Saturday, January 17, 2026
Saturday, January 17, 2026

32ರ ಸಂಭ್ರಮದಲ್ಲಿ ಅಡಿಗಾಸ್‌ ಯಾತ್ರಾ

ಪ್ರಯಾಣ ಸಂಸ್ಥೆಯನ್ನು ಕಟ್ಟಿಬೆಳೆಸುವುದೆಂದರೆ ಸಾಮಾನ್ಯ ವಿಚಾರವಲ್ಲ. ಅದರಲ್ಲೂ 32 ವರ್ಷಗಳ ಕಾಲ ಅನೇಕ ಏಳು ಬೀಳುಗಳ ಜತೆಗೆ ಗ್ರಾಹಕರ ಮೆಚ್ಚಿನ ಟ್ರಾವೆಲ್‌ ಏಜೆನ್ಸಿಯೆನಿಸಿಕೊಳ್ಳುವುದಂತೂ ಸುಲಭದ ಮಾತೇ ಅಲ್ಲ. ಪ್ರವಾಸಿಗರಿಗೆ ಉತ್ತಮ ಸೇವೆಯನ್ನು ಕಲ್ಪಿಸಿಕೊಡಬೇಕೆಂಬ ದಿಟ್ಟ ನಿಲುವಿನೊಂದಿಗೆ ಕೆ.ನಾಗರಾಜ ಅಡಿಗ ಅವರು 1994ರಲ್ಲಿ ಹುಟ್ಟುಹಾಕಿರುವ ಅಡಿಗಾಸ್‌ ಯಾತ್ರಾ ನಡೆದುಬಂದ ಹಾದಿಯ ಪರಿಚಯ ನಿಮಗಾಗಿ.

ಪ್ರವಾಸದ ಕನಸು ಕಾಣುವವರೇ ಎಲ್ಲರೂ. ದೇಶ ಸುತ್ತಿ ನೋಡು ಕೋಶ ಓದಿ ನೋಡು ಎಂಬಂತೆ ಜೀವಿತಾವಧಿಯಲ್ಲಿ ನಮ್ಮ ನಾಡು, ನಮ್ಮ ದೇಶವಷ್ಟೇ ಅಲ್ಲ ವಿದೇಶಗಳನ್ನೂ ಸುತ್ತಾಡಿ ಬರಬೇಕು ಎನ್ನುವುದೇ ಎಲ್ಲರ ಮಹದಾಸೆ. ಆದರೆ ಹೇಗೆ? ಈ ಪ್ರಶ್ನೆ ಎಲ್ಲರನ್ನೂ ಕಾಡುತ್ತಲೇ ಇರುತ್ತದೆ. ಪ್ರವಾಸಿ ತಾಣಗಳನ್ನು ಗುರುತಿಸಿಕೊಳ್ಳುವುದು, ಅಲ್ಲಿಗೆ ಉಳಿದುಕೊಳ್ಳಲು ಸೂಕ್ತ ಹೊಟೇಲ್‌ಗಳು, ಊಟ ಉಪಾಹಾರಕ್ಕಿರುವ ತಾಣಗಳನ್ನು ಹುಡುಕಿಕೊಳ್ಳುವುದು ಇವೆಲ್ಲವೂ ಸಾಮಾನ್ಯ ವಿಚಾರವಲ್ಲ. ಅದರಲ್ಲೂ ಅಂತಾರಾಷ್ಟ್ರೀಯ ಪ್ರವಾಸಿಗಳಿಗೆ ಇನ್ನೊಂದಷ್ಟು ಗೊಂದಲಗಳು ಸೇರಿಕೊಂಡಿರುತ್ತವೆ. ಇವೆಲ್ಲವನ್ನೂ ಕಡಿಮೆ ಬಜೆಟ್‌ನಲ್ಲಿ ಮಾಡಿಕೊಡುವುದಾಗಿ ಹೇಳಿ ಮುನ್ನೆಲೆಗೆ ಬರುವ ಟ್ರಾವೆಲ್‌ ಏಜೆನ್ಸಿಗಳು ಹಲವು ಇವೆಯಾದರೂ ಯಾವುದನ್ನು ನಂಬೋದು? ನಂಬಿಕೆಗೆ, ಭರವಸೆಗೆ ಯೋಗ್ಯವಾದ ಟ್ರಾವೆಲ್‌ ಏಜೆನ್ಸಿ ಯಾವುದು ಎಂಬ ಪ್ರಶ್ನೆಗೆ ಕಳೆದ ಮೂವತ್ತೆರಡು ವರ್ಷದಿಂದ ಮಾರುಕಟ್ಟೆಯಲ್ಲಿರುವ ಸ್ಪಷ್ಟ ಉತ್ತರ ʻಅಡಿಗಾಸ್‌ ಯಾತ್ರಾʼ.

