ಪೈಸಾ ವಸೂಲ್ ! ಇದು ಗೋಲ್ಡ್ ಕಾಯಿನ್ಸ್ ಕ್ಲಬ್ ರೆಸಾರ್ಟ್ ಮೇನಿಯಾ…
ಬೆಂಗಳೂರಿನೊಳಗೆಯೇ ವೀಕೆಂಡ್ ಕಳೆಯಲು ಸುಂದರ ವಾತಾವರಣ … ಸಮಯ ಕಳೆಯಲು 25ಕ್ಕೂ ಹೆಚ್ಚು ಫನ್ ಗೇಮ್ಸ್, ಇಂಡೋರ್ ಹಾಗೂ ಔಟ್ ಡೋರ್ ಆಕ್ಟಿವಿಟೀಸ್… ಹಸಿವೆಯೆಂದರೆ ವೆಜ್ ಹಾಗೂ ನಾನ್ ವೆಜ್ ಬಫೆಟ್ ..ಆಲ್ ಇನ್ ವನ್ ಎಂಬ ಕಾನ್ಸೆಪ್ಟ್ ಇಂಥ ರೆಸಾರ್ಟ್ ನೋಡಿಯೇ ಹುಟ್ಟುಕೊಂಡಿದೆಯೇನೋ. ಇದು ಗೋಲ್ಡ್ ಕಾಯಿನ್ಸ್ ಕ್ಲಬ್ ರೆಸಾರ್ಟ್ ಹೈಲೈಟ್ಸ್…
ಮಾಯಾನಗರಿ ಬೆಂಗಳೂರಿಗೆ ಉದ್ಯೋಗ, ವ್ಯಾಪಾರ, ವ್ಯವಹಾರದ ಕಾರಣದಿಂದಾಗಿ ಬಂದು, ಜೀವನ ಕಟ್ಟಿಕೊಂಡಿದ್ದೀರಾ? ವೀಕ್ ಎಂಡ್ ಬಂದರೆ ಸಾಕು ಒತ್ತಡದ ಜೀವನದಿಂದ ಹೊರಬರುದಕ್ಕಾಗಿ ಬೆಂಗಳೂರಿನ ಸುತ್ತಮುತ್ತಲು, ಹೊರ ರಾಜ್ಯಗಳ ರೆಸಾರ್ಟ್‌ಗಳ ಮೊರೆಹೋಗುತ್ತಿದ್ದೀರಾ..? ಹಾಗಾದರೆ ರೆಸಾರ್ಟ್ ಅನುಭವಕ್ಕಾಗಿ ಇನ್ನು ಪರ ಊರುಗಳ ಹಾದಿ ಹಿಡಿಯಬೇಕಿಲ್ಲ. ಯಾಕೆಂದರೆ ಬೆಂಗಳೂರಿನಲ್ಲೇ ನಿಮಗೆ ಒಪ್ಪುವಂಥ ವಿಶೇಷ ರೆಸಾರ್ಟ್ ಕಾರ್ಯನಿರ್ವಹಿಸುತ್ತಿದ್ದು, ಬಹು ಬೇಡಿಕೆಯನ್ನು ಪಡೆದುಕೊಂಡಿದೆ.
ಫ್ಯಾಮಿಲಿ, ಫ್ರೆಂಡ್ಸ್ ಗೆಟ್ ಟುಗೆದರ್, ಆಫೀಸ್ ಔಟಿಂಗ್ ಹೀಗೆ ಯಾವುದೇ ಆಗಿದ್ದರೂ ಬೆಂಗಳೂರು ಗಡಿಯೊಳಗೆಯೇ ಅತ್ಯದ್ಭುತವಾದ ರೆಸಾರ್ಟ್ ಎಕ್ಸ್ಪೀರಿಯನ್ಸ್ ಪಡೆಯಬೇಕೆಂದರೆ ʻಗೋಲ್ಡ್ ಕಾಯಿನ್ಸ್ ಕ್ಲಬ್ ರೆಸಾರ್ಟ್ʼ ನಿಮ್ಮ ಆಯ್ಕೆಯಲ್ಲಿರಲಿ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಫೇಸ್ 2ರಲ್ಲಿ ʻಗೋಲ್ಡ್ ಕಾಯಿನ್ಸ್ ಕ್ಲಬ್ ರೆಸಾರ್ಟ್ʼ ಕಳೆದ 30 ವರ್ಷಗಳಿಂದಲೂ ಗ್ರಾಹಕರ ಮೆಚ್ಚುಗೆ ಪಡೆದುಕೊಂಡಿದ್ದು, ಹೊಸ ಪ್ರಯೋಗಗಳಿಗೂ ನಾಂದಿ ಹಾಡಿದೆ.
