ಸಾಹಸ ಮತ್ತು ನೆಮ್ಮದಿಯ ಸಮಾಗಮ ಡಿಸ್ಕವರಿ ವಿಲೇಜ್
ಪ್ರವಾಸಿಗರಿಂದ ಮತ್ತು ಪ್ರವಾಸಿ ಅಪ್ಲಿಕೇಶನ್ ಗಳಿಂದ ಅತ್ಯುತ್ತಮ ರಿವ್ಯೂ ಮತ್ತು ರೇಟಿಂಗ್ ಪಡೆದಿರುವ ಡಿಸ್ಕವರಿ ವಿಲೇಜ್ ಎಲ್ಲ ವರ್ಗದ ಪ್ರವಾಸಿಗರಿಗೂ ಅಚ್ಚುಮೆಚ್ಚು ಎನಿಸುವಂಥ ಒಂದು ರೆಸಾರ್ಟ್. ಕೌಟುಂಬಿಕ ಪ್ರವಾಸ, ಗೆಳೆಯರೊಂದಿಗಿನ ಔಟಿಂಗ್, ಕಾರ್ಪೊರೆಟ್ ಟೀಮ್ ಔಟಿಂಗ್ ಎಲ್ಲದಕ್ಕೂ ಸೂಟ್ ಆಗಬಲ್ಲ ಅತ್ಯುತ್ತಮ ರೆಸಾರ್ಟ್ ಅಂದರೆ ಅದು ಡಿಸ್ಕವರಿ ವಿಲೇಜ್. ಕಬಿನಿ ನಂದಿ ಮತ್ತು ಕನಕಪುರ ಈ ಮೂರೂ ರೆಸಾರ್ಟ್ ಗಳಲ್ಲೂ ಭೇದಭಾವ ಇಲ್ಲದಂತೆ ಎಲ್ಲಿಗೇ ಹೋದರೂ ಸಮಾನವಾದ ಸೌಲಭ್ಯ ಮತ್ತು ರಂಜನೆ ಲಭ್ಯವಾಗುವಂತೆ ಮಾಡಿರುವುದು ಡಿಸ್ಕವರಿ ವಿಲೇಜ್ ನ ಹಿರಿಮೆ.
ಯಾಂತ್ರಿಕ ಜೀವನದ ಒತ್ತಡದಿಂದ ತಪ್ಪಿಸಿಕೊಂಡು ಪ್ರಕೃತಿ ಮತ್ತು ಹಸಿರು ಪರಿಸರದ ನಡುವೆ ಕಳೆದು ಹೋಗುವ ಆಸೆಯಾಗಿದೆಯೇ? ನಾಲ್ಕು ಗೋಡೆಗಳ ನಡುವೆ ಕಂಪ್ಯೂಟರ್ ಕುಟ್ಟಿ ಕುಟ್ಟಿ ಜಡ್ಡುಗಟ್ಟಿರುವ ಮೈಮನಸ್ಸು, ಹೊಸ ಸಾಹಸವನ್ನು ಬಯಸುತ್ತಿದೆಯೇ? ಹಾಗಾದರೆ ಇಲ್ಲೊಂದು ಪ್ರವಾಸಿ ತಾಣವು, ಶಾಂತಿಗೂ ಸೈ, ಸಾಹಸಕ್ಕೂ ಜೈ ಎಂದು ಕೈಬೀಸಿ ಕರೆಯುತ್ತಿದೆ. ಕರ್ನಾಟಕದ ಅಪರೂಪದ ಹಾಗೂ ಅತ್ಯಂತ ಆಕರ್ಷಣೀಯ ರೆಸಾರ್ಟ್ ಚೈನ್ ಎಂದೇ ಖ್ಯಾತವಾಗಿರುವ ಡಿಸ್ಕವರಿ ವಿಲೇಜ್ ನಿಮ್ಮ ರಜೆಯಬದುಕಿಗೆ, ವೀಕೆಂಡ್ ಗೆ ಹೇಳಿಮಾಡಿಸಿದಂತಿರುವ ಪ್ರಕೃತಿ ತಾಣ.