ADIGAS (1)

ಅಡಿಗಾಸ್‌ ಎಂದರೆ ನಾಗರಾಜ್‌ ಅಡಿಗ

ರಾಜ್ಯಾದ್ಯಂತ ಅನೇಕ ಟ್ರಾವೆಲ್‌ ಏಜೆನ್ಸಿಗಳು ಚಾಲ್ತಿಯಲ್ಲಿವೆಯಾದರೂ ಆಗೊಮ್ಮೆ ಈಗೊಮ್ಮೆ ಸದ್ದು ಮಾಡಿ ಮರೆಯಾಗುವ ಅನೇಕ ಏಜೆನ್ಸಿಗಳೇ ಹೆಚ್ಚು. ಆದರೆ ಶ್ರಮ ಜೀವಿ, ಹುಟ್ಟು ಕನಸುಗಾರ ಕೆ. ನಾಗರಾಜ ಅಡಿಗ ಅವರು 32 ವರ್ಷಗಳ ಹಿಂದೆ ಕಟ್ಟಿರುವ ʻಅಡಿಗಾಸ್‌ ಯಾತ್ರಾʼ ಸಂಸ್ಥೆ ಪ್ರವಾಸಿಗರಿಂದ ಇಂದಿಗೂ ಬಲುಬೇಡಿಕೆಯನ್ನು ಪಡೆದುಕೊಂಡಿದೆ. ಪ್ರತಿಷ್ಠಿತ ಪಂಚತಾರಾ ಹೊಟೇಲ್‌ಗಳಲ್ಲಿ ವಾಸ್ತವ್ಯ, ಐಷಾರಾಮಿ ವಾಹನಗಳಲ್ಲಿ ಪ್ರಯಾಣ, ಮುಂಗಡವಾಗಿ ಕಾಯ್ದಿರಿಸಿದ ಅತ್ಯುತ್ತಮ ರೆಸ್ಟೋರೆಂಟ್‌ಗಳಲ್ಲಿ ಊಟ-ಉಪಾಹಾರ, ದೈನಂದಿನ ಚಟುವಟಿಕೆಗಳ ಸಮಗ್ರ ಪಟ್ಟಿ, ಪರಿಣಿತ ಟೂರ್‌ ಮ್ಯಾನೇಜರ್‌ ಹೀಗೆ ಡೊಮೆಸ್ಟಿಕ್‌ ಫಿಕ್ಸೆಡ್‌ ಡಿಪಾರ್ಚರ್‌ ಇರಲಿ, ಸ್ಟ್ಯಾಂಡರ್ಡ್‌ ಗ್ರೂಪ್‌ ಟೂರ್‌ ಇರಲಿ ಇಲ್ಲವೇ ಇಂಟರ್‌ ನ್ಯಾಷನಲ್‌ ಟೂರ್‌ಗಳೇ ಆದರೂ, ದರದಲ್ಲಿ ಯಾವುದೇ ರಾಜಿ ಮಾಡದೇ, ಪಡೆದ ಹಣಕ್ಕೆ ದುಪ್ಪಟ್ಟೆನಿಸುವ ಉತ್ತಮ ಸೇವೆಯನ್ನು ಕಲ್ಪಿಸುವುದನ್ನಷ್ಟೇ ನಮ್ಮ ಧ್ಯೇಯ ಎಂಬುದು ನಾಗರಾಜ್‌ ಅಡಿಗ ಅವರ ಮಾತು.

