Friday, July 4, 2025
Friday, July 4, 2025

ಕನಕಗಿರಿಯಲ್ಲಿ ಪ್ರವಾಸಿಗರ ಹೊಸ ನೆಲೆ

ಬಿರ್ಲಾ ಜಂಗಲ್ ರೆಸಾರ್ಟ್ ಹಾಗೂ ಬ್ಲೂ ಮೂನ್ ಕೌಂಟಿ ರೆಸಾರ್ಟ್ ಇರೋದು ಕೊಪ್ಪಳ ಜಿಲ್ಲೆ ಕನಕಗಿರಿ ಹೊರ ಹೊಲಯದಲ್ಲಿ. ಈ ರೆಸಾರ್ಟ್ ವಿಶ್ವ ಪಾರಂಪರಿಕ ಹಂಪಿ ಹಾಗೂ ದೇಶಾದ್ಯಂತ ಭಕ್ತರನ್ನು ಸೆಳೆಯುತ್ತಿರುವ ಅಂಜನಾದ್ರಿ ಬೆಟ್ಟದಿಂದ ಕೇವಲ 30 ಕಿ.ಮೀ.‌ದೂರದಲ್ಲಿದೆ. ಕನಕಗಿರಿಯ ಗಂಗಾಧರ ಸಜ್ಜನ ಅವರ ಮಾಲೀಕತ್ವದ ಈ ರೆಸಾರ್ಟ್ ಮುಖ್ಯವಾಗಿ ಪ್ರವಾಸಿಗರನ್ನು ಸೆಳೆಯುತ್ತಿರೋದೇ ತನ್ನ ಆತ್ಮೀಯ ಆತಿಥ್ಯದಿಂದ ಹಾಗೂ ಆಕರ್ಷಕ ವಾಟರ್ ಪಾರ್ಕ್ ನಿಂದ.

ವಿಶ್ವ ಪಾರಂಪರಿಕ ಹಂಪಿಯನ್ನೂ, ಪೌರಾಣಿಕ ಅಂಜನಾದ್ರಿಯನ್ನೂ ಭೇಟಿಯಾಗಿ, ದೈನಂದಿನ ಜೀವನದ ಧೂಳಿನ ಸಮುದ್ರದಿಂದ ದೂರ ಸರಿದು, ಪ್ರಕೃತಿಯ ಮಡಿಲಿನಲ್ಲಿ ವಿಶ್ರಾಂತಿ ಪಡೆಯಲು ನೀವು ಹುಡುಕುತ್ತಿರುವ ವಿಶಿಷ್ಟ ಜಾಗ ಯಾವುದಾದರೂ ಇದ್ದರೆ ಅದು ಬ್ಲೂ ಮೂನ್ ಕೌಂಟಿ ಮತ್ತು ಬಿರ್ಲಾ ಜಂಗಲ್ ರೆಸಾರ್ಟ್. ಕೊಪ್ಪಳ ಜಿಲ್ಲೆಯ ಕನಕಗಿರಿ ಹೊರಹೊಲಯದ ಕಲಕೇರಿ ರಸ್ತೆಯಲ್ಲಿ ನೆಲೆಗೊಂಡಿರುವ ಈ ರೆಸಾರ್ಟ್, ಪ್ರವಾಸಿ ಪ್ರಿಯರನ್ನೇ ಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಿದ ಆಧುನಿಕ ಮತ್ತು ಸುಸಜ್ಜಿತ ರೆಸಾರ್ಟ್ ಗಳಲ್ಲಿ ಒಂದು..

ಐಷಾರಾಮಿ, ಹವಾ ನಿಯಂತ್ರಿತ ಕೊಠಡಿಗಳು, ಪಕ್ಕದಲ್ಲೇ ರುಚಿಕರ ಊಟದ ವ್ಯವಸ್ಥೆಯಿರುವ ಫುಡ್ ಕೋರ್ಟ್, ಸುಂದರ ಪರಿಸರ, ಸ್ವಚ್ಛತೆಗೆ ಆದ್ಯತೆ ನೀಡಿರುವ ಈಜುಕೊಳ, ಮಕ್ಕಳ ರೇನ್ ಡ್ಯಾನ್ಸ್, ಚಿಣ್ಣರ ಆಟಕ್ಕೋಸ್ಕರವೇ ಇರುವ ಪ್ಲೇ ಏರಿಯಾ, ಡ್ರೈ ಗೇಮ್ಸ್.. ಹೀಗೆ ಆಲ್ ಇನ್ ಒನ್ ಪ್ಯಾಕೇಜ್ ನೀಡುವ ಈ ಬ್ಲೂ ಮೂನ್ ಕೌಂಟಿ ಮತ್ತು ಬಿರ್ಲಾ ಜಂಗಲ್ ರೆಸಾರ್ಟ್, ಹಂಪಿಗೆ ಬರುತ್ತಿರುವ ಎಲ್ಲ ವರ್ಗದ ಪ್ರವಾಸಿಗರ ನೆಚ್ಚಿನ ತಾಣವಾಗಿ ಗಮನ ಸೆಳೆಯುತ್ತಿದೆ.

