂದಲವಾಗಿಬಿಡುತ್ತದೆ. ಇಂಡೋರ್ ಸೀಟಿಂಗ್, ರೂಫ್ ಟಾಪ್ ಸೀಟಿಂಗ್, ಫ್ಯಾಮಿಲಿಗೆ ಪ್ರೈವೇಟ್ ಡೈನಿಂಗ್ ಹಟ್ಸ್ ಹೀಗೆ ಗ್ರಾಹಕರ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡೇ ನಿರ್ಮಾಣಗೊಂಡಿರುವ ವಿಭಿನ್ನ ಬಾರ್ ಆಂಡ್ ಕಿಚನ್ ಇದು.

ಆಹಾರದಲ್ಲಿ ಕಾಂಪ್ರಮೈಸ್ ಇಲ್ಲ..
9889 ಬಾರ್ ಅಂಡ್ ಕಿಚನ್ ನಲ್ಲಿ ಸ್ಪೆಷಲ್ ಖಾದ್ಯಗಳದ್ದೇ ದರ್ಬಾರು. ಡೈನಿಂಗ್ ಪ್ರಾರಂಭವಾಗುವ ಮುನ್ನ ಬಾರ್ ನಿಂದ ಆಯ್ಕೆಗೆ ಅನುಗುಣವಾಗಿ ಕಾಕ್‌ಟೇಲ್ ಸರ್ವ್ ಮಾಡಿಬಿಡುತ್ತಾರೆ. ನಂತರ ಗ್ರಾಹಕರ ಡಿಮ್ಯಾಂಡ್ ಗೆ ತಕ್ಕಂತೆ ಸಿದ್ಧವಾಗುವ ಆಹಾರ ಒಂದೆಡೆಯಾದರೆ, 9889 ಕಿಚನ್ ನ ಸ್ಪೆಶಲ್ ಡಿಶ್ ಗಳನ್ನೂ ಟೇಸ್ಟ್ ಮಾಡಲೇಬೇಕಿದೆ. ವೆಜ್ ಹಾಗೂ ನಾನ್ ವೆಜ್ ನಿಮ್ಮಿಷ್ಟದ ಆಯ್ಕೆಗೆ ಅವಕಾಶವಿದ್ದು, ಡ್ರಿಂಕ್ಸ್, ಸ್ಟಾರ್ಟರ್ಸ್, ಮೈನ್ ಕೋರ್ಸ್, ಡೆಸರ್ಟ್ಸ್ ಎಲ್ಲವನ್ನೂ ಒಂದೊಂದಾಗಿ ಸವಿಯಬಹುದು. ಗ್ರೀನ್ ಜಮೈಕನ್ ಪಿಜ್ಜಾ, ವೆಜ್ ಲಾಲಿಪಾಪ್ಸ್, ಬಿರಿಯಾನಿ ಹಾಗೂ ನಾರ್ತ್ ಇಂಡಿಯನ್ ಫುಡ್ ಇವರ ಸ್ಪೆಷಲ್ ಐಟಂಗಳಾಗಿದ್ದು, ನಿಜಾಮಿ ಕ್ರೀಮಿ ಪನೀರ್, ಬೋನ್ ಲೆಸ್ ಬಿರಿಯಾನಿಯನ್ನು ಟೇಸ್ಟ್ ಮಾಡಲು ಮರೆಯಬೇಡಿ.