ಅಡಿಗಾಸ್‌ ಯಾತ್ರಾ ನಡೆದು ಬಂದ ಹಾದಿ

ವೀರ ಸಾವರ್ಕರ್‌ ಅವರ ಅಂಡಮಾನ್‌ ಪ್ರವಾಸ, ಸ್ವಾಮಿ ವಿವೇಕಾನಂದರ ಶಿಕಾಗೋ ಪ್ರಯಾಣ ಹೀಗೆ ಇತಿಹಾಸ ಪಠ್ಯದಲ್ಲಿ ಮಹಾನ್‌ ಸಾಧಕರ ಪ್ರಯಾಣ, ಪ್ರವಾಸಿ ಜೀವನದ ಬಗ್ಗೆ ಓದಿಕೊಂಡು, ಪ್ರಭಾವಿತರಾದ ನಾಗರಾಜ ಅಡಿಗ ಅವರು ತಾವೂ ಇಂಥ ಪ್ರವಾಸಗಳನ್ನು ಕೈಗೊಳ್ಳಬೇಕೆಂದು ಹಂಬಲಿಸಿದರು. ಆದರೆ ಕುಟುಂಬದಲ್ಲಿ ಇದಕ್ಕೆ ಸೂಕ್ತವಾದ ವಾತಾವರಣವಿಲ್ಲದ್ದರಿಂದ ಮುಂದೆ ಪ್ರವಾಸವನ್ನೇ ಆದಾಯದ ಮಾರ್ಗವಾಗಿಸಿಕೊಳ್ಳುವ ಗುರಿಯನ್ನು ಹೊಂದಿದರು. ಹೀಗೆ ಪ್ರಾರಂಭವಾದ ಅವರು ಪ್ರಯಾಣ ಹುಬ್ಬಳ್ಳಿಗೆ ಬಂದು ನಿಂತಿತ್ತು. ಪ್ರವಾಸವೆಂದರೇನು, ಪ್ರವಾಸೋದ್ಯಮ ಕ್ಷೇತ್ರದ ಮಹತ್ವವೇನು ಎಂಬುದು ಸಮಾಜಕ್ಕೆ ಇನ್ನೂ ಅಷ್ಟಾಗಿ ತಿಳಿಯುವ ಮುನ್ನವೇ ಅಂದರೆ 1994ರಲ್ಲಿಯೇ ಮೊದಲ ಹೆಜ್ಜೆಯೆಂಬಂತೆ ʻವಂದೇ ಮಾತರಂ ಟ್ರಾವೆಲ್ಸ್‌ʼ ಎಂಬ ಹೆಸರಿನಲ್ಲಿ ಟ್ರಾವೆಲ್‌ ಏಜೆನ್ಸಿಯೊಂದನ್ನು ಹುಟ್ಟುಹಾಕಿದ ಹಿರಿಮೆ ನಾಗರಾಜ ಅಡಿಗ ಅವರಿಗೆ ಸಲ್ಲುತ್ತದೆ.

Untitled design (31)