ಡಿಸ್ಕವರಿ ವಿಲೇಜ್ ನಲ್ಲಿ ನಿಮಗೆ ಕೇವಲ ವಿಶ್ರಾಂತಿ ಮತ್ತು ನಿಶ್ಶಬ್ದ ನೆಮ್ಮದಿ ಬೇಕೆಂದರೂ ಸಿಗುತ್ತದೆ. ಯಾವುದೋ ಸಾಹಸಕ್ರೀಡೆ ಆಡಿ ಮೈ ಮತ್ತು ಮನಸ್ಸು ದಣಿಯಬೇಕು ಎಂದು ಹಂಬಲಿಸಿದರೆ ಅದೂ ದೊರಗುತ್ತದೆ. ಬೆಂಗಳೂರಿನಿಂದ ಕೇವಲ ಐವತ್ತು ಕಿಲೋಮೀಟರ್ ಸುತ್ತಳತೆಯಲ್ಲಿದೆ ಡಿಸ್ಕವರಿ ವಿಲೇಜ್ ರೆಸಾರ್ಟ್ ಚೈನ್.

ಹೌದು ಇದು ರೆಸಾರ್ಟ್ ಚೈನ್ ಯಾಕೆ ಅಂದರೆ, ಇಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ ಮೂರು ರೆಸಾರ್ಟ್ ಗಳಿವೆ. ಮೊದಲನೆಯದು ಕನಕಪುರದಲ್ಲಿದ್ದರೆ, ಎರಡನೆಯದು ಕಬಿನಿಯಲ್ಲಿದೆ. ಮೂರನೆಯದು ನಂದಿ ಬೆಟ್ಟದ ಬಳಿ ಇದೆ. ಒಂದಕ್ಕಿಂತ ಒಂದು ಅದ್ಭುತ. ಯಾವುದಕ್ಕೇ ಹೋದರೂ ಮನರಂಜನೆ, ಮನಶ್ಶಾಂತಿ ಖಚಿತ. ಜಗತ್ತಿನ ಬೆಸ್ಟ್ ರೆಸಾರ್ಟ್ ಗಳಲ್ಲಿ ಏನೇನೆಲ್ಲ ಅತ್ಯಾಧುನಿಕ ಸೌಲಭ್ಯಗಳು, ಗೇಮಿಂಗ್ ಗಳು, ಮನರಂಜನೆಗಳು ಇರಬಹುದೋ ಅವೆಲ್ಲವೂ ಡಿಸ್ಕವರಿ ವಿಲೇಜ್ ರೆಸಾರ್ಟ್ ಗಳಲ್ಲಿವೆ.
ಪ್ರವಾಸಿಗರಿಂದ ಮತ್ತು ಪ್ರವಾಸಿ ಅಪ್ಲಿಕೇಶನ್ ಗಳಿಂದ ಅತ್ಯುತ್ತಮ ರಿವ್ಯೂ ಮತ್ತು ರೇಟಿಂಗ್ ಪಡೆದಿರುವ ಡಿಸ್ಕವರಿ ವಿಲೇಜ್ ಎಲ್ಲ ವರ್ಗದ ಪ್ರವಾಸಿಗರಿಗೂ ಅಚ್ಚುಮೆಚ್ಚು ಎನಿಸುವಂಥ ಒಂದು ರೆಸಾರ್ಟ್. ಕೌಟುಂಬಿಕ ಪ್ರವಾಸ, ಗೆಳೆಯರೊಂದಿಗಿನ ಔಟಿಂಗ್, ಕಾರ್ಪೊರೆಟ್ ಟೀಮ್ ಔಟಿಂಗ್ ಎಲ್ಲದಕ್ಕೂ ಸೂಟ್ ಆಗಬಲ್ಲ ಅತ್ಯುತ್ತಮ ರೆಸಾರ್ಟ್ ಅಂದರೆ ಅದು ಡಿಸ್ಕವರಿ ವಿಲೇಜ್. ಕಬಿನಿ ನಂದಿ ಮತ್ತು ಕನಕಪುರ ಈ ಮೂರೂ ರೆಸಾರ್ಟ್ ಗಳಲ್ಲೂ ಭೇದಭಾವ ಇಲ್ಲದಂತೆ ಎಲ್ಲಿಗೇ ಹೋದರೂ ಸಮಾನವಾದ ಸೌಲಭ್ಯ ಮತ್ತು ರಂಜನೆ ಲಭ್ಯವಾಗುವಂತೆ ಮಾಡಿರುವುದು ಡಿಸ್ಕವರಿ ವಿಲೇಜ್ ನ ಹಿರಿಮೆ.