ಡೇ ಔಟ್ ಹಾಗೂ ಸ್ಟೇ ಪ್ಯಾಕೇಜ್‌ಗಳು
ಕನಕಪುರ, ಬಿಡದಿ, ರಾಮನಗರ ಸೇರಿದಂತೆ ಬೆಂಗಳೂರಿನ ಆಸುಪಾಸಿನಲ್ಲಿ ಲೆಕ್ಕವಿಲ್ಲದಷ್ಟು ರೆಸಾರ್ಟ್‌ಗಳು ಇವೆಯಾದರೂ ಟೇಸ್ಟೀ ಫುಡ್, ಗುಡ್ ಆಂಬಿಯನ್ಸ್ ಇವೆಲ್ಲದಕ್ಕೂ ಹೆಚ್ಚಾಗಿ ಬಜೆಟ್ ಫ್ರೆಂಡ್ಲೀ ಕಾಟೇಜ್‌ಗಳು ಇಲ್ಲಿನ ಹೈಲೈಟ್ಸ್.1250 ರೂ ನಿಂದಲೂ ಡೇ ಔಟ್ ಪ್ಯಾಕೇಜ್‌ಗಳು ಲಭ್ಯವಿದ್ದು, ಕಾಸ್ಟ್ಲೀ ಗುರು..! ಅನ್ನುವ ಮಾತೇ ಇಲ್ಲ. ಕಡಿಮೆ ಬಜೆಟ್‌ನಲ್ಲಿ ಫುಡ್, ಆಂಬಿಯನ್ಸ್ ಜತೆಗೆ ಗೇಮ್ಸ್ ಹೀಗೆ ಎಲ್ಲವೂ ಲಭ್ಯವಿದೆ.

ರೂಮ್‌ಗಳ ಆಯ್ಕೆಯ ವಿಚಾರದಲ್ಲಿ ರಾಜಿ ಬೇಕಿಲ್ಲ
ಅಕ್ವಾ ರೂಮ್ಸ್‌ನ ಅನುಭವ ಪಡೆಯಬೇಕು ಎಂಬುದು ಈಗಿನ ಟ್ರೆಂಡ್ ಆಗಿದೆ. ರೂಮಿನ ಮೇಲ್ಛಾವಣಿಗೆ ಹಾಸಿರುವ ಗಾಜಿನ ಮೂಲಕ ಆಗಸವನ್ನು ಆನಂದಿಸುವ ಖುಷಿಯೇ ಬೇರೆ. ಇಂಥ ವಿಶೇಷ ಅನುಭವಕ್ಕಿಲ್ಲಿ ಅವಕಾಶ ಕಲ್ಪಿಸಲಾಗಿದೆ. ಇನ್ನು ಬೆಂಗಳೂರಿನ ನಾಲ್ಕು ಕೋಣೆಗಳಲ್ಲಿ ಬಂಧಿಯಾಗಿರುವ ಮಂದಿಗೆ ಸಾಂಪ್ರದಾಯಿಕ ಶೈಲಿಯ ಮನೆಯ ಅನುಭವ ಬೇಕೆನಿಸಿದರೆ ಹೆರಿಟೇಜ್ ಕಾಟೇಜ್ ವಿತ್ ಟ್ರೆಡಿಶನಲ್ ಆಂಬಿಯನ್ಸ್ ಲಭ್ಯವಿದೆ. ಇದಕ್ಕೆ ಹೊರತಾಗಿ ಸ್ವಚ್ಛವಾದ ಸ್ಯೂಟ್ ರೂಮ್ಸ್, ಕ್ಯಾಂಪ್ ರೂಮ್ಸ್ ಮಾತ್ರವಲ್ಲದೆ ಸ್ಯೂಟ್ ರೂಮ್ ವಿತ್ ಪ್ರೈವೇಟ್ ಪೂಲ್ ಹೀಗೆ ಗ್ರಾಹಕರ ಆಯ್ಕೆಗೆ ತಕ್ಕಂತೆ ಎಲ್ಲವನ್ನೂ ನಿರ್ಮಿಸಿರುವುದು ʻಗೋಲ್ಡ್ ಕಾಯಿನ್ಸ್ ಕ್ಲಬ್ ರೆಸಾರ್ಟ್ʼ ನ ಪ್ರಮುಖ ಆಕರ್ಷಣೆ.