ಪ್ರಾರಂಭದ ಹಂತದಲ್ಲಿ ಬರಿಯ ಧಾರ್ಮಿಕ ಪ್ರವಾಸ, ಯಾತ್ರಾಗಳಿಗಷ್ಟೇ ಸೀಮಿತವಾಗಿದ್ದ ಅಡಿಗಾಸ್‌ ಯಾತ್ರಾ ನಂತರ ದಿನಗಳಲ್ಲಿ ಪ್ರವಾಸ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ಕಂಡಿತು. ಕಾಶಿ ಯಾತ್ರೆಯೆಂದರೆ ಅಡಿಗಾಸ್‌ ಯಾತ್ರಾ ಎಂಬಷ್ಟು ಹೆಸರು ಮಾಡಿದ್ದ ನಾಗರಾಜ ಅಡಿಗರ ಈ ಕನಸಿನ ಕೂಸು, ಇಂದು ದುಬೈ, ಯುರೋಪ್‌, ಅಮೆರಿಕ, ಮಿಡಲ್‌ ಈಸ್ಟ್‌, ಆಸ್ಟ್ರೇಲಿಯಾ, ಯುರೇಷ್ಯಾ ಹಾಗೂ ಆಫ್ರಿಕಾ ದೇಶಗಳು ಸೇರಿದಂತೆ ವಿದೇಶಿ ಮಾರುಕಟ್ಟೆಯಲ್ಲೂ ಸದ್ದು ಮಾಡುತ್ತಿದೆ. 32 ವರ್ಷಗಳ ಇತಿಹಾಸವಿರುವ ಈ ಟ್ರಾವೆಲ್‌ ಸಂಸ್ಥೆ ಹೊಸತಲೆಮಾರಿನ ಯೋಜನೆ, ಯೋಚನೆಗಳಿಗೆ ಪೂರಕವಾಗಿ ಹೊಸತನದ ರೂಪವನ್ನು ಪಡೆದುಕೊಳ್ಳುತ್ತಿದೆ. ಡಿಜಿಟಲ್‌ ಕ್ರಾಂತಿಗೆ ಒಳಗಾಗಿ ಸವಾಲುಗಳನ್ನು ಮೆಟ್ಟಿನಿಂತು, ಕನ್ನಡಿಗರಿಂದ ಕನ್ನಡಿಗರಿಗಾಗಿಯೇ ರೂಪುಗೊಂಡ ಹೆಮ್ಮೆಯ ಪ್ರಯಾಣ ಸಂಸ್ಥೆಯೆನಿಸಿಕೊಂಡಿದೆ.

ಹೊಸ ರೂಪದಲ್ಲಿ ಅಡಿಗಾಸ್‌ ಯಾತ್ರಾ ಲೋಗೋ

32ನೇ ವರ್ಷದ ಸಂಭ್ರಮದಲ್ಲಿರುವ ಅಡಿಗಾಸ್‌ ಯಾತ್ರಾ ಸಂಸ್ಥೆ ಇದೀಗ ಹೊಸ ರೂಪವನ್ನು ಪಡೆದುಕೊಳ್ಳಲು ಸಿದ್ಧವಾಗಿದೆ. 30 ವರ್ಷಗಳ ಹಿಂದೆ ಸಿದ್ಧಪಡಿಸಿದ್ದ ಬೇಸಿಕ್‌ ವೆಬ್‌ ಸೈಟ್‌ಗೆ ಹೊಸತನವನ್ನು ತುಂಬಿರುವ ಜತೆಗೆ ವರ್ಷಗಳಿಂದಲೂ ಇದ್ದ ಲೋಗೋವನ್ನು ಇನ್ನಷ್ಟು ಆಕರ್ಷಕವಾಗಿ ಹೊರತರಲಾಗುತ್ತಿದೆ. ಏರ್‌ ಇಂಡಿಯಾ ಲೋಗೋ ಮಾದರಿಯಲ್ಲೇ ಸಿದ್ಧಪಡಿಸಿರುವ ಈ ಲೋಗೋ ಸರಳ ಅಕ್ಷರ, ಸುಲಭ ವಿನ್ಯಾಸಗಳ ಮೂಲಕ ಪ್ರವಾಸಿಗರ ಮನಮುಟ್ಟಲಿದೆ.

Untitled design (32)