ಮೂರು ಪ್ರಾಕೃತಿಕ ಸ್ವರ್ಗಗಳು
ಡಿಸ್ಕವರಿ ವಿಲೇಜ್‌ನ ಮುಖ್ಯ ಕೇಂದ್ರ ಕನಕಪುರ ರಸ್ತೆಯಲ್ಲಿದ್ದು, ಬೆಂಗಳೂರಿನಿಂದ ಕೇವಲ ಒಂದು ಗಂಟೆಯಲ್ಲಿ ತಲುಪಬಹುದಾಗಿದೆ. ಕಬಿನಿಯ ಡಿಸ್ಕವರಿ ವಿಲೇಜ್ ಕಬಿನಿ ನದಿ ತೀರದಲ್ಲಿ, ಬ್ರಿಟಿಷ್ ಕಾಲದ ಐತಿಹಾಸಿಕ ಪ್ರದೇಶದಲ್ಲಿದ್ದು, ವನ್ಯಜೀವಿ ಪ್ರಿಯರಿಗೆ ಇಲ್ಲಿ ಬೋನಸ್ ಎಂಬಂತೆ ಪ್ರಾಣಿಗಳೂ ನೋಡಸಿಗಬಹುದು. ಇನ್ನು ನಂದಿ ಬೆಟ್ಟದ ಬಳಿಯ ಡಿಸ್ಕವರಿ ವಿಲೇಜ್ ನ ಸುತ್ತಲಿನ ಪರಿಸರ ಕೂಡ ಅಕ್ಷರಶಃ ಭೂಸ್ವರ್ಗವೇ. ಈ ಎಲ್ಲ ಸ್ಥಳಗಳೂ ಬೆಂಗಳೂರಿನಿಂದ ಕೇವಲ ಐವತ್ತು ಕಿಲೋಮೀಟರ್ ಒಳಗೆ ಇರುವುದರಿಂದ ಒಂದು ದಿನದ ಔಟಿಂಗ್ ಅಥವಾ ವೀಕೆಂಡ್ ಗೆ ಅತ್ಯಂತ ಪ್ರಶಸ್ತ ಸ್ಥಳ ಎನ್ನಬಹುದು.

ಸಾಹಸವೇ ಆಕರ್ಷಣೆ
ಡಿಸ್ಕವರಿ ವಿಲೇಜ್‌ನ ಪ್ರಮುಖ ಆಕರ್ಷಣೆಯು ಅದರ ವೈವಿಧ್ಯಮಯ ಕ್ರೀಡೆಗಳಲ್ಲಿದೆ . ಕುಟುಂಬಗಳಿಗೆ ಸೂಕ್ತವೆನಿಸುವ ಇಂಡೋರ್ ಗೇಮ್ಸ್‌ನಿಂದ ಹಿಡಿದು, ತಂಡಗಳು ಮತ್ತು ಯುವ ಸಮೂಹ ಇಷ್ಟ ಪಡುವ ಅಡ್ವೆಂಚರ್ ಚಟುವಟಿಕೆಗಳ ತನಕ ಎಲ್ಲವೂ ಇಲ್ಲಿದೆ. ಮುಖ್ಯವಾಗಿ ಗಮನಿಸಬೇಕಿರುವುದು ಇಲ್ಲಿ ಸುರಕ್ಷತೆಗೆ ಆದ್ಯತೆ ಕೊಟ್ಟು ಎಲ್ಲದಕ್ಕೂ ಎಕ್ಸ್ ಪರ್ಟ್ ಗೈಡ್ ಗಳನ್ನು ನೇಮಿಸಲಾಗಿದೆ
- ಇಂಡೋರ್ ಮತ್ತು ಔಟ್ ಡೋರ್ ಗೇಮ್ಸ್: ಸ್ನೂಕರ್, ಕೇರಂ, ಚೆಸ್, ಟೇಬಲ್ ಟೆನಿಸ್, ಫುಟ್‌ಬಾಲ್, ಬೋರ್ಡ್ ಗೇಮ್ಸ್. ಸಾಂಪ್ರದಾಯಿಕ ಆಟಗಳಾದ –ಅಳಗುಳಿಮನೆ, ಚೌಕಾ ಬಾರ, ಚೌಪರ್, ಪಚೀಸಿ, ಲಟ್ಟೂ, ಲಗೋರಿ, ಹಾಪ್‌ಸ್ಕಾಚ್ ಮತ್ತು ಗಿಲ್ಲಿ ದಂಡಾ, ಕ್ರಿಕೆಟ್, ಥ್ರೋಬಾಲ್, ವಾಲಿಬಾಲ್, ಆರ್ಚರಿ, ಬ್ಯಾಡ್ಮಿಂಟನ್, ಮೆಗಾ ಚೆಸ್, ಶಟಲ್. ಚೆಸ್