ಇಷ್ಟೆಲ್ಲ ಸೌಲಭ್ಯಗಳನ್ನುಳ್ಳ ಬಿರ್ಲಾ ಜಂಗಲ್ ರೆಸಾರ್ಟ್ ಹಾಗೂ ಬ್ಲೂ ಮೂನ್ ಕೌಂಟಿ ರೆಸಾರ್ಟ್ ಇರೋದು ಕೊಪ್ಪಳ ಜಿಲ್ಲೆ ಕನಕಗಿರಿ ಹೊರ ಹೊಲಯದಲ್ಲಿ. ಈ ರೆಸಾರ್ಟ್ ವಿಶ್ವ ಪಾರಂಪರಿಕ ಹಂಪಿ ಹಾಗೂ ದೇಶಾದ್ಯಂತ ಭಕ್ತರನ್ನು ಸೆಳೆಯುತ್ತಿರುವ ಅಂಜನಾದ್ರಿ ಬೆಟ್ಟದಿಂದ ಕೇವಲ 30 ಕಿ.ಮೀ.‌ದೂರದಲ್ಲಿದೆ. ಕನಕಗಿರಿಯ ಗಂಗಾಧರ ಸಜ್ಜನ ಅವರ ಮಾಲೀಕತ್ವದ ಈ ರೆಸಾರ್ಟ್ ಮುಖ್ಯವಾಗಿ ಪ್ರವಾಸಿಗರನ್ನು ಸೆಳೆಯುತ್ತಿರೋದೇ ತನ್ನ ಆತ್ಮೀಯ ಆತಿಥ್ಯದಿಂದ ಹಾಗೂ ಆಕರ್ಷಕ ವಾಟರ್ ಪಾರ್ಕ್ ನಿಂದ. ಇದರ ಜತೆಗೆ ಹಂಪಿಯಿಂದ ಕೇವಲ ಅರ್ಧ ಗಂಟೆಯಷ್ಟು ದೂರದಲ್ಲಿರುವುದು ಈ ರೆಸಾರ್ಟ್ ಪ್ರವಾಸಿಗರಿಗೆ ಸನಿಹವಾಗಲು ಕಾರಣವಾಗಿದೆ.

ಕನಕಗಿರಿಯಿಂದ ಕಲಕೇರಿ ರಸ್ತೆಯಲ್ಲಿನ ಈ ರೆಸಾರ್ಟ್ ಗೆ ಕುಟುಂಬ ಸಮೇತ ಭೇಟಿ ನೀಡಬಹುದು. ರೆಸಾರ್ಟ್ ಗೆ ಹೋಗುತ್ತಿದ್ದಂತೆಯೇ ಗ್ರಾಮೀಣ ಸೊಗಡಿನ ಪ್ರವೇಶ ದ್ವಾರಗಳು ಪ್ರವಾಸಿಗರನ್ನು ಸ್ವಾಗತಿಸುತ್ತವೆ. ವಾಹನ ನಿಲುಗಡೆಗೆ ವಿಶಾಲವಾದ ಜಾಗ, ರೆಸಾರ್ಟ್ ನಲ್ಲಿ ಮಕ್ಕಳ ಆಟಕ್ಕೆ ಜಾರು ಬಂಡಿ, ಜೋಕಾಲಿ, ಪ್ರಾಣಿಗಳ ಕಲಾಕೃತಿ ಇವೆಲ್ಲದಕ್ಕೆ ಮುಕುಟವಿಟ್ಟಂತೆ ಬೆಳಕಿನ ಆಟ!