ಸದ್ಯದಲ್ಲೇ ಅಡಿಗಾಸ್‌ ನ್ಯೂಸ್‌ ವೆಬ್‌

ಪ್ರಯಾಣ ಸಂಸ್ಥೆಯೆಂದಮೇಲೆ ದಿನವೂ ಅಪ್‌ಡೇಟ್‌ ಆಗುತ್ತಲೇ ಇರಬೇಕಾಗುತ್ತದೆ. ಸ್ಥಳೀಯವಷ್ಟೇ ಅಲ್ಲದೆ ರಾಜ್ಯ, ದೇಶ -ವಿದೇಶಗಳ ಬಗೆಗೂ ಮಾಹಿತಿಯನ್ನು ಕಲೆಹಾಕಬೇಕಾಗುತ್ತದೆ. ಅಲ್ಲಿನ ವಾತಾವರಣ, ಪ್ರವಾಸಿ ನೀತಿಗಳು, ಸಾರಿಗೆ ವ್ಯವಸ್ಥೆ ಬಗೆಗಿನ ಸುದ್ದಿಗಳ ಜತೆಗೆ ಪ್ರಾಕೃತಿಕ ವಿಕೋಪಗಳು ಸೇರಿ ಅನೇಕ ಬೆಳವಣಿಗೆಗಳ ವಿಚಾರ ತಿಳಿದುಕೊಳ್ಳುತ್ತಲೇ ಇರಬೇಕಾಗುತ್ತದೆ. ಈ ಮಾಹಿತಿಗಳನ್ನು ಖುದ್ದು ತಿಳಿದುಕೊಳ್ಳುವುದಷ್ಟೇ ಅಲ್ಲದೆ ಗ್ರಾಹಕರಿಗೂ ಇದನ್ನು ತಲುಪಿಸಿದರೆ ಹೇಗೆ ಎಂಬ ಉದ್ದೇಶದೊಂದಿಗೆ ಸಂಸ್ಥೆಯ ಸಂಸ್ಥಾಪಕರಾದ ನಾಗರಾಜ ಅಡಿಗ ಅವರು ಇದಕ್ಕಾಗಿಯೇ ಉತ್ತಮ ವೇದಿಕೆಯನ್ನು ಸಿದ್ಧಗೊಳಿಸಿದ್ದು, ವಿಭಿನ್ನವಾದ ಟ್ರಾವೆಲ್‌ ನ್ಯೂಸ್‌ ವೆಬ್‌ಸೈಟ್‌ ಅನಾವರಣಗೊಳ್ಳಲಿದೆ.

32ನೇ ವಾರ್ಷಿಕೋತ್ಸವದ ಸಂಭ್ರಮ

ಅಡಿಗಾಸ್‌ ಯಾತ್ರಾ ಸಂಸ್ಥೆ ತನ್ನ 32ನೇ ವರ್ಷದ ವಾರ್ಷಿಕೋತ್ಸವನ್ನು ಮೈಸೂರು ಬ್ಯಾಂಕ್‌ ವೃತ್ತದ ಬಳಿಯ ಎಫ್‌ಕೆಸಿಸಿಐ ಆಡಿಟೋರಿಯಂನಲ್ಲಿ ಇದೇ ಜನವರಿ 18ರಂದು ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿದೆ. ಈ ವೇಳೆ ನೂತನ ಲಾಂಛನ ಅನಾವರಣ, ಅಡಿಗಾಸ್‌ ಯಾತ್ರಾ ನ್ಯೂಸ್‌ ವೆಬ್‌ಸೈಟ್‌ ಬಿಡುಗಡೆ ಮತ್ತು ನೂತನ ಯೂಟ್ಯೂಬ್‌ ಚಾನೆಲ್‌ ಲೋಕಾರ್ಪಣೆಗೊಳ್ಳಲಿದೆ. ಹರಿಹರದ ಹರಪೀಠದ ಶ್ರೀ ವಚನಾನಂದ ಮಹಾಸ್ವಾಮಿಗಳು, ಕರ್ನಾಟಕ ವಿಧಾನ ಪರಿಷತ್‌ನ ಸಭಾಪತಿಗಳಾದ ಬಸವರಾಜ ಹೊರಟ್ಟಿ, ವಿಶ್ವವಾಣಿ ಪ್ರವಾಸಿ ಪ್ರಪಂಚದ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರು ಎಂ. ಶ್ರೀನಿವಾಸ್‌, ಖ್ಯಾತ ನಟಿ ಅದಿತಿ ಪ್ರಭುದೇವ, ಕರ್ನಾಟಕ ರಾಜ್ಯ ಟ್ರಾವೆಲ್‌ ಆಪರೇಟರ್ಸ್‌ ಅಸೋಸಿಯೇಷನ್‌ನ ಅಧ್ಯಕ್ಷರು ಕೆ.ರಾಧಾಕೃಷ್ಣ ಹೊಳ್ಳ ಸೇರಿದಂತೆ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