- ಅಡ್ವೆಂಚರ್ ಅಕ್ಟಿವಿಟೀಸ್: ಝಿಪ್‌ಲೈನಿಂಗ್, ರಾಕ್ ಕ್ಲೈಂಬಿಂಗ್, ರಾಪೆಲಿಂಗ್, ಟ್ರೆಕ್ಕಿಂಗ್, ಮೌಂಟೇನ್ ಕ್ಲೈಂಬಿಂಗ್, ಝೋರ್ಬಿಂಗ್, ಪ್ಯಾರಾಗ್ಲೈಡಿಂಗ್. ಅಬ್ಸ್ಟ್ಯಾಕಲ್ ಕೋರ್ಸ್ ಮತ್ತು ಸರ್ವೈವಲ್ ಕ್ಯಾಂಪಿಂಗ್
- ನೇಚರ್ ಎಕ್ಸ್‌ಪ್ಲೋರೇಷನ್: ಗೈಡ್ ಗಳೊಂದಿಗೆ ಫಾರೆಸ್ಟ್ ಹೈಕಿಂಗ್, ವೈಲ್ಡ್‌ಲೈಫ್ ಸ್ಪಾಟಿಂಗ್, ಕ್ಯಾಂಪ್ ಫೈರ್
ಹೌದಲ್ಲವೇ? ಈ ಎಲ್ಲಾ ಚಟುವಟಿಕೆಗಳು ವಯಸ್ಕರಿಗೂ, ಮಕ್ಕಳಿಗೂ ಸೂಕ್ತ ಹಾಗೂ ಸುರಕ್ಷಿತ ಎಂಬಂತಿಲ್ಲವೇ? ವಯೋವೃದ್ಧರಿಗೆ ಶಾಂತವಾಗಿ ಕೂರಲು ಓಡಾಡಲು ವ್ಯವಸ್ಥೆಗಳಿವೆ.
ಆರಾಮ ಮತ್ತು ರುಚಿಯ ಸಮ್ಮೋಹನ
ರೆಸಾರ್ಟ್‌ನಲ್ಲಿ ಹದಿನೈದು ರೂಮ್‌ಗಳಿವೆ. ಒಟ್ಟು ಐವತ್ತು ಪ್ರವಾಸಿಗರು ಆರಾಮವಾಗಿ ಇರಲಡ್ಡಿ ಇಲ್ಲ . ಶಾಂತವಾದ ಖಾಸಗಿ ರೂಮ್ ಗಳು ಇಲ್ಲಿನ ವೈಶಿಷ್ಟ್ಯ ಎಸಿ, ಹಾಟ್ ವಾಟರ್, ವೈ-ಫೈ ಸೇರಿದಂತೆ ಸರ್ವಸೌಲಭ್ಯಗಳೂ ಇಲ್ಲಿ ಸಿಗುತ್ತದೆ. ಮಧ್ಯಾಹ್ನ ಒಂದು ಗಂಟೆಗೆ ಚೆಕ್ ಇನ್ ಆದರೆ ಮರುದಿನ ಬೆಳಗ್ಗೆ ಹನ್ನೊಂದರ ತನಕ ನಿಮ್ಮದೇ ಸಾಮ್ರಾಜ್ಯ.
ಡಿಸ್ಕವರಿ ವಿಲೇಜ್ ನ ಆಹಾರ ನಿಮ್ಮಿಂದ ಶಭಾಸ್ ಗಿರಿ ಪಡೆದೇಪಡೆಯುವ ಇನ್ನೊಂದು ಅಂಶ. ರೆಸ್ಟೋರೆಂಟ್ ನಲ್ಲಿ ಬ್ರೇಕ್ ಫಾಸ್ಟ್, ಲಂಚ್, ಹೈ-ಟೀ ಮತ್ತು ಡಿನ್ನರ್ ಜತೆಗೆ ಸ್ಥಳೀಯ ಮತ್ತು ಉತ್ತರ ಭಾರತೀಯ ರುಚಿಯಾದ ಊಟವೂ ಲಭ್ಯ. ವೆಜ್ ಮತ್ತು ನಾನ್-ವೆಜ್ ಪ್ರಿಯರಿಬ್ಬರಿಗೂ ಇಲ್ಲಿ ಆಯ್ಕೆಗಳಿವೆ.