25ಕ್ಕೂ ಹೆಚ್ಚು ಇಂಡೋರ್ ಹಾಗೂ ಔಟ್ ಡೋರ್ ಗೇಮ್ಸ್
ಮನದ ನೆಮ್ಮದಿಯನ್ನು ಅರಸಿ ಇಲ್ಲಿಗೆ ಭೇಟಿ ನೀಡುವ ಗ್ರಾಹಕರಿಗಾಗಿ ಇನ್ನೂ ಅನೇಕ ಮೈಂಡ್ ಗೇಮ್ಸ್, ಫಿಸಿಕಲ್ ಆಕ್ಟಿವಿಟಿಗಳು ಇಲ್ಲಿವೆ. ಮಕ್ಕಳಿಂದ ತೊಡಗಿ ಯಾವುದೇ ವಯಸ್ಸಿಗರಿಗೂ ಒಪ್ಪುವಂಥ 25ಕ್ಕೂ ಹೆಚ್ಚು ಇಂಡೋರ್ ಹಾಗೂ ಔಟ್ ಡೋರ್ ಗೇಮ್ಸ್ ಇವೆ. ಕ್ರಿಕೆಟ್, ಚೆಸ್, ಕ್ಯಾರಂ, ಬಾಸ್ಕೆಟ್ ಬಾಲ್ ಮಾತ್ರವಲ್ಲದೆ ರೋಪ್ ಆಕ್ಟಿವಿಟಿ, ಜಿಪ್ ಲೈನ್, ಸ್ವಿಮ್ಮಿಂಗ್ ಪೂಲ್, ಸ್ಕೈ ಸೈಕ್ಲಿಂಗ್, ರೈನ್ ಡ್ಯಾನ್ಸ್ ಹೀಗೆ ನಿಮ್ಮ ಆಸಕ್ತಿಗೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಬಹುದು. ವಿಶೇಷವೆಂದರೆ ಇಲ್ಲಿ ಬಂದವರಿಗೆಲ್ಲಾ ಒಂದೇ ಸ್ವಿಮ್ಮಿಂಗ್ ಪೂಲ್ ಎಂಬ ರೂಢಿಯಿಂದ ಹೊರಬಂದು ಒಲಂಪಿಕ್ ಸ್ವಿಮ್ಮಿಂಗ್ ಪೂಲ್, ಕಿಡ್ಸ್ ಪೂಲ್, ಲೇಡೀಸ್ ಪೂಲ್ ಹೀಗೆ ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
ಆಹಾರದ ವಿಚಾರಕ್ಕೆ ಬಂದರೆ ಇಲ್ಲಿ ವೆಜ್ ಮಾತ್ರವಲ್ಲದೆ ನಾನ್ ವೆಜ್ ಬಫೆಟ್ ಆಂಡ್ ಸ್ನ್ಯಾಕ್ಸ್ ಇದ್ದು, ಆರೋಗ್ಯದ ಕಾಳಜಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಬರಿಯ ಡೇ ಔಟ್‌ಗಷ್ಟೇ ಅಲ್ಲದೆ ಫ್ಯಾಮಿಲಿ ಗ್ಯಾದರಿಂಗ್ಸ್, ಕಾರ್ಪೊರೇಟ್ ರೀಟ್ರೀಟ್ಸ್, ಸ್ಪೆಷಲ್ ಈವೆಂಟ್ಸ್‌ಗೂ ಮುಂಚಿತವಾಗಿ ಬುಕ್ಕಿಂಗ್ ಮಾಡಿಕೊಳ್ಳಬಹುದು.

ಪ್ರಮುಖ ಆಕರ್ಷಣೆಗಳು:
ಪ್ರೀಮಿಯಂ ಹಾಗೂ ಬಜೆಟ್ ಫ್ರೆಂಡ್ಲೀ ಸ್ಟೇ
25ಕ್ಕೂ ಹೆಚ್ಚು ಇಂಡೋರ್ ಹಾಗೂ ಔಟ್ ಡೋರ್ ಗೇಮ್ಸ್
ಕ್ಯಾಂಪ್ ಫೈರ್ ಫನ್
ಅನ್ ಲಿಮಿಟೆಡ್ ವೆಜ್ ಹಾಗೂ ನಾನ್ ವೆಜ್ ಫುಡ್
ಸ್ವಿಮ್ಮಿಂಗ್ ಪೂಲ್ ಹಾಗೂ ವಾಟರ್ ಝೋರ್ಬಿಂಗ್
ರೂಮ್ಸ್ ಆಯ್ಕೆ ನಿಮಗೆ ಬಿಟ್ಟಿದ್ದು..
- ಅಕ್ವಾ ರೂಮ್ಸ್- ಓಪನ್ ಟು ಸ್ಕೈ ವ್ಯೂ
- ಹೆರಿಟೇಜ್ ಕಾಟೇಜ್ ವಿತ್ ಟ್ರೆಡಿಶನಲ್ ಆಂಬಿಯನ್ಸ್
- ಸೂಟ್ ರೂಮ್
- ಕ್ಯಾಂಪ್ ರೂಮ್
- ಸ್ಯೂಟ್ ರೂಮ್ ವಿತ್ ಪ್ರೈವೇಟ್ ಪೂಲ್.
ಬುಕ್ಕಿಂಗ್ ಗಾಗಿ ಸಂಪರ್ಕಿಸಿ:
+91 76762 17251
+91 9035800200
Visit: goldcoinsresort.in
ವಿಳಾಸ: ನಂ.45/1, ಅಂದಾಪುರ, ಆಫ್ ಹುಸ್ಕೂರ್ ರೋಡ್, ಎಲೆಕ್ಟ್ರಾನಿಕ್ ಸಿಟಿ ಫೇಸ್ II, ಬೆಂಗಳೂರು, ಕರ್ನಾಟಕ - 560100.