--

ಪ್ರಚಾರದ ಜತೆಗೆ ಪ್ರವಾಸಿಗರಿಗೆ ಮಾಹಿತಿ ನೀಡಲು ಡಿಜಿಟಲ್‌ ಸೇವೆ

ಪ್ರಾರಂಭದ ಕೆಲವು ವರ್ಷಗಳನ್ನು ಹೊರತುಪಡಿಸಿದರೆ ಆ ಕಾಲದಲ್ಲೇ ನಾವು ಅಡಿಗಾಸ್‌ ಯಾತ್ರಾದಲ್ಲಿ ಡಿಜಿಟಲ್‌ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡಿದ್ದೇವೆ. ವೆಬ್‌ ಸೈಟ್‌ ಮೂಲಕ ನಮ್ಮ ಪ್ರವಾಸಗಳ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇವೆ. ಇತ್ತೀಚೆಗೆ ಪ್ರಚಾರವೂ ಆಗಲಿ ಜತೆಗೆ ಪ್ರವಾಸಿಗರಿಗೂ ಪ್ರವಾಸಿ ತಾಣಗಳು, ಪ್ರವಾಸದ ದಿನಾಂಕಗಳು, ಅಡಿಗಾಸ್‌ ಯಾತ್ರಾದ ಸೇವೆ ಹಾಗೂ ಸೌಲಭ್ಯಗಳ ಬಗ್ಗೆ ಇನ್ನೂ ಹೆಚ್ಚಿನ ಜನರಿಗೆ ತಲುಪುವಂತಾಗಬೇಕು ಎಂಬ ಉದ್ದೇಶದೊಂದಿಗೆ ಪೂರ್ಣ ಪ್ರಮಾಣದಲ್ಲಿ ಡಿಜಿಟಲ್‌ ಕ್ರಾಂತಿಗೆ ಒಗ್ಗಿಕೊಂಡಿದ್ದೇವೆ. ಇದಿಷ್ಟೇ ಅಲ್ಲದೆ ಪ್ರವಾಸಿ ನ್ಯೂಸ್‌ ವೆಬ್‌ ಸೈಟ್‌ ಮಾಡಿ ಎಂಬುದಾಗಿ ಅನೇಕ ಸ್ನೇಹಿತರು ನೀಡಿರುವ ಸಲಹೆಗಳು ಸದ್ಯ ಸೂಕ್ಯವೆನಿಸಿ ವಿಶೇಷ ಪ್ರಯತ್ನಕ್ಕೆ ಕೈಹಾಕಿದ್ದೇವೆ. ಇವೆಲ್ಲದಕ್ಕೂ ನಮ್ಮ ಗ್ರಾಹಕರು ಹಾಗೂ ಪ್ರವಾಸಿಪ್ರೇಮಿಗಳಿಂದ ಉತ್ತಮ ಸ್ಪಂದನೆ ಸಿಗಲಿದೆ ಎಂಬ ನಂಬಿಕೆ ನನಗಿದೆ.