ಪ್ರಶಸ್ತ ಸಮಯ ಯಾವುದು?
ಇಂದೇ! ಯೆಸ್. ಇದು ಯಾವುದೇ ಸೀಸನ್ನಲ್ಲೂ ನಿಮ್ಮ ಸ್ವಾಗತಕ್ಕೆ ಸಿದ್ಧವಿರುವ ರೆಸಾರ್ಟ್. ಇದಕ್ಕೆ ಸೀಸನ್ ಹಂಗು ಇಲ್ಲವೇ ಇಲ್ಲ. ಆದರೂ ಹೆಚ್ಚು ಹಸಿರು ಮತ್ತು ತಂಪಿನ ವಾತಾವರಣ ಬಯಸುವುದಾದರೆ ಅಕ್ಟೋಬರ್‌ನಿಂದ ಮಾರ್ಚ್ ಹವಾಮಾನವು ಔಟ್‌ಡೋರ್ ಅಕ್ಟಿವಿಟೀಸ್‌ಗೆ ಸೂಕ್ತವಾಗಬಹುದು. ತುಂಬ ಮಳೆಯಿದ್ದಾಗ ಹೊರತುಪಡಿಸಿ ಬೇರೆ ಯಾವುದೇ ದಿನವೂ ಡಿಸ್ಕವರಿ ವಿಲೇಜ್ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ.
ಸರ್ಟಫೈಡ್ ನೇಚರ್ ಗೈಡ್ ಗಳಿದ್ದಾರೆ
ಜವಾಬ್ದಾರಿಯುತ ಪ್ರವಾಸೋದ್ಯಮಕ್ಕಾಗಿ ಪ್ರಶಸ್ತಿ ಪಡೆದಿದೆ
ಫಾರೆಸ್ಟ್ ಹೈಕಿಂಗ್ ಮತ್ತು ಟ್ರೆಕ್ಕಿಂಗ್ ಗೆ ಅತ್ಯುತ್ತಮ ಸಂಗಾತಿ
2.60 ಲಕ್ಷಕ್ಕೂ ಹೆಚ್ಚು ಪ್ರವಾಸಿಗಳು ಭೇಟಿ ಕೊಟ್ಟಿರುವ ತಾಣ
ಟ್ರಿಪ್ ಅಡ್ವೈಸರ್ ರೇಟಿಂಗ್ 4.5
ಪ್ರವಾಸಿ ಪ್ರಪಂಚ ರೇಟಿಂಗ್ 4.8
ವೆಬ್ ಸೈಟ್: www.discoveryvillage.in
ಡಿಸ್ಕವರಿ ವಿಲೇಜ್ ಎಂಬ ಅದ್ಭುತ ವಾದ ರೆಸಾರ್ಟ್ ಚೈನ್ ನೋಡಿ, ಅಲ್ಲಿಯ ಸತ್ಕಾರ ಮತ್ತು ಸೌಲಭ್ಯಗಳನ್ನು ಅನುಭವಿಸಿದ ನಂತರ ಸಹಜವಾಗಿಯೇ ಮೂಡಿದ ಪ್ರಶ್ನೆ ಇಂಥ ಭೂಸ್ವರದ ನಿರ್ಮಾತೃ ಯಾರು ಎಂದು.
ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿರುವ ಪದ್ಮಶ್ರೀ ಗೌರವಕ್ಕೆ ಭಾಜನರಾಗಿರುವ ಡಾ. ಪ್ರಶಾಂತ್ ಪ್ರಕಾಶ್ ಇಂಥ ಒಂದು ಕನಸಿನ ಲೋಕದ ಸೃಷ್ಟಿಕರ್ತರು. ಆಕರ್ಷಕ ವ್ಯಕ್ತಿತ್ವದಿಂದ, ಅಪಾರ ಲೋಕಜ್ಞಾನದಿಂದ, ಹತ್ತು ಹಲವು ಯಶಸ್ವೀ ಉದ್ಯಮಗಳಿಂದ, ಸಮಾಜ ಸೇವೆಗಳಿಂದ ಖ್ಯಾತರಾಗಿರುವ ಡಾ. ಪ್ರಶಾಂತ್ ಪ್ರಕಾಶ್ ಇದರ ರೂವಾರಿ.