ಮ್ಯೂಸಿಕ್ ಆಂಡ್ ಮೆಮೊರೀಸ್…
ಸ್ವಾದಿಷ್ಟಕರವಾದ ಆಹಾರ, ಕಿಕ್ ನೀಡುವ ಕ್ಲಾಸಿಕ್ ಹಾಗೂ ಯುನಿಕ್ ಕಾಕ್‌ಟೇಲ್, ಫ್ರೆಶ್ ಫೀಲ್ ನೀಡುವ ಮಾಕ್‌ಟೇಲ್ ಇವೆಲ್ಲದರ ಖುಷಿಯನ್ನು ಇಮ್ಮಡಿಗೊಳಿಸಲು ಲೈವ್ ಮ್ಯೂಸಿಕ್. ಸಿಹಿ ನೆನಪುಗಳನ್ನು ಮೆಲುಕು ಹಾಕುವುದಕ್ಕೆ, ಕಹಿ ನೆನಪುಗಳನ್ನು ಮರೆಯುವುದಕ್ಕೆ ಸಂಗೀತಕ್ಕಿಂತ ಉತ್ತಮ ಆಯ್ಕೆ ಬೇರೊಂದಿಲ್ಲ. ಈ ನಿಟ್ಟಿನಲ್ಲಿ ʻ9889 ಬಾರ್ ಆಂಡ್ ಕಿಚನ್ʼನಲ್ಲಿ ವಿಶೇಷವಾದ ಮ್ಯೂಸಿಕ್ ಬ್ಯಾಂಡ್ ನ ಪರ್ಫಾಮೆನ್ಸ್‌ಗಳು ನಡೆಯುತ್ತಲೇ ಇರುತ್ತವೆ. ಆಹಾರದ ಜತೆಗೆ ಮ್ಯೂಸಿಕ್ ಬ್ಯಾಂಡ್ ನ ಕಾಂಬಿನೇಷನ್ ಇಲ್ಲಿ ಬಹಳ ಸುಂದರವಾಗಿ ಬೆರೆತುಕೊಂಡಿದ್ದು, ಎಲ್ಲರ ಮೆಚ್ಚುಗೆಯನ್ನೂ ಗಳಿಸಿದೆ.
ಲೇಕ್ ಬಾಲ್ಕನಿ, ಹಟ್ ಸಿಸ್ಟಂ, ಬಿಗ್ಗೆಸ್ಟ್ ಗಾರ್ಡನ್ ಹಾಗೂ ಬಾರ್ ಎಂಡ್ ಕಿಚನ್ ಹೀಗೆ ʻ9889 ಬಾರ್ ಆಂಡ್ ಕಿಚನ್ʼ ಎಲ್ಲದರಲ್ಲೂ ಬೆಸ್ಟ್. ಲೇಕ್ ವ್ಯೂ ಎಂಜಾಯ್ ಮಾಡುತ್ತಾ ವಿಭಿನ್ನ ಬಗೆಯ ಕಾಕ್‌ಟೇಲ್ಸ್ ಹಾಗೂ ಮಾಕ್‌ಟೇಲ್ಸ್ ಎಂಜಾಯ್ ಮಾಡಬಹುದು.
ಕಾರ್ಪೊರೇಟ್ ಬುಕಿಂಗ್ಸ್, ಇವೆಂಟ್ಸ್, ಪಾರ್ಟಿ ಬುಕಿಂಗ್ಸ್, ಔಟ್ ಡೋರ್ ಕ್ಯಾಟರಿಂಗ್ ಹಾಗೂ ಬಲ್ಕ್ ಆರ್ಡರ್ ಗೂ ಇಲ್ಲಿ ಅವಕಾಶವಿದೆ. ಅಲ್ಲದೆ, ಸೋಮವಾರದಿಂದ ಭಾನುವಾರದ ವರೆಗೂ 11.30ರಿಂದ ರಾತ್ರಿ 1ರ ವರೆಗೂ ಗ್ರಾಹಕರ ಬೇಡಿಕೆಯಂತೆ ಆಹಾರ ಸಿದ್ಧಪಡಿಸಿಕೊಡುವುದು ಇವರ ವಿಶೇಷತೆಗಳಲ್ಲಿ ಒಂದಾಗಿದೆ.

ವಿಶೇಷವೇನಿದೆ ?
ಲೈವ್ ಮ್ಯೂಸಿಕ್ ನೈಟ್ಸ್
ಸಿಗ್ನೇಚರ್ ಕಾಕ್ ಟೇಲ್ಸ್
ಗಾರ್ಡನ್ ಎಸ್ಕೇಪ್
ಕಬಾನಾ ಸ್ಟೈಲ್ ಸೀಟಿಂಗ್
ಗ್ರೇಟ್ ಫುಡ್
ಸಂಪರ್ಕಿಸಿ:
9889 ಬಾರ್ ಆಂಡ್ ಕಿಚನ್, ನಂ. 86, ಅನಂತಪುರ ಗ್ರಾಮ, ಅಟ್ಟೂರು ಲೇಕ್ ಮುಂಭಾಗ, ಯಲಹಂಕ, ಬೆಂಗಳೂರು, ಕರ್ನಾಟಕ- 560064
+91 96324 39889, +91 96328 39889