- ಕೆ.ನಾಗರಾಜ ಅಡಿಗ, ಸಂಸ್ಥಾಪಕರು, ಅಡಿಗಾಸ್‌ ಯಾತ್ರಾ

--

ಉತ್ತಮ ಸೇವೆ, ಸೌಲಭ್ಯಗಳಿಗೆ ಹೆಸರು ಮಾಡಿದ ಅಡಿಗಾಸ್‌ ಯಾತ್ರಾ

ನನಗೆ ಪ್ರವಾಸೋದ್ಯಮ ಕ್ಷೇತ್ರ ಪರಿಚಯವಾಗಿದ್ದು, ನಾಗರಾಜ ಅಡಿಗರನ್ನು ವಿವಾಹವಾದ ನಂತರ. ಅಂದಿನಿಂದ ನಾನು ಅವರೊಂದಿಗೆ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದೇನೆ. ಇದಕ್ಕೂ ಮೊದಲು ನಾನು ಟೂರ್‌ ಮ್ಯಾನೇಜರ್‌ ಆಗಿ ಕೆಲಸ ಮಾಡಿದ್ದೆ. ಸಾಕಷ್ಟು ಪ್ರವಾಸಿ ಸಂಸ್ಥೆಗಳನ್ನು ನೋಡಿದಾಗಲೂ ಅಡಿಗಾಸ್ ಯಾಕೆ ಮೆಚ್ಚುಗೆಯಾಗುತ್ತದೆ ಅಂದರೆ ಇಲ್ಲಿನ ಸೇವಾ ಮನೋಭಾವದಿಂದ, ಟೂರ್‌ ಮ್ಯಾನೇಜರ್‌ಗಳ ಕಾಳಜಿಯಿಂದ. ಸಾಕಷ್ಟು ಜನ ನಮ್ಮ ತಂದೆ ತಾಯಿಗಳನ್ನು ನಿಮ್ಮ ಜತೆಗೆ ಕಳಿಸಿಕೊಡುತ್ತಿದ್ದೇವೆ ಎಂದು ಹೇಳುತ್ತಾರೆ. ಅವರನ್ನು ನಮ್ಮ ತಂದೆ-ತಾಯಿಗಳಂತೆ ನೋಡಿಕೊಳ್ಳುವ, ಸೇವೆ ಒದಗಿಸಿ ಕಾಳಜಿ ವಹಿಸುವ ಟೀಮ್‌ ನಮ್ಮದು. ನಮ್ಮಲ್ಲಿ ಸರ್ವಿಸ್‌ ಸದಾ ಉತ್ತಮವಾಗಿರುತ್ತದೆ. ಜನರನ್ನು ಆಕರ್ಷಿಸೋದಕ್ಕೆ ಚೀಪ್‌ ಗಿಮಿಕ್‌ಗಳನ್ನು ಮಾಡೋದಿಲ್ಲ. ಪ್ರವಾಸ ಆರಂಭದಿಂದ ಮುಗಿಯುವವರೆಗೂ, ಆ ನಂತರವೂ ಅದರ ಅದನ್ನು ನೆನಪಿನಲ್ಲಿ ಉಳಿಯುವಂತೆ ಮಾಡುವುದು ಟೂರ್‌ ಮ್ಯಾನೇಜರ್‌ಗಳ ಕೈಯಲ್ಲಿರುತ್ತದೆ. ಅವರಿಗೆ ಉತ್ತಮ ನಾಲೆಜ್ ಇರಬೇಕು, ಮನೆಯವರಂತೆ ಪ್ರವಾಸಿಗರನ್ನು ನೋಡಿಕೊಳ್ಳುವ ಮನೋಭಾವ ಇರಬೇಕು. ಅವರಿಂದ ಸಂಸ್ಥೆಗೆ ಮೌತ್‌ ಟು ಮೌತ್‌ ಪ್ರಚಾರ ಸಿಗಬೇಕು. ನಮ್ಮಲ್ಲಿ ಅಂಥ ಟೂರ್‌ ಮ್ಯಾನೇಜರ್‌ಗಳಿರುವುದು ನನಗೆ ಖುಷಿ.

-ಆಶಾ.ಎನ್.‌ ಅಡಿಗ

ADIGAS YATRA 1

--

ಶಾಖೆಗಳು:

ಬಸವನಗುಡಿ: #14. 4ನೇ ಮಹಡಿ, ದುರ್ಗಾ ಮ್ಯಾನ್ಶನ್‌ ,ಡಿವಿಜಿ ರಸ್ತೆ, ಬಸವನಗುಡಿ, ಬೆಂಗಳೂರು -560004. ದೂರವಾಣಿ: 080-26616678, 7022259008

ಹುಬ್ಬಳ್ಳಿ: # 14&15, 2ನೇ ಫ್ಲೋರ್‌, ತಿರುಮಲ ಟ್ರೇಡ್‌ ಸೆಂಟರ್‌, ನೀಲಿಗಿನ್‌ ರಸ್ತೆ, ಕೆ.ಸಿ. ವೃತ್ತದ ಸಮೀಪ, ಹುಬ್ಬಳ್ಳಿ- 580029. ದೂರವಾಣಿ: 080-2256678, 9364104366

ಮಲ್ಲೇಶ್ವರಂ: ದೂರವಾಣಿ: 080-23346678, 9364088424

ವಿಜಯನಗರ: ದೂರವಾಣಿ: 080-23356678, 9364104373

ರಾಜರಾಜೇಶ್ವರಿ ನಗರ: ದೂರವಾಣಿ: 080-26696678, 7483366378

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