ಸ್ಟಾರ್ಟ್ ಅಪ್ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿರುವ ಪ್ರಶಾಂತ್ ಪ್ರಕಾಶ್, ಉದ್ಯಮ ಲೋಕದ ಧ್ರುವತಾರೆ ಎಂದರೆ ಅತಿಶಯೋಕ್ತಿ ಅಲ್ಲವೇ ಅಲ್ಲ. ಕೇವಲ ಹಣಗಳಿಕೆ ಅಥವಾ ಲಾಭವೇ ಮೂಲವಾಗಿಟ್ಟುಕೊಳ್ಳದೆ ಸಮಾಜ ಸೇವೆ, ನಗರಾಭಿವೃದ್ಧಿ, ಶಿಕ್ಷಣ, ಆರೋಗ್ಯ, ಕೃಷಿ, ಹವಾಮಾನ, ನಗರದ ಮೂಲ ಸೌಕರ್ಯ ಇವೆಲ್ಲವನ್ನೂ ಅಭಿವೃದ್ಧಿಗೊಳಿಸಬೇಕೆಂಬ ಉದಾತ್ತ ಆಲೋಚನೆಯಲ್ಲಿ ಪ್ರಶಾಂತ್ ಪ್ರಕಾಶ್ ಅವರು ಹಾಕಿದ ಶ್ರಮ ದೇಶಕ್ಕೇ ಮಾದರಿಯಾಗುವಂಥದ್ದು. ಇತ್ತೀಚೆಗೆ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ)ಯಲ್ಲಿ ಇವರದ್ದೊಂದು ಸಂಶೋಧನೆಗೆ ವ್ಯಾಪಕ ಮೆಚ್ಚುಗೆ ಬಂದಿರುವುದು ಇವರ ದೂರದರ್ಶಿತ್ವ ಮತ್ತು ಜ್ಞಾನಕ್ಕೆ ಸಾಕ್ಷಿ.
ತೊಂಬತ್ತರ ದಶಕದಲ್ಲಿ Accel India ಎಂಬ ಕಂಪೆನಿಯನ್ನು ಹುಟ್ಟುಹಾಕಿದ ಪ್ರಶಾಂತ್ ಪ್ರಕಾಶ್ ಅಲ್ಲಿಂದ ತಿರುಗಿ ನೋಡಿದ್ದೇ ಇಲ್ಲ. ಕಲ್ಕಿ ಫೌಂಡೇಷನ್, ಶಿಕ್ಷಣ ಫೌಂಡೇಷನ್, ಯುನೈಟೆಡ್ ವೇ ಆಫ್ ಬೆಂಗಳೂರು, ಅನ್ ಬಾಕ್ಸಿಂಗ್ ಬಿಎಲ್ ಆರ್ ಫೌಂಡೇಷನ್, ಕೃಷಿಕಲ್ಪ ಫೌಂಡೇಷನ್, ಹೀಗೆ ಒಂದಾದಮೇಲೆ ಒಂದನ್ನು ಸ್ಥಾಪಿಸಿ ಸ್ಟಾರ್ಟಪ್ ಲೋಕದ ಸ್ಟಾರ್ ಆದವರು ಇವರು. ಈ ಸಾಧನೆ ಮತ್ತು ಸೇವೆಯನ್ನು ಪರಿಗಣಿಸಿಯೇ ಅವರಿಗೆ ಪದ್ಮಪ್ರಶಸ್ತಿ ನೀಡಿ ಗೌರವಿಸಲಾಯಿತು.
1995 ರಲ್ಲಿ ದೇಶದ ಕೆಲವೇ ಅನಿಮೇಶನ್ ಕಂಪನಿಗಳಲ್ಲಿ ಒಂದೆನಿಸಿಕೊಂಡಿದ್ದ ವಿಶುಯಲ್ ರಿಯಾಲಿಟಿ ಎಂಬ ಕಂಪನಿ ಹುಟ್ಟುಹಾಕಿದ ಇವರು, ಆನಂತರ ನೆಟ್ ಕ್ರಾಫ್ಟ್ ಎಂಬ ಸಂಸ್ಥೆಗೆ ಸಹಸ್ಥಾಪಕರಾಗುತ್ತಾರೆ. ಆದರೆ ಎರಾಸ್ಮಿಕ್ ವೆಂಚರ್ಸ್ ಇವರ ಜೀವನದ ದೊಡ್ಡ ಟರ್ನಿಂಗ್ ಪಾಯಿಂಟ್ ಆಗುತ್ತದೆ. ಆಕ್ಸೆಲ್ ಇಂಡಿಯಾ ಅಲ್ಲಿಂದ ಮುಂದೆ ಬಹುಬಿಲಿಯನ್ ಡಾಲರ್ ಹೂಡಿಕೆಯ ಕಂಪನಿಯಾಗುತ್ತದೆ. ಫ್ಲಿಪ್ ಕಾರ್ಟ್, ಸ್ವಿಗ್ಗೀ, ಓಲಾ, ಬುಕ್ ಮೈ ಶೋ, ಸೇರಿದಂತೆ ಹಲವಾರು ಕಂಪನಿಗಳಲ್ಲಿ ಹೂಡಿಕೆ ಮಾಡುತ್ತಾರೆ ಪ್ರಶಾಂತ್ ಪ್ರಕಾಶ್.
ಇವರ ಅಪಾರ ಅನುಭವ ಮತ್ತು ಜ್ಞಾನವನ್ನು ಕಂಡು ರಾಜ್ಯ ಸರಕಾರವೂ ಇವರ ಸೇವೆ ಬಯಸುತ್ತದೆ. ಕರ್ನಾಟಕ ವಿಶನ್ ಗ್ರೂಪ್ ಫಾರ್ ಸ್ಟಾರ್ಟ್ ಅಪ್ ಎಂಬ ಸಮಿತಿಗೆ ಇವರು ಚೇರ್ ಮನ್ ಆಗಿ ಅಲ್ಲಿಯೂ ಛಾಪು ಮೂಡಿಸುತ್ತಾರೆ. ನಂತರದಲ್ಲಿ ಮುಖ್ಯಮಂತ್ರಿಗಳ ತಂತ್ರ ಮತ್ತು ಯೋಜನಾ ಸಲಹೆಗಾರರಾಗಿ ನೇಮಕಗೊಂಡು ಹಲವು ಮಹತ್ವಾಕಾಂಕ್ಷೆಯ ಯೋಜನೆ ರೂಪಿಸುತ್ತಾರೆ. ಬೆಂಗಳೂರು ಮಿಶನ್ 2022 ಅವುಗಳಲ್ಲೊಂದು. ಉತ್ತಮ ಸಾರಿಗೆ, ಸ್ವಚ್ಛ ಬೆಂಗಳೂರು, ಹಸಿರು ಬೆಂಗಳೂರು, ಡಿಜಿಟಲ್ ನಾಗರಿಕ ಸೇವೆಗಳು ಇವೆಲ್ಲವೂ ಇವರ ಅವಧಿಯಲ್ಲಿ ಕಂಡ ಯೋಜನೆಗಳು.

ಇನ್ನು ಕಲ್ಕಿ ಫೌಂಡೇಶನ್ ಮೂಲಕ ಕರ್ನಾಟಕದ ಸಾಂಸ್ಕೃತಿಕ ಹಾಗೂ ಪ್ರವಾಸೋದ್ಯಮ ಸಂಪತ್ತನ್ನು ಉಳಿಸುವ ಪ್ರಯತ್ನ ಮಾಡುತ್ತಿರುವ ಇವರ ಸೇವೆ ಪ್ರವಾಸೋದ್ಯಮ ದೃಷ್ಟಿಯಿಂದ ಮೆಚ್ಚಲೇಬೇಕು.
ಅನ್ ಬಾಕ್ಸಿಂಗ್ ಬಿ ಎಲ್ ಆರ್ ಫೌಂಡೇಷನ್ ಮೂಲಕ ಇವರು ನಡೆಸುವ ಬೆಂಗಳೂರು ಹಬ್ಬ, ನಗರದ ಅತಿ ದೊಡ್ಡ ಸಾಂಸ್ಕೃತಿಕ ಉತ್ಸವ ಎನ್ನಬಹುದು.
