ಕಾಡು ಮತ್ತು ಪ್ರಪಾತದ ಸನಿಹದಲ್ಲೊಂದು
ಫಾರೆಸ್ಟ್ ವ್ಯಾಲಿಯಲ್ಲಿ ನಿರ್ಮಾಣವಾಗಿರುವ ಮರದ ಕುಟೀರ ಇಲ್ಲಿನ ವಿಶೇಷ. ಸಂಪೂರ್ಣವಾಗಿ ಮರದಿಂದಲೇ ನಿರ್ಮಾಣವಾದ ಕಾಟೇಜ್ ನಲ್ಲಿ ಹೆಚ್ಚಾಗಿ ಹನಿಮೂನ್ ಗೆ ಬಂದ ದಂಪತಿ ತಮ್ಮ ಜೀವನದ ಸುಂದರ ನೆನಪುಗಳನ್ನು ದಾಖಲಿಸುತ್ತಾರೆ. ಹಾಗೆಂದು ಮಧುಚಂದ್ರಿಗರೇ ಇಲ್ಲಿ ಇರಬೇಕೆಂದೇನಿಲ್ಲ. ಮರದ ಕಾಟೇಜ್ ನಲ್ಲಿ ಎಲ್ಲಾ ವಯಸ್ಸಿನವರೂ ಹಾಯಾಗಿ ಇರಬಹುದು.! ಟ್ರೀ ಮತ್ತು ವುಡನ್ ಕಾಟೇಜ್ ಹೊರತುಪಡಿಸಿ ಇತರ 7 ಕಾಟೇಜುಗಳಿವೆ.
- ಅನಿಲ್ ಹೆಚ್ ಟಿ
ನೀವು ನಿಜವಾಗಿ ಪ್ರಕೃತಿಯನ್ನು ಪ್ರೀತಿಸುವಿರಾದರೆ ನಿಮಗೆ ಎಲ್ಲೆಲ್ಲೂ ಸೌಂದರ್ಯವೇ ಕಾಣುತ್ತದೆ.
ಈ ಮಾತಿಗೆ ಹೇಳಿ ಮಾಡಿಸಿದಂತಿದೆ ಕೊಡಗು ಜಿಲ್ಲೆಯಲ್ಲಿರುವ ಫಾರೆಸ್ಟ್ ವ್ಯಾಲಿ ರೆಸಾರ್ಟ್
ಕಾಡಿನ ನಡುವೆ ಜೀರುಂಡೆ ಹಾಡಿಗೆ ಕಿವಿಯಾಗಿ ಕೆಲಕಾಲ ಕಳೆಯಬೇಕೆಂದರೆ ನಿಮಗಾಗಿಯೇ ಸಿದ್ಧವಾದಂತಿದೆ. ಈ ರೆಸಾರ್ಟ್.
ಈ ಕುಟೀರ ಇರುವುದು ಮಡಿಕೇರಿಯಿಂದ 2 ಕಿಲೋಮೀಟರ್ ದೂರದಲ್ಲಿ. ಹೆಸರೇ ಹೇಳುವಂತೆ ಕಾಡಿನ ನಡುವೆ ಪ್ರಪಾತ ಕಾಣುವಂತಿದೆ. ಹಸಿರು ಹೊದ್ದ ಪರಿಸರದ ಮಧ್ಯೆ ನಿರ್ಮಾಣಗೊಂಡಿರುವ ಮರದ ಕಾಟೇಜುಗಳು ಅತಿಥಿಗಳ ಮನಸೆಳೆಯುತ್ತದೆ. ಪ್ರತೀ ಕಾಟೇಜುಗಳ ಒಳಾಂಗಣ ಅಲಂಕಾರ, ವಿನ್ಯಾಸವೂ ಆಹಾ ಎನ್ನುವಂತಿದೆ. ಕಡವೆ, ಕಾಡಾನೆಯ ಚಿತ್ರವೂ ಕಲಾತ್ಮಕವಾಗಿ ಕಾಟೇಜ್ ನಲ್ಲಿ ಅತಿಥಿಗಳ ಗಮನ ಸೆಳೆಯುತ್ತದೆ. ಈ ಕಾಟೇಜುಗಳಿಗೆ ಮರಗಳ ಮಧ್ಯದಲ್ಲಿನ ಕಿರಿದಾದ ಹಾದಿಯನ್ನೇರುತ್ತಾ ಸಾಗುವುದೇ ರೋಮಾಂಚಕ ಅನುಭವ. ಪ್ರತೀ ಕಾಟೇಜುಗಳ ಹೊರಬದಿಗೆ ಬಂದು ನಿಂತರೆ ಕಾಡು ಮರಗಳ ಪಕ್ಕದಲ್ಲಿಯೇ ನಿಂತ ಅನುಭವ.