blue moon

ಮಕ್ಕಳೊಂದಿಗೆ ಆಟವಾಡಲೆಂದೇ ನಿರ್ಮಿಸಿರುವ ವಾಟರ್ ಪಾರ್ಕ್ ನಲ್ಲಿ ವಿಶಾಲವಾದ ಈಜು ಕೊಳವಿದ್ದು, ಸುರಕ್ಷತೆ ಮತ್ತು ಶುಚಿತ್ವಕ್ಕಾಗಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ.. ಮಕ್ಕಳಿಗಾಗಿಯೇ ಪುಟಾಣಿ ಈಜು ಕೊಳವೊಂದನ್ನು ನಿರ್ಮಿಸಿರುವುದು ಇಲ್ಲಿನ ಇನ್ನೊಂದು ವಿಶೇಷ. ಈಜು ಕೊಳ ಕೊಡುವ ಸಂತಸ ಒಂದೆಡೆ ಆದರೆ ಈಜಿದ ನಂತರ ಇರುವ ರೇನ್ ಡ್ಯಾನ್ಸ್ ನ ಸೊಗಸು ಮತ್ತೊಂದು ಅದ್ಭುತ. ಕುಣಿದು ಕುಪ್ಪಳಿಸುವಂಥ ಸಂಗೀತಕ್ಕೆ ಕೃತಕ ಮಳೆಯ ಅಡಿ ನರ್ತಿಸುವುದು ಇಲ್ಲಿನ ಪ್ರವಾಸಿಗರಿಗೆ ಸಿಗುವ ಬೋನಸ್ ಫೆಸಿಲಿಟಿ. ಮಕ್ಕಳ ಜತೆ ಒಮ್ಮೆ ಭೇಟಿ ನೀಡಿದವರು, ಮತ್ತೆ ಮತ್ತೆ ಬರಲು ಹಂಬಲಿಸುವ ರೆಸಾರ್ಟ್ ಇದು. ಎಷ್ಟೋ ಪ್ರವಾಸಿಗರು ಹಂಪಿ ಅಂಜನಾದ್ರಿಯ ಹೊರತಾಗಿಯೂ ಕೇವಲ ಇಲ್ಲಿನ ಸಂತಸ ಅನುಭವಿಸಲೆಂದೇ ಬರುವ ಉದಾಹರಣೆಯೂ ಇದೆ.

ಸಜ್ಜನರ ಹೆಜ್ಜೇನ ಸವಿಯ ಆತಿಥ್ಯ!

ರೆಸಾರ್ಟ್ ನ ಸೌಕರ್ಯಗಳ ಜತೆಗೆ ಮಾಲೀಕರ ಔದಾರ್ಯ ಮತ್ತು ಸಹೃದಯದ ಆತಿಥ್ಯವೂ ಬಹಳ ಮುಖ್ಯವಾಗುತ್ತದೆ. ರೆಸಾರ್ಟ್ ಒಂದರಲ್ಲಿ ಆತಿಥ್ಯ ಸರಿಹೋಗದಿದ್ದರೆ, ಅದು ಕೇವಲ ರೆಸಾರ್ಟ್ ಗೆ ಕೆಟ್ಟ ಹೆಸರು ತಂದುಕೊಡುವುದಿಲ್ಲ. ಪ್ರವಾಸೋದ್ಯಮಕ್ಕೆ ಮತ್ತು ಪ್ರವಾಸಿ ತಾಣಗಳಿಗೆ ಅದು ಕಪ್ಪುಚುಕ್ಕೆಯಾಗಿಬಿಡುತ್ತದೆ. ಇದನ್ನು ಅರಿತಿರುವ ಉದಾತ್ತ ಮನಸ್ಸಿನ ಮಾಲೀಕರ ಹೆಸರು ಗಂಗಾಧರ ಸಜ್ಜನ! ಇವರೇ ಬ್ಲೂಮೂನ್ ಕೌಂಟಿ ರೆಸಾರ್ಟ್ ಮತ್ತು ಬಿರ್ಲಾ ಜಂಗಲ್ ರೆಸಾರ್ಟ್ ನ ಒಡೆಯ. ಕನಕಗಿರಿಯಲ್ಲಿ ಒಂದು ರೆಸಾರ್ಟ್ ಮಾಡುವ ಸಾಹಸ ಮತ್ತು ಪರಿಕಲ್ಪನೆಯೇ ವಿಶೇಷವಾದದ್ದು. ಅಂಥ ಸವಾಲನ್ನು ಯಶಸ್ವಿಯಾಗಿ ಸ್ವೀಕರಿಸಿದವರು ಗಂಗಾಧರ ಸಜ್ಜನ. ಕನಕಗಿರಿಯಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಸಾಕಷ್ಟು ಅವಕಾಶ ಇದ್ದರೂ ಸೌಲಭ್ಯಗಳ ಕೊರತೆಯಿಂದ ಪ್ರವಾಸಿಗರು ಕನಕಗಿರಿ ಕಡೆಗೆ ಮುಖ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕನಕಗಿರಿ ಪಟ್ಟಣದಲ್ಲಿ ಪ್ರವಾಸೋದ್ಯಮ ಬೆಳೆಸುವ ಜೊತೆ ಜೊತೆಗೆ ತಾವೂ ಉದ್ಯಮದಲ್ಲಿ ಯಶಸ್ಸು ಸಾಧಿಸುವ ಉದ್ದೇಶದಿಂದ ಗಂಗಾಧರ ಸಜ್ಜನ ಕನಕಗಿರಿ ಸಮೀಪದಲ್ಲಿ ರೆಸಾರ್ಟ್ ನಿರ್ಮಾಣ ಮಾಡಿದ್ದಾರೆ.

ಸಾಮಾನ್ಯ ಕೃಷಿಕ ಕುಟುಂಬದಲ್ಲಿ ಜನಿಸಿದ್ದ ಗಂಗಾಧರ ಸಜ್ಜನ, ಸದ್ಯ ರೆಸಾರ್ಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಮೂಲತಃ ಕೊಪ್ಪಳ ಜಿಲ್ಲೆ ಕನಕಗಿರಿ ಪಟ್ಟಣದ ಗಂಗಾಧರ ಸಜ್ಜನ ಅವರ. ತಂದೆ ಹಂಪಣ್ಣ ಕೃಷಿ ಜೊತೆಗೆ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಮಾಜಿ ಸಂಸದ ಎಚ್.ಜಿ.ರಾಮುಲು ಮತ್ತು ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಅವರ ಆಪ್ತರಾಗಿದ್ದರು. ತಂದೆಯಿಂದ ಪ್ರಭಾವಿತರಾದ ಗಂಗಾಧರ ಸಜ್ಜನ, ತಮ್ಮ ಕಾಲೇಜು ದಿನದಿಂದ ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ನಂತರ ಶಿಕ್ಷಣ ಸಂಸ್ಥೆ ಹಾಗೂ ರೆಸಾರ್ಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲೂ ಸಾಧನೆ

ಹೌದು. ಗಂಗಾಧರ ಸಜ್ಜನ ಕೇವಲ ಕೃಷಿ ಮತ್ತು ರೆಸಾರ್ಟ್ ಮಾತ್ರವಲ್ಲದೇ ಶಿಕ್ಷಣ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಭೂಮಿಕಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಡಿ ಕನಕಗಿರಿಯಲ್ಲಿ ಪವನ್ ಸ್ಕೂಲ್ ಎಂಬ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದಾರೆ. ಒಂದರಿಂದ 8ನೇ ತರಗತಿ ವರೆಗೆ ಇರುವ ಪ್ರಾಥಮಿಕ ಶಾಲೆಯಲ್ಲಿ ಸದ್ಯ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ತಾಲೂಕು ಕೇಂದ್ರ ಕನಕಗಿರಿಯಲ್ಲಿ ಅತ್ಯಂತ ಸೂಕ್ತ ಶುಲ್ಕ ಪಡೆದು, ಗುಣಮಟ್ಟ ಶಿಕ್ಷಣ ನೀಡುವಲ್ಲಿ ಪವನ್ ಸ್ಕೂಲ್ ಕೆಲಸ ಮಾಡುತ್ತಿದೆ.

ಶಾಲೆಯಲ್ಲಿ 12ಕ್ಕೂ ಹೆಚ್ಚು ಅನುಭವಿ ಮತ್ತು ನುರಿತ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಗಂಗಾಧರ ಅವರ ಪತ್ನಿ ಜಯಲಕ್ಷ್ಮಿ ಸಜ್ಜನ ಅವರು ಶಿಕ್ಷಣ ಸಂಸ್ಥೆಗೆ ಅಧ್ಯಕ್ಷರಾಗಿದ್ದು, ಗಂಗಾಧರ ಸಜ್ಜನ ಅವರು ಕಾರ್ಯದರ್ಶಿಯಾಗಿ ಸಂಸ್ಥೆ ನಡೆಸುತ್ತಿದ್ದಾರೆ. ಕನಕಗಿರಿ ಪಟ್ಟಣಕ್ಕೆ ವಿಜಯನಗರ ಸಾಮ್ರಾಜ್ಯ ಕಾಲದ ಇತಿಹಾಸ ಇದೆ. ಆದರೆ, ಇಲ್ಲಿ ಪ್ರವಾಸೋದ್ಯಮ ಅಷ್ಟಾಗಿ ಬೆಳೆದಿಲ್ಲ. ಈ ಹಿನ್ನೆಲೆ ರಾಜ್ಯದ ನಾನಾ ಜಿಲ್ಲೆ ಸೇರಿದಂತೆ ದೇಶ- ವಿದೇಶಿಗರ ಪ್ರವಾಸಿಗರನ್ನು ಸೆಳೆಯಲು ಆರ್ಥಿಕವಾಗಿ ಹಿಂದುಳಿದ ಕನಕಗಿರಿ ಪಟ್ಟಣದ ಹೊರ ಹೊಲಯದಲ್ಲಿ ಬ್ಲೂ ಮೂನ್ ಕೌಂಟಿ ಮತ್ತು ಬಿರ್ಲಾ ಎಂಬ ರೆಸಾರ್ಟ್ ಸ್ಥಾಪಿಸಿದ್ದಾರೆ. ಸಾಮಾಜಿಕ ಇಚ್ಛಾಶಕ್ತಿಯೊಂದಿಗೆ ಉದ್ಯಮದ ನಡೆಸುತ್ತಿದ್ದಾರೆ.

birla new

ಸಮಾಜ ಸೇವೆಗೆ ಬದ್ಧ

ಗಂಗಾಧರ ಸಜ್ಜನ ಮತ್ತವರ ಕುಟುಂಬ ಸಮಾಜ ಸೇವೆಯಲ್ಲೂ ಸದಾ ಮುಂದು.‌ ಕೊರೋನ ಕಾಲದಲ್ಲಿ ಸಾಕಷ್ಟು ಬಡವರಿಗೆ ಕಿಟ್ ಕೊಡುವ ಮೂಲಕ ಸಮಾಜಕ್ಕೆ ತಮ್ಮದೇ ಆದ‌ ಕೊಡುಗೆ ನೀಡಿದ್ದಾರೆ. ಇನ್ನು ಗಂಗಾಧರ ಸಜ್ಜನ ಮತ್ತವರ ಸಹೋದರರು ಪ್ರತಿ ವರ್ಷವೂ ಕನಕಗಿರಿಯ ಬಡ ಕುಟುಂಬಕ್ಕೆ ಜಾತ್ರೆ ವೇಳೆ ಕಿರಾಣಿ ಕೊಡಿಸುವ ಮೂಲಕ ಸಮಾಜಮುಖಿ ಕೆಲಸದಲ್ಲಿ ತೊಡಗಿದ್ದಾರೆ.

ಒಲಿದು ಬಂದ ಪ್ರಶಸ್ತಿ:

ಗಂಗಾಧರ ಸಜ್ಜನ ಅವರ ಸಮಾಜಮುಖಿ ಕೆಲಸ ಗುರುತಿಸಿ, ಸಾಕಷ್ಟು ಸಂಘ- ಸಂಸ್ಥೆಗಳು ಸನ್ಮಾನಿಸಿವೆ. ಅನೇಕ ಸಂಸ್ಥೆಗಳು ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿವೆ. ಅದರಂತೆ ಸ್ವಿಟ್ಜರ್ಲೆಂಡ್‌‌ ನ ಜಿನೆಯಾ ಮೂಲದ ಭಾರತ್ ವರ್ಚುವಲ್ ಯೂನಿವರ್ಸಿಟಿ ಫಾರ್ ಪೀಸ್ ಆ್ಯಾಂಡ್ ಎಜುಕೇಷನ್ ಸಂಸ್ಥೆಯು ಇವರಿಗೆ ಕಳೆದ 2023ರಲ್ಲಿ ಬೆಂಗಳೂರಿನಲ್ಲಿ ಗಂಗಾಧರ ಸಜ್ಜನ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

ಗಂಗಾಧರ ಸಜ್ಜನ ಮತ್ತವರ ಕುಟುಂಬ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದೆ. ಶಿವರಾಜ ತಂಗಡಗಿ ಅವರು ಕಳೆದ 2008ರಲ್ಲಿ ಕನಕಗಿರಿ ಕ್ಷೇತ್ರಕ್ಕೆ ಬಂದಾಗಿನಿಂದ ಗಂಗಾಧರ ಸಜ್ಜನ ಅವರ ಸಹೋದರ ಸಂಗಪ್ಪ ಸಜ್ಜನ ಸಚಿವರೊಂದಿಗೆ ಗುರುತಿಸಿಕೊಂಡಿದ್ದಾರೆ. ಸಜ್ಜನ ಕುಟುಂಬದ ಯಾವುದೇ ಕಾರ್ಯಕ್ರಮದಲ್ಲಿ ತಪ್ಪದೇ ಭಾಗಿ ಆಗುತ್ತಾರೆ. ಜೊತೆಗೆ ನಮ್ಮ ಕುಟುಂಬದ ಎಲ್ಲ ಕೆಲಸಕ್ಕೆ ಸಚಿವ ಶಿವರಾಜ ತಂಗಡಗಿ ಅವರ ಸಲಹೆ ಸೂಚನೆ ಇರುತ್ತದೆ ಎನ್ನುತ್ತಾರೆ ಗಂಗಾಧರ ಸಜ್ಜನ. ಈ ಸ್ನೇಹಸಂಬಂಧವನ್ನು ಎಂದಿಗೂ ಅವರು ದುರುಪಯೋಗ ಮಾಡಿಕೊಂಡಿಲ್ಲ. ಸಮಾಜಮುಖಿ ಚಟುವಟಿಕೆಗಳಿಗೆ ಮಾತ್ರವೇ ಬಳಸಿಕೊಂಡಿದ್ದಾರೆ ಎಂಬುದು ಗಮನಾರ್ಹ.

ರೆಸಾರ್ಟ್ ನಿಂದ ಹಂಪಿ, ಅಂಜನಾದ್ರಿ ಸಮಾನ ದೂರ:

ಕೊಪ್ಪಳ ಜಿಲ್ಲೆ ಕನಕಗಿರಿ ಪಟ್ಟಣದಿಂದ ಕಲಕೇರಿ ರಸ್ತೆಯಲ್ಲಿನ ಬ್ಲೂ ಮೂನ್ ಬಿರ್ಲಾ ಜಂಗಲ್ ರೆಸಾರ್ಟ್ ಕೊಪ್ಪಳ ಜಿಲ್ಲೆಯ ಎಲ್ಲ ಪ್ರವಾಸಿ ತಾಣಗಳಿಗೆ ಸಮಾನ ದೂರದಲ್ಲಿದೆ. ಇಲ್ಲಿಂದ 60 ಕಿ.ಮೀ ನಲ್ಲಿ ಹಂಪಿ ಸಿಗುತ್ತದೆ. ರೆಸಾರ್ಟ್ ನಿಂದ ಕೇವಲ 30 ಕಿ.ಮೀ ಕ್ರಮಿಸಿದರೆ ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ ಆನೆಗುಂದಿ ಹೆಬ್ಬಾಗಿಲು ತೆರೆದುಕೊಳ್ಳುತ್ತದೆ.‌ ಜತೆಗೆ ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖಿತವಾಗಿರುವ ಕಿಷ್ಕಿಂಧಾ ಕಾಂಡ ವರ್ಣನೆಯಲ್ಲಿ ಈಗಲೂ ಕಾಣಸಿಗುವ ಕಿಷ್ಕಿಂಧಾ ಪ್ರದೇಶ, ಅಂಜನಾದ್ರಿ ಪಕ್ಕದಲ್ಲೇ ಸಿಗುತ್ತದೆ. ಇನ್ನು 40 ಕಿ.ಮೀ ದೂರದಲ್ಲಿ ಪ್ರಾಗೈತಿಹಾಸಿಕ ಚಿಕ್ಕಬೆಣಕಲ್ ಗ್ರಾಮದ ಮೊರೆರ ಬೆಟ್ಟ ನೋಡಬಹುದು. ಇನ್ನು ಐತಿಹಾಸಿಕ ಯಲಬುರ್ಗಾ ತಾಲೂಕು ಇಟಗಿಯ ದೇವಾಲಯಗಳ ಚರ್ಕವರ್ತಿ ಮಹಾದೇವ ದೇವಾಲಯ 50 ಕಿ.ಮೀ ದೂರದಲ್ಲಿದೆ. ಇನ್ನು ಕೋಟಿ ಲಿಂಗಗಳ ನಾಡು ಪುರದ ಸೋಮನಾಥ ದೇವಸ್ಥಾನ ಕೇವಲ 20 ಕಿ.ಮೀ ದೂರದಲ್ಲಿದೆ.

leo-woods-resort-koppal-resorts-ggp5gml9zo

ಪ್ರವಾಸೋದ್ಯಮ ಬೆಳೆಸುವ ಹಂಬಲ

ಸದ್ಯ ತಾಲೂಕು ಕೇಂದ್ರ ಸ್ಥಾನ ಆಗಿರುವ ಕನಕಗಿರಿ ವಿಜಯನಗರ ಸಾಮ್ರಾಜ್ಯದ ಕಾಲಕ್ಕೆ ವಿಜಯನಗರ ಅರಸರ ಬಲ ಭಾಗದಲ್ಲಿ ಕೂಡುವ ಆಪ್ತ ಸಾಮಂತರ ತವರಾಗಿತ್ತು. ಈ ಹಿನ್ನೆಲೆ ಕನಕಗಿರಿಯಲ್ಲಿ ಐತಿಹಾಸಿಕ ಕನಕಾಚಲಪತಿ ದೇವಸ್ಥಾನ ಇದ್ದು, ಒಂದೇ ಕಡೆ ನಿಂತು ನೋಡಿದರೆ ಐದು ಕಲಶ ಕಾಣುವ ದೇವಸ್ಥಾನ ಅಪರೂಪದ ದೇವಸ್ಥಾನ ಕನಕಗಿರಿಯ ಕನಕಾಚಲಪತಿ ‌ದೇವಸ್ಥಾನ. ಜೊತೆಗೆ ಇಲ್ಲಿನ ವೆಂಕಟಾಚಲಪತಿ ನೋಡುಗರ ಆಕರ್ಷಕ ಕೇಂದ್ರವಾಗಿದ್ದು, ಕನಕಗಿರಿಯಲ್ಲೂ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶ ಇವೆ. ಆದರೆ, ಕನಕಗಿರಿ ಭಾಗ ತೀರಾ ಮಳೆಯಾಶ್ರಿತ ಪ್ರದೇಶ ಆಗಿದ್ದರಿಂದ ಪ್ರವಾಸೋದ್ಯಮಕ್ಕೆ ಪೂರಕವಾದ ವಾತಾವರಣ ಕಲ್ಪಿಸುವುದು ಇಲ್ಲಿನ ಹಣವಂತರಿಗೆ ಸಾಧ್ಯವಾಗಿರಲಿಲ್ಲ. ಆದರೆ, ಗಂಗಾಧರ ಸಜ್ಜನ ಅವರು ಇದನ್ನು ಸವಾಲಾಗಿ ತೆಗೆದುಕೊಂಡು ತಮ್ಮ ಒಟ್ಟು 16 ಎಕರೆ ಜಮೀನಿನಲ್ಲಿ ರೆಸಾರ್ಟ್ ಅಭಿವೃದ್ಧಿ ಮಾಡಿದ್ದಾರೆ.

ಓಪನ್ ಗಾರ್ಡನ್ ಹಾಲ್

ಸುಮಾರು 200 ಜನ ಕುಳಿತುಕೊಳ್ಳುವ ಓಪನ್ ಗಾರ್ಡನ್ ಹಾಲ್ ಬ್ಲೂ‌ ಮೂನ್ ಜಂಗಲ್ ರೆಸಾರ್ಟ್ ‌ನ ಮತ್ತೊಂದು ವಿಶೇಷ. ಸುಮಾರು 20ಕ್ಕೂ ಹೆಚ್ಚು ಜನ ಕುಳಿತುಕೊಳ್ಳಬಹುದಾದ ವೇದಿಕೆ ಮುಂದೆ 200 ಜನ ಸೇರುವಷ್ಟು ದೊಡ್ಡ ಹಾಲ್ ಇದೆ. ಬರ್ತ್ ಡೇ, ವಿವಾಹ ವಾರ್ಷಿಕೋತ್ಸವ, ಗೆಟ್ ಟುಗೆದರ್, ಕಾರ್ಪೋರೇಟ್ ಕಂಪನಿಗಳ ಸಭೆ, ಸಮಾರಂಭ ಮಾಡಲು ಈ ಭಾಗಕ್ಕೆ ಹೇಳಿ ಮಾಡಿಸಿದಂತಿದೆ.‌ ಹಾಲ್ ಸುತ್ತಲೂ ಅಲಂಕಾರಿಕ ಬಳ್ಳಿ, ಗಿಡ ಬೆಳೆಸಲಾಗಿದೆ. ಇದರಿಂದ ಪಾರ್ಟಿ ಮಾಡುವವರಿಗೆ ನಿಸರ್ಗದ ಮಡಿಲಿನಲ್ಲಿ ಕುಳಿತ ಫೀಲ್ ಆಗುತ್ತದೆ. ಇದರಿಂದ ಸಾಕಷ್ಟು ಜನರ ಪಾರ್ಟಿ ಮಾಡಲು ಇಲ್ಲಿಗೆ ಬರುವುದುಂಟು.

ವಾಟರ್ ಅಮ್ಯೂಸ್ ಮೆಂಟ್ ಪಾರ್ಕ್

ಸುಮಾರು 100 ಜನ ಒಟ್ಟಿಗೆ ಬಳಸುವಷ್ಟು ದೊಡ್ಡ ಈಜುಕೊಳ ಬ್ಲೂ ಮೂನ್ ಜಂಗಲ್ ರೆಸಾರ್ಟ್ ನ ವಿಶೇಷತೆ.‌ ಕೊಪ್ಪಳ ಜಿಲ್ಲೆಯಲ್ಲೇ ಎಲ್ಲೂ ಇಷ್ಟೊಂದು ವ್ಯವಸ್ಥಿತವಾದ ವಾಟರ್ ಅಮ್ಯೂಸ್ ಮೆಂಟ್ ಪಾರ್ಕ್ ಇಲ್ಲ ಎನ್ನಬಹುದು. ಡಾಲ್ಫಿನ್ ವಾಟರ್ ಪಾರ್ಕ್ ಎಂಬ ಹೆಸರಿನ ಈಜು ಕೊಳದಲ್ಲಿ ವಯಸ್ಕರಿಗೆ ಮತ್ತು ಮಕ್ಕಳ ಮನರಂಜನೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ವಾಟರ್ ಅಮ್ಯೂಸಿಂಗ್ ಪಾರ್ಕ್‌ನಲ್ಲಿ ರೇನ್ ಡ್ಯಾನ್ಸ್, ಅಂಬ್ರೆಲಾ ಡ್ಯಾನ್ಸ್, ರೇಂಬೋ ಡ್ಯಾನ್ಸ್ ಎಂದು ನಾನಾ ವಿಭಾಗದಲ್ಲಿ ಮಕ್ಕಳು ಮನರಂಜನೆ ಪಡೆಯುಬಹುದು. ಒಂದೊಂದು ಕಡೆ ಸುಮಾರು 10 ರಿಂದ 15 ನಿಮಿಷ ಮನರಂಜನೆಗೆ ಅವಕಾಶ ಇದೆ.

blue moon resort

ಮಕ್ಕಳ ಆಟಕ್ಕೆ ಪ್ರತ್ಯೇಕ ವ್ಯವಸ್ಥೆ

ವಾಟರ್ ಪಾರ್ಕ್ ನಲ್ಲಿ ಈಜಾಡಿದ ನಂತರ ಮಕ್ಕಳು ಮತ್ತು ಮಹಿಳೆಯರಿಗೆ ಡ್ರೈ ಗೇಮ್ ಗಳ ವ್ಯವಸ್ಥೆ ಇದೆ. ಆದರೆ, ವಿಭಿನ್ನ ರೀತಿಯ ಜೋಕಾಲಿ, ಜಾರು ಬಂಡೆ ಆಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಸುಮಾರು 100 ಮಕ್ಕಳು ಒಂದೇ ಬಾರಿಗೆ ಆಟ ಆಡುವಷ್ಟು ಡ್ರೈ ಗೇಮ್ ಅವಕಾಶ ಕಲ್ಪಿಸಲಾಗಿದೆ. ಒಟ್ಟಿನಲ್ಲಿ ಇಲ್ಲಿಗೆ ಬರುವ ಗ್ರಾಹಕರಿಗೆ ಒಂದು ಫುಲ್ ಪ್ಯಾಕೇಜ್ ಮೋಜು ದೊರೆಯುತ್ತದೆ.

ಫೊಟೋ ಶೂಟ್ ಮತ್ತು ರೀಲ್ಸ್

ಬ್ಲೂ ಮೂನ್ ಬಿರ್ಲಾ ಜಂಗಲ್ ರೆಸಾರ್ಟ್ ನಲ್ಲಿ ಫೊಟೋ ಶೂಟ್ ಗೆ ನೈಸರ್ಗಿಕವಾದ ಹೂ, ಗಿಡ, ಬಳ್ಳಿ ಬೆಳೆಸಲಾಗಿದೆ. ರೀಲ್ಸ್ ಜಮಾನದ ಯುವಕರನ್ನು ಗಮನದಲ್ಲಿ ಇಟ್ಟುಕೊಂಡು ರೆಸಾರ್ಟ್ ನಲ್ಲಿ ಅಲಂಕಾರಿಕ ಗಿಡ ಬೆಳೆಸಲಾಗಿದೆ. ವಿಭಿನ್ನ ಮಾದರಿಯ ಅಲಂಕಾರಿಕ ಗಿಡಗಳು ಗ್ರಾಹಕರು ತಮ್ಮ ಇಷ್ಟಕ್ಕೆ ತಕ್ಕಂತೆ ಬಳಕೆ ಮಾಡಿಕೊಳ್ಳಬಹುದು. ಕೆಲವರು ಇವುಗಳನ್ನು ಫೋಟೋ ಶೂಟ್ ಗೆ ಬಳಸಿದರೆ, ಇವುಗಳನ್ನು ಬ್ಯಾಕ್ ಗ್ರೌಡ್ ಮಾಡಿಕೊಂಡು ರೀಲ್ಸ್ ಮಾಡುತ್ತಾರೆ.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