ಪ್ರವಾಸೋದ್ಯಮ ಮತ್ತು ಆತಿಥ್ಯಕ್ಷೇತ್ರಕ್ಕೆ ಪ್ರಶಾಂತ್ ಪ್ರಕಾಶ್ ಅವರ ಕೊಡುಗೆ ಬಹಳ ದೊಡ್ಡದು. ಅಮಿತರಸ ಎಂಬ ಡೆಸ್ಟಿನೇಷನ್ ವೆಡ್ಡಿಂಗ್ ರೆಸಾರ್ಟ್ ಇರಬಹುದು, ಕೋಶ್ ಎಂಬ ಮತ್ತೊಂದು ಅದ್ಭುತ ರೆಸಾರ್ಟ್ ಇರಬಹುದು, ಡಿಸ್ಕವರಿ ವಿಲೇಜ್ ರೆಸಾರ್ಟ್ ಚೈನ್ ಇರಬಹುದು, ಒಂದಕ್ಕಿಂತ ಒಂದು ಅದ್ಭುತ ಎಂಬುದರಲ್ಲಿ ಅನುಮಾನವೇ ಇಲ್ಲ.
ಪ್ರಶಾಂತ್ ಪ್ರಕಾಶ್ ಅವರ ವ್ಯಕ್ತಿತ್ವ ಮತ್ತು ಸಾಧನೆ ಕೇವಲ ಒಂದುಪುಟದಲ್ಲಿ ವರ್ಣಿಸಲು ಸಾಧ್ಯವಿರುವ ಸಂಗತಿ ಅಲ್ಲವೇ ಅಲ್ಲ. ಓದುಗರು ಇಲ್ಲಿ ಓದಿರುವುದು ಒಂದು ಹನಿಯಷ್ಟೆ. ಸಾಧನೆ ಸಾಗರದಷ್ಟಿದೆ.
ಪ್ರಶಾಂತ್ ಪ್ರಕಾಶ್ ಹೆಜ್ಜೆಗುರುತು
2025-ಪದ್ಮಶ್ರೀ ಪ್ರಶಸ್ತಿ
2021 ASSOCHAM ನಿಂದ ಸೋಷಿಯಲ್ ಇಂಪ್ಯಾಕ್ಟ್ ಲೀಡರ್ ಪ್ರಶಸ್ತಿ
ಮೈಸೂರು ಯೂನಿವರ್ಸಿಟಿಯಿಂದ ಡಾಕ್ಟರೇಟ್
2022 ಅನ್ ಬಾಕ್ಸಿಂಗ್ ಬೆಂಗಳೂರ್ – ಬೆಂಗಳೂರಿನ ಬಯಾಗ್ರಫಿಗೆ ಸಹಲೇಖಕ
ಶಿಕ್ಷಣ : ಅಮೆರಿಕದ Delaware ಯೂನಿವರ್ಸಿಟಿಯಲ್ಲಿ ಸ್ನಾತಕೋತ್ತರ ಪದವಿ
ಬೆಂಗಳೂರು ಯೂನಿವರ್ಸಿಟಿಯಲ್ಲಿ ಎಂಜಿನಿಯರಿಂಗ್ ಪದವಿ.
ಉದ್ಯಮದಲ್ಲಿ ಸಾಧನೆ
Accel India ಸ್ಥಾಪಕ ಪಾಲುದಾರರು
50ಕ್ಕೂ ಹೆಚ್ಚು ಕಂಪೆನಿಗಳಲ್ಲಿ ಹೂಡಿಕೆ
ಭಾರತದ ಸ್ಟಾರ್ಟ್ ಅಪ್ ಪರಂಪರೆಯಲ್ಲಿ ಕ್ರಾಂತಿ
ಭಾರತೀಯ ಸ್ಟಾರ್ಟಪ್ ಸಲಹಾ ಮಂಡಳಿ ಸದಸ್ಯ
ಕರ್ನಾಟಕ ಸ್ಟಾರ್ಟ್‌ಅಪ್ ವೀಕ್ಷಣಾ ಸಮಿತಿಯ ಅಧ್ಯಕ್ಷರು
ಮುಖ್ಯಮಂತ್ರಿಗಳ ತಂತ್ರ ಹಾಗೂ ಯೋಜನಾ ಸಲಹೆಗಾರ
Bengaluru Mission 2022 ರೂವಾರಿ