ಫಾರೆಸ್ಟ್ ವ್ಯಾಲಿಯಲ್ಲಿ ನಿರ್ಮಾಣವಾಗಿರುವ ಮರದ ಕುಟೀರ ಇಲ್ಲಿನ ವಿಶೇಷ. ಸಂಪೂರ್ಣವಾಗಿ ಮರದಿಂದಲೇ ನಿರ್ಮಾಣವಾದ ಕಾಟೇಜ್ ನಲ್ಲಿ ಹೆಚ್ಚಾಗಿ ಹನಿಮೂನ್ ಗೆ ಬಂದ ದಂಪತಿ ತಮ್ಮ ಜೀವನದ ಸುಂದರ ನೆನಪುಗಳನ್ನು ದಾಖಲಿಸುತ್ತಾರೆ. ಹಾಗೆಂದು ಮಧುಚಂದ್ರಿಗರೇ ಇಲ್ಲಿ ಇರಬೇಕೆಂದೇನಿಲ್ಲ. ಮರದ ಕಾಟೇಜ್ ನಲ್ಲಿ ಎಲ್ಲಾ ವಯಸ್ಸಿನವರೂ ಹಾಯಾಗಿ ಇರಬಹುದು.! ಟ್ರೀ ಮತ್ತು ವುಡನ್ ಕಾಟೇಜ್ ಹೊರತುಪಡಿಸಿ ಇತರ 7 ಕಾಟೇಜುಗಳಿವೆ.
ಫಾರೆಸ್ಟ್ ವ್ಯಾಲಿಯಲ್ಲಿ ಪ್ರತ್ಯೇಕವಾಗಿ ಭೋಜನಾಲಯವಿದೆ. ಕಂದರ ಎಂಬ ಹೆಸರಿನ ಇಲ್ಲಿ 50-60 ಜನ ಆರಾಮವಾಗಿ ಕುಳಿತು ಊಟ, ತಿನಿಸು ಸವಿಯಬಹುದು. ರಾತ್ರಿಯಲ್ಲಿ ಕ್ಯಾಂಪ್ ಫೈರ್ ಕೂಡ ಪ್ರವಾಸಿಗರಿಗೆ ಪ್ರಿಯವೆನಿಸುವಂತಿದೆ.

ಫಾರೆಸ್ಟ್ ವ್ಯಾಲಿ ಪಕ್ಕದಲ್ಲಿಯೇ ಕಿರು ಜಲಪಾತ ಕೂಡ ಇದ್ದು ಭೋರ್ಗರೆಯುತ್ತಾ ಧುಮ್ಮಿಕ್ಕುವ ಜಲಧಾರೆಯ ಶಬ್ದ ಕಿವಿಗೆ ಇಂಪಾಗಿದ್ದರೆ, ಜೀರುಂಡೆ, ಮರಕುಟಿಕ, ಕಾಡುಕೋಳಿಗಳು ನಾವೂ ಪಕ್ಕದಲ್ಲಿಯೇ ಇದ್ದೇವೆ ಎಂದು ತಮ್ಮ ಇರುವಿಕೆಯ ಕೂಗು ಹಾಕುತ್ತಿರುತ್ತವೆ. ಸ್ವಾದಿಷ್ಟವಾದ ಮಾಂಸಾಹಾರ, ಸಸ್ಯಾಹಾರ ಖಾದ್ಯಗಳು ಫಾರೆಸ್ಟ್ ವ್ಯಾಲಿಯಲ್ಲುಂಟು. 15 ವರ್ಷಗಳ ಹಿಂದೆ ಸತೀಶ್ ರೈ ಮತ್ತು ಶ್ಲೋಕಾ ರೈ ಅವರ ಕನಸಿನ ಯೋಜನೆಯಾಗಿ ನಿರ್ಮಾಣಗೊಂಡ ಫಾರೆಸ್ಟ್ ವ್ಯಾಲಿ ಈಗ ಪರಿಸರ ಸ್ನೇಹಿ ಕಾಟೇಜ್ ಆಗಿ ಪ್ರಕೃತಿಪ್ರಿಯರ ಅಚ್ಚುಮೆಚ್ಚಾಗಿದೆ.
ಕಾಂಕ್ರೀಟ್ ಕಾಡಿನಿಂದ ಹಾಯಾಗಿ ಕೆಲ ಸಮಯ ಕಳೆಯಬೇಕೆನ್ನಿಸುವವರಿಗೆ ಹೇಳಿಮಾಡಿಸಿದ ತಾಣದಂತಿದೆ ಫಾರೆಸ್ಟ್ ವ್ಯಾಲಿ.
ಸಂಪರ್ಕ ಸಂಖ್ಯೆ - 9